ನುಗ್ಗೇ ಕಾಯಿ + ಟೊಮೇಟೊ ಹಣ್ಣಿನ ಗೊಜ್ಜು
ಬೇಕಾಗುವ ಪದಾರ್ಥಗಳು:
ನುಗ್ಗೇ ಕಾಯಿ - 5
ಟೊಮೇಟೊ - 2 ರಿಂದ 3
ಈರುಳ್ಳಿ - 1
ಹಸಿಮೆಣಸು - 2
ಒಗ್ಗರಣೆ ಗೆ ಬೇಕಾಗುವ ಪದಾರ್ಥಗಳು:
ಕೊಬ್ಬರಿ ಎಣ್ಣೆ - ಒಂದು ಚಮಚ
ಸಾಸಿವೆ - ಒಂದು ಚಮಚ
ಹಿಂಗು - ಒಂದು ಚಿಟಿಕೆಯಷ್ಟು
ಒಣಮೆಣಸು - ಒಂದು
ಕರಿಬೇವು - ಒಂದು ಗರಿ.
ಮಾಡುವ ವಿಧಾನ:
1 ನುಗ್ಗೆ ಕಾಯಿ ಹಾಗು ಟೊಮೇಟೊ ಹಣ್ಣನ್ನು ಬೇಯಿಸಿ ಅದರ ಸಿಪ್ಪೆಯನ್ನು ತೆಗೆದು ಒಳಗಿನ ತಿರುಳ್ಳ ನ್ನು ಮಿಕ್ಸಿ ಯಲ್ಲಿ
ತಿರುವಿಕೊಳ್ಳ ಬೇಕು.
2. ತಿರುವಿಟ್ಟ ಗೊಜ್ಜಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗು ಹಸಿಮೆಣಸು, ಉಪ್ಪನ್ನು ಹಾಕಿ ಗೊಜ್ಜಿನ್ನು ತಯಾರಿಸಬೇಕು.
[ಬೇಯಿಸಿದ ನೀರನ್ನು ಸೇರಿಸಿಕೊಳ್ಳಬೇಕು]
ತಿರುವಿಕೊಳ್ಳ ಬೇಕು.
2. ತಿರುವಿಟ್ಟ ಗೊಜ್ಜಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗು ಹಸಿಮೆಣಸು, ಉಪ್ಪನ್ನು ಹಾಕಿ ಗೊಜ್ಜಿನ್ನು ತಯಾರಿಸಬೇಕು.
[ಬೇಯಿಸಿದ ನೀರನ್ನು ಸೇರಿಸಿಕೊಳ್ಳಬೇಕು]
3. ಹೀಗೆ ತಯಾರಾದ ಗೊಜ್ಜಿಗೆ, ಸಾಸಿವೆ ಹಿಂಗು ಕರಿಬೇವು ಹಾಗು ಒಣಮೆಣಸಿನ ಒಗ್ಗರಣೆಯನ್ನು ಕೊಡಬೇಕು.
4 ಬೇಕಾದಲ್ಲಿ ಸ್ವಲ್ಪ ಹೆಚ್ಚಿನ ರುಚಿಗೆ ಕಾಯಿತುರಿಯನ್ನು ಸೇರಿಸಿಕೊಳ್ಳಬಹುದು.
No comments:
Post a Comment