ಸಜ್ಜಿಗೆ ರೊಟ್ಟಿ / ರುಲಾವಾ ದೋಡ್ಡಕ
ಏನೇನು ಪದಾರ್ಥಗಳು ಬೇಕು?
ಮೀಡಿಯಂ ರವೆ - ಒಂದು ಲೋಟ
ಚಿರೋಟಿ ರವೆ - ಅರ್ದ ಲೋಟ
ಹಸಿಮೆಣಸು - ಎರಡು
ಹಸಿ ಶುಂಟಿ - ಸಣ್ಣ ತುಂಡು
ಈರುಳ್ಳಿ - ಎರಡು
ಕಾಯಿತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಳಿತ ಬಾಳೆಹಣ್ಣು[optional] - ಒಂದು
ಮೊಸರು/ ಮಜ್ಜಿಗೆ ಅರ್ದ ಲೋಟ
ಉಪ್ಪು - ರುಚಿಗೆ
ಸಕ್ಕರೆ - ಆರದ ಚಮಚ
ಕಲೆಸಲು ನೀರು
ಕಾಯಿಸಲು ಬೇಕಾಗುವಷ್ಟು ಎಣ್ಣೆ.
ಮಾಡುವ ವಿಧಾನ:
ಈರುಳ್ಳಿ, ಹಸಿಮೆಣಸು, ಶುಂಟಿ ಕೊತ್ತಂಬರಿಸೊಪ್ಪನ್ನು ಸಣ್ಣಗೆ ಹೆಚ್ಚಿಡಬೇಕು.
ಒಂದು ಪಾತ್ರೆಯಲ್ಲಿ ಮೊಸರನ್ನು ಹಾಕಿ, ಅದರಲ್ಲಿ ಹೆಚ್ಚಿಟ್ಟಿದನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು. ನಂತರ ಆ ಮಿಶ್ರಣಕ್ಕೆ ರವೆ ಯನ್ನು ಸೇರಿಸಿ ಹಿಡಿಸುವಸ್ಷ್ಟು [ರವೆ ನೆನೆಯುವಷ್ಟು]ನೀರನ್ನು ಹಾಕಿ,ಜೊತೆಗೆ ಉಪ್ಪು,ಸಕ್ಕರೆ, ಕಾಯಿತುರಿ, ಕೊತ್ತಂಬರಿ ಸೋಪ್ಪನ್ನು ಹಾಕಿ ಮಿಶ್ರಣವನ್ನು ತಯಾರಿಸಿ, ಹದಿನೈದು ನಿಮಿಷ ಮುಚ್ಚಿಡಬೇಕು.ರವೆ ಚೆನ್ನಾಗಿ ನೆನೆದಿದ್ದಲ್ಲಿ ಹಿಟ್ಟು ತಯಾರಾಗಿದೆ ಎಂದು ಅರ್ಥ.ಈಗ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ, ಒಂದು ಸವಟು ಹಿಟ್ಟನ್ನು ಹಾಕಿ, ಕೈಗೆ
ಸ್ವಲ್ಪ ನೀರನ್ನು ತಾಗಿಸಿ, ಕೈಯಿಂದ ನೀದಾನವಾಗಿ ತಟ್ಟಿ ಮುಚ್ಚಳ ಮುಚ್ಚಬೇಕು.
ಒಂದು ಬದಿ ಬೆಂದ ಬಳಿಕ, ಸ್ವಲ್ಪ ಎಣ್ಣೆಯನ್ನು ಸವರಿ ಮಗುಚಿ ಹಾಕಿ ರೊಟ್ಟಿಯನ್ನು ಕಾಯಿಸಬೇಕು.
* ಮೀಡಿಯಂ ಉರಿಯಲ್ಲಿ ಸಜ್ಜಿಗೆ ರೊಟ್ಟಿಯನ್ನು ಕಾಯಿಸಬೇಕು.
* ಬಾಳೇ ಹಣ್ಣನ್ನು ಮೊಸರಿನ್ನಲ್ಲಿ ಚನ್ನಾಗಿ ಹಿಚುಕಿ, ಕಲಸಿಕೊಳ್ಳಬೇಕು.
* ಬಿಸಿ ಬಿಸಿ ಸಜ್ಜಿಗೆ ರೊಟ್ಟಿ ಬೆಣ್ಣೆ ಯೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.
No comments:
Post a Comment