BLOG FOLLOWERS

Wednesday, February 27, 2013




ಖರ್ಜೂರದ ಚಟ್ನಿ 

ಬೇಕಾಗುವ ಪದಾರ್ಥಗಳು:

ಖರ್ಜೂರ  -  15 
ಹುಣಸೇ ಹಣ್ಣು   - ಚಿಕ್ಕ ಕಿತ್ತಳೆ ಗಾತ್ರ 
ಬೆಲ್ಲದ ಪುಡಿ  -  ಎರಡು ದೊಡ್ಡ ಚಮಚ 
ಹಸಿ ಶುಂಟಿ   -  1'' ತುಂಡು 
ಖಾರಪುಡಿ   - ಒಂದು ಚಿಕ್ಕ ಚಮಚ 
ಗರಂ ಮಸಾಲಾ ಪುಡಿ  -  ಒಂದು ಚಿಕ್ಕ ಚಮಚ 
ಕಾಲ ನಮಕ್[ರೋಕ್  ಸಾಲ್ಟ್ ] - ಕಾಲು ಚಮಚ 
ಉಪ್ಪು   -  ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ:

1.ಹುಣಸೆ ಹಣ್ಣು  ಹಾಗು ಖರ್ಜೂರವನ್ನು ಸ್ವಲ್ಪ ಉಗರುಬೆಚ್ಚಗಿನ ನೀರಿನಲ್ಲಿ ಬೇರೆ ಬೇರೆಯಾಗಿ ನೆನಸಿಡಬೇಕು. 
2  ಹುಣಸೆ ಹಣ್ಣನ್ನು ಕಿವುಚಿ ರಸ ತೆಗೆದಿಡಬೇಕು. ಖರ್ಜೂರ, ಹಸಿಶುಂಟಿ ತುಂಡನ್ನು   ಮಿಕ್ಸಿಯಲ್ಲಿ     ಹಾಕಿ                    ನುಣ್ಣಗೆ  ರುಬ್ಬಿಟ್ಟುಕೊಳ್ಳಬೇಕು.[ರುಬ್ಬಲು ನೆನಸಿಟ್ಟ ನೀರನ್ನು ಬಳಸಬೇಕು]
3. ಹುಣಸೆ ರಸಕ್ಕೆ  ರುಬ್ಬಿಟ್ಟ  ಖರ್ಜೂರದ ಪೇಸ್ಟ್ , ರೋಕ್ ಸಾಲ್ಟ್ ,ಉಪ್ಪು, ಗರಂ ಮಸಾಲೆ ಪುಡಿ , ಖಾರಪುಡಿ, 
    ಬೆಲ್ಲದಪುಡಿ ಸೇರಿಸಿ  ಚನ್ನಾಗಿ ಕುದಿಸಬೇಕು. [ಸಣ್ಣ ಉರಿಯಲ್ಲಿ]
೪. ತಣಿದ ಬಳಿಕ ದೋಸೆ ಇಡ್ಲಿ ಪಾನಿಪುರಿ, ಮಸಾಲಾ ಪುರಿ ಸಮೋಸ ಇತ್ಯಾದಿ ...  ಗಳೊಂದಿಗೆ ಸವಿಯಲು  ರುಚಿಯಾಗಿರುತ್ತದೆ. 



 ಈ ಚಟ್ನಿಯನ್ನು  ಗಾಳಿ ಯಾಡದ ಡಬ್ಬದಲ್ಲಿಟ್ಟು  ಫ್ರಿಡ್ಜ್ ನಲ್ಲಿಟ್ಟರೆ  ತಿಂಗಳಾದರೂ ಕೆಡುವುದಿಲ್ಲ. 

Tuesday, February 26, 2013

  ಚಟ್ನಿ ಪುಡಿ 



ಬೇಕಾಗುವ ಪದಾರ್ಥಗಳು:

ಕಡ್ಲೆ ಬೇಳೆ   - ಒಂದು ಸಣ್ಣ ಕಪ್ಪು 
ಉದ್ದಿನ ಬೇಳೆ   - ಒಂದು ಸಣ್ಣ ಕಪ್ಪು 
ಪುಟಾಣಿ ಕಾಳು  -  ಒಂದು ಸಣ್ಣ ಕಪ್ಪು 
ಖಾರ ಪುಡಿ   - ಎರಡು ಚಮಚ 
ಹುಣಸೆ  -  ಸಣ್ಣ ತುಂಡು 
ಹಿಂಗು   - ಚಿಟಿಕೆಯಷ್ಟು 
ಉಪ್ಪು   -  ರುಚಿಗೆ ಹಿಡಿಸುವಷ್ಟು. 

ಚಟ್ನಿ ಪುಡಿ ತಯಾರಿಸುವ ವಿಧಾನ:  

1.  ಮೇಲೆ ತಿಳಿಸಿದ ಎಲ್ಲಾ  ಪದಾರ್ಥಗಳನ್ನು ಬೇರೆ- ಬೇರೆಯಾಗಿ ಹುರಿದುಕೊಂಡು, ತಣಿದ ಬಳಿಕ ಮಿಕ್ಸಿಯಲ್ಲಿ ಹಾಕಿ ನಯವಾಗಿ ಪುಡಿ ಮಾಡಿದರೆ, ಚಟ್ನಿ ಪುಡಿ ಸಿದ್ದವಾಗುತ್ತದೆ. ಹೀಗೆ ಸಿದ್ದವಾದ ಚಟ್ನಿ ಪುಡಿಯನ್ನು ಡಬ್ಬದಲ್ಲಿ ಶೇಕರಿಸಿಟ್ಟ ರೆ , ಬೇಕಾದಾಗ ಇಡ್ಲಿ  / ದೋಸೆ ಚಪಾತಿ ಯೊಟ್ಟಿಗೆ  ಚಟ್ನಿ ಪುಡಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಸವಿಯಬಹುದು. 
2  ಚಟ್ನಿ ಪುಡಿಗೆ ಸ್ವಲ್ಪ ಮೊಸರನ್ನು ಬೆರಸಿದರೆ, ಅನ್ನದೊಟ್ಟಿ ಗೆ   ಕಲಸಿಕೊಂಡು ತಿನ್ನಬಹುದು. 

 

ಹಾಗಲಕಾಯಿ ಚಟ್ನಿ 

ಬೇಕಾಗುವ ಪದಾರ್ಥಗಳು:

ಹಾಗಲಕಾಯಿ   -  ಒಂದು 
ಕಾಯಿತುರಿ   - ಒಂದು ಕಪ್ಪು 
ಒಣಮೆಣಸು   -  ಏಳು -ಎಂಟು 
ಹುಣಸೆ   -  ಸಣ್ಣ ಲಿಂಬೆ ಗಾತ್ರ 
ಬೆಲ್ಲ  - ಸಣ್ಣ ತುಂಡು 
ಬಿಳಿ ಎಳ್ಳು  -  ಸಣ್ಣ ಚಮಚ 
ಉಪ್ಪು  - ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

ಎಣ್ಣೆ  -  ಒಂದು ಚಮಚ 
ಸಾಸಿವೆ  - ಸಣ್ಣ ಚಮಚ 
ಕರಿಬೇವು - ಒಂದುಗರಿ  

ಮಾಡುವ ವಿಧಾನ:

೧. ಹಾಗಲ ಕಾಯಿಯನ್ನು ತೊಳೆದು ಒಂದಿಂಚು ಗಾತ್ರದಲ್ಲಿ ಕತ್ತರಿಸಿ, ಉಪ್ಪನ್ನು ಬೆರಸಿ ಅರ್ದ ಗಂಟೆಗಳ ಕಾಲ ತೆಗೆದಿಡಬೇಕು. 
೨. ಕತ್ತರಿಸಿಟ್ಟ ಹಾಗಲಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಕೆಂಪಗೆ ಹುರಿದಿಟ್ಟುಕೊಳ್ಳಬೇಕು. 
೩. ಬಾಣಲೆಯಲ್ಲಿ ಕಾಲು ಚಮಚ ಎಣ್ಣೆ ಹಾಕಿ , ಎಳ್ಳು ಹಾಗು ಕೆಂಪು ಮೆಣಸಿನಕಾಯಿ ಹುರಿದುಕೊಂಡು ತೆಗೆದಿದಬೇಕು. ನಂತರ ಅದೇ ಬಾಣಲೆಯಲ್ಲಿ ಕಾಯಿತುರಿ ಯನ್ನು ಹಾಕಿ ಬೆಚ್ಚಗೆ ಹುರಿಯಬೇಕು. 




೪. ಈಗ ಹುರಿದ್ದಿಟ್ಟ  ಎಲ್ಲಾ ಪದಾರ್ಥಗಳೊಂದಿಗೆ  ಬೆಲ್ಲ ಹುಣಸೆ ಉಪ್ಪು ಹಾಗು ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ಗ್ರೈಂಡ್ ಮಾಡಿ     ಕೊಳ್ಳಬೇಕು.  ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ ಕರಿಬೇವು ಒಗ್ಗರಣೆ ಹಾಕಿದರೆ, ರುಚಿ ರುಚಿಯಾದ ಆರೋಗ್ಯ ಬರಿತ ಹಾಗಲ ಚಟ್ನಿ ಸವಿಯಬಹುದು. 

* ಈ ಚಟ್ನಿಯನ್ನು ದೋಸೆ, ಚಪಾತಿ ಅನ್ನದೊಟ್ಟಿಗೆ ತಿನ್ನಬಹುದು.  

Monday, February 25, 2013

 ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಬೇಳೆಯುವ ಖರ್ಜೂರವು ಅತ್ಯಂತ ಸತ್ವಯುತವಾಗಿದೆ. ಇದರಲ್ಲಿ ಕಬ್ಬಿಣಾಂಶ ಕ್ಯಾಲ್ಷಿಯಂ ಪೋಟ್ಶಿಶಿಯಾಂ ಮತ್ತು 
 ನಾರಿನಂಶ ಹೇರಳವಾಗಿದೆ . ರಕ್ತ ಹೀನತೆ , ಹೃದಯದ ತೊಂದರೆಗಳು,ಮಲಬದ್ದತೆ ಕರುಳಿನ ಕ್ಯಾನ್ಸರ್ ಮುಂತಾದ ಸಮಸ್ಯೆಗಳನ್ನು 
 ನಿವಾರಿಸುವಲ್ಲಿ ಉಪಯುಕ್ತ. ಬಾಣ0ತಿಯರಿಗೆ  ಮತ್ತು ವ್ರದ್ಧರಿಗೆ  ಇದು ಅತ್ತುತ್ಯಮವಾದ ಆಹಾರ. . 


 

 ಖರ್ಜೂರದ ಅನ್ನ 

ಬೇಕಾಗುವ ಪದಾರ್ಥಗಳು 

ಕೆಂಪಕ್ಕಿ / ಬಾಸುಮತಿ ಅಕ್ಕಿ ಅನ್ನ   -  ಎರಡು ಕಪ್ಪು 
ಬೀಜ ತೆಗೆದು ಕತ್ತರಿಸಿದ ಖರ್ಜೂರ  -  3/4  ಕಪ್ಪು 
ಈರುಳ್ಳಿ   -  ಎರಡು [ಉದ್ದಕ್ಕೆ ಹೆಚ್ಚಿಕೊಳ್ಳಬೇಕು]
ಗೋಡಂಬಿ  -  ನಾಲ್ಕು 
ಬಾದಾಮಿ   -  ನಾಲ್ಕು 
ಒಣ ದ್ರಾಕ್ಷಿ   -  10 
ಕಾಳು ಮೆಣಸು ಪುಡಿ  -   ಒಂದು ಚಮಚ 
ಗರಮ್ ಮಸಾಲ ಪುಡಿ  -  ಒಂದು ಚಮಚ 
ಉಪ್ಪು   -  ಸ್ವಲ್ಪ 
ತುಪ್ಪ / ಎಣ್ಣೆ   -  ಎರಡು ದೊಡ್ಡ ಚಮಚ.  
 ಕೊತ್ತಂಬರಿ ಸೊಪ್ಪು  - ಸ್ವಲ್ಪ 
ಕಾಯಿತುರಿ   - ಎರಡು ಚಮಚ. 

 ಮಾಡುವ ವಿಧಾನ:

 ೧. ದಪ್ಪ ತಳದ ಬಾಣಲೆಯಲ್ಲಿ ತುಪ್ಪ / ಎಣ್ಣೆಯನ್ನು ಹಾಕಿ ಕಾಯಿಸಬೇಕು. 
 ೨. ಕಾದ ತುಪ್ಪದಲ್ಲಿ  ಗೋಡಂಬಿ ಬಾದಾಮಿ ದ್ರಾಕ್ಷಿ ಹಾಗು ಕರ್ಜೂರವನ್ನು ಹುರಿದುಕೊಂಡು ತೆಗೆದಿಡಬೆಕು.. 
೩. ಅದೇ ಬಾಣಲೆಯಲ್ಲಿ, ಸ್ವಲ್ಪ ಎಣ್ಣೆ /ತುಪ್ಪವನ್ನು ಹಾಕಿ[ಅಗತ್ಯವಿದ್ದಲ್ಲಿ ಮಾತ್ರ] ಉದ್ದಕ್ಕೆ ಹೆಚ್ಚಿಟ್ಟ  ಈರುಳ್ಳಿಯನ್ನು ತುಸು 
    ಕೆಂಪಗೆ ಹುರಿಯಬೇಕು.  ನಂತರ ಅದಕ್ಕೆ, ತಯಾರಿಸಿಟ್ಟ  ಅನ್ನ, ಕಾಳು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಉಪ್ಪನ್ನು 
    ಹಾಕಬೇಕು. 
೪. ಕೊನೆಯಲ್ಲಿ ಹುರಿದಿಟ್ಟ ಒಣ ಹಣ್ಣುಗಳ್ಳನ್ನು [dry fruits]ಸೇರಿಸಿ ಚನ್ನಾಗಿ ಕಲಸಿಕೊಳ್ಳ ಬೇಕು. 


೫. ಸ್ವಲ್ಪ ಕಾಯಿತುರಿ  ಹಾಗು  ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ  ಮೇಲಿನಿಂದ ಹಾಕಿಕೊಂಡು ಸವಿಯಬಹುದು.  

ನುಗ್ಗೇ ಕಾಯಿ + ಟೊಮೇಟೊ ಹಣ್ಣಿನ  ಗೊಜ್ಜು 

ಬೇಕಾಗುವ ಪದಾರ್ಥಗಳು:

ನುಗ್ಗೇ ಕಾಯಿ  -  5 
ಟೊಮೇಟೊ   - 2 ರಿಂದ 3 
ಈರುಳ್ಳಿ  -  1 
ಹಸಿಮೆಣಸು  - 2 

ಒಗ್ಗರಣೆ ಗೆ  ಬೇಕಾಗುವ ಪದಾರ್ಥಗಳು:

ಕೊಬ್ಬರಿ ಎಣ್ಣೆ  -   ಒಂದು ಚಮಚ 
ಸಾಸಿವೆ   -  ಒಂದು ಚಮಚ 
ಹಿಂಗು   - ಒಂದು ಚಿಟಿಕೆಯಷ್ಟು 
ಒಣಮೆಣಸು  - ಒಂದು 
ಕರಿಬೇವು  -  ಒಂದು ಗರಿ. 

ಮಾಡುವ ವಿಧಾನ: 

1  ನುಗ್ಗೆ ಕಾಯಿ ಹಾಗು ಟೊಮೇಟೊ ಹಣ್ಣನ್ನು ಬೇಯಿಸಿ ಅದರ ಸಿಪ್ಪೆಯನ್ನು ತೆಗೆದು  ಒಳಗಿನ  ತಿರುಳ್ಳ ನ್ನು ಮಿಕ್ಸಿ ಯಲ್ಲಿ
    ತಿರುವಿಕೊಳ್ಳ ಬೇಕು.
2.  ತಿರುವಿಟ್ಟ ಗೊಜ್ಜಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗು ಹಸಿಮೆಣಸು, ಉಪ್ಪನ್ನು  ಹಾಕಿ   ಗೊಜ್ಜಿನ್ನು ತಯಾರಿಸಬೇಕು.
     [ಬೇಯಿಸಿದ ನೀರನ್ನು ಸೇರಿಸಿಕೊಳ್ಳಬೇಕು]
3. ಹೀಗೆ ತಯಾರಾದ ಗೊಜ್ಜಿಗೆ, ಸಾಸಿವೆ ಹಿಂಗು ಕರಿಬೇವು ಹಾಗು ಒಣಮೆಣಸಿನ ಒಗ್ಗರಣೆಯನ್ನು ಕೊಡಬೇಕು.  
4  ಬೇಕಾದಲ್ಲಿ ಸ್ವಲ್ಪ ಹೆಚ್ಚಿನ ರುಚಿಗೆ  ಕಾಯಿತುರಿಯನ್ನು  ಸೇರಿಸಿಕೊಳ್ಳಬಹುದು. 

Saturday, February 23, 2013

ಹರಿವೆ ಸೊಪ್ಪಿನ ತಂಬ್ಳಿ 

ಬೇಕಾಗುವ ಪದಾರ್ಥಗಳು:

ಏಳೇ ಹರಿವೆ ಸೊಪ್ಪು  -  ಒಂದು ಕಟ್ಟು 
ಕಾಯಿತುರಿ   - ಅರ್ದ ಕಪ್ಪು 
ಮೊಸರು / ಕಡೆದ ಮಜ್ಜಿಗೆ  -  ಎರಡು  ಲೋಟ 
ಕಾಳುಮೆಣಸು   -  8  - 10 
ಜೀರಿಗೆ   -   ಅರ್ದ ಚಮಚ 
ಉಪ್ಪು   - ಸ್ವಲ್ಪ. 
ತುಪ್ಪ  / ತೆಂಗಿನ ಎಣ್ಣೆ  -    ಸಣ್ಣ ಚಮಚ. 

ಒಗ್ಗರಣೆಗೆ  ಬೇಕಾಗುವ ಪದಾರ್ಥಗಳು:

ತುಪ್ಪ  - ಒಂದು ಸಣ್ಣ ಚಮಚ 
ಸಾಸಿವೆ  - ಕಾಲು ಚಮಚ 
ಒಣಮೆಣಸು  -  ಒಂದು. 

ಮಾಡುವ ವಿಧಾನ:


ಸೊಪ್ಪನ್ನು ದಂಟಿ ನಿಂದ  ಬಿಡಿಸಿ, ಚನ್ನಾಗಿ  ತೊಳೆದುಕೊಂಡು , ಸಣ್ಣಗೆ ಹೆಚ್ಚಿ[ಕತ್ತರಿಸಿ] ಬೇಯಿಸಿಕೊಳ್ಳಬೇಕು.  ಕಾಳು ಮೆಣಸು  ಹಾಗು ಜೀರಿಗೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಕಾಯಿತುರಿಯೊಂದಿಗೆ ನುಣ್ಣಗೆ  ರುಬ್ಬಿಕೊಳ್ಳಬೇಕು. ರುಬ್ಬಿದ ಪದಾರ್ಥಕ್ಕೆ  ಬೇಯಿಸಿದ ಸೊಪ್ಪು[ನೀರು ಸಹಿತ], ಮೊಸರು  / ಕಡೆದ ಮಜ್ಜಿಗೆ ಮತ್ತು ಉಪ್ಪನ್ನು ಸೇರಿಸಿ ಕೊಂಡು, ತುಪ್ಪದಲ್ಲಿ ಸಾಸಿವೆ ಅಥವಾ ಜೀರಿಗೆ ಒಣ ಮೆಣಸಿನ ಒಗ್ಗರಣೆಯನ್ನು ಕೊಡಬೇಕು. 

 ಆಯುರ್ವೇದಿಯ ಹಿನ್ನಲೆ:
 ದೇಹದ ತೂಕ ಜಾಸ್ತಿ ಮಾಡುತ್ತದೆ. ಪೌಷ್ಟಿಕವಾದದ್ದು. ಕಫ ತುಸು ಹೆಚ್ಚು ಮಾಡುತ್ತದೆ. ಬೇಸಿಗೆಯಲ್ಲಿ ಒಳ್ಳೆಯದು. ಆರೋಗ್ಯ ವರ್ಧಕ.  ಬಾಣ0ತಿಯರಿಗೆ   ಅಷ್ಟು ಒಳ್ಳೆಯದಲ್ಲ. 


Friday, February 22, 2013


ಹೀರೆಕಾಯಿ ಸಿಪ್ಪೆ ತಂಬ್ಳಿ




ಬೇಕಾಗುವ ಪದಾರ್ಥಗಳು:

ಹೀರೆಕಾಯಿ ಸಿಪ್ಪೆ   -   ಒಂದು ಮುಷ್ಠಿಯಷ್ಟು
ಕಾಯಿತುರಿ   -  ಅರ್ದ ಕಪ್ಪು 
ಮೊಸರು / ಕಡೆದ ಮಜ್ಜಿಗೆ   -  ಒಂದು ಕಪ್ಪು 
ಜೀರಿಗೆ  - ಕಾಲು  ಚಮಚ
ಕಾಳು ಮೆಣಸು   -  7 - 8 
ಉಪ್ಪು   - ರುಚಿಗೆ ತಕ್ಕಷ್ಟು 
ತುಪ್ಪ  -ಸಣ್ಣ ಚಮಚ.  

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 ತುಪ್ಪ  - ಒಂದು ಸಣ್ಣ ಚಮಚ 
ಒಣಮೆಣಸು   -  ಒಂದು 
ಜೀರಿಗೆ/ ಸಾಸಿವೆ  - ಒಂದು ಸಣ್ಣ ಚಮಚ. 

ಮಾಡುವ ವಿಧಾನ:

 ಸಿಪ್ಪೆಯನ್ನು ತೊಳೆದು  ಸ್ವಲ್ಪ ನೀರಿನಲ್ಲಿ  ಬೇಯಿಸಿಕೊಳ್ಳಬೇಕು. ಬೇಯಿಸಿದ ಸಿಪ್ಪೆಗೆ ಅರ್ದ ಕಪ್ಪು ಕಾಯಿತುರಿ, ತುಪ್ಪದಲ್ಲಿ ಹುರಿದ ಜೀರಿಗೆ ಹಾಗು ಕಾಳು ಮೆಣಸನ್ನು ಹಾಕಿ ರುಬ್ಬಿ ಕೊಳ್ಳಬೇಕುँಆಣ್ಟಾಋಆ ಅದಕ್ಕೆ ಕಡೆದ ಮಜ್ಜಿಗೆ ಅಥವಾ ಮೊಸರನ್ನು 
ಬೆರಸಿ ಜೀರಿಗೆ ಅಥವಾ ಸಾಸಿವೆ ಮತ್ತು ಒಣ ಮೆಣಸಿನ ಒಗ್ಗರಣೆಯನ್ನು ಕೊಡಬೇಕು. 

  BENEFITS IN AYURVEDA

 ಚರ್ಮರೋಗ ಗುಣ ಮಾಡುತ್ತದೆ . ಮಕ್ಕಳಿಗೆ ವೀಷೆಶವಾಗಿ ಕೊಡ ಬಹುದು . ಇನ್ನು ಉಳಿದಂತೆ ಕುಂಬಳದ ಗುಣ . 

Thursday, February 21, 2013

ದಾಳಿಂಬೆ ಸಿಪ್ಪೆಯ ತಂಬ್ಳಿ 

ಬೇಕಾಗುವ ಪದಾರ್ಥಗಳು:

ದಾಳಿಂಬೆ ಸಿಪ್ಪೆ -  ಅರ್ದ ಹಣ್ಣಿನ ಸಿಪ್ಪೆ 
ಮೊಸರು/ ಮಜ್ಜಿಗೆ   - ಒಂದು ಕಪ್ಪು 
ಕಾಯಿತುರಿ  -  ಅರ್ದ ಕಪ್ಪು
 ಜೀರಿಗೆ  -  ಅರ್ದ ಚಮಚ
ಮೆಣಸಿನ ಕಾಳು   -  5 -6
ಬೆಲ್ಲ  -  ಸಣ್ಣ ತುಂಡು
ಉಪ್ಪು  -  ಸ್ವಲ್ಪ. 

ಒಗ್ಗರಣೆಗೆ:

ತುಪ್ಪ  -  ಸಣ್ಣ ಚಮಚ 
ಜೀರಿಗೆ  - ಕಾಲು  ಚಮಚ
ಒಣಮೆಣಸು  - ಒಂದು.

 ಮಾಡುವ ವಿಧಾನ:

1. ಸ್ವಲ್ಪ ತುಪ್ಪದಲ್ಲಿ ಮೆಣಸು, ಜೀರಿಗೆ , ಹಣ್ಣಿನ ಸಿಪ್ಪೆಯನ್ನು ಹುರಿದುಕೊಳ್ಳಬೇಕು. 
2 . ಹುರಿದ ಪದಾರ್ಥಗಳನ್ನು ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಬೇಕು. 
3 . ರುಬ್ಬಿದ ಚಟ್ನಿ ಗೆ ಬೆಲ್ಲ, ಉಪ್ಪು,  ಮೊಸರನ್ನು / ಮಜ್ಜಿಗೆ  ಹಾಕಿ ಮತ್ತೊಮ್ಮೆ ಮಿಕ್ಸಿ ಮಾಡಿಕೊಳ್ಳಬೇಕು. 
4.  ಕೊನೆಯಲ್ಲಿ ಜೀರಿಗೆ ,ಒಣಮೆಣಸಿನ ಒಗ್ಗರಣೆಯನ್ನು  ಕೊಡಬೇಕು. 

ಆಯುರ್ವೇದಿಯ ಹಿನ್ನಲೆ: ಗುಣದಲ್ಲಿ ಸೊಪ್ಪಿಗಿಂತ ತೀಕ್ಷ್ಣ [teekshna].ಅತಿಸಾರಕ್ಕೆ , ಕರಳು ಹುಣ್ಣಿಗೆ ಒಳ್ಳೆಯದು. ಪ್ರಾಯ ಆದವರಿಗೆ ಒಳಿತಲ್ಲ. ವಾತ ಹೆಚ್ಚು ಮಾಡುತ್ತದೆ. ಅಜೀರ್ಣವಾದಾಗ  ಒಳ್ಳೆಯದು. ನಂಜಿಗೂ ಒಳ್ಳೆಯದು. 


Tuesday, February 19, 2013

ದಾಲ್ ಭಾತ್ 

ಬೇಕಾಗುವ ಪದಾರ್ಥಗಳು:

ತೊಗರಿ ಬೇಳೆ   -  ಎರಡು ಕಪ್ಪು 
ಅಕ್ಕಿ    -   ಒಂದು ಕಪ್ಪು 
ಅರಿಶಿನ ಪುಡಿ  - ಕಾಲು ಚಮಚ 
ಗರಂ ಮಸಾಲಾ ಪುಡಿ  - ಒಂದು ಸಣ್ಣ ಚಮಚ 
ಖಾರ ಪುಡಿ   -   ಒಂದು ಚಮಚ 
ಉಪ್ಪು  -  ರುಚಿಗೆ ತಕ್ಕಷ್ಟು 
ಲಿಂಬೆ ರಸ   - ಸ್ವಲ್ಪ 
ಕೊತ್ತಂಬರಿ ಸೊಪ್ಪು  - ಸ್ವಲ್ಪ 
ತುಪ್ಪ   - ಸ್ವಲ್ಪ. 

ಒಗ್ಗರೆಣೆಗೆ  ಬೇಕಾಗುವ ಪದಾರ್ಥಗಳು:

ಎಣ್ಣೆ   -  ಎರಡು ಚಮಚ 
ಜೀರಿಗೆ  -  ಅರ್ದ ಚಮಚ 
ಜಜ್ಜಿದ ಬೆಳ್ಳುಳ್ಳಿ   - ಒಂದು ಗಡ್ಡೆ 
ಹೆಚ್ಚಿದ ಈರುಳ್ಳಿ  -  ಎರಡು 
ಸಣ್ಣಗೆ ಹೆಚ್ಚಿದ ಟೊಮೇಟೊ ಹಣ್ಣು  -  ಒಂದು ಅಥವಾ ಎರಡು. 

ಮಾಡುವ ವಿಧಾನ:

1 . ಅಕ್ಕಿ  + ತೊಗರಿ ಬೇಳೆ ಯನ್ನು ತೊಳೆದು ಇಪ್ಪತ್ತು ನಿಮಿಷ ನೆನಸಿಡಬೆಕು. 
2 . ಕುಕ್ಕರ್ ಪಾತ್ರೆಯಲ್ಲಿ ಒಗ್ಗರಣೆ ಮಾಡಿಕೊಂಡು,ನೆನಸಿದ ಅಕ್ಕಿ - ಬೇಳೆಯನ್ನು  ಹಾಕಿಕೊಳ್ಳಬೇಕು. 
3 . ಅಕ್ಕಿ + ಬೇಳೆಯ ನಾಲ್ಕು ಪಟ್ಟು ಜಾಸ್ತಿ ನೀರು, ಅರಿಶಿನ,ಖಾರಪುಡಿ, ಗರಂ ಮಸಾಲಾ ಪುಡಿ,ಉಪ್ಪನ್ನು ಹಾಕಿ ಮುಚ್ಚಳ ವನ್ನು ಮುಚ್ಚಿ, ಮೂರು ವಿಶಲ್  ತೆಗೆಯಬೆಕು. 



4. ಕುಕ್ಕರ್ ತಣಿದ ಬಳಿಕ,ಮುಚ್ಚಳವನ್ನು ತೆಗೆದು  ತುಪ್ಪ ಹಾಗು  ಲಿಂಬೆ ರಸವನ್ನು ಹಾಕಿ ಬೆರಸಿಕೊಳ್ಳಬೇಕು. 

     * ತಿನ್ನುವ ಮೊದಲು  ಸ್ವಲ್ಪ ತುಪ್ಪ  ಹಾಗು ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಬೇಕು. 


 

Thursday, February 14, 2013

Apple ಶೀರಾ/ ಪುಡ್ಡಿಂಗ್ 

ಬೇಕಾಗುವ ಪದಾರ್ಥಗಳು:

ಸಣ್ಣ ರವೆ  -  ಒಂದು ಕಪ್ಪು 

ಸೇಬು  -   ಒಂದು  [ಸಣ್ಣಗೆ ಹೆಚ್ಚಿದ್ದು]

ಹಾಲು  -  ಎರಡುವರೆ  ಕಪ್ಪು 

ಸಕ್ಕರೆ  -  ಎರಡು ಚಮಚ

ತುಪ್ಪ   -  ಐದು ದೊಡ್ಡ ಚಮಚ 

ಏಲಕ್ಕಿ ಪುಡಿ - ಸ್ವಲ್ಪ 

ದ್ರಾಕ್ಷಿ, ಗೋಡಂಬಿ, ಬಾದಾಮಿ  -  ಸ್ವಲ್ಪ.

ಮಾಡುವ ವಿಧಾನ:

೧. ಎರಡುವರೆ  ಕಪ್ಪು ಹಾಲನ್ನು ಬಿಸಿ ಮಾಡಿಟ್ಟುಕೊಳ್ಳಬೇಕು.
೨.ಬಾಣಲೆಗೆ ತುಪ್ಪ ಸುರಿದು ಅದರಲ್ಲಿ ರವೆಯನ್ನು ಹುರಿದುಕೊಂಡು,ಬಿಸಿ ಹಾಲನ್ನು ಹಾಕಿ ಮಗುಚಬೇಕು.
೩.ರವೆ ಬೆಂದ ನಂತರ ಸಣ್ಣಗೆ ಹೆಚ್ಚಿಟ್ಟ ಸೇಬು ಹಾಗು ಸಕ್ಕರೆಯನ್ನು ಹಾಕಿ ಚನ್ನಾಗಿ ಕಲಸಿಕೊಳ್ಳಬೇಕು.ಸಕ್ಕರೆ ಕರಗಿ     
ಪಾತ್ರೆಯ ಒಳ ಬದಿಯಲ್ಲಿ   ತುಪ್ಪ ಕಾಣಿಸಿಕೊಂಡಾಗ ,ಬಾಣಲೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ ಕೊಳ್ಳಬೇಕು.
೪. ಸ್ವಲ್ಪ ತುಪ್ಪದಲ್ಲಿ ಬಾದಾಮಿ ದ್ರಾಕ್ಷಿ ಗೋಡಂಬಿಯನ್ನು ಹುರಿದು ತಯಾರಿಸಿದ ರವೆಗೆ ಹಾಕಬೇಕು.೫.ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಬೆರಸಿದರೆ, ರುಚಿಕರವಾದ  APPLE PUDDING ಸವಿಯಲು ಸಿದ್ದ.






ಬಾಳೆಕಾಯಿ ಸಿಪ್ಪೆಯ ತಂಬ್ಳಿ  


ಬೇಕಾಗುವ ಪದಾರ್ಥಗಳು:

ಎರಡು ಬಾಳೆಕಾಯಿಯ  ಸಿಪ್ಪೆ  
 ಕಾಯಿತುರಿ   -  ಅರ್ದ ಕಪ್ಪು 
ಜೀರಿಗೆ   -  ಅರ್ದ ಚಮಚ 
ಕಾಳುಮೆಣಸು  -  7-8
ಮೊಸರು    -   ಒಂದು ಕಪ್ಪು 
ಉಪ್ಪು   -  ರುಚಿಗೆ  ತಕ್ಕಷ್ಟು .

ಒಗ್ಗರಣೆ ಗೆ ಬೇಕಾಗುವ ಪದಾರ್ಥಗಳು:

ತುಪ್ಪ  -  ಒಂದು ಚಮಚ 
ಸಾಸಿವೆ / ಜೀರಿಗೆ  - ಒಂದು ಸಣ್ಣ ಚಮಚ 
ಒಣ ಮೆಣಸು   -  ಒಂದು 
ಕರಿಬೇವು  -ಒಂದು ಗರಿ.

ಮಾಡುವ  ವಿಧಾನ:

ಸಿಪ್ಪೆಯನ್ನು ಸ್ವಲ್ಪ ನೀರಿನಲ್ಲಿ  ಬೇಯಿಸಿಕೊಳ್ಳಬೇಕು.ಬೇಯಿಸಿದ ಸಿಪ್ಪೆಗೆ ಕಾಯಿತುರಿ, ಸ್ವಲ್ಪ ತುಪ್ಪದಲ್ಲಿ ಹುರಿದ ಜೀರಿಗೆ 
ಹಾಗು ಕಾಳುಮೆಣಸನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಹಾಗು ಉಪ್ಪನ್ನು ಬೆರಸಿ, ಜೀರಿಗೆ ಒಣಮೆಣಸಿನ ಒಗ್ಗರಣೆಯನ್ನು ಕೊಡಬೇಕು.

 


Tuesday, February 5, 2013

ಸೋರೆಕಾಯಿ ಸಿಪ್ಪೆ ತಂಬುಳಿ 

ಬೇಕಾಗುವ ಪದಾರ್ಥಗಳು:

 ಒಂದು ಮಧ್ಯಮ ಗಾತ್ರದ ಸೋರೆಕಯಿಯ  ಸಿಪ್ಪೆ 
ಕಾಯಿತುರಿ   -  ಕಾಲು ಕಪ್ಪು 
ಪುಟಾಣಿ   -   ಎರಡು ದೊಡ್ಡ ಚಮಚ 
ಹುಣಸೆ    -  ಸಣ್ಣ ತುಂಡು 
ಹಸಿಮೆಣಸು  -  ಎರಡು 
ಬೆಳ್ಳುಳ್ಳಿ   - 2-3 ಎಸಳು[ಬೀಜ]
ಕೊತ್ತಂಬರಿ ಸೊಪ್ಪು  -   ಐದು ಗಿಡ 
ಮೊಸರು   -    ಅರ್ದ ಕಪ್ಪು 
ಉಪ್ಪು -  ರುಚಿಗೆ.



ಒಗ್ಗರೆಣೆ ಗೆ :-

ತುಪ್ಪ/  ಎಣ್ಣೆ   -   ಒಂದು ಚಮಚ 
ಸಾಸಿವೆ   -   ಒಂದು ಸಣ್ಣ ಚಮಚ 
ಒಣಮೆಣಸು   -  ಒಂದು 
ಕರಿಬೇವು   -  ಒಂದು ಗರಿ.

ಮಾಡುವ ವಿಧಾನ:

   ೧. ಸೊರೆಕಾಯಿ ಸಿಪ್ಪೆಯನ್ನು ಬೇಯಿಸಿಕೊಳ್ಳಬೇಕು.
   ೨. ಬೇಯಿಸಿದ ಸಿಪ್ಪೆ ಯೊಂದಿಗೆ ಕಾಯಿತುರಿ - ಪುಟಾಣಿ - ಹಸಿಮೆಣಸು- ಕೊತ್ತಂಬರಿ ಸೊಪ್ಪು- ಹುಣಸೆ, ಬೆಳ್ಳುಳ್ಳಿ 
        ಸೇರಿಸಿ ಮಿಕ್ಸಿ [ರುಬ್ಬಿ] ಮಾಡಿಕೊಳ್ಳಬೇಕು, ನಂತರ ಮೊಸರು ಉಪ್ಪನ್ನು ಹಾಕಿ, ಮತ್ತೊಮ್ಮೆ ಮಿಕ್ಸಿ ಮಾಡಿಕೊಳ್ಳಬೇಕು.
  ೩.  ರುಬ್ಬಿದ ಮಿಶ್ರಣ ಕ್ಕೆ ಒಗ್ಗರಣೆಯನ್ನು ಹಾಕಿದರೆ , ರುಚಿ ರುಚಿಯಾದ ಸೋರೆಕಾಯಿ ಸಿಪ್ಪೆಯ ತಂಬುಳಿ/ ಚಟ್ನಿ ರೆಡಿ.
  

* ದೋಸೆ /  ಪುಲ್ಕಾ  / ಅನ್ನದೊಟ್ಟಿ ಗೆ ಸವಿಯಬಹುದು.

Saturday, February 2, 2013

ಈರುಳ್ಳಿ ದಂಟಿನ ಪಲ್ಯ /  ಸ್ಪ್ರಿಂಗ್ ಆನಿಯನ್  ಕರಿ 

ಬೇಕಾಗುವ ಪದಾರ್ಥಗಳು:

ಈರುಳ್ಳಿ  ದಂಟು   - ಒಂದು ಕಟ್ಟು [ಕತ್ತರಿಸಿದಬೇಕು]
ಕಾಯಿತುರಿ    -    ಒಂದು ಕಪ್ಪು 
ಒಣಮೆಣಸಿನಕಾಯಿ  -  3-4 
ಹುಣಸೆ ರಸ    -  ಅರ್ದ ಚಮಚ 
ಹುರಿಗಡಲೆ/ಪುಟಾಣಿ   -   ಎರಡು ಚಮಚ 
ಬಿಳಿ ಎಳ್ಳು    -  ಒಂದು ಚಮಚ 
ಸಾಸಿವೆ   -  ಒಂದು ಸಣ್ಣ ಚಮಚ 
ಹಿಂಗು   -  ಸ್ವಲ್ಪ
ಬೆಲ್ಲ   -  ಅರ್ದ ಚಮಚ 
ಉಪ್ಪು  - ರುಚಿಗೆ ತಕ್ಕಷ್ಟು.

ಒಗ್ಗರಣೆ ಗೆ  ಬೇಕಾಗುವ ಪದಾರ್ಥಗಳು:

 ಎಣ್ಣೆ    -   ಒಂದು ದೊಡ್ಡ ಚಮಚ 
ಸಾಸಿವೆ    - ಅರ್ದ ಚಮಚ 
ಹಿಂಗು  - ಚಿಟಿಕೆಯಷ್ಟು 
ಕರಿಬೇವು  -  ಒಂದು ಗರಿ.

ಮಾಡುವ ವಿಧಾನ:

೧.ಮಸಾಲೆಗೆ:.ಸ್ವಲ್ಪ ಎಣ್ಣೆಯಲ್ಲಿ ಹಿಂಗು ಒಣಮೆಣಸನ್ನು ಹುರಿದುಕೊಂಡು,ಕಾಯಿತುರಿ-ಹುಣಸೆ-ಬೆಲ್ಲ-ಹುರಿಗಡಲೆ- ಹುರಿದ ಎಳ್ಳನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಬೇಕು.

೨. ಪಲ್ಯ ಮಾಡುವ ಪಾತ್ರೆಯಲ್ಲಿ ಒಗ್ಗರಣೆ ಮಾಡಿಕೊಂಡು ಸಣ್ಣಗೆ ತುಂಡರಿಸಿದ ಈರುಳ್ಳಿ ದಂಟನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಮುಚ್ಹಳ ವನ್ನು ಮುಚ್ಚಿ ಬೇಯಿಸಬೇಕು.

೩.ಈರುಳ್ಳಿ ದಂಟು ಚನ್ನಾಗಿ ಬೆಂದ ಬಳಿಕ ,ರುಬ್ಬಿದ ಮಸಾಲೆ ಹಾಗು ಉಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿದರೆ, ಗಮಘಮಿಸುವ spring onion curry  is ready.

* ದೋಸೆ/ ಚಪಾತಿ/ಅನ್ನದೊಟ್ಟಿಗೆ ತಿನ್ನಬಹುದು 

 

Some of the health benefits of spring onions are as follows:

- Spring onion lowers the blood sugar level.

- It is a support against gastrointestinal problems.

- It is often used as a medicine for common cold.

- It is used as an appetizer as it helps digestion.

- It speeds up the level of blood circulation in the body.