ಚಟ್ನಿ ಪುಡಿ
ಬೇಕಾಗುವ ಪದಾರ್ಥಗಳು:
ಕಡ್ಲೆ ಬೇಳೆ - ಒಂದು ಸಣ್ಣ ಕಪ್ಪು
ಪುಟಾಣಿ ಕಾಳು - ಒಂದು ಸಣ್ಣ ಕಪ್ಪು
ಖಾರ ಪುಡಿ - ಎರಡು ಚಮಚ
ಹುಣಸೆ - ಸಣ್ಣ ತುಂಡು
ಹಿಂಗು - ಚಿಟಿಕೆಯಷ್ಟು
ಚಟ್ನಿ ಪುಡಿ ತಯಾರಿಸುವ ವಿಧಾನ:
1. ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಬೇರೆ- ಬೇರೆಯಾಗಿ ಹುರಿದುಕೊಂಡು, ತಣಿದ ಬಳಿಕ ಮಿಕ್ಸಿಯಲ್ಲಿ ಹಾಕಿ ನಯವಾಗಿ ಪುಡಿ ಮಾಡಿದರೆ, ಚಟ್ನಿ ಪುಡಿ ಸಿದ್ದವಾಗುತ್ತದೆ. ಹೀಗೆ ಸಿದ್ದವಾದ ಚಟ್ನಿ ಪುಡಿಯನ್ನು ಡಬ್ಬದಲ್ಲಿ ಶೇಕರಿಸಿಟ್ಟ ರೆ , ಬೇಕಾದಾಗ ಇಡ್ಲಿ / ದೋಸೆ ಚಪಾತಿ ಯೊಟ್ಟಿಗೆ ಚಟ್ನಿ ಪುಡಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಸವಿಯಬಹುದು.
2 ಚಟ್ನಿ ಪುಡಿಗೆ ಸ್ವಲ್ಪ ಮೊಸರನ್ನು ಬೆರಸಿದರೆ, ಅನ್ನದೊಟ್ಟಿ ಗೆ ಕಲಸಿಕೊಂಡು ತಿನ್ನಬಹುದು.
No comments:
Post a Comment