ದಾಲ್ ಭಾತ್
ಬೇಕಾಗುವ ಪದಾರ್ಥಗಳು:
ತೊಗರಿ ಬೇಳೆ - ಎರಡು ಕಪ್ಪು
ಅಕ್ಕಿ - ಒಂದು ಕಪ್ಪು
ಅರಿಶಿನ ಪುಡಿ - ಕಾಲು ಚಮಚ
ಗರಂ ಮಸಾಲಾ ಪುಡಿ - ಒಂದು ಸಣ್ಣ ಚಮಚ
ಖಾರ ಪುಡಿ - ಒಂದು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಲಿಂಬೆ ರಸ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ತುಪ್ಪ - ಸ್ವಲ್ಪ.
ಒಗ್ಗರೆಣೆಗೆ ಬೇಕಾಗುವ ಪದಾರ್ಥಗಳು:
ಎಣ್ಣೆ - ಎರಡು ಚಮಚ
ಜೀರಿಗೆ - ಅರ್ದ ಚಮಚ
ಜಜ್ಜಿದ ಬೆಳ್ಳುಳ್ಳಿ - ಒಂದು ಗಡ್ಡೆ
ಹೆಚ್ಚಿದ ಈರುಳ್ಳಿ - ಎರಡು
ಸಣ್ಣಗೆ ಹೆಚ್ಚಿದ ಟೊಮೇಟೊ ಹಣ್ಣು - ಒಂದು ಅಥವಾ ಎರಡು.
.
ಮಾಡುವ ವಿಧಾನ:
1 . ಅಕ್ಕಿ + ತೊಗರಿ ಬೇಳೆ ಯನ್ನು ತೊಳೆದು ಇಪ್ಪತ್ತು ನಿಮಿಷ ನೆನಸಿಡಬೆಕು.
2 . ಕುಕ್ಕರ್ ಪಾತ್ರೆಯಲ್ಲಿ ಒಗ್ಗರಣೆ ಮಾಡಿಕೊಂಡು,ನೆನಸಿದ ಅಕ್ಕಿ - ಬೇಳೆಯನ್ನು ಹಾಕಿಕೊಳ್ಳಬೇಕು.
3 . ಅಕ್ಕಿ + ಬೇಳೆಯ ನಾಲ್ಕು ಪಟ್ಟು ಜಾಸ್ತಿ ನೀರು, ಅರಿಶಿನ,ಖಾರಪುಡಿ, ಗರಂ ಮಸಾಲಾ ಪುಡಿ,ಉಪ್ಪನ್ನು ಹಾಕಿ ಮುಚ್ಚಳ ವನ್ನು ಮುಚ್ಚಿ, ಮೂರು ವಿಶಲ್ ತೆಗೆಯಬೆಕು.
No comments:
Post a Comment