ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಬೇಳೆಯುವ ಖರ್ಜೂರವು ಅತ್ಯಂತ ಸತ್ವಯುತವಾಗಿದೆ. ಇದರಲ್ಲಿ ಕಬ್ಬಿಣಾಂಶ ಕ್ಯಾಲ್ಷಿಯಂ ಪೋಟ್ಶಿಶಿಯಾಂ ಮತ್ತು
ನಾರಿನಂಶ ಹೇರಳವಾಗಿದೆ . ರಕ್ತ ಹೀನತೆ , ಹೃದಯದ ತೊಂದರೆಗಳು,ಮಲಬದ್ದತೆ ಕರುಳಿನ ಕ್ಯಾನ್ಸರ್ ಮುಂತಾದ ಸಮಸ್ಯೆಗಳನ್ನು
ನಿವಾರಿಸುವಲ್ಲಿ ಉಪಯುಕ್ತ. ಬಾಣ0ತಿಯರಿಗೆ ಮತ್ತು ವ್ರದ್ಧರಿಗೆ ಇದು ಅತ್ತುತ್ಯಮವಾದ ಆಹಾರ. .
ಖರ್ಜೂರದ ಅನ್ನ
ಬೇಕಾಗುವ ಪದಾರ್ಥಗಳು
ಬೀಜ ತೆಗೆದು ಕತ್ತರಿಸಿದ ಖರ್ಜೂರ - 3/4 ಕಪ್ಪು
ಈರುಳ್ಳಿ - ಎರಡು [ಉದ್ದಕ್ಕೆ ಹೆಚ್ಚಿಕೊಳ್ಳಬೇಕು]
ಗೋಡಂಬಿ - ನಾಲ್ಕು
ಬಾದಾಮಿ - ನಾಲ್ಕು
ಒಣ ದ್ರಾಕ್ಷಿ - 10
ಕಾಳು ಮೆಣಸು ಪುಡಿ - ಒಂದು ಚಮಚ
ಗರಮ್ ಮಸಾಲ ಪುಡಿ - ಒಂದು ಚಮಚ
ಉಪ್ಪು - ಸ್ವಲ್ಪ
ತುಪ್ಪ / ಎಣ್ಣೆ - ಎರಡು ದೊಡ್ಡ ಚಮಚ.
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಾಯಿತುರಿ - ಎರಡು ಚಮಚ.
ಮಾಡುವ ವಿಧಾನ:
೧. ದಪ್ಪ ತಳದ ಬಾಣಲೆಯಲ್ಲಿ ತುಪ್ಪ / ಎಣ್ಣೆಯನ್ನು ಹಾಕಿ ಕಾಯಿಸಬೇಕು.
೨. ಕಾದ ತುಪ್ಪದಲ್ಲಿ ಗೋಡಂಬಿ ಬಾದಾಮಿ ದ್ರಾಕ್ಷಿ ಹಾಗು ಕರ್ಜೂರವನ್ನು ಹುರಿದುಕೊಂಡು ತೆಗೆದಿಡಬೆಕು..
೩. ಅದೇ ಬಾಣಲೆಯಲ್ಲಿ, ಸ್ವಲ್ಪ ಎಣ್ಣೆ /ತುಪ್ಪವನ್ನು ಹಾಕಿ[ಅಗತ್ಯವಿದ್ದಲ್ಲಿ ಮಾತ್ರ] ಉದ್ದಕ್ಕೆ ಹೆಚ್ಚಿಟ್ಟ ಈರುಳ್ಳಿಯನ್ನು ತುಸು
ಕೆಂಪಗೆ ಹುರಿಯಬೇಕು. ನಂತರ ಅದಕ್ಕೆ, ತಯಾರಿಸಿಟ್ಟ ಅನ್ನ, ಕಾಳು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಉಪ್ಪನ್ನು
ಹಾಕಬೇಕು.
೪. ಕೊನೆಯಲ್ಲಿ ಹುರಿದಿಟ್ಟ ಒಣ ಹಣ್ಣುಗಳ್ಳನ್ನು [dry fruits]ಸೇರಿಸಿ ಚನ್ನಾಗಿ ಕಲಸಿಕೊಳ್ಳ ಬೇಕು.
೫. ಸ್ವಲ್ಪ ಕಾಯಿತುರಿ ಹಾಗು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮೇಲಿನಿಂದ ಹಾಕಿಕೊಂಡು ಸವಿಯಬಹುದು.
No comments:
Post a Comment