ಮಸಾಲಾ ವಾಂಗಿ
ಬೇಕಾಗುವ ಪದಾರ್ಥಗಳು:
ಬದನೇಕಾಯಿ ಹೋಳು - ಎರಡು ಕಪ್ಪು
ಉದ್ದಕ್ಕೆ ಹೆಚ್ಚಿದ ಈರುಳ್ಳಿ - ಒಂದು
ಶುಂಟಿ + ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ
ವಾಂಗಿಬಾತ್ ಪುಡಿ / ಸಾಂಬಾರ್ ಪುಡಿ - ಒಂದು ಚಮಚ
ಅರಿಶಿನ ಪುಡಿ - ಕಾಲು ಚಮಚ
ಉಪ್ಪು - ಸ್ವಲ್ಪ
ಮೆಂತೆ ಕಾಳು - ಅರ್ದ ಚಮಚ
ಸಾಸಿವೆ - ಒಂದು ಸಣ್ಣ ಚಮಚ
ಕರಿಬೇವು - ಒಂದು ಗರಿ
ಎಣ್ಣೆ - ಒಂದು ದೊಡ್ಡ ಚಮಚ
ಕಾಯಿತುರಿ - ಸ್ವಲ್ಪ.
ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಸಾಸಿವೆ ಮೆಂತ್ಯೆ ಕರಿಬೇವು ಒಗ್ಗರೆಣೆ ಮಾಡಿಕೊಳ್ಳಬೇಕು. ಅದರಲ್ಲಿ ಶುಂಟಿ + ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಬೇಕು. ನಂತರ ಈರುಳ್ಳಿ ಹಾಕಿ ಸ್ವಲ್ಪ ಹುರಿದುಕೊಂಡು, ಟೊಮೇಟೊ ತುಂಡುಗಳ್ಳನ್ನು ಹಾಕಿ ಬಾಡಿಸಬೇಕು. ಈಗ ಅದಕ್ಕೆ ಒಂದೊಂದಾಗಿ ಪುಡಿ ಗಳ್ಳನ್ನು ಹಾಕಬೇಕು. ಕೊನೆಯಲ್ಲಿ ಬದನೆ ಹೊಳುಗಳನ್ನು ಹಾಕಿ ಸ್ವಲ್ಪ ನೀರನ್ನು ಚಿಮುಕಿಸಿ ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಬೇಕು. ಬದನೆ ಬೆಂದ ಬಳಿಕ ಸ್ವಲ್ಪ ಕಾಯಿತುರಿಯನ್ನು
ಸೇರಿಸಿದರೆ, ರುಚಿಯದ ಮಸಾಲಾ ವಾಂಗಿ ಯನ್ನು ಚಪಾತಿ, ಪುರಿ , ಪರಾಟ, ಅನ್ನ ದೊಟ್ಟಿಗೆ ಸವಿಯಬಹುದು.
No comments:
Post a Comment