BLOG FOLLOWERS

Saturday, March 30, 2013

ಮಾವಿನಕಾಯಿ ಚಟ್ನಿ 

ಬೇಕಾಗುವ ಪದಾರ್ಥಗಳು 

ಮಾವಿನಕಾಯಿ  -  ಒಂದು 
ಕಾಯಿತುರಿ  -  ಒಂದು ಬಟ್ಟಲು 
ಹಸಿಮೆಣಸು  -  ನಾಲ್ಕು 
ಬೆಳ್ಳುಳ್ಳಿ ಎಸಳು  - ಐದು 
 ಉಪ್ಪು  -  ರುಚಿಗೆ ತಕ್ಕಷ್ಟು 

ಮಾಡುವ ವಿಧಾನ

ಮಾವಿನಕಾಯಿಯ ಓಟೆ ತೆಗೆದು ಹೆಚ್ಚಿಕೊಳ್ಳಬೇಕು. ಹೆಚ್ಚಿದ ಮಾವಿನಕಾಯಿಯ ತುಂಡುಗಳೊಂದಿಗೆ ಕಾಯಿತುರಿ, ಹಸಿಮೆಣಸು, ಬೆಳ್ಳುಳ್ಳಿ ಉಪ್ಪನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡರೆ, ಮಾವಿನಕಾಯಿ ಚಟ್ನಿ ಸಿದ್ದವಾಗುತ್ತದೆ. 











Wednesday, March 27, 2013

ತಟ್ಟೆ ಕಡಬು  / ಬಟ್ಟಲು ಕಡಬು 

ಬೇಕಾಗುವ ಪದಾರ್ಥಗಳು 

ಅಕ್ಕಿ   -  ಒಂದು ಅಳತೆ [ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನಸಿಡಬೇಕು]
ಕಾಯಿತುರಿ  -  ಅರ್ದ ಅಳತೆ 
ಬೆಲ್ಲದ ಪುಡಿ  - ಅರ್ದ ಅಳತೆ  ಅಥವಾ ಸಿಹಿ ಜಾಸ್ತಿ ಬೇಕಾದಲ್ಲಿ ಒಂದು ಅಳತೆ 
ಏಲಕ್ಕಿ  - ಮೂರು 
ಉಪ್ಪು  - ಚಿಟಿಕೆಯಷ್ಟು. 

ಮಾಡುವ ವಿಧಾನ 

೧. ನೆನಸಿದ ಅಕ್ಕಿಯನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ರುಬ್ಬುವಾಗ ಕಾಯಿತುರಿ-ಬೆಲ್ಲ -ಏಲಕ್ಕಿ- ಉಪ್ಪನ್ನು ಸೆರಿಸಿಕೊಳ್ಳಬೇಕು 
೨. ಗ್ಯಾಸ್ ಮೇಲೆ ಬಾಣಲೆ ಇಟ್ಟು , ನೀರನ್ನು ಹಾಕಿ ಕುದಿಯಲು ಇಡಬೇಕು. ಜೋರಾಗಿ ಕುಡಿಯುತಿರುವ ಪಾತ್ರೆಯ ಮೇಲೆ ಚಿಕ್ಕ ತಟ್ಟೆಯಲ್ಲಿ ಸ್ವಲ್ಪ ಎಣ್ಣೆ ಸವರಿ ಒಂದು ಸವಟು  ಹಿಟ್ಟನ್ನು ಹಾಕಿ ಹರಡಿ [ ತೆಳುವಾಗಿ ಹಿಟ್ಟನ್ನು ಹಾಕಿ]ಮೇಲಿನಿಂದ ಮುಚ್ಚಳವನ್ನು ಮುಚ್ಚಬೇಕು. ಎರಡೇ ನಿಮಿಷದಲ್ಲಿ ಹರಡಿದ ಹಿಟ್ಟು ಬೆಂದು ಕಡಬಾಗುತ್ತದೆ.. ಬೆಂದ ತಟ್ಟೆಯನ್ನು ಕೆಳಗಿಳಿಸಿ ಮತ್ತೆ ಇನ್ನೊದು ತಟ್ಟೆಯಲ್ಲಿ ಹಿಟ್ಟನ್ನು  ಹರಡಿ ಬೇಯಲು ಇಡಬೇಕು.  ಬಿಸಿ ಆರಿದ ಬಳಿಕ ತಟ್ಟೆಯಿಂದ ಕಡಬನ್ನು ನಿದಾನವಾಗಿ ತೆಗೆದು ಮಡಚಿ ಮೇಲಿನಿಂದ ತುಪ್ಪ ಹಾಕಿಕೊಂಡು ಸವಿಯಬೇಕು.

* ಮೂರು ದಿನಗಳ ಕಾಲ ಇಟ್ಟುಕೊಂಡು ತಿನ್ನಬಹುದಾದ ಈ ಕಡಬನ್ನು ಆಬಾಲ ವ್ರದ್ದರಾದಿಯಾಗಿ ಎಲ್ಲರೂ ಇಷ್ಟಪಡುತ್ತಾರೆ. 



ಮಾವಿನಕಾಯಿ ಅಪ್ಪೆಹುಳಿ 



 ಬೇಕಾಗುವ ಪದಾರ್ಥಗಳು 

 ಮಾವಿನಕಾಯಿ  -  ಒಂದು 
 ಬೆಲ್ಲ  -  ಸಣ್ಣ ತುಂಡು 
ಉಪ್ಪು  - ರುಚಿಗೆ ಹದವಾಗಿ 

ಒಗ್ಗರೆಣೆ ಗೆ ಬೇಕಾಗುವ ಪದಾರ್ಥಗಳು:

 ತೆಂಗಿನ ಎಣ್ಣೆ  - ಒಂದು ಚಮಚ 
 ಸಾಸಿವೆ  - ಒಂದು ಸಣ್ಣ ಚಮಚ 
 ಹಿಂಗು -  ಒಂದು ಚಿಟಿಕೆ 
 ಹಸಿಮೆಣಸು  - ಮೂರು [ಸಣ್ಣಗೆ ಹೆಚ್ಚಿಡಬೇಕು]
ಬೆಳ್ಳುಳ್ಳಿ  -   ಐದು ಎಸಳು [ಸಣ್ಣಗೆ ಹೆಚ್ಚಿಡಬೇಕು]
 ಕರಿಬೇವು  -  ಒಂದು ಗರಿ. 

ಮಾಡುವ ವಿಧಾನ  

 ೧. ತೊಳೆದ ಒಂದು ಈಡಿ ಮಾವಿನಕಾಯಿಯನ್ನು ಕುಕ್ಕರಲ್ಲಿ ಇಟ್ಟು,  ಮುಳುಗುವಷ್ಟು ನೀರನ್ನು ಹಾಕಿ, ಮೂರು ಸಿಟಿ ತೆಗೆದು ಬೇಯಿಸಿಡಬೇಕು. 
೨ಬೆಂದ ಮಾವಿನಕಾಯಿಯ ಸಿಪ್ಪೆ ಹಾಗು ಒಟೆ  [ಬೀಜ] ತೆಗೆದು ಬದಿಗಿರಿಸಿ, ತಿರುಳಿಗೆ ಉಪ್ಪು ಬೆಲ್ಲ ಹಾಗು ಸ್ವಲ್ಪ ನೀರನ್ನು ಹಾಕಿ
ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು [ತೆಳುವಾಗಿರಬೇಕು]
೩. ಸಾರಿನ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ , ಒಗ್ಗರಣೆ ಪದರ್ಥಗಳನ್ನು ಹಾಕಿ ಒಗ್ಗರಣೆ ಮಾಡಿಕೊಂಡು  .ಗ್ಯಾಸ್ ಉರಿಯನ್ನು ತೆಗೆದು, ಬಳಿಕ ರುಬ್ಬಿಟ್ಟ  ಮಾವಿನ ಮಿಶ್ರಣವನ್ನು ಅದಕ್ಕೆ ಹಾಕಿದರೆ ಅಪ್ಪೆಹುಳಿ ಸವಿಯಲು ಸಿದ್ದ. 

* ಅಪ್ಪೆ ಹುಳಿಯನ್ನು ಅನ್ನ ದೊಟ್ಟಿಗೆ ಕಲಸಿ ತಿನ್ನಬಹುದು ಇಲ್ಲವೇ ಲೋಟದಲ್ಲಿ ಹಾಕಿ ಸೂಪ್ ರೀತಿಯಲ್ಲಿ ಕುಡಿಯಬಹುದು. 
   ಒಟ್ಟಿನಲ್ಲಿ ತಿಂದು / ಕುಡಿದ ಬಳಿಕ ಒಳ್ಳೆಯ ನಿದ್ದೆಗೆ ಜಾರುವುದಂತು ಗ್ಯಾರಂಟಿ . 



















                         ಪಂಚ ಧಾನ್ಯ  ಉಂಡೆ 

ಬೇಕಾಗುವ ಪದಾರ್ಥಗಳು 

ಹೆಸರು ಕಾಳು  - ಒಂದು ಅಳತೆ 
ಕಡ್ಲೆ ಕಾಳು   -   ಒಂದು ಅಳತೆ 
ಕೆಂಪು ಕುಚಲಕ್ಕಿ  -  ಒಂದು ಅಳತೆ 
ಬೆಲ್ಲದ ಪುಡಿ  - ಎರಡು ಅಳತೆ 
ಕೊಬ್ಬರಿ ತುರಿ  -  ಎರಡು ಅಳತೆ 
ಶೇಂಗ  ಹಾಗು ಬಾದಾಮಿ ಪುಡಿ  - ಅರ್ದ ಕಪ್ಪು 
ಏಲಕ್ಕಿ ಪುಡಿ  - ಸ್ವಲ್ಪ 
 ತುಪ್ಪ   -  ಸ್ವಲ್ಪ 


ಮಾಡುವ ವಿಧಾನ 

೧. ಮೊದಲು ಒಂದು ಬಾಣಲೆಯನ್ನು ಬಿಸಿ ಮಾಡಿ,ಅಕ್ಕಿಯನ್ನು ಹಾಕಿ  ಕೆಂಪಗೆ ಹುರಿದುಕೊಳ್ಳಬೇಕು. ನಂತರ ಕಡಲೆಕಾಳು ಬಳಿಕ ಹೆಸರುಕಾಳನ್ನು ಹುರಿದುಕೊಂಡು ತಣಿಯಲು ಬಿಡಬೇಕು. 
೨. ಬಾದಾಮಿ , ಶೇಂಗ ಬೀಜ ಹುರಿದುಕೊಂಡು ತರಿ ತರಿಯಾಗಿ ಪುಡಿ ಮಾಡಿಟ್ಟು ಕೊಳ್ಳಬೇಕು. 
೩. ತಣಿದ  ದಾನ್ಯ ಗಳ್ಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. 
೪. ದಪ್ಪ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು , ಎರಡು ಅಳತೆ ಬೆಲ್ಲ ಹಾಗು ಎರಡು ಚಮಚ ನೀರು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ಒಂದೆಳೆ ಪಾಕವನ್ನು ತಯಾರಿಸಬೇಕು. ಆ ಪಾಕದಲ್ಲಿ ಮಾಡಿಟ್ಟ ಪುದಿಗಲ್ಲನ್ನು ಹಾಕಿಜೋತೆಗೆ ಕೊಬ್ಬರಿತುರಿ/ಹಸಿ ಕಾಯಿತುರಿ ಯನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು. ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈಗ ಗ್ಯಾಸ್ ಉರಿಯನ್ನು ತೆಗೆದು ಎರಡು ಚಮಚ ತುಪ್ಪ ಹಾಕಿ ತಣಿಯಲು ಬಿಡಬೇಕು. 
 ೫. ತಣಿದ ಹಿಟ್ಟಿನಿಂದ ನಮಗೆ ಬೇಕಾದ ಗಾತ್ರದ ಉಂಡೆಗಳನ್ನು ಕಟ್ಟಿ ಕೊಳ್ಳಬೇಕು. 












Monday, March 25, 2013

ಮಾವಿನಕಾಯಿ ಚಿತ್ರಾನ್ನ 



ಬೇಕಾಗುವ ಪದಾರ್ಥಗಳು:

ಉದುರಾದ ಅನ್ನ  -  ಒಂದು ಲೋಟ ಅಕ್ಕಿಯಿಂದ ಮಾಡಿದ್ದು]
 ಕತ್ತರಿಸಿದ ಕೊತ್ತಂಬರಿ ಸೊಪ್ಪು  - ಸ್ವಲ್ಪ 

ಚಟ್ನಿ / ಗೊಜ್ಜಿಗೆ ಬೇಕಾಗುವ ಪದಾರ್ಥಗಳು 

ತೋತಾಪುರಿ ಮಾವಿನಕಾಯಿ   -  ಒಂದು [ ಮೀಡಿಯಂ ಸೈಜು ]
ಘಾಟಿ ಮೆಣಸು  -- ಎಂಟು
ಬಿಳಿ ಎಳ್ಳು   -  ಒಂದು ಚಮಚ
ಕಾಯಿತುರಿ   -  ಒಂದು ಕಪ್ಪು
ಬೆಲ್ಲ   -  ಅರ್ದ ಚಮಚ
ಉಪ್ಪು  -  ರುಚಿಗೆ ಸ್ವಲ್ಪ

ಒಗ್ಗರೆಣೆಗೆ  ಬೇಕಾಗುವ ಪದಾರ್ಥಗಳು:

 ಕೊಬ್ಬರಿ ಎಣ್ಣೆ  -  ಎರಡು ಚಮಚ 
 ಸಾಸಿವೆ   -  ಒಂದು ಸಣ್ಣ ಚಮಚ 
ಹಿಂಗು   -  ಒಂದು ಚಿಟಿಕೆಯಷ್ಟು 
ಒಣಮೆಣಸು   - ಒಂದು 
ಕಡ್ಲೆ ಬೀಜ -  ಎರಡು ದೊಡ್ಡ ಚಮಚ 
ಕರಿಬೇವು  - ಒಂದು ಗರಿ 


ಮಾಡುವ ವಿಧಾನ:

೧. ಮಾವಿನ ಕಾಯಿಯ ಓಟೆ [ಬೀಜ] ತೆಗೆದು ಹೆಚ್ಚಿಕೊಂಡು, ಮಸಾಲೆಗೆ ತಿಳಿಸಿದ ಉಳಿದ ಪದಾರ್ಥಗಳೊಂದಿಗೆ [ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ] ರುಬ್ಬಿಕೊಳ್ಳಬೇಕು.
೨. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಒಗ್ಗರಣೆ ಗೆ ತಿಳಿಸಿದ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಈಗ ಅದರಲ್ಲಿ ರುಬ್ಬಿದ ಚಟ್ನಿಯನ್ನು ಹಾಕಿ ಚನ್ನಾಗಿ ಹುರಿದು/ ಬಾಡಿಸಿ  ಗ್ಯಾಸ್ ಉರಿಯನ್ನು ತೆಗೆಯಬೇಕು. 
೩. ಸಿದ್ದವಾದ ಗೊಜ್ಜಿಗೆ / ಚಟ್ನಿಗೆ  ಮೊದಲೇ ತಯಾರಿಸಿಟ್ಟ  ಊದುರುದುರಾದ ಅನ್ನವನ್ನು ಹಾಕಿ ಕಲಸಿಕೊಳ್ಳ ಬೇಕು.  ಕೊನೆಯಲ್ಲಿ ಕತ್ತರಿಸಿಟ್ಟ ಕೊತ್ತಂಬರಿಸೊಪ್ಪನ್ನು ಸ್ವಲ್ಪ ಉದುರಿಸಿದರೆ ರುಚಿಯಾದ ಮಾವಿನಕಾಯಿ ಚಿತ್ರಾನ್ನ ರೆಡಿ. 






ಮಿಂಚು: ಚಿಕ್ಕವರಾಗಿದ್ದಾಗ ನಮಗೆ ಯಾವಾಗಲೂ ಬೇಗನೆ ಬೆಳೆದು ದೊಡ್ದವರಾಗಬೇಕೆಂಬ ಹಂಬಲವಿರುತ್ತದೆ. ಆದರೆ, ಬೆಳೆದು ದೊಡ್ಡವರಾದಾ ಬಳಿಕ ಬಾಲ್ಯದ ಮಹತ್ವ ಅರಿವಾಗುತ್ತದೆ. ದೊಡ್ಡವರಾದ ಬಳಿಕ ನಮ್ಮ ವ್ಯಕ್ತಿತ್ವ ದಿಂದಾಗಿ ಒಡೆದ ಹೃದಯ ಮತ್ತು ಕಳೆದುಕೊಂಡ ಸ್ನೇಹಿತರಿಗಿಂತ ಬಾಲ್ಯದ ಮುಗ್ದತೆಯಲ್ಲಿ ಒಡೆದ ಆಟಿಕೆಗಳು ಮತ್ತು ಕಳೆದು ಹೋದ ಬಳಪಗಳೇ ಎಷ್ಟೋ ವಾಸಿ ಎನಿಸುವುದು. 


Thursday, March 14, 2013

ಚೀನಿಕಾಯಿ ಬಜ್ಜಿ / pumpkin fry/  ದುದ್ದೇ ಫೋಡಿ 



ಬೇಕಾಗುವ ಪದಾರ್ಥಗಳು:

ಕತ್ತರಿಸಿದ ಚಿನಿಕಾಯಿ ತುಂಡುಗಳು  -  ಬೇಕಾದಷ್ಟು 
ಕೆಂಪು ಮೆಣಸಿನ ಪುಡಿ   -  ಖಾರಕ್ಕೆ ತಕ್ಕಷ್ಟು 
ಅರಿಶಿನ ಪುಡಿ   -  ಸ್ವಲ್ಪ 
ಹಿಂಗು   -  ಸ್ವಲ್ಪ 
ಉಪ್ಪ್ಪು  -  ರುಚಿಗೆ ಹದವಾಗಿ 
ಅಕ್ಕಿ ಹಿಟ್ಟು   -  ಸ್ವಲ್ಪ 
 ಎಣ್ಣೆ    -  ಸ್ವಲ್ಪ. 

ಮಾಡುವ ವಿಧಾನ:

1.  ಕತ್ತರಿಸಿಟ್ಟ ಚೀನಿಕಾಯಿ ಹೋಳುಗಳಿಗೆ  [ಸಿಪ್ಪೆ ಸಹಿತ slice]  ಅರಿಶಿನ ಉಪ್ಪು ಹಿಂಗು ಖಾರಪುಡಿ ಹಾಕಿ ಚನ್ನಾಗಿ ಸವರಿಡಬೇಕು.[ ಬಜ್ಜಿ ತಯಾರಿಸುವ ಹತ್ತು ನಿಮಿಷ ಮುಂಚೆ, ಮಸಾಲೆಯನ್ನು ಹಚ್ಚಿಡ ಬೇಕು.]
2. ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು  ಬಿಸಿ ಮಾಡಿ, ಎರಡು ಚಮಚ  ಎಣ್ಣೆ ಹಾಕಿ ಹರಡಿಸಿಕೊಂಡು, ಮಸಾಲೆ ಹಚ್ಚಿದ 
    ಚೀನಿಕಾಯಿ ಹೊಳುಗಳ್ಳನ್ನು,[ಕಾವಲಿಯಲ್ಲಿ ಹಿಡಿಸುವಷ್ಟು ] ಸಾಲಾಗಿ ಜೋಡಿಸಿ, ಮುಚ್ಚಳದಿಂದ ಮುಚ್ಚಬೇಕು. ಐದು ನಿಮಿಷ ಬಿಟ್ಟು, ಮುಚ್ಚಿದ ಮುಚ್ಚಳ ತೆಗೆದು  ಒಂದೊಂದೇ ಹೊಳುಗಳನ್ನು ಮಗುಚಿ ಹಾಕಿ [ಬೇಕಾದಲ್ಲಿ ಅರ್ದ ಚಮಚ ಎಣ್ಣೆಯನ್ನು ಹಾಕಿಕೊಂಡು] ಸಣ್ಣ ಉರಿಯಲ್ಲಿ ಐದು ನಿಮಿಷ[approximate time] ಹುರಿಯಬೇಕು.[tava fry].  

* ಸಂಜೆ ತಿಂಡಿ [snack] ಅಥವಾ ಊಟ ದಲ್ಲಿ side ಪದಾರ್ಥವಾಗಿಯೂ ಸವಿಯಬಹುದು. ಬಿಸಿ - ಬಿಸಿ ತಿಂದರೆ ರುಚಿ ಹೆಚ್ಚು. 

ಮಿಂಚು:- ನಮ್ಮಂತೆಯೇ ಬೇರೆಯವರಿಗೂ ಆತ್ಮ ಗೌರವ ವಿರುತ್ತದೆ ಎನ್ನುವ ಅರಿವು ಇದ್ದರೆ, ಮೂದಲಿಕೆ, ಜಗಳದಂತಹ ಪ್ರಮಯವೇ ಬರದು 

Tuesday, March 12, 2013




ಮಸಾಲಾ ವಾಂಗಿ 

ಬೇಕಾಗುವ ಪದಾರ್ಥಗಳು:

ಬದನೇಕಾಯಿ ಹೋಳು   -  ಎರಡು ಕಪ್ಪು 
ಉದ್ದಕ್ಕೆ ಹೆಚ್ಚಿದ ಈರುಳ್ಳಿ  -  ಒಂದು 
ಹೆಚ್ಚಿದ ಟೊಮೇಟೊ   -  ಎರಡು 
ಶುಂಟಿ + ಬೆಳ್ಳುಳ್ಳಿ  ಪೇಸ್ಟ್  -   ಒಂದು ಚಮಚ 
ವಾಂಗಿಬಾತ್ ಪುಡಿ / ಸಾಂಬಾರ್ ಪುಡಿ   - ಒಂದು ಚಮಚ 
ಅರಿಶಿನ ಪುಡಿ   - ಕಾಲು ಚಮಚ 
ಉಪ್ಪು  - ಸ್ವಲ್ಪ 
ಮೆಂತೆ ಕಾಳು   - ಅರ್ದ ಚಮಚ 
ಸಾಸಿವೆ    - ಒಂದು ಸಣ್ಣ ಚಮಚ 
ಕರಿಬೇವು  - ಒಂದು ಗರಿ 
ಎಣ್ಣೆ    -  ಒಂದು ದೊಡ್ಡ ಚಮಚ
 ಕಾಯಿತುರಿ   - ಸ್ವಲ್ಪ. 

 ಮಾಡುವ ವಿಧಾನ: 

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಸಾಸಿವೆ ಮೆಂತ್ಯೆ  ಕರಿಬೇವು ಒಗ್ಗರೆಣೆ  ಮಾಡಿಕೊಳ್ಳಬೇಕು. ಅದರಲ್ಲಿ ಶುಂಟಿ + ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಬೇಕು. ನಂತರ ಈರುಳ್ಳಿ ಹಾಕಿ ಸ್ವಲ್ಪ ಹುರಿದುಕೊಂಡು, ಟೊಮೇಟೊ ತುಂಡುಗಳ್ಳನ್ನು ಹಾಕಿ ಬಾಡಿಸಬೇಕು. ಈಗ ಅದಕ್ಕೆ ಒಂದೊಂದಾಗಿ ಪುಡಿ ಗಳ್ಳನ್ನು ಹಾಕಬೇಕು. ಕೊನೆಯಲ್ಲಿ ಬದನೆ ಹೊಳುಗಳನ್ನು ಹಾಕಿ ಸ್ವಲ್ಪ ನೀರನ್ನು ಚಿಮುಕಿಸಿ ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಬೇಕು. ಬದನೆ ಬೆಂದ ಬಳಿಕ ಸ್ವಲ್ಪ ಕಾಯಿತುರಿಯನ್ನು 
ಸೇರಿಸಿದರೆ, ರುಚಿಯದ ಮಸಾಲಾ ವಾಂಗಿ ಯನ್ನು ಚಪಾತಿ, ಪುರಿ , ಪರಾಟ, ಅನ್ನ ದೊಟ್ಟಿಗೆ ಸವಿಯಬಹುದು. 

 





Sunday, March 10, 2013

BHENDI CURRY 

ಬೇಕಾಗುವ ಪದಾರ್ಥಗಳು  

ಬೆಂಡೇಕಾಯಿ   -  ಇಪ್ಪತ್ತು 
ಎಣ್ಣೆ     -  ಎರಡು ಚಮಚ 
ಈರುಳ್ಳಿ   -  ಎರಡು 
ಬೆಳ್ಳುಳ್ಳಿ  ಎಸಳು  -  ಎಂಟು 
ಕರಿಬೇವು   -  ಒಂದು ಗರಿ 
ಉದ್ದಿನಬೇಳೆ  -  ಎರಡು ಸಣ್ಣ ಚಮಚ 
ಸಾಸಿವೆ   - ಒಂದು ಸಣ್ಣ  ಚಮಚ 
ಜೀರಿಗೆ   -  ಒಂದು ಸಣ್ಣ ಚಮಚ 
ಕೆಂಪು ಮೆಣಸಿನ ಪುಡಿ  - ಎರಡು ಸಣ್ಣ ಚಮಚ 
ಅರಿಶಿನ ಪುಡಿ  - ಅರ್ದ ಸಣ್ಣ ಚಮಚ 
ಹುಣಸೆ ರಸ  -  ಎರಡು ದೊಡ್ಡ ಚಮಚ 
ಉಪ್ಪು  -  ಸ್ವಲ್ಪ 
ಕಾಯಿತುರಿ   - ಒಂದು ಚಮಚ 



ಕೊತ್ತಂಬರಿಸೊಪ್ಪು   - ಸ್ವಲ್ಪ. 

ಮಾಡುವ ವಿಧಾನ:

1 ಬೆಂಡೆ ಕಾಯಿಯನ್ನು ತೊಳೆದು ಉದ್ದಕ್ಕೆ ಅರ್ದ ಭಾಗ ಮಾಡಿ ಸೀಳಿ ಕೊಳ್ಳಬೇಕು. ಈರುಳ್ಳಿಯನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಬೇಕು
2. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ , ಕಾದ ಬಳಿಕ ಸಾಸಿವೆ ಜೀರಿಗೆ ಯನ್ನು ಹಾಕಿ ,ಅದು ಸಿಡಿದ ಬಳಿಕ ಕರಿಬೇವು 
    ಈರುಳ್ಳಿಯನ್ನು ಹಾಕಿ ಹುರಿಯಬೇಕು, ನಂತರ ಬೆಳ್ಳುಳ್ಳಿ ಎಸಳನ್ನು ಹಾಕಿ ಸ್ವಲ್ಪ ಕೆಂಪಗೆ ಬಾಡಿಸಬೇಕು. 
3. ಈಗ ಆ ಒಗ್ಗರೆಣೆಯಲ್ಲಿ, ಸೀಳಿಟ್ಟ  ಬೆಂಡೆ ಕಾಯಿಯನ್ನು ಹಾಕಿ, ಜೊತೆಗೆ ಅರಿಶಿನ ,ಖಾರಪುಡಿ, ಉಪ್ಪು ಹುಣಸೆರಸ ವನ್ನು  
    ಹಾಕಿ ಚನ್ನಾಗಿ ಮಗುಚಿ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೆಂಡೆ  ಬೇಯುವವರೆಗೆ ಬೇಯಿಸಬೇಕು 
4. ಪಲ್ಯ ಆದ ಬಳಿಕ, ಸ್ವಲ್ಪ ಕಾಯಿತುರಿ  ಹಾಗು ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರಸಿ ಸವಿಯಬೇಕು.   


Friday, March 8, 2013

ಸೇಬು ಹಣ್ಣಿನ  ಚಿತ್ರಾನ್ನ/ Apple rice 

ಬೇಕಾಗುವ ಪದಾರ್ಥಗಳು:

ಸೇಬು ಹಣ್ಣಿನ  ತುಂಡು  -  ಒಂದು ಕಪ್ಪು
ಕೆಂಪಕ್ಕಿ ಅನ್ನ / ಬಾಸಮತಿ ಅಕ್ಕಿ ಅನ್ನ  -   ಎರಡೂ ಕಪ್ಪು
ಅಡುಗೆ ಎಣ್ಣೆ  -  ಎರಡು ಚಮಚ
ಈರುಳ್ಳಿ   - ಎರಡು 
ಗೋಡಂಬಿ  -  ನಾಲ್ಕು 
ಬಾದಾಮಿ   -  ನಾಲ್ಕು 
ಒಣ ದ್ರಾಕ್ಷಿ   -  10 
ಕಾಳು ಮೆಣಸು ಪುಡಿ  -   ಒಂದು ಚಮಚ 
ಗರಮ್ ಮಸಾಲ ಪುಡಿ  - ಒಂದು ಚಮಚ  ಉಪ್ಪು   -  ಸ್ವಲ್ಪ 
ತುಪ್ಪ / ಎಣ್ಣೆ   -  ಎರಡು ದೊಡ್ಡ ಚಮಚ.  
 ಕೊತ್ತಂಬರಿ ಸೊಪ್ಪು  - ಸ್ವಲ್ಪ 
ಕಾಯಿತುರಿ   - ಎರಡು ಚಮಚ. 



 ಮಾಡುವ ವಿಧಾನ:

 ೧. ದಪ್ಪ ತಳದ ಬಾಣಲೆಯಲ್ಲಿ ತುಪ್ಪ / ಎಣ್ಣೆಯನ್ನು ಹಾಕಿ ಕಾಯಿಸಬೇಕು. 
 ೨. ಕಾದ ತುಪ್ಪದಲ್ಲಿ  ಗೋಡಂಬಿ ಬಾದಾಮಿ ದ್ರಾಕ್ಷಿ  ಹುರಿದುಕೊಂಡು ತೆಗೆದಿಡಬೆಕು.. 
೩. ಅದೇ ಬಾಣಲೆಯಲ್ಲಿ, ಸ್ವಲ್ಪ ಎಣ್ಣೆ /ತುಪ್ಪವನ್ನು ಹಾಕಿ[ಅಗತ್ಯವಿದ್ದಲ್ಲಿ ಮಾತ್ರ] ಉದ್ದಕ್ಕೆ ಹೆಚ್ಚಿಟ್ಟ  ಈರುಳ್ಳಿ + ಸೇಬಿನ ತುಂಡುಗಳನ್ನು  ಹಾಕಿ  ತುಸು 
    ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅದಕ್ಕೆ, ತಯಾರಿಸಿಟ್ಟ  ಅನ್ನ, ಕಾಳು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಉಪ್ಪನ್ನು ಹಾಕಬೇಕು. 
೪. ಕೊನೆಯಲ್ಲಿ ಹುರಿದಿಟ್ಟ ಒಣ ಹಣ್ಣುಗಳ್ಳನ್ನು [dry fruits]ಸೇರಿಸಿ ಚನ್ನಾಗಿ ಕಲಸಿಕೊಳ್ಳ ಬೇಕು.
೫. ಸ್ವಲ್ಪ ಕಾಯಿತುರಿ  ಹಾಗು  ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ  ಮೇಲಿನಿಂದ ಹಾಕಿಕೊಂಡು ಸವಿಯಬಹುದು. 

 

Thursday, March 7, 2013

ಒತ್ತು ಶ್ಯಾವಿಗೆ [ಸುಲಭ ವಿಧಾನ ]

ಅಕ್ಕಿ ಶ್ಯಾವಿಗೆ 

ಬೇಕಾಗುವ ಪದಾರ್ಥಗಳು:

ಅಕ್ಕಿ ಹಿಟ್ಟು   -  ಒಂದು ಲೋಟ 
ನೀರು   -   ಒಂದು ಲೋಟ 
ಉಪ್ಪು   - ಸ್ವಲ್ಪ 
ಸಕ್ಕರೆ  - ಅರ್ದ ಚಮಚ [ಬೇಕಾದಲ್ಲಿ ಮಾತ್ರ]
ಶ್ಯಾವಿಗೆ ಅಚ್ಚು. 

ಮಾಡುವ ವಿಧಾನ:

೧. ಅಕ್ಕಿ ಹಿಟ್ಟಿಗೆ ಉಪ್ಪು ಸಕ್ಕರೆಯನ್ನು ಹಾಕಿ ಬೆರಸಿಕೊಳ್ಳ ಬೇಕು 
೨. ಒಂದು ಲೋಟ ನೀರನ್ನು ಕುದಿಸಬೇಕು. 
೩. ಕಾದ ನೀರನ್ನು ಅಕ್ಕಿ ಹಿಟ್ಟಿಗೆ ಹಾಕಿ ನಿಧಾನವಾಗಿ  ಕಲಸಿಕೊಳ್ಳಬೇಕು. [ಗಂಟು ಕಟ್ಟಿಕೊಳ್ಳದಂತೆ ]
೪. ಹಿಟ್ಟು ಕಲಸಿಕೊಂದು  ಸಣ್ಣ - ಸಣ್ಣ ಉಂಡೆಗಳನ್ನು ಕಟ್ಟಿ , ಶ್ಯಾವಿಗೆ ಅಚ್ಚಿನಲ್ಲಿ ಹಾಕಿ ಒತ್ತ ಬೇಕು. 
೫. ಒತ್ತಿಟ್ಟ  ಶ್ಯಾವಿಗೆಯನ್ನು, ಎಣ್ಣೆ ಸವರಿದ ತಟ್ಟೆಯಲ್ಲಿ ಜೋಡಿಸಿ, ಹಬೆ ಪಾತ್ರೆಯಲ್ಲಿ ಬೇಯಿಸಬೇಕು.



* ಬಿಸಿ - ಬಿಸಿ ಶ್ಯಾವಿಗೆಯು   ತೆಂಗಿನ  ಎಣ್ಣೆ  ಹಾಗು ಮಿಡಿ ಉಪ್ಪಿನಕಾಯಿ ಯೊಂದಿಗೆ ಸವಿಯಲು ಬಲು ರುಚಿಯಗಿರುತ್ತದೆ. 

ರಾಗಿ ಶ್ಯಾವಿಗೆ                     

                                                                             


                                                     ಬೇಕಾಗುವ ಪದಾರ್ಥಗಳು:

ರಾಗಿ ಹಿಟ್ಟು -  ಒಂದು ಲೋಟ 
ಅಕ್ಕಿ ಹಿಟ್ಟು  -  ಅರ್ದ ಲೋಟ 
ನೀರು   - ಒಂದೂವರೆ ಲೋಟ 
ಉಪ್ಪು   - ಸ್ವಲ್ಪ.

ಮಾಡುವ ವಿಧಾನ: 

ಮೇಲೆ ತಿಳಿಸಿದ, ಅಕ್ಕಿ ಶ್ಯಾವಿಗೆಯನ್ನು  ಮಾಡುವ ವಿಧಾನದಲ್ಲಿಯೇ ರಾಗಿ ಶ್ಯಾವಿಗೆಯನ್ನು ಮಾಡುವುದು.





 



 

 

 

 

 


ಮಜ್ಜಿಗೆ ಕಡಿ 

ಬೇಕಾಗುವ ಪದಾರ್ಥಗಳು:

ಮಜ್ಜಿಗೆ   -  ನಾಲ್ಕು ಲೋಟ 
ಕಡ್ಲೆ ಹಿಟ್ಟು   - ಒಂದು ಚಮಚ

ಒಗ್ಗರಣೆಗೆ:

ತುಪ್ಪ   -   ಒಂದು ದೊಡ್ಡ ಚಮಚ 
ಸಾಸಿವೆ  -  ಅರ್ದ ಚಮಚ 
ಜೀರಿಗೆ   -  ಅರ್ದ ಚಮಚ 
ಬೆಳ್ಳುಳ್ಳಿ ಎಸಳು  -  7 - 8
ಹಸಿಮೆಣಸು   -  3 
ಒಣಮೆಣಸು   -  1 
ಕರಿಬೇವು   -  ಎರಡು ಗರಿ 
ಅರಿಶಿನಪುಡಿ  -  ಕಾಲು ಚಮಚ 
ಕಸೂರಿ ಮೇಥಿ  - ಒಂದು ಚಮಚ
ಕೊತ್ತಂಬರಿಸೊಪ್ಪು   -   ಸ್ವಲ್ಪ 
ಉಪ್ಪು    -  ರುಚಿಗೆ ತಕ್ಕಷ್ಟು.  

ಮಾಡುವ ವಿಧಾನ:

1ಕಡಲೆಹಿಟ್ಟಿಗೆ  ಸ್ವಲ್ಪ ನೀರು ಹಾಕಿ ಕದಲಿಸಿ, ಮಜ್ಜಿಗೆ ಗೆ ಹಾಕಿ ಕಾಯಿಸಬೇಕು
2 ಒಗ್ಗರಣೆಗೆ ತಿಳಿಸಿದ ಪದಾರ್ಥಗಳಿಂದ ಒಗ್ಗರೆಣೆ  ಮಾಡಿಕೊಂಡು, ಮಜ್ಜಿಗೆಗೆ ಹಾಕಬೇಕು. ರುಚಿಗೆ ಸ್ವಲ್ಪ ಉಪ್ಪು ಹಾಗು  ಕಸೂರೀ ಮೇಥಿಯನ್ನು ಸೇರಿಸಿ, ಕುದಿಸಬೇಕು. 
3. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಬೇಕು.




* ಬೇಸಿಗೆಯಲ್ಲಿ, ಅನ್ನ ದೊಟ್ಟಿಗೆ ಕಲಸಿ ಸವಿದರೆ ದೇಹ ತಂಪಾಗಿರುತ್ತದೆ , ಅರೋಗ್ಯಕ್ಕೂ ಒಳ್ಳೆಯದು. 

 


Monday, March 4, 2013


ಶಾಜೀರಾ   ರೈಸ್



ಬೇಕಾಗುವ ಪದಾರ್ಥಗಳು 

ಬಾಸ್ಮತಿ ಅಕ್ಕಿ  - ಒಂದು ಲೋಟ 
ಕ್ಯಾರೆಟ್, ಹಸಿಬಟಾನಿ -ಒಂದು ಬಟ್ಟಲು [ಸಣ್ಣಗೆ ಹೆಚ್ಚಿಟ್ಟು ಕೊಳ್ಳಬೇಕು ]
ಈರುಳ್ಳಿ ಗಿಡ   - ಐದಾರು ಗಿಡ ವನ್ನು ಒಂದಿಂಚು ಗಾತ್ರದಲ್ಲಿ ಕತ್ತರಿಸಿಡ ಬೇಕು 
ಈರುಳ್ಳಿ    -  ಎರಡು [ಉದ್ದಕ್ಕೆ ಕತ್ತರಿಸಬೇಕು]
ಹಸಿಮೆಣಸು  -  ನಾಲ್ಕು  [ಸೀಳಿ ಕೊಂಡಿಡಬೇಕು]
ಶಾ ಜೀರಾ   -   ಎರಡು ಚಮಚ 
ಜೀರಿಗೆ    - ಒಂದು ಚಮಚ
ಅಡುಗೆ ಎಣ್ಣೆ   -   ಎರಡು ದೊಡ್ಡ ಚಮಚ 
ಉಪ್ಪು   - ರುಚಿಗೆ ಸ್ವಲ್ಪ. 



ಮಾಡುವ ವಿಧಾನ  

1 . ಅಕ್ಕಿಯನ್ನು ತೊಳೆದು,  ಉದುರುದುರಾದ  ಅನ್ನವನ್ನು ಮಾಡಿಟ್ಟುಕೊಳ್ಳಬೇಕು.
2. ದಪ್ಪ ತಳದ ಬಾಣಲೆಯಲ್ಲಿ, ಎರಡು ಚಮಚ ಎಣ್ಣೆ ಹಾಕಿ ಕಾದ ಬಳಿಕ, ಶಾಜೀರಾ, ಜೀರಿಗೆಯನ್ನು ಹಾಕಿ ಚಟಪಡಿಸಬೇಕು.
3. ಉದ್ದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಗು ಸೀಳಿಟ್ಟ ಹಸಿಮೆಣಸನ್ನು ಹಾಕಿ ಚನ್ನಾಗಿ ಬಾಡಿಸಿಕೊಳ್ಳಬೇಕು.
4. ಒಗ್ಗರಣೆಯಲ್ಲಿ ಹೇಚಿಟ್ಟ [ಸಣ್ಣದಾಗಿ] ಕ್ಯಾರಟ್ ದಪ್ಪ ಮೆಣಸು , ಸ್ವಲ್ಪ್ ಹಸಿ ಬಟಾನಿಯನ್ನು ಹಾಕಿ , ಚನ್ನಾಗಿ ಬ್ಬಾಡಿಸಿ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಬೇಕು.
5. ತರಕಾರಿ ಬೆಂದ ಬಳಿಕ, ತಯಾರಿಸಿಟ್ಟ ಅನ್ನ, ಉಪ್ಪು ಈರುಳ್ಳಿ ಗಿಡವನ್ನು ಸೇರಿಸಿ, ಚನ್ನಾಗಿ ಕಲಸಿಕೊಂಡರೆ ಶಾಜೀರ ರೈಸ್
    ಸವಿಯಲು ಸಿದ್ದ.

* ರಾಯಿತಾ, ಪಲ್ಯದೊಂದಿಗೆ ಶಾಜೀರಾ ರೈಸ್ ನ್ನು  ಸವಿಯಬಹುದು.