ಸೇಬು ಹಣ್ಣಿನ ಚಿತ್ರಾನ್ನ/ Apple rice
ಬೇಕಾಗುವ ಪದಾರ್ಥಗಳು:
ಸೇಬು ಹಣ್ಣಿನ ತುಂಡು - ಒಂದು ಕಪ್ಪುಕೆಂಪಕ್ಕಿ ಅನ್ನ / ಬಾಸಮತಿ ಅಕ್ಕಿ ಅನ್ನ - ಎರಡೂ ಕಪ್ಪು
ಅಡುಗೆ ಎಣ್ಣೆ - ಎರಡು ಚಮಚ
ಈರುಳ್ಳಿ - ಎರಡು
ಗೋಡಂಬಿ - ನಾಲ್ಕು
ಬಾದಾಮಿ - ನಾಲ್ಕು
ಒಣ ದ್ರಾಕ್ಷಿ - 10
ಕಾಳು ಮೆಣಸು ಪುಡಿ - ಒಂದು ಚಮಚ
ಗರಮ್ ಮಸಾಲ ಪುಡಿ - ಒಂದು ಚಮಚ ಉಪ್ಪು - ಸ್ವಲ್ಪ
ತುಪ್ಪ / ಎಣ್ಣೆ - ಎರಡು ದೊಡ್ಡ ಚಮಚ.
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಾಯಿತುರಿ - ಎರಡು ಚಮಚ.
ಮಾಡುವ ವಿಧಾನ:
೧. ದಪ್ಪ ತಳದ ಬಾಣಲೆಯಲ್ಲಿ ತುಪ್ಪ / ಎಣ್ಣೆಯನ್ನು ಹಾಕಿ ಕಾಯಿಸಬೇಕು.
೨. ಕಾದ ತುಪ್ಪದಲ್ಲಿ ಗೋಡಂಬಿ ಬಾದಾಮಿ ದ್ರಾಕ್ಷಿ ಹುರಿದುಕೊಂಡು ತೆಗೆದಿಡಬೆಕು..
೩. ಅದೇ ಬಾಣಲೆಯಲ್ಲಿ, ಸ್ವಲ್ಪ ಎಣ್ಣೆ /ತುಪ್ಪವನ್ನು ಹಾಕಿ[ಅಗತ್ಯವಿದ್ದಲ್ಲಿ ಮಾತ್ರ] ಉದ್ದಕ್ಕೆ ಹೆಚ್ಚಿಟ್ಟ ಈರುಳ್ಳಿ + ಸೇಬಿನ ತುಂಡುಗಳನ್ನು ಹಾಕಿ ತುಸು
ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅದಕ್ಕೆ, ತಯಾರಿಸಿಟ್ಟ ಅನ್ನ, ಕಾಳು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಉಪ್ಪನ್ನು ಹಾಕಬೇಕು.
೪. ಕೊನೆಯಲ್ಲಿ ಹುರಿದಿಟ್ಟ ಒಣ ಹಣ್ಣುಗಳ್ಳನ್ನು [dry fruits]ಸೇರಿಸಿ ಚನ್ನಾಗಿ ಕಲಸಿಕೊಳ್ಳ ಬೇಕು.
೫. ಸ್ವಲ್ಪ ಕಾಯಿತುರಿ ಹಾಗು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮೇಲಿನಿಂದ ಹಾಕಿಕೊಂಡು ಸವಿಯಬಹುದು.
No comments:
Post a Comment