ಒತ್ತು ಶ್ಯಾವಿಗೆ [ಸುಲಭ ವಿಧಾನ ]
ಅಕ್ಕಿ ಶ್ಯಾವಿಗೆ
ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು - ಒಂದು ಲೋಟ
ನೀರು - ಒಂದು ಲೋಟ
ಉಪ್ಪು - ಸ್ವಲ್ಪ
ಸಕ್ಕರೆ - ಅರ್ದ ಚಮಚ [ಬೇಕಾದಲ್ಲಿ ಮಾತ್ರ]
ಶ್ಯಾವಿಗೆ ಅಚ್ಚು.
ಮಾಡುವ ವಿಧಾನ:
೧. ಅಕ್ಕಿ ಹಿಟ್ಟಿಗೆ ಉಪ್ಪು ಸಕ್ಕರೆಯನ್ನು ಹಾಕಿ ಬೆರಸಿಕೊಳ್ಳ ಬೇಕು
೨. ಒಂದು ಲೋಟ ನೀರನ್ನು ಕುದಿಸಬೇಕು.
೩. ಕಾದ ನೀರನ್ನು ಅಕ್ಕಿ ಹಿಟ್ಟಿಗೆ ಹಾಕಿ ನಿಧಾನವಾಗಿ ಕಲಸಿಕೊಳ್ಳಬೇಕು. [ಗಂಟು ಕಟ್ಟಿಕೊಳ್ಳದಂತೆ ]
೪. ಹಿಟ್ಟು ಕಲಸಿಕೊಂದು ಸಣ್ಣ - ಸಣ್ಣ ಉಂಡೆಗಳನ್ನು ಕಟ್ಟಿ , ಶ್ಯಾವಿಗೆ ಅಚ್ಚಿನಲ್ಲಿ ಹಾಕಿ ಒತ್ತ ಬೇಕು.
೫. ಒತ್ತಿಟ್ಟ ಶ್ಯಾವಿಗೆಯನ್ನು, ಎಣ್ಣೆ ಸವರಿದ ತಟ್ಟೆಯಲ್ಲಿ ಜೋಡಿಸಿ, ಹಬೆ ಪಾತ್ರೆಯಲ್ಲಿ ಬೇಯಿಸಬೇಕು.
* ಬಿಸಿ - ಬಿಸಿ ಶ್ಯಾವಿಗೆಯು ತೆಂಗಿನ ಎಣ್ಣೆ ಹಾಗು ಮಿಡಿ ಉಪ್ಪಿನಕಾಯಿ ಯೊಂದಿಗೆ ಸವಿಯಲು ಬಲು ರುಚಿಯಗಿರುತ್ತದೆ.
ರಾಗಿ ಶ್ಯಾವಿಗೆ
ಬೇಕಾಗುವ ಪದಾರ್ಥಗಳು:
ರಾಗಿ ಹಿಟ್ಟು - ಒಂದು ಲೋಟ
ಅಕ್ಕಿ ಹಿಟ್ಟು - ಅರ್ದ ಲೋಟ
ನೀರು - ಒಂದೂವರೆ ಲೋಟ
ಉಪ್ಪು - ಸ್ವಲ್ಪ.
No comments:
Post a Comment