ಹಾಗಲಕಾಯಿ ಚಟ್ನಿ
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ - ಒಂದು
ಕಾಯಿತುರಿ - ಒಂದು ಕಪ್ಪು
ಒಣಮೆಣಸು - ಏಳು -ಎಂಟು
ಹುಣಸೆ - ಸಣ್ಣ ಲಿಂಬೆ ಗಾತ್ರ
ಬೆಲ್ಲ - ಸಣ್ಣ ತುಂಡು
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಎಣ್ಣೆ - ಒಂದು ಚಮಚ
ಸಾಸಿವೆ - ಸಣ್ಣ ಚಮಚ
ಕರಿಬೇವು - ಒಂದುಗರಿ
ಮಾಡುವ ವಿಧಾನ:
೧. ಹಾಗಲ ಕಾಯಿಯನ್ನು ತೊಳೆದು ಒಂದಿಂಚು ಗಾತ್ರದಲ್ಲಿ ಕತ್ತರಿಸಿ, ಉಪ್ಪನ್ನು ಬೆರಸಿ ಅರ್ದ ಗಂಟೆಗಳ ಕಾಲ ತೆಗೆದಿಡಬೇಕು.
೨. ಕತ್ತರಿಸಿಟ್ಟ ಹಾಗಲಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಕೆಂಪಗೆ ಹುರಿದಿಟ್ಟುಕೊಳ್ಳಬೇಕು.
೩. ಬಾಣಲೆಯಲ್ಲಿ ಕಾಲು ಚಮಚ ಎಣ್ಣೆ ಹಾಕಿ , ಎಳ್ಳು ಹಾಗು ಕೆಂಪು ಮೆಣಸಿನಕಾಯಿ ಹುರಿದುಕೊಂಡು ತೆಗೆದಿದಬೇಕು. ನಂತರ ಅದೇ ಬಾಣಲೆಯಲ್ಲಿ ಕಾಯಿತುರಿ ಯನ್ನು ಹಾಕಿ ಬೆಚ್ಚಗೆ ಹುರಿಯಬೇಕು.
೪. ಈಗ ಹುರಿದ್ದಿಟ್ಟ ಎಲ್ಲಾ ಪದಾರ್ಥಗಳೊಂದಿಗೆ ಬೆಲ್ಲ ಹುಣಸೆ ಉಪ್ಪು ಹಾಗು ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ಗ್ರೈಂಡ್ ಮಾಡಿ ಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ ಕರಿಬೇವು ಒಗ್ಗರಣೆ ಹಾಕಿದರೆ, ರುಚಿ ರುಚಿಯಾದ ಆರೋಗ್ಯ ಬರಿತ ಹಾಗಲ ಚಟ್ನಿ ಸವಿಯಬಹುದು.
No comments:
Post a Comment