ತಟ್ಟೆ ಕಡಬು / ಬಟ್ಟಲು ಕಡಬು
ಬೇಕಾಗುವ ಪದಾರ್ಥಗಳು
ಅಕ್ಕಿ - ಒಂದು ಅಳತೆ [ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನಸಿಡಬೇಕು]
ಕಾಯಿತುರಿ - ಅರ್ದ ಅಳತೆ
ಬೆಲ್ಲದ ಪುಡಿ - ಅರ್ದ ಅಳತೆ ಅಥವಾ ಸಿಹಿ ಜಾಸ್ತಿ ಬೇಕಾದಲ್ಲಿ ಒಂದು ಅಳತೆ
ಏಲಕ್ಕಿ - ಮೂರು
ಉಪ್ಪು - ಚಿಟಿಕೆಯಷ್ಟು.
ಮಾಡುವ ವಿಧಾನ
೧. ನೆನಸಿದ ಅಕ್ಕಿಯನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ರುಬ್ಬುವಾಗ ಕಾಯಿತುರಿ-ಬೆಲ್ಲ -ಏಲಕ್ಕಿ- ಉಪ್ಪನ್ನು ಸೆರಿಸಿಕೊಳ್ಳಬೇಕು
೨. ಗ್ಯಾಸ್ ಮೇಲೆ ಬಾಣಲೆ ಇಟ್ಟು , ನೀರನ್ನು ಹಾಕಿ ಕುದಿಯಲು ಇಡಬೇಕು. ಜೋರಾಗಿ ಕುಡಿಯುತಿರುವ ಪಾತ್ರೆಯ ಮೇಲೆ ಚಿಕ್ಕ ತಟ್ಟೆಯಲ್ಲಿ ಸ್ವಲ್ಪ ಎಣ್ಣೆ ಸವರಿ ಒಂದು ಸವಟು ಹಿಟ್ಟನ್ನು ಹಾಕಿ ಹರಡಿ [ ತೆಳುವಾಗಿ ಹಿಟ್ಟನ್ನು ಹಾಕಿ]ಮೇಲಿನಿಂದ ಮುಚ್ಚಳವನ್ನು ಮುಚ್ಚಬೇಕು. ಎರಡೇ ನಿಮಿಷದಲ್ಲಿ ಹರಡಿದ ಹಿಟ್ಟು ಬೆಂದು ಕಡಬಾಗುತ್ತದೆ.. ಬೆಂದ ತಟ್ಟೆಯನ್ನು ಕೆಳಗಿಳಿಸಿ ಮತ್ತೆ ಇನ್ನೊದು ತಟ್ಟೆಯಲ್ಲಿ ಹಿಟ್ಟನ್ನು ಹರಡಿ ಬೇಯಲು ಇಡಬೇಕು. ಬಿಸಿ ಆರಿದ ಬಳಿಕ ತಟ್ಟೆಯಿಂದ ಕಡಬನ್ನು ನಿದಾನವಾಗಿ ತೆಗೆದು ಮಡಚಿ ಮೇಲಿನಿಂದ ತುಪ್ಪ ಹಾಕಿಕೊಂಡು ಸವಿಯಬೇಕು.
No comments:
Post a Comment