ಸೋರೆಕಾಯಿ ಸಿಪ್ಪೆ ತಂಬುಳಿ
ಬೇಕಾಗುವ ಪದಾರ್ಥಗಳು:
ಕಾಯಿತುರಿ - ಕಾಲು ಕಪ್ಪು
ಪುಟಾಣಿ - ಎರಡು ದೊಡ್ಡ ಚಮಚ
ಹುಣಸೆ - ಸಣ್ಣ ತುಂಡು
ಹಸಿಮೆಣಸು - ಎರಡು
ಬೆಳ್ಳುಳ್ಳಿ - 2-3 ಎಸಳು[ಬೀಜ]
ಕೊತ್ತಂಬರಿ ಸೊಪ್ಪು - ಐದು ಗಿಡ
ಮೊಸರು - ಅರ್ದ ಕಪ್ಪು
ಉಪ್ಪು - ರುಚಿಗೆ.
ಒಗ್ಗರೆಣೆ ಗೆ :-
ತುಪ್ಪ/ ಎಣ್ಣೆ - ಒಂದು ಚಮಚ
ಒಣಮೆಣಸು - ಒಂದು
ಕರಿಬೇವು - ಒಂದು ಗರಿ.
ಮಾಡುವ ವಿಧಾನ:
೧. ಸೊರೆಕಾಯಿ ಸಿಪ್ಪೆಯನ್ನು ಬೇಯಿಸಿಕೊಳ್ಳಬೇಕು.
೨. ಬೇಯಿಸಿದ ಸಿಪ್ಪೆ ಯೊಂದಿಗೆ ಕಾಯಿತುರಿ - ಪುಟಾಣಿ - ಹಸಿಮೆಣಸು- ಕೊತ್ತಂಬರಿ ಸೊಪ್ಪು- ಹುಣಸೆ, ಬೆಳ್ಳುಳ್ಳಿ
ಸೇರಿಸಿ ಮಿಕ್ಸಿ [ರುಬ್ಬಿ] ಮಾಡಿಕೊಳ್ಳಬೇಕು, ನಂತರ ಮೊಸರು ಉಪ್ಪನ್ನು ಹಾಕಿ, ಮತ್ತೊಮ್ಮೆ ಮಿಕ್ಸಿ ಮಾಡಿಕೊಳ್ಳಬೇಕು.
೩. ರುಬ್ಬಿದ ಮಿಶ್ರಣ ಕ್ಕೆ ಒಗ್ಗರಣೆಯನ್ನು ಹಾಕಿದರೆ , ರುಚಿ ರುಚಿಯಾದ ಸೋರೆಕಾಯಿ ಸಿಪ್ಪೆಯ ತಂಬುಳಿ/ ಚಟ್ನಿ ರೆಡಿ.
No comments:
Post a Comment