ಮಾವಿನಕಾಯಿ ಚಿತ್ರಾನ್ನ
ಘಾಟಿ ಮೆಣಸು -- ಎಂಟು
ಬಿಳಿ ಎಳ್ಳು - ಒಂದು ಚಮಚ
ಕಾಯಿತುರಿ - ಒಂದು ಕಪ್ಪು
ಬೆಲ್ಲ - ಅರ್ದ ಚಮಚ
ಉಪ್ಪು - ರುಚಿಗೆ ಸ್ವಲ್ಪ
ಬೇಕಾಗುವ ಪದಾರ್ಥಗಳು:
ಕತ್ತರಿಸಿದ ಕೊತ್ತಂಬರಿ ಸೊಪ್ಪು - ಸ್ವಲ್ಪ
ಚಟ್ನಿ / ಗೊಜ್ಜಿಗೆ ಬೇಕಾಗುವ ಪದಾರ್ಥಗಳು
ತೋತಾಪುರಿ ಮಾವಿನಕಾಯಿ - ಒಂದು [ ಮೀಡಿಯಂ ಸೈಜು ]ಘಾಟಿ ಮೆಣಸು -- ಎಂಟು
ಬಿಳಿ ಎಳ್ಳು - ಒಂದು ಚಮಚ
ಕಾಯಿತುರಿ - ಒಂದು ಕಪ್ಪು
ಬೆಲ್ಲ - ಅರ್ದ ಚಮಚ
ಉಪ್ಪು - ರುಚಿಗೆ ಸ್ವಲ್ಪ
ಒಗ್ಗರೆಣೆಗೆ ಬೇಕಾಗುವ ಪದಾರ್ಥಗಳು:
ಕೊಬ್ಬರಿ ಎಣ್ಣೆ - ಎರಡು ಚಮಚ
ಸಾಸಿವೆ - ಒಂದು ಸಣ್ಣ ಚಮಚ
ಹಿಂಗು - ಒಂದು ಚಿಟಿಕೆಯಷ್ಟು
ಒಣಮೆಣಸು - ಒಂದು
ಕಡ್ಲೆ ಬೀಜ - ಎರಡು ದೊಡ್ಡ ಚಮಚ
ಮಾಡುವ ವಿಧಾನ:
೧. ಮಾವಿನ ಕಾಯಿಯ ಓಟೆ [ಬೀಜ] ತೆಗೆದು ಹೆಚ್ಚಿಕೊಂಡು, ಮಸಾಲೆಗೆ ತಿಳಿಸಿದ ಉಳಿದ ಪದಾರ್ಥಗಳೊಂದಿಗೆ [ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ] ರುಬ್ಬಿಕೊಳ್ಳಬೇಕು.
೨. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಒಗ್ಗರಣೆ ಗೆ ತಿಳಿಸಿದ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಈಗ ಅದರಲ್ಲಿ ರುಬ್ಬಿದ ಚಟ್ನಿಯನ್ನು ಹಾಕಿ ಚನ್ನಾಗಿ ಹುರಿದು/ ಬಾಡಿಸಿ ಗ್ಯಾಸ್ ಉರಿಯನ್ನು ತೆಗೆಯಬೇಕು.
೩. ಸಿದ್ದವಾದ ಗೊಜ್ಜಿಗೆ / ಚಟ್ನಿಗೆ ಮೊದಲೇ ತಯಾರಿಸಿಟ್ಟ ಊದುರುದುರಾದ ಅನ್ನವನ್ನು ಹಾಕಿ ಕಲಸಿಕೊಳ್ಳ ಬೇಕು. ಕೊನೆಯಲ್ಲಿ ಕತ್ತರಿಸಿಟ್ಟ ಕೊತ್ತಂಬರಿಸೊಪ್ಪನ್ನು ಸ್ವಲ್ಪ ಉದುರಿಸಿದರೆ ರುಚಿಯಾದ ಮಾವಿನಕಾಯಿ ಚಿತ್ರಾನ್ನ ರೆಡಿ.
ಮಿಂಚು: ಚಿಕ್ಕವರಾಗಿದ್ದಾಗ ನಮಗೆ ಯಾವಾಗಲೂ ಬೇಗನೆ ಬೆಳೆದು ದೊಡ್ದವರಾಗಬೇಕೆಂಬ ಹಂಬಲವಿರುತ್ತದೆ. ಆದರೆ, ಬೆಳೆದು ದೊಡ್ಡವರಾದಾ ಬಳಿಕ ಬಾಲ್ಯದ ಮಹತ್ವ ಅರಿವಾಗುತ್ತದೆ. ದೊಡ್ಡವರಾದ ಬಳಿಕ ನಮ್ಮ ವ್ಯಕ್ತಿತ್ವ ದಿಂದಾಗಿ ಒಡೆದ ಹೃದಯ ಮತ್ತು ಕಳೆದುಕೊಂಡ ಸ್ನೇಹಿತರಿಗಿಂತ ಬಾಲ್ಯದ ಮುಗ್ದತೆಯಲ್ಲಿ ಒಡೆದ ಆಟಿಕೆಗಳು ಮತ್ತು ಕಳೆದು ಹೋದ ಬಳಪಗಳೇ ಎಷ್ಟೋ ವಾಸಿ ಎನಿಸುವುದು.
No comments:
Post a Comment