ಚೀನಿಕಾಯಿ ಬಜ್ಜಿ / pumpkin fry/ ದುದ್ದೇ ಫೋಡಿ
ಬೇಕಾಗುವ ಪದಾರ್ಥಗಳು:
ಕೆಂಪು ಮೆಣಸಿನ ಪುಡಿ - ಖಾರಕ್ಕೆ ತಕ್ಕಷ್ಟು
ಅರಿಶಿನ ಪುಡಿ - ಸ್ವಲ್ಪ
ಹಿಂಗು - ಸ್ವಲ್ಪ
ಉಪ್ಪ್ಪು - ರುಚಿಗೆ ಹದವಾಗಿ
ಅಕ್ಕಿ ಹಿಟ್ಟು - ಸ್ವಲ್ಪ
ಎಣ್ಣೆ - ಸ್ವಲ್ಪ.
ಮಾಡುವ ವಿಧಾನ:
1. ಕತ್ತರಿಸಿಟ್ಟ ಚೀನಿಕಾಯಿ ಹೋಳುಗಳಿಗೆ [ಸಿಪ್ಪೆ ಸಹಿತ slice] ಅರಿಶಿನ ಉಪ್ಪು ಹಿಂಗು ಖಾರಪುಡಿ ಹಾಕಿ ಚನ್ನಾಗಿ ಸವರಿಡಬೇಕು.[ ಬಜ್ಜಿ ತಯಾರಿಸುವ ಹತ್ತು ನಿಮಿಷ ಮುಂಚೆ, ಮಸಾಲೆಯನ್ನು ಹಚ್ಚಿಡ ಬೇಕು.]
2. ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ, ಎರಡು ಚಮಚ ಎಣ್ಣೆ ಹಾಕಿ ಹರಡಿಸಿಕೊಂಡು, ಮಸಾಲೆ ಹಚ್ಚಿದ
ಚೀನಿಕಾಯಿ ಹೊಳುಗಳ್ಳನ್ನು,[ಕಾವಲಿಯಲ್ಲಿ ಹಿಡಿಸುವಷ್ಟು ] ಸಾಲಾಗಿ ಜೋಡಿಸಿ, ಮುಚ್ಚಳದಿಂದ ಮುಚ್ಚಬೇಕು. ಐದು ನಿಮಿಷ ಬಿಟ್ಟು, ಮುಚ್ಚಿದ ಮುಚ್ಚಳ ತೆಗೆದು ಒಂದೊಂದೇ ಹೊಳುಗಳನ್ನು ಮಗುಚಿ ಹಾಕಿ [ಬೇಕಾದಲ್ಲಿ ಅರ್ದ ಚಮಚ ಎಣ್ಣೆಯನ್ನು ಹಾಕಿಕೊಂಡು] ಸಣ್ಣ ಉರಿಯಲ್ಲಿ ಐದು ನಿಮಿಷ[approximate time] ಹುರಿಯಬೇಕು.[tava fry].
No comments:
Post a Comment