BHENDI CURRY
ಬೇಕಾಗುವ ಪದಾರ್ಥಗಳು
ಬೆಂಡೇಕಾಯಿ - ಇಪ್ಪತ್ತು
ಎಣ್ಣೆ - ಎರಡು ಚಮಚ
ಈರುಳ್ಳಿ - ಎರಡು
ಬೆಳ್ಳುಳ್ಳಿ ಎಸಳು - ಎಂಟು
ಉದ್ದಿನಬೇಳೆ - ಎರಡು ಸಣ್ಣ ಚಮಚ
ಸಾಸಿವೆ - ಒಂದು ಸಣ್ಣ ಚಮಚ
ಜೀರಿಗೆ - ಒಂದು ಸಣ್ಣ ಚಮಚ
ಕೆಂಪು ಮೆಣಸಿನ ಪುಡಿ - ಎರಡು ಸಣ್ಣ ಚಮಚ
ಅರಿಶಿನ ಪುಡಿ - ಅರ್ದ ಸಣ್ಣ ಚಮಚ
ಹುಣಸೆ ರಸ - ಎರಡು ದೊಡ್ಡ ಚಮಚ
ಉಪ್ಪು - ಸ್ವಲ್ಪ
ಕಾಯಿತುರಿ - ಒಂದು ಚಮಚ
ಕೊತ್ತಂಬರಿಸೊಪ್ಪು - ಸ್ವಲ್ಪ.
ಮಾಡುವ ವಿಧಾನ:
1 ಬೆಂಡೆ ಕಾಯಿಯನ್ನು ತೊಳೆದು ಉದ್ದಕ್ಕೆ ಅರ್ದ ಭಾಗ ಮಾಡಿ ಸೀಳಿ ಕೊಳ್ಳಬೇಕು. ಈರುಳ್ಳಿಯನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಬೇಕು.
2. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ , ಕಾದ ಬಳಿಕ ಸಾಸಿವೆ ಜೀರಿಗೆ ಯನ್ನು ಹಾಕಿ ,ಅದು ಸಿಡಿದ ಬಳಿಕ ಕರಿಬೇವು
ಈರುಳ್ಳಿಯನ್ನು ಹಾಕಿ ಹುರಿಯಬೇಕು, ನಂತರ ಬೆಳ್ಳುಳ್ಳಿ ಎಸಳನ್ನು ಹಾಕಿ ಸ್ವಲ್ಪ ಕೆಂಪಗೆ ಬಾಡಿಸಬೇಕು.
3. ಈಗ ಆ ಒಗ್ಗರೆಣೆಯಲ್ಲಿ, ಸೀಳಿಟ್ಟ ಬೆಂಡೆ ಕಾಯಿಯನ್ನು ಹಾಕಿ, ಜೊತೆಗೆ ಅರಿಶಿನ ,ಖಾರಪುಡಿ, ಉಪ್ಪು ಹುಣಸೆರಸ ವನ್ನು
ಹಾಕಿ ಚನ್ನಾಗಿ ಮಗುಚಿ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೆಂಡೆ ಬೇಯುವವರೆಗೆ ಬೇಯಿಸಬೇಕು
4. ಪಲ್ಯ ಆದ ಬಳಿಕ, ಸ್ವಲ್ಪ ಕಾಯಿತುರಿ ಹಾಗು ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರಸಿ ಸವಿಯಬೇಕು.
No comments:
Post a Comment