ಹರಿವೆ ಸೊಪ್ಪಿನ ತಂಬ್ಳಿ
ಬೇಕಾಗುವ ಪದಾರ್ಥಗಳು:
ಏಳೇ ಹರಿವೆ ಸೊಪ್ಪು - ಒಂದು ಕಟ್ಟು
ಕಾಯಿತುರಿ - ಅರ್ದ ಕಪ್ಪು
ಮೊಸರು / ಕಡೆದ ಮಜ್ಜಿಗೆ - ಎರಡು ಲೋಟ
ಕಾಳುಮೆಣಸು - 8 - 10
ಜೀರಿಗೆ - ಅರ್ದ ಚಮಚ
ಉಪ್ಪು - ಸ್ವಲ್ಪ.
ತುಪ್ಪ / ತೆಂಗಿನ ಎಣ್ಣೆ - ಸಣ್ಣ ಚಮಚ.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ತುಪ್ಪ - ಒಂದು ಸಣ್ಣ ಚಮಚ
ಸಾಸಿವೆ - ಕಾಲು ಚಮಚ
ಮಾಡುವ ವಿಧಾನ:
ಸೊಪ್ಪನ್ನು ದಂಟಿ ನಿಂದ ಬಿಡಿಸಿ, ಚನ್ನಾಗಿ ತೊಳೆದುಕೊಂಡು , ಸಣ್ಣಗೆ ಹೆಚ್ಚಿ[ಕತ್ತರಿಸಿ] ಬೇಯಿಸಿಕೊಳ್ಳಬೇಕು. ಕಾಳು ಮೆಣಸು ಹಾಗು ಜೀರಿಗೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಪದಾರ್ಥಕ್ಕೆ ಬೇಯಿಸಿದ ಸೊಪ್ಪು[ನೀರು ಸಹಿತ], ಮೊಸರು / ಕಡೆದ ಮಜ್ಜಿಗೆ ಮತ್ತು ಉಪ್ಪನ್ನು ಸೇರಿಸಿ ಕೊಂಡು, ತುಪ್ಪದಲ್ಲಿ ಸಾಸಿವೆ ಅಥವಾ ಜೀರಿಗೆ ಒಣ ಮೆಣಸಿನ ಒಗ್ಗರಣೆಯನ್ನು ಕೊಡಬೇಕು.
ಆಯುರ್ವೇದಿಯ ಹಿನ್ನಲೆ:
ದೇಹದ ತೂಕ ಜಾಸ್ತಿ ಮಾಡುತ್ತದೆ. ಪೌಷ್ಟಿಕವಾದದ್ದು. ಕಫ ತುಸು ಹೆಚ್ಚು ಮಾಡುತ್ತದೆ. ಬೇಸಿಗೆಯಲ್ಲಿ ಒಳ್ಳೆಯದು. ಆರೋಗ್ಯ ವರ್ಧಕ. ಬಾಣ0ತಿಯರಿಗೆ ಅಷ್ಟು ಒಳ್ಳೆಯದಲ್ಲ.
No comments:
Post a Comment