ದಾಳಿಂಬೆ ಸಿಪ್ಪೆಯ ತಂಬ್ಳಿ
ಬೇಕಾಗುವ ಪದಾರ್ಥಗಳು:
ದಾಳಿಂಬೆ ಸಿಪ್ಪೆ - ಅರ್ದ ಹಣ್ಣಿನ ಸಿಪ್ಪೆ
ಮೊಸರು/ ಮಜ್ಜಿಗೆ - ಒಂದು ಕಪ್ಪು
ಕಾಯಿತುರಿ - ಅರ್ದ ಕಪ್ಪು
ಜೀರಿಗೆ - ಅರ್ದ ಚಮಚ
ಮೆಣಸಿನ ಕಾಳು - 5 -6
ಬೆಲ್ಲ - ಸಣ್ಣ ತುಂಡು
ಉಪ್ಪು - ಸ್ವಲ್ಪ.
ಜೀರಿಗೆ - ಅರ್ದ ಚಮಚ
ಮೆಣಸಿನ ಕಾಳು - 5 -6
ಬೆಲ್ಲ - ಸಣ್ಣ ತುಂಡು
ಉಪ್ಪು - ಸ್ವಲ್ಪ.
ಒಗ್ಗರಣೆಗೆ:
ತುಪ್ಪ - ಸಣ್ಣ ಚಮಚ
ಜೀರಿಗೆ - ಕಾಲು ಚಮಚ
ಒಣಮೆಣಸು - ಒಂದು.
ಮಾಡುವ ವಿಧಾನ:
1. ಸ್ವಲ್ಪ ತುಪ್ಪದಲ್ಲಿ ಮೆಣಸು, ಜೀರಿಗೆ , ಹಣ್ಣಿನ ಸಿಪ್ಪೆಯನ್ನು ಹುರಿದುಕೊಳ್ಳಬೇಕು.
2 . ಹುರಿದ ಪದಾರ್ಥಗಳನ್ನು ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಬೇಕು.
3 . ರುಬ್ಬಿದ ಚಟ್ನಿ ಗೆ ಬೆಲ್ಲ, ಉಪ್ಪು, ಮೊಸರನ್ನು / ಮಜ್ಜಿಗೆ ಹಾಕಿ ಮತ್ತೊಮ್ಮೆ ಮಿಕ್ಸಿ ಮಾಡಿಕೊಳ್ಳಬೇಕು.
4. ಕೊನೆಯಲ್ಲಿ ಜೀರಿಗೆ ,ಒಣಮೆಣಸಿನ ಒಗ್ಗರಣೆಯನ್ನು ಕೊಡಬೇಕು.
ಆಯುರ್ವೇದಿಯ ಹಿನ್ನಲೆ: ಗುಣದಲ್ಲಿ ಸೊಪ್ಪಿಗಿಂತ ತೀಕ್ಷ್ಣ [teekshna].ಅತಿಸಾರಕ್ಕೆ , ಕರಳು ಹುಣ್ಣಿಗೆ ಒಳ್ಳೆಯದು. ಪ್ರಾಯ ಆದವರಿಗೆ ಒಳಿತಲ್ಲ. ವಾತ ಹೆಚ್ಚು ಮಾಡುತ್ತದೆ. ಅಜೀರ್ಣವಾದಾಗ ಒಳ್ಳೆಯದು. ನಂಜಿಗೂ ಒಳ್ಳೆಯದು.
No comments:
Post a Comment