BLOG FOLLOWERS

Friday, November 11, 2011

' ಕಷಾಯ' ದ ಪುಡಿ

                         ' ಕಷಾಯ' ದ ಪುಡಿ 

'ಕಷಾಯ' ಅಂದ ಕೂಡಲೇ ಮನಸ್ಸಿನಲ್ಲಿ  ಒಂದು ಸಲ, ಜ್ವರ ಬಂದವರು ಅಥವಾ ಹುಷಾರಿಲ್ಲದವರು ಕುಡಿಯುವುದು 
ಅಂತ ಅನ್ನಿಸಿಸುತ್ತದೆ, ಅನ್ನಿಸುವುದು ಸಹಜವೇ. ಸಾಕಷ್ಟು ಜನರು 'ಕಷಾಯ' ಎಂದರೆ AVSHADHI  ಅಂತಾನೆ 
ತಿಳಿದಿದ್ದಾರೆ. ನಿಜ  ಹೇಳಬೇಕಂದರೆ, ಒಂದು ರೀತಿಯಲ್ಲಿ, ದೇಹಕ್ಕೆ ಯಾವುದೇ ತರಹದ SIDE EFFECT ಇಲ್ಲದ ಸ್ವದೇಶೀ HOT DRINKS ಅಂತಾ ವರ್ಣಿಸಬಹುದು.  ನಮ್ಮ ಮನೆಯವರಿಗೆ ಮೂರು ವರ್ಷಕೊಮ್ಮೆ ಒಂದು ಊರಿಂದ ಇನ್ನೊದು ಊರಿಗೆ ವರ್ಗವಾಗುವ ಕೆಲಸ. ನಮ್ಮ ಅದೃಷ್ಟ ವೇ ಅನ್ನಬೇಕು,ತಾಯಿ ಮಾರಿಕಾಂಬೆ ಯು  ನೆಲಸಿರುವ  ಶಿರಶಿಯಲ್ಲಿ , ನಮಗೆ ಮೂರು ವರ್ಷ ಕಳೆಯುವ ಭಾಗ್ಯ ನಮ್ಮದಾಯಿತು.  ಊರೇನೂ ತುಂಬಾ ಪುಟ್ಟದು, ಆದರೆ ಅಲ್ಲಿಯ ಜನರ ಆಥಿತ್ಯ, ಮಾರಿಕಾಂಬೆ ಯ ಮಹಿಮೆಯಷ್ಟೇ  ಅಪಾರ. ಹೇಳಿ  ಕೇಳಿ' ಶಿರಸಿ' ಮಲ್ನಾಡು 
ಪ್ರದೇಶ, ಮಳೆ ಚಳಿ ಸ್ವಲ್ಪ ಜಾಸ್ತಿಯೇ. ಅಲ್ಲಿಯ ವಿಶೇಷತೆ  ಅಂದರೆ ,ಅತಿಥಿ ಗಳು  ಮನೆಗೆ  ಬಂದಾಗ, ಆಸರಿಕೆ ಗೆ 
ಏನು ಮಾಡುವುದು ಅಂತ ಕೇಳ್ತಾರೆ, ಕೂಡಲೇ 'ಕಷಾಯ' ಆಗಬಹುದಾ ಅಂತಾರೆ. ಚಹಾ/ಕಾಫಿ  ಆಕಡೆ   ಸ್ವಲ್ಪ ಮಟ್ಟಿಗೆ  ಕಡಿಮೆ.'ಕಷಾಯ'ವನ್ನು ಹಲವಾರು ವಿಧದಲ್ಲಿ  ಅಲ್ಲಿಯ ಜನರು  ತುಂಬಾ ಚನ್ನಾಗಿಯೇ ತಯಾರಿಸುತ್ತಾರೆ. ನಾವು ಶಿರಶಿಯಲ್ಲಿದಾಗ, ನಾನೂ ಕಷಾಯವನ್ನು ಮಾಡುವುದನ್ನು ಕಲಿತು ಬಿಟ್ಟೆ. ಹಾಗೂ ನಮ್ಮ ಮನೆಯವರಿಗೂ ಚಾ/ಕಾಫಿ ಸ್ವಲ್ಪ ಕಡಿಮೆ ಮಾಡಿ ಕಷಾಯವನ್ನು 


ಕುಡಿಸಲು ಪ್ರಾರಂಬಿಸಿಬಿಟ್ಟೆ.. ಆ   'ಕಷಾಯ'ದ ಪುಡಿ ಹಾಗು ಅದರಿಂದ  ಪೇಯವನ್ನು ಹೇಗೆ ತಯಾರಿಸುವುದು ಅಂತ ಹೇಳುತ್ತೇನೆ.

ಕಷಾಯ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು:

 
 ಕೊತ್ತಂಬರಿ ಬೀಜ -  ಅರ್ದ ದೊಡ್ಡ ಚಮಚ
 ಜೀರಿಗೆ -    ಒಂದು ದೊಡ್ಡ ಚಮಚ 
 ಕಾಳುಮೆಣಸು    -  ನಾಲ್ಕು
 ಯಾಲಕ್ಕಿ   -   ಎರಡು[ ಸಿಪ್ಪೆ ಸಹಿತ ಹಾಕಬಹುದು]
 ಚಕ್ಕೆ      -  ಒಂದು ಸಣ್ಣ ತುಂಡು
 ಲವಂಗ  -  ಒಂದು
 ಸೊಂಪು ಕಾಳು  -  ಕಾಲು ಚಮಚ [ಬಡೇಸೊಂಪು]
ಮೇಲೆ ತಿಳಿಸಿದ ಎಲ್ಲಾ  ಪದಾರ್ಥಗಳ್ಳನ್ನು  ಎಣ್ಣೆ  ಹಾಕದೇ, ಒಂದೊಂದಾಗಿ 'ಗಂ' ಅಂತ  ವಾಸನೆ ಬರುವವರೆಗೂ
ಹುರಿದುಕೊಂಡು, ತಣಿದ ಬಳಿಕ ಮಿಕ್ಸಿಯಲ್ಲಿ  ಹಾಕಿ ನಯವಾಗಿ ಪುಡಿ ಮಾಡಿಕೊಂಡು , ಗಟ್ಟಿ ಮುಚ್ಚಳದ  ಬಾಟಲಿಯಲ್ಲಿ  ಹಾಕಿಡಬೇಕು.




ಕಷಾಯ ಮಾಡುವ ರೀತಿ:
ಒಂದು ಅರ್ದ ಲೋಟ ನೀರನ್ನು ಕಾಯಲು  ಇಡಬೇಕು, ಅದಕ್ಕೆ ಒಂದು ಚಮಚ ಕಷಾಯದ ಪುಡಿಯನ್ನು ಹಾಕಿ 
 ಚನ್ನಾಗಿ ಕುದಿಸಬೇಕು, ನಂತರ ಕಾಲು ಲೋಟ ಹಾಲು ಅರ್ದ  ಚಮಚ ಸಕ್ಕರೆ ಯನ್ನು ಸೇರಿಸಿ ಕುದಿಸಿದರೆ ರುಚಿ ರುಚಿಯಾದ, ದೇಹಕ್ಕೆ ಯಾವುದೇ  ತೊಂದರೆಯಾಗದ ,ಶೀತ- ಕೆಮ್ಮು ನೆಗಡಿ ಗೆ ಉಪಯುಕ್ತ ವಾಗುವಂಥ, ಚಳಿ-ಮಳೆ ಗಾಲದಲ್ಲಿ  ಕುಡಿಯಲು ಉತ್ತಮವಾದ  ಕಷಾಯ ಸಿದ್ಧ.

No comments:

Post a Comment