ಪಂಚ ಧಾನ್ಯ ಉಂಡೆ
ಬೇಕಾಗುವ ಪದಾರ್ಥಗಳು
ಕಡ್ಲೆ ಕಾಳು - ಒಂದು ಅಳತೆ
ಕೆಂಪು ಕುಚಲಕ್ಕಿ - ಒಂದು ಅಳತೆ
ಬೆಲ್ಲದ ಪುಡಿ - ಎರಡು ಅಳತೆ
ಕೊಬ್ಬರಿ ತುರಿ - ಎರಡು ಅಳತೆ
ಶೇಂಗ ಹಾಗು ಬಾದಾಮಿ ಪುಡಿ - ಅರ್ದ ಕಪ್ಪು
ಏಲಕ್ಕಿ ಪುಡಿ - ಸ್ವಲ್ಪ
ತುಪ್ಪ - ಸ್ವಲ್ಪ
ಮಾಡುವ ವಿಧಾನ
೧. ಮೊದಲು ಒಂದು ಬಾಣಲೆಯನ್ನು ಬಿಸಿ ಮಾಡಿ,ಅಕ್ಕಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಕಡಲೆಕಾಳು ಬಳಿಕ ಹೆಸರುಕಾಳನ್ನು ಹುರಿದುಕೊಂಡು ತಣಿಯಲು ಬಿಡಬೇಕು.
೨. ಬಾದಾಮಿ , ಶೇಂಗ ಬೀಜ ಹುರಿದುಕೊಂಡು ತರಿ ತರಿಯಾಗಿ ಪುಡಿ ಮಾಡಿಟ್ಟು ಕೊಳ್ಳಬೇಕು.
೩. ತಣಿದ ದಾನ್ಯ ಗಳ್ಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.
೪. ದಪ್ಪ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು , ಎರಡು ಅಳತೆ ಬೆಲ್ಲ ಹಾಗು ಎರಡು ಚಮಚ ನೀರು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ಒಂದೆಳೆ ಪಾಕವನ್ನು ತಯಾರಿಸಬೇಕು. ಆ ಪಾಕದಲ್ಲಿ ಮಾಡಿಟ್ಟ ಪುದಿಗಲ್ಲನ್ನು ಹಾಕಿಜೋತೆಗೆ ಕೊಬ್ಬರಿತುರಿ/ಹಸಿ ಕಾಯಿತುರಿ ಯನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು. ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈಗ ಗ್ಯಾಸ್ ಉರಿಯನ್ನು ತೆಗೆದು ಎರಡು ಚಮಚ ತುಪ್ಪ ಹಾಕಿ ತಣಿಯಲು ಬಿಡಬೇಕು.
೫. ತಣಿದ ಹಿಟ್ಟಿನಿಂದ ನಮಗೆ ಬೇಕಾದ ಗಾತ್ರದ ಉಂಡೆಗಳನ್ನು ಕಟ್ಟಿ ಕೊಳ್ಳಬೇಕು.
No comments:
Post a Comment