BLOG FOLLOWERS

Saturday, November 19, 2011

ಅಮ್ಮನ ರವಾ ದೋಸೆ

 ಅಮ್ಮನ  ರವಾ ದೋಸೆ                        







ಬೇಕಾಗುವ ಪದಾರ್ಥಗಳು:




 ಅಕ್ಕಿ    -  ಒಂದು  ಉದ್ದ ಲೋಟ[ನೆನಸಬೇಕು]
ಸ್ವಲ್ಪ ಹುರಿದಿಟ್ಟ ಸಣ್ಣ ರವೆ  -  ಕಾಲು ಲೋಟ
ಸಣ್ಣಗೆ  ಹೆಚ್ಚಿಟ್ಟ ಈರುಳ್ಳಿ  -   ಎರಡು
ಸಣ್ಣಗೆ ಹೆಚ್ಚಿಟ್ಟ   ಹಸಿಮೆಣಸು   - ಎರಡು
ಕುಟ್ಟಿಟ್ಟ ಕಾಳು ಮೆಣಸು  -   ಐದಾರು
ಜೀರಿಗೆ      - ಒಂದು ಚಮಚ 
ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು   - ಒಂದು ಕಪ್
ರುಚಿ ಗೆ  ಉಪ್ಪು  ಹಾಗು ದೋಸೆ ಕಾಯಿಸಲು ಎಣ್ಣೆ.

ಮಾಡುವ ವಿಧಾನ:
ನೆನಸಿಟ್ಟ ಅಕ್ಕಿಯನ್ನು  ನಯವಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ  ಹಿಟ್ಟಿಗೆ , ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸು,ಈರುಳ್ಳಿ ಕೊತ್ತಂಬರಿಸೊಪ್ಪು ಉಪ್ಪು, ಕುಟ್ಟಿಟ್ಟ ಕಾಳುಮೆಣಸು,ಜೀರಿಗೆ, ನೀರು  ಸೇರಿಸಿ, ನೀರು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.,ಕಾದ ತವಾದ ಮೇಲೆ ಎಣ್ಣೆ ಹಚ್ಚಿ , ಒಂದು ಸವಟು ಹಿಟ್ಟನ್ನು ತೆಗೆದುಕೊಂಡು ತೆಳ್ಳಗೆ  ಹರಡಬೇಕು.ಎರಡೂ ಬದಿಯನ್ನು ಕಾಯಿಸಬೇಕು. ಈ ದೋಸೆ  ಮನೆ ಬೆಣ್ಣೆ  ಹಾಗು ಕಾಯಿ ಚಟ್ನಿಯೊಂದಿಗೆ  ತಿನ್ನಲು   ಒಳ್ಳೆಯದಾಗುತ್ತದೆ. 








* ಮಾನಸಿಕ ಕ್ಲೇಶವನ್ನು  ವಿಚಾರಶಕ್ತಿಯಿಂದ ಹೋಗಲಾಡಿಸಬೇಕು.ಅನಾರೋಗ್ಯವನ್ನು ಚಿಕಿತ್ಸೆ ಯಿಂದ ಗುಣಪಡಿಸಿಕೊಳ್ಳಬೇಕು.  ಬುದ್ದಿ ಸಾಮರ್ಥ್ಯ ವೆಂದರೆ  ಇದೇ. ಇದನ್ನು ಬಿಟ್ಟು ಬಾಲಿಶರಂತೆ ವರ್ತಿಸಬಾರದು.
                                                                                                 ಮಾಹಾಭಾರತ.
 

1 comment:

  1. ಅಮ್ಮನ ರವಾ ದೋಸೆ ಅಮ್ಮಿ ಹಂಗಾ ಮಸ್ತ ಪಟಿ ಕೊರ್ನು ಜಲ್ಲೆ. ಭಾರಿ ಲಯಕ ಜತ್ತ. ಅಮ್ಮೇಲೆ ಸಂಡೆ ಸ್ಪೆಷಲ್ ರವಾ ದೋಸೆ ವಿಥ್ ಚಟ್ನಿ.

    ReplyDelete