BLOG FOLLOWERS

Saturday, December 31, 2011

ಪೂರಿ - ಸಾಗು

ಪೂರಿ  ತಯಾರಿಸಲು  ಬೇಕಾಗುವ  ಪದಾರ್ಥಗಳು:

ಗೋಧಿ  ಹಿಟ್ಟು   -  ಎರಡು ಕಪ್ 
ಉಪ್ಪು     -   ಸ್ವಲ್ಪ 


 ಹಿಟ್ಟು  ಕಲಿಸಲು  ನೀರು  ಹಾಗು  ಕರಿಯಲು ಎಣ್ಣೆ.
 
 ತಯಾರಿಸುವ ವಿಧಾನ:

 ಒಂದು ಅಗಲವಾದ  ಪಾತ್ರೆಯಲ್ಲಿ  ಹಿಟ್ಟು, ಉಪ್ಪು  ಹಾಗು  ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿಗಿಂತ  ಸ್ವಲ್ಪ ಗಟ್ಟಿಯಾಗಿ ಕಲಿಸಿಡಬೇಕು.[ ಬೇಕಾದಲ್ಲಿ ಒಂದು ಚಮಚ ಎಣ್ಣೆಯನ್ನು ಸೇರಿಸಬಹುದು] ನಂತರ ಆ ಹಿಟ್ಟಿ ನಿಂದ  ಸಣ್ಣ- ಸಣ್ಣ ಕಣಕಗಳನ್ನು ಮಾಡಿ, ಸ್ವಲ್ಪ ಮೈದಾ ಹಿಟ್ಟಿನಲ್ಲಿ ಹೊರಳಿಸಿ, ಸಣ್ಣ- ಸಣ್ಣ ಪೂರಿಯನ್ನು  ಲಟ್ಟಿಸಿ ಕಾದ ಎಣ್ಣೆಯಲ್ಲಿ  ಕರಿದು ತೆಗೆಯಬೇಕು. ಈಗ ಪೂರಿ READY.

 ಸಾಗು  ತಯಾರಿಸಲು ಬೇಕಾಗುವ ಪದಾರ್ಥಗಳು:

 ಮಿಶ್ರ ತರಕಾರಿಗಳು   -   ಎರಡು ಕಪ್ [ ಬೀನ್ಸ್, ಕ್ಯಾರಟ್, ಆಲೂಗಡ್ಡೆ, ಬಟಾಣಿ , ಅವರೇ ಕಾಳು etc. 
 ತುಂಡರಿಸಿದ ಈರುಳ್ಳಿ  -  ಅರ್ದ ಕಪ್ 
 ಟೊಮೇಟೊ    -  ಒಂದು 
 ಉಪ್ಪು  -  ರುಚಿಗೆ ತಕ್ಕಷ್ಟು         
 ಸಾಸಿವೆ, ಕರಿಬೇವು  ಹಿಂಗು, ಹಾಗು ಎಣ್ಣೆ.


ಮಸಾಲೆ  ತಯಾರಿಸಲು  ಬೇಕಾಗುವ ಪದಾರ್ಥಗಳು:


ಕಾಯಿತುರಿ  -  ಒಂದು ಕಪ್ 
ಪುಟಾಣಿ     - ಕಾಲು ಕಪ್
ಕೊತ್ತಂಬರಿ  -  ಎರಡು  ಚಮಚ 
ಜೀರಿಗೆ  -  ಒಂದು ಚಮಚ
ಗಸಗಸೆ  - ಒಂದು ಚಮಚ 
ಹಸಿಮೆಣಸು  -  ಖಾರಕ್ಕೆ ತಕ್ಕಷ್ಟು 
 ಹುಣಸೆ   - ಸ್ವಲ್ಪ 
 ಬೆಳ್ಳುಳ್ಳಿ  - ಒಂದು ಗಡ್ಡೆ
ಕೊತ್ತಂಬರಿ ಸೊಪ್ಪು  - ಕಾಲು ಕಪ್.
ಮೇಲೆ  ತಿಳಿಸಿದ ಎಲ್ಲಾ ಪದಾರ್ಥ ಗಳ್ಳನ್ನು  ರುಬ್ಬಿಟ್ಟುಕೊಳ್ಳಬೇಕು.


ಸಾಗು  ತಯಾರಿಸುವ ವಿಧಾನ:

ಮೊದಲು  ಕುಕ್ಕರ್ ಪ್ಯಾನ್ ನಲ್ಲಿ  ಎಣ್ಣೆ ಹಾಕಿ, ಸಾಸಿವೆ ಕರಿಬೇವು, ಹಿಂಗನ್ನು ಒಗ್ಗರಣೆ  ಮಾಡಿಕೊಳ್ಳಬೇಕು.
 ನಂತರ ಅದರಲ್ಲಿಯೇ ಹೆಚ್ಚಿದ ಈರುಳ್ಳಿ ಟೊಮೇಟೊ ಹಾಕಿ ಸ್ವಲ್ಪ ಹುರಿಯಬೇಕು. ರುಬ್ಬಿದ ಮಸಾಲೆಯನ್ನು ಹಾಕಿ 
 ಬಾಡಿಸಿಕೊಳ್ಳಬೇಕು. ಈಗ ಇದಕ್ಕೆ ತರಕಾರಿ , ಉಪ್ಪು, ಸ್ವಲ್ಪ ನೀರನ್ನು ಹಾಕಿ, ಮುಚ್ಚಳ ವನ್ನು  ಮುಚ್ಚಿ, ಎರಡರಿಂದ ಮೂರು ಸೀಟಿ ತೆಗೆದು ಬೇಯಿಸಿದರೆ,  ಘಮ- ಘಮಿಸುವ ಸಾಗು ಪೂರಿ ಯೊಂದಿಗೆ  ತಿನ್ನಲು ರೆಡಿ.






 

Sunday, November 27, 2011

ದಾಲ್ ಪಾಲಕ್ / DAL PAALAK

ದಾಲ್ ಪಾಲಕ್ / DAL PAALAK

ಬೇಕಾಗುವ ಪದಾರ್ಥಗಳು: 
 ಪಾಲಕ್ ಸೊಪ್ಪು  -   ಎರಡು ಕಟ್ಟು 

ಮಸ್ಸೂರ್ ದಾಲ್/ತೊಗರಿ ಬೇಳೆ   -  ಒಂದು ಕಪ್ 

ಈರುಳ್ಳಿ     -    ಎರಡು
ಟೊಮೇಟೊ   -   ಎರಡು 
ಶುಂಟಿ- ಹಸಿಮೆಣಸು ಪೇಸ್ಟ್/ ಬೆಳ್ಳುಳ್ಳಿ-ಹಸಿಮೆಣಸು ಪೇಸ್ಟ್   -   ಎರಡು ಚಮಚ 
ಅರಿಶಿನ   - ಕಾಲು ಚಮಚ 
ಕೆಂಪು ಮೆಣಸಿನ ಪುಡಿ   - ಒಂದು ಚಮಚ
ಉಪ್ಪು  -  ರುಚಿಗೆ  ತಕ್ಕಷ್ಟು 
ಸಕ್ಕರೆ   - ಅರ್ದ ಚಮಚ

 ಮಾಡುವ ವಿಧಾನ:

ಬೇಳೆ ಹಾಗು ಪಾಲಕ್ ಸೊಪ್ಪನ್ನು ಕುಕ್ಕರ್ ಲ್ಲಿ  ಹಾಕಿ  ಜೊತೆಗೆ ಸ್ವಲ್ಪ ನೀರನ್ನು ಸೇರಿಸಿ, ಚನ್ನಾಗಿ ಬೇಯಿಸಿಟ್ಟುಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿಟ್ಟ ಈರುಳ್ಳಿ ಯನ್ನು ಹುರಿದುಕೊಳ್ಳಬೇಕು. ಈಗ ಇದಕ್ಕೆಶುಂಟಿ-ಹಸಿಮೆಣಸು ಪೇಸ್ಟ್ ,
ಸಣ್ಣಗೆ ತುಂಡರಿಸಿದ ಟೊಮೇಟೊ ಹಾಕಿ ಬಾಡಿಸಿಕೊಳ್ಳಬೇಕು. ಸ್ವಲ್ಪ ಅರಿಶಿನ, ಕೆಂಪು ಮೆಣಸಿನ ಪುಡಿ, ಉಪ್ಪು ಅರ್ದ ಚಮಚ ಸಕ್ಕರೆ, ಬೆಂದ ಬೇಳೆ ಹಾಗು ಸೊಪ್ಪನ್ನು ಸೇರಿಸಿ ,ಸಣ್ಣ ಉರಿಯಲ್ಲಿ ಒಂದು ಕುದಿ ತೆಗೆದರೆ,ರುಚಿ ರುಚಿಯಾದ  ದಾಲ್ ಪಾಲಕ್ ಸಿದ್ಧ.  ಬಡಿಸುವಾಗ ಲಿಂಬೆ ರಸವನ್ನು ಹಿಂಡಿಕೊಳ್ಳಬೇಕು.

* ಪೂರಿ/ ಚಪಾತಿ/ ಆನ್ನದೊಟ್ಟಿಗೆ  ಪಾಲಕ್ ದಾಲನ್ನು ಸವಿಯಬಹುದು.

*ನಿತ್ಯವೂ ಯಾವುದಾದರು ಒಂದು ಬಗೆಯ ಧಾನ್ಯ, ತರಕಾರಿ, ಹಾಗು ತೈಲ   ಹಣ್ಣುಗಳ್ಳನ್ನು ಸೇವಿಸಬೇಕು.
* ನಮಗಿರುವಷ್ಟೇ  ಆತ್ಮಗೌರವ ಎಲ್ಲರಿಗೂ ಇದೆ. ಇತರರನ್ನು ಗೌರವದಿಂದ
   ಕಾಣುವುದೂ  ಒಂದು ಸಂಸ್ಕಾರ.

Saturday, November 26, 2011

BISSKUT ROTTI

ಬೇಕಾಗುವ ಪದಾರ್ಥಗಳು:
 ಪೂರಿಗೆ :  
ಮೈದಾಹಿಟ್ಟು  -    ಒಂದು ಲೋಟ 
 ಎಣ್ಣೆ             -    ಎರಡು ಚಮಚ
 ಅರಿಶಿನ        -    ಚಿಟಿಕೆಯಷ್ಟು  
ಉಪ್ಪು    ಹಾಗು ಕಲಸಲು  ನೀರು.
ತಿಳಿಸಿದ ಎಲ್ಲಾ ಸಾಮಗ್ರಿಗಳ್ಳನ್ನು ಹಾಕಿ  ಪೂರಿ ಹಿಟ್ಟಿನ ಹದ್ದಕ್ಕೆ ಕಲಸಬೇಕು.
ಹೂರಣಕ್ಕೆ ಬೇಕಾಗುವ ಪದಾರ್ಥಗಳು:
   ಚಿರೋಟಿ  ರವೆ   - ಒಂದು ಕಪ್ 
   ಸಾಸಿವೆ   -     ಒಂದು ಚಮಚ 
   ಕರಿಬೇವು [ಸಣ್ಣಗೆ ಹೆಚ್ಚಿದ್ದು]   -  ಸ್ವಲ್ಪ 
   ಹಸಿಮೆಣಸು[ಸಣ್ಣಗೆ ಹೆಚ್ಚಿದ್ದು]  -ಎರಡು ಅಥವಾ ಮೂರು 
   ಹಿಂಗು    - ಸ್ವಲ್ಪ 
   ಉದ್ದಿನಬೇಳೆ   -  ಒಂದು ಚಮಚ 
   ಕಾಯಿತುರಿ     -   ಎರಡು ಚಮಚ  
  ಕೆಂಪು ಮೆಣಸಿನ ಪುಡಿ   -   ಒಂದು ಚಮಚ
  ಕಡ್ಲೆ ಹಿಟ್ಟು     -  ಮೂರು ಚಮಚ  ಹಾಗು ಸ್ವಲ್ಪ ಉಪ್ಪು.
 ಒಂದು ಬಾಣಲೆಯಲ್ಲಿ ಎರಡು ಚಮಚ  ಕೊಬ್ಬರಿ ಎಣ್ಣೆಯನ್ನು ಹಾಕಿ,ಸಾಸಿವೆಯನ್ನು ಸಿಡಿಸಿ, ಕರಿಬೇವು, ಹಿಂಗು, ಉದ್ದಿನಬೇಳೆ
ಹಸಿಮೆಣಸು  ಹಾಕಿ ಬಾಡಿಸಿ,  ರವೆಯನ್ನು ಹಾಕಿ  ಹುರಿದುಕೊಂಡು,ಕಡ್ಲೆ ಹಿಟ್ಟು, ಕಾಯಿತುರಿ  ಮೆಣಸಿನ ಪುಡಿ ಸಕ್ಕರೆ[OPTIONAL]ಉಪ್ಪು  ಹಾಕಿ ಚನ್ನಾಗಿ  ಮಿಕ್ಸ್ ಮಾಡಿದರೆ ಹೂರಣ ರೆಡಿ.
 ಮಾಡುವ ವಿಧಾನ:
ಮೈದಾ ಹಿಟ್ಟಿನಿಂದ ಸಣ್ಣ-ಸಣ್ಣ ಪೂರಿಗಳ್ಳನ್ನು ತಯಾರಿಸಿ , ಮಧ್ಯದ್ದಲ್ಲಿ  ಒಂದು ಚಮಚ ಹೂರಣವನ್ನು  ಹಾಕಿ,ನಿಧಾನವಾಗಿ
 ಊರುಟಾಗಿ ಮಡಚಿಕೊಂಡು  ಸ್ವಲ್ಪ ಕೈಯಿಂದ ಅದುಮಿ ಮತ್ತೆ  ಹದವಾಗಿ ಲಟ್ಟಿಸಿಕೊಂಡು  ಕಾದ ಎಣ್ಣೆಯಲ್ಲಿ  ಕರಿದು ತೆಗೆಯಬೇಕು.

*ಬಿಸ್ಕುಟ್  ರೊಟ್ಟಿಯನ್ನು  ಹೀಗೆಯೇ ಚಾ/ ಕಾಫಿ ಯೊಂದಿಗೆ ತಿನ್ನಬಹುದು, ಇಲ್ಲವೇ  ಕಾಯಿ ಚಟ್ನಿಯೋಟ್ಟಿಗೆ ತಿನ್ನಲು ಒಳ್ಳೆಯದಾಗುತ್ತದೆ.
*ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು. ಗೆದ್ದರೆ ನಾಯಕನಾಗಬಹುದು.ಸೋತರೆ ಮಾರ್ಗ ದರ್ಶಕನಾಗಬಹುದು.
  



Tuesday, November 22, 2011

PHOTOS CORNER


  Shri Lakshminarayan Mahamaya Temple, Hanumatta

 P. O. Vandige, Dist. U. Kannada, Pin 581357. Tel. : (08388) 20222.





ಕಾರ್ತಿಕ ದೀಪೋತ್ಸವ  2011











Saturday, November 19, 2011

ದಾಲ್ ಫ್ರೈ

ಮಾಡಲು ಏನೇನು ಬೇಕು..?
ತೊಗ್ರಿ ಬೇಳೆ  - ಒಂದು ಸಣ್ಣ ಕಪ್  
ಕಡ್ಲೆ ಬೇಳೆ      -  ಒಂದು ಸಣ್ಣ ಕಪ್ 
ಹೆಸ್ರು ಬೇಳೆ   -   ಒಂದು ಕಪ್ 
ಟೊಮೇಟೊ -  ಎರಡು 
ಈರುಳ್ಳಿ     -  ಎರಡು 
ಹಸಿಶುಂಟಿ  - ಸಣ್ಣ ತುಂಡು 
ಬೆಳ್ಳುಳ್ಳಿ     - ಐದು ಎಸಳು 
ಸಾಸಿವೆ - ಅರ್ದ ಚಮಚ 
ಮೆಂತ್ಯೆ  - ಅರ್ದ ಚಮಚ 
ಅರಿಶಿನ  - ಚಿಟಿಕೆಯಷ್ಟು 
ಕೆಂಪು ಮೆಣಸಿನ ಪುಡಿ  - ಒಂದು ಚಮಚ 
ಗರಂ ಮಸಾಲ ಪುಡಿ  -   ಒಂದು ಚಮಚ 
ಉಪ್ಪು  - ರುಚಿಗೆ 
ತುಪ್ಪ   -  ಮೂರು ಚಮಚ 
 ಒಂದು ಹೋಳು ಲಿಂಬೆ  ಹಾಗು ಕೊತ್ತಂಬರಿ ಸೊಪ್ಪು.

 ಮಾಡೋದು  ಹೇಗೆ..?

 ಮೊದಲು ಮೂರೂ ಬೇಳೆ ಗಳ್ಳನ್ನು  ಹದಿನೈದು  ನಿಮಿಷ ನೀರಿನಲ್ಲಿ ನೆನಸಬೇಕು. ನಂತರ ನೆಂದ ಬೇಳೆಗಳನ್ನು ಕುಕ್ಕರಲ್ಲಿ
ಎರಡು ಸೀಟಿ ತೆಗೆದು ಬೇಯಿಸಿಡಬೇಕು.ಕುಕ್ಕರ್ ತಣಿದ ಬಳಿಕ, ಒಗ್ಗರಣೆ ಕಡಾಯಿಯಲ್ಲಿ  ಒಂದು  ಚಮಚ ತುಪ್ಪವನ್ನು  ಬಿಸಿ ಮಾಡಿಕೊಂಡು,ಸಾಸಿವೆ    ಮೆಂತ್ಯೆ ಒಗ್ಗರಿಸಿ ಬೇಳೆ ಗೆ ಹಾಕಬೇಕು.ನಂತರ ಎರಡು ಚಮಚ  ತುಪ್ಪವನ್ನು ಬಿಸಿ ಮಾಡಿ, ಸಣ್ಣಗೆ ಹೆಚ್ಚಿಟ್ಟ ಬೆಳ್ಳುಳ್ಳಿ ,ಹಸಿ ಶುಂಟಿ  ಈರುಳ್ಳಿ  ಟೊಮೇಟೊ ವನ್ನು  ಚನ್ನಾಗಿ ಹುರಿದು ಬೇಳೆಗೆ ಹಾಕಬೇಕು. ಖಾರ ಪುಡಿ, ಗರಂ ಮಸಾಲ ಪುಡಿ, ಅರಿಶಿನ ಉಪ್ಪುಹಾಗು ಬೇಕಾದಲ್ಲಿ ಸ್ವಲ್ಪ ನೀರನ್ನು ಅರ್ದ ಬೆಂದ ಬೇಳೆಗೆ ಸೇರಿಸಿ,ಕುಕ್ಕರ್ ಲ್ಲಿ  ಒಂದು ಸೀಟಿ ತೆಗೆದು ಬೇಯಿಸಿದರೆ,ರುಚಿ ರುಚಿಯಾದ ದಾಲ್  ರೆಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ, ಬಡಿಸುವಾಗ ಸ್ವಲ್ಪ ಲಿಂಬೆ ರಸವನ್ನು ಹಿಂಡಬೇಕು.


 * ಚಪಾತಿ/ ಪರಾತಾ/ಅನ್ನದೊಟ್ಟಿಗೆ  ಸವಿಯಲು  ಒಳ್ಳೆಯದಾಗುತ್ತದೆ.



 ಸಾಧಿಸುವ  ಬಗ್ಗೆ ಯೋಚಿಸುವುದು ಸುಲಭ. ಆದರೆ ಯೋಚಿಸಿದ್ದನ್ನು ಸಾಧಿಸುವುದು ಕಷ್ಟ. ಹಾಗೆಂದು ಯೋಚಿಸುವುದ್ದನ್ನೇ ಬಿಡಬಾರದು, ಹಾಗೆಯೇ ಸಾಧಿಸುವ ಛಲವನ್ನೂ ....

ಅಪ್ಪೂ / ಆಪಂ / ಗುಳಿಯಪ್ಪ

ತಯಾರಿಸಲು ಬೇಕಾಗುವ ಪದಾರ್ಥಗಳು:
ಉದ್ದಿನಬೇಳೆ  -   ಒಂದು ಅಳತೆ 
ಅಕ್ಕಿ             -    ಎರಡು ಅಳತೆ 
ಉಪ್ಪು   -  ಸ್ವಲ್ಪ 
ಕಾಯಿಸಲು ಎಣ್ಣೆ  ಹಾಗು  ಅಪ್ಪದ  ಕಾವಲಿ. 

ಮಾಡುವ ವಿಧಾನ:
ಉದ್ದಿನಬೇಳೆ   + ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು. ಹೀಗೆ ನೆನೆದ ಅಕ್ಕಿ+ಉದ್ದನ್ನು  ನುಣ್ಣಗೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. [ಹಿಟ್ಟು ಇಡ್ಲಿ ಹಿಟ್ಟಿ ಗಿಂತ ತುಸು  ಗಟ್ಟಿಯಾಗಬೇಕು]  ರುಬ್ಬಿದ ಹಿಟ್ಟಿಗೆ ಉಪ್ಪನ್ನು ಬೆರಸಿ ಸುಮಾರು ಎಂಟು  ಗಂಟೆಗಳ ಕಾಲ ಮುಚ್ಚಿಡಬೇಕು. ನಂತರ, ಅಪ್ಪದ ಕಾವಲಿಯನ್ನು ಬಿಸಿ ಮಾಡಿ ಪ್ರತಿಯೊಂದು ಗುಳಿಯಲ್ಲೂ
ಎಣ್ಣೆ ಸವರಿ ಹಿಟ್ಟನ್ನು ಹಾಕಿ ಮುಚ್ಚಳವನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡು ಬದಿಯನ್ನು ಬೇಯಿಸಬೇಕು.[ನಾನ್ ಸ್ಟಿಕ್ ಕಾವಲಿ ಉಪಯೋಗಿಸಿದರೆ ಒಳ್ಳೆಯದು]

    ಇದೇ ಹಿಟ್ಟಿಗೆ ಈರುಳ್ಳಿ,ಹಸಿಮೆಣಸು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಿ, ಅಪ್ಪವನ್ನು ತಯಾರಿಸಬಹುದು. 


 ಬೆಣ್ಣೆ , ಕೆಂಪು/ಕಾಯಿ ಚಟ್ನಿ ,ಸಾಂಬಾರ್ ರೊಂದಿಗೆ ಗುಳಿಯಪ್ಪ ತಿನ್ನಲು  ಒಳ್ಳೆಯದಾಗುತ್ತದೆ.  

ಅಮ್ಮನ ರವಾ ದೋಸೆ

 ಅಮ್ಮನ  ರವಾ ದೋಸೆ                        







ಬೇಕಾಗುವ ಪದಾರ್ಥಗಳು:




 ಅಕ್ಕಿ    -  ಒಂದು  ಉದ್ದ ಲೋಟ[ನೆನಸಬೇಕು]
ಸ್ವಲ್ಪ ಹುರಿದಿಟ್ಟ ಸಣ್ಣ ರವೆ  -  ಕಾಲು ಲೋಟ
ಸಣ್ಣಗೆ  ಹೆಚ್ಚಿಟ್ಟ ಈರುಳ್ಳಿ  -   ಎರಡು
ಸಣ್ಣಗೆ ಹೆಚ್ಚಿಟ್ಟ   ಹಸಿಮೆಣಸು   - ಎರಡು
ಕುಟ್ಟಿಟ್ಟ ಕಾಳು ಮೆಣಸು  -   ಐದಾರು
ಜೀರಿಗೆ      - ಒಂದು ಚಮಚ 
ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು   - ಒಂದು ಕಪ್
ರುಚಿ ಗೆ  ಉಪ್ಪು  ಹಾಗು ದೋಸೆ ಕಾಯಿಸಲು ಎಣ್ಣೆ.

ಮಾಡುವ ವಿಧಾನ:
ನೆನಸಿಟ್ಟ ಅಕ್ಕಿಯನ್ನು  ನಯವಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ  ಹಿಟ್ಟಿಗೆ , ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸು,ಈರುಳ್ಳಿ ಕೊತ್ತಂಬರಿಸೊಪ್ಪು ಉಪ್ಪು, ಕುಟ್ಟಿಟ್ಟ ಕಾಳುಮೆಣಸು,ಜೀರಿಗೆ, ನೀರು  ಸೇರಿಸಿ, ನೀರು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.,ಕಾದ ತವಾದ ಮೇಲೆ ಎಣ್ಣೆ ಹಚ್ಚಿ , ಒಂದು ಸವಟು ಹಿಟ್ಟನ್ನು ತೆಗೆದುಕೊಂಡು ತೆಳ್ಳಗೆ  ಹರಡಬೇಕು.ಎರಡೂ ಬದಿಯನ್ನು ಕಾಯಿಸಬೇಕು. ಈ ದೋಸೆ  ಮನೆ ಬೆಣ್ಣೆ  ಹಾಗು ಕಾಯಿ ಚಟ್ನಿಯೊಂದಿಗೆ  ತಿನ್ನಲು   ಒಳ್ಳೆಯದಾಗುತ್ತದೆ. 








* ಮಾನಸಿಕ ಕ್ಲೇಶವನ್ನು  ವಿಚಾರಶಕ್ತಿಯಿಂದ ಹೋಗಲಾಡಿಸಬೇಕು.ಅನಾರೋಗ್ಯವನ್ನು ಚಿಕಿತ್ಸೆ ಯಿಂದ ಗುಣಪಡಿಸಿಕೊಳ್ಳಬೇಕು.  ಬುದ್ದಿ ಸಾಮರ್ಥ್ಯ ವೆಂದರೆ  ಇದೇ. ಇದನ್ನು ಬಿಟ್ಟು ಬಾಲಿಶರಂತೆ ವರ್ತಿಸಬಾರದು.
                                                                                                 ಮಾಹಾಭಾರತ.
 

Thursday, November 17, 2011

ಚಕ್ಕುಲಿ


ಚಕ್ಕುಲಿ 

ಮಾಡಲು  ಏನೇನು ಬೇಕು..? 

ಬೆಚ್ಚಗೆ ಹುರಿದಿಟ್ಟ ಅಕ್ಕಿ ಹಿಟ್ಟು   -   ಒಂದು ಪಾವು 
ಕಡ್ಲೆ ಹಿಟ್ಟು     -    ಕಾಲು ಪಾವು  
ತೆಂಗಿನ ಎಣ್ಣೆ   -  ಎರಡು ಚಮಚ 
ಜೀರಿಗೆ/ಬಿಳಿ ಎಳ್ಳು  -  ಒಂದು ಚಮಚ
ಕೆಂಪು ಮೆಣಸಿನ ಪುಡಿ   - ಒಂದು ಚಮಚ 
ಉಪ್ಪು    - ರುಚಿಗೆ ಸ್ವಲ್ಪ 
ನೀರು   -  ಮುಕ್ಕಾಲು  ಪಾವು 
ಕರಿಯಲು ಎಣ್ಣೆ   ಹಾಗು  ಚಕ್ಕುಲಿ  ಒರಳು.




ಮಾಡೋದು ಹೇಗೆ...?
ದಪ್ಪ ತಳದ ಬಾಣಲೆಯಲ್ಲಿ  ಸಾಧಾರಣ  ಮುಕ್ಕಾಲು ಪಾವು ನೀರನ್ನು ಹಾಕಿ  ಕಾಯಲು  ಇಡಬೇಕು. ಬಳಿಕ ಆ ನೀರಿಗೆ ಎರಡು ಚಮಚ ಎಣ್ಣೆ, ಉಪ್ಪು,ಜೀರಿಗೆ ,ಖಾರ  ಪುಡಿ       ಹಾಗು ಕಡ್ಲೆ ಹಿಟ್ಟನ್ನು ಹಾಕಿ,  ಚನ್ನಾಗಿ ಸೇರಿಸಿ, ಉರಿಯನ್ನು ತೆಗೆದು ಕೂಡಲೇ ಅಕ್ಕಿ ಹಿಟ್ಟು  ಹಾಕಿ  ಮೃದುವಾಗಿ ನಾದಿಕೊಂಡು  ಅಗತ್ಯ ಬಿದ್ದರೆ,ಬೇಕಾದಷ್ಟ್ತೆ ನೀರನ್ನು ಸೇರಿಸಿ ಚಕ್ಕುಲಿ ಹಿಟ್ಟನ್ನು ತಯಾರಿಸಿ ಕೊಳ್ಳಬೇಕು. ನಂತರ  ಚಕ್ಕುಲಿ ಒರಳಲ್ಲಿ, ಹಿಟ್ಟನ್ನು ತುಂಬಿ,ತಟ್ಟೆಯಲ್ಲಿ ಚಕ್ಕುಲಿಯನ್ನು ಒತ್ತಿ, ಒಮ್ಮೆಗೆ  ಐದಾರು  ಚಕ್ಕುಲಿಯನ್ನು ಕಾದ  ಎಣ್ಣೆಯಲ್ಲಿ [ಮಧ್ಯಮ   ಉರಿಯಲ್ಲಿ]ಹಾಕಿ ಕರಿಯಬೇಕು.




* ಸುಲಭವಾಗಿ  ತಯಾರಿಸಬಹುದಂತಹ  ಈ ಚಕ್ಕುಲಿ, ಮಕ್ಕಳು ಮುದುಕರೂ ಎಲ್ಲರೂ   ಕುಶಿಯಿಂದ ಸವಿಯಬಹುದು.









Wednesday, November 16, 2011

cabbage rice / ಕ್ಯಾಬೇಜ್ ಪಲಾವ್ / ರೈಸ್



ಕ್ಯಾಬೇಜ್  ಪಲಾವ್ / ರೈಸ್

ಬೇಕಾಗುವ  ಪದಾರ್ಥಗಳು: 
ಜೀರಿಗೆ ಅಕ್ಕಿ   -   ಒಂದು ಉದ್ದ ಲೋಟ 
ತೆಳುವಾಗಿ ಕತ್ತರಿಸಿದ ಎಲೆ ಕೋಸು   -  ನಾಲ್ಕು ಬಟ್ಟಲು 
ಹಸಿ ಬಟಾಣಿ  -  ಅರ್ದ ಬಟ್ಟಲು 
ಸಾಸಿವೆ      -   ಕಾಲು ಚಮಚ  
ಜೀರಿಗೆ      -     ಕಾಲು ಚಮಚ 
ಶೇಂಗ ಬೀಜ   -    ಸ್ವಲ್ಪ 
ಬೆಳ್ಳುಳ್ಳಿ ,ಶುಂಟಿ  ಪೇಸ್ಟ್   - ಒಂದು ಚಮಚ    ಖಾರ ಪುಡಿ       -    ಎರಡು ಚಮಚ 
ಧನಿಯ ಪುಡಿ    - ಒಂದು ದೊಡ್ಡ ಚಮಚ                                        ಅರಿಶಿನ ಪುಡಿ  -    ಸ್ವಲ್ಪ
ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದು -  ಸ್ವಲ್ಪ                                                     ಉಪ್ಪು        -     ರುಚಿಗೆ ತಕ್ಕಷ್ಟು
    ಎಣ್ಣೆ      -  ಒಂದು ಅರ್ದ ಸವಟು , ಹಾಗು ಒಂದು ದಪ್ಪ ತಳದ ಕುಕ್ಕರ್ ಪ್ಯಾನ್.
ಮಾಡುವ  ವಿದಾನ:   ಕುಕ್ಕರ್  ಪ್ಯಾನ್ ನಲ್ಲಿ  ಎಣ್ಣೆ ಹಾಕಿ, ಸಾಸಿವೆ, ಜೀರಿಗೆ  ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ದಾಲ್ಚಿನಿ ಎಲೆ, ಶುಂಟಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ   ಬಾಡಿಸಿಕೊಂಡು, ಹೆಚ್ಚಿಟ್ಟ ಎಲೆ ಕೋಸು ಸೇರಿಸಿ ಚನ್ನಾಗಿ  ಹುರಿದು ಕೊಳ್ಳುವುದು. ಈಗ  ಇದಕ್ಕೆ, ತೊಳೆದಿಟ್ಟ ಅಕ್ಕಿಯನ್ನು ಹಾಕಿ  ಮೆತ್ತಗೆ ಕೈಯಾಡಿಸಬೇಕು. ನಂತರ ಅರಿಶಿನ   ದನಿಯಪುಡಿ, ಖಾರ ಪುಡಿ  ಉಪ್ಪನ್ನು ಸೇರಿಸಿಕೊಂಡು, ಅಕ್ಕಿಯ ಎರಡರಷ್ಟು ನೀರನ್ನು ಹಾಕಿ, ಬೇಯಿಸಬೇಕು.ಒಂದು ಕುದಿ ಬಂದ ಬಳಿಕ    ಗಟ್ಟಿ ಮುಚ್ಚಳವನ್ನು ಹಾಕಿ, 'ದಂ' ಕೊಟ್ಟು ಇಪ್ಪತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಸಾಕು, ಅನ್ನಸವಿಯಲುಸಿದ್ಧವಾಗುತ್ತದೆ.                                                      


 * ಶೇಂಗಾ ಬೀಜವನ್ನು ಪ್ರತ್ಯೇಕವಾಗಿ  ಹುರಿದುಕೊಂಡು ಕೊನೆಯಲ್ಲಿ ಸೇರಿಸಬೇಕು. ತಿನ್ನುವ ಮೊದಲು ಲಿಂಬೆ ರಸ ಹಿಂಡಿ ಕೊತ್ತಂಬರಿ ಸೋಪ್ಪಿನ್ನಿಂದ  ಅಲಂಕರಿಸಬೇಕು.







                     


Friday, November 11, 2011

' ಕಷಾಯ' ದ ಪುಡಿ

                         ' ಕಷಾಯ' ದ ಪುಡಿ 

'ಕಷಾಯ' ಅಂದ ಕೂಡಲೇ ಮನಸ್ಸಿನಲ್ಲಿ  ಒಂದು ಸಲ, ಜ್ವರ ಬಂದವರು ಅಥವಾ ಹುಷಾರಿಲ್ಲದವರು ಕುಡಿಯುವುದು 
ಅಂತ ಅನ್ನಿಸಿಸುತ್ತದೆ, ಅನ್ನಿಸುವುದು ಸಹಜವೇ. ಸಾಕಷ್ಟು ಜನರು 'ಕಷಾಯ' ಎಂದರೆ AVSHADHI  ಅಂತಾನೆ 
ತಿಳಿದಿದ್ದಾರೆ. ನಿಜ  ಹೇಳಬೇಕಂದರೆ, ಒಂದು ರೀತಿಯಲ್ಲಿ, ದೇಹಕ್ಕೆ ಯಾವುದೇ ತರಹದ SIDE EFFECT ಇಲ್ಲದ ಸ್ವದೇಶೀ HOT DRINKS ಅಂತಾ ವರ್ಣಿಸಬಹುದು.  ನಮ್ಮ ಮನೆಯವರಿಗೆ ಮೂರು ವರ್ಷಕೊಮ್ಮೆ ಒಂದು ಊರಿಂದ ಇನ್ನೊದು ಊರಿಗೆ ವರ್ಗವಾಗುವ ಕೆಲಸ. ನಮ್ಮ ಅದೃಷ್ಟ ವೇ ಅನ್ನಬೇಕು,ತಾಯಿ ಮಾರಿಕಾಂಬೆ ಯು  ನೆಲಸಿರುವ  ಶಿರಶಿಯಲ್ಲಿ , ನಮಗೆ ಮೂರು ವರ್ಷ ಕಳೆಯುವ ಭಾಗ್ಯ ನಮ್ಮದಾಯಿತು.  ಊರೇನೂ ತುಂಬಾ ಪುಟ್ಟದು, ಆದರೆ ಅಲ್ಲಿಯ ಜನರ ಆಥಿತ್ಯ, ಮಾರಿಕಾಂಬೆ ಯ ಮಹಿಮೆಯಷ್ಟೇ  ಅಪಾರ. ಹೇಳಿ  ಕೇಳಿ' ಶಿರಸಿ' ಮಲ್ನಾಡು 
ಪ್ರದೇಶ, ಮಳೆ ಚಳಿ ಸ್ವಲ್ಪ ಜಾಸ್ತಿಯೇ. ಅಲ್ಲಿಯ ವಿಶೇಷತೆ  ಅಂದರೆ ,ಅತಿಥಿ ಗಳು  ಮನೆಗೆ  ಬಂದಾಗ, ಆಸರಿಕೆ ಗೆ 
ಏನು ಮಾಡುವುದು ಅಂತ ಕೇಳ್ತಾರೆ, ಕೂಡಲೇ 'ಕಷಾಯ' ಆಗಬಹುದಾ ಅಂತಾರೆ. ಚಹಾ/ಕಾಫಿ  ಆಕಡೆ   ಸ್ವಲ್ಪ ಮಟ್ಟಿಗೆ  ಕಡಿಮೆ.'ಕಷಾಯ'ವನ್ನು ಹಲವಾರು ವಿಧದಲ್ಲಿ  ಅಲ್ಲಿಯ ಜನರು  ತುಂಬಾ ಚನ್ನಾಗಿಯೇ ತಯಾರಿಸುತ್ತಾರೆ. ನಾವು ಶಿರಶಿಯಲ್ಲಿದಾಗ, ನಾನೂ ಕಷಾಯವನ್ನು ಮಾಡುವುದನ್ನು ಕಲಿತು ಬಿಟ್ಟೆ. ಹಾಗೂ ನಮ್ಮ ಮನೆಯವರಿಗೂ ಚಾ/ಕಾಫಿ ಸ್ವಲ್ಪ ಕಡಿಮೆ ಮಾಡಿ ಕಷಾಯವನ್ನು 


ಕುಡಿಸಲು ಪ್ರಾರಂಬಿಸಿಬಿಟ್ಟೆ.. ಆ   'ಕಷಾಯ'ದ ಪುಡಿ ಹಾಗು ಅದರಿಂದ  ಪೇಯವನ್ನು ಹೇಗೆ ತಯಾರಿಸುವುದು ಅಂತ ಹೇಳುತ್ತೇನೆ.

ಕಷಾಯ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು:

 
 ಕೊತ್ತಂಬರಿ ಬೀಜ -  ಅರ್ದ ದೊಡ್ಡ ಚಮಚ
 ಜೀರಿಗೆ -    ಒಂದು ದೊಡ್ಡ ಚಮಚ 
 ಕಾಳುಮೆಣಸು    -  ನಾಲ್ಕು
 ಯಾಲಕ್ಕಿ   -   ಎರಡು[ ಸಿಪ್ಪೆ ಸಹಿತ ಹಾಕಬಹುದು]
 ಚಕ್ಕೆ      -  ಒಂದು ಸಣ್ಣ ತುಂಡು
 ಲವಂಗ  -  ಒಂದು
 ಸೊಂಪು ಕಾಳು  -  ಕಾಲು ಚಮಚ [ಬಡೇಸೊಂಪು]
ಮೇಲೆ ತಿಳಿಸಿದ ಎಲ್ಲಾ  ಪದಾರ್ಥಗಳ್ಳನ್ನು  ಎಣ್ಣೆ  ಹಾಕದೇ, ಒಂದೊಂದಾಗಿ 'ಗಂ' ಅಂತ  ವಾಸನೆ ಬರುವವರೆಗೂ
ಹುರಿದುಕೊಂಡು, ತಣಿದ ಬಳಿಕ ಮಿಕ್ಸಿಯಲ್ಲಿ  ಹಾಕಿ ನಯವಾಗಿ ಪುಡಿ ಮಾಡಿಕೊಂಡು , ಗಟ್ಟಿ ಮುಚ್ಚಳದ  ಬಾಟಲಿಯಲ್ಲಿ  ಹಾಕಿಡಬೇಕು.




ಕಷಾಯ ಮಾಡುವ ರೀತಿ:
ಒಂದು ಅರ್ದ ಲೋಟ ನೀರನ್ನು ಕಾಯಲು  ಇಡಬೇಕು, ಅದಕ್ಕೆ ಒಂದು ಚಮಚ ಕಷಾಯದ ಪುಡಿಯನ್ನು ಹಾಕಿ 
 ಚನ್ನಾಗಿ ಕುದಿಸಬೇಕು, ನಂತರ ಕಾಲು ಲೋಟ ಹಾಲು ಅರ್ದ  ಚಮಚ ಸಕ್ಕರೆ ಯನ್ನು ಸೇರಿಸಿ ಕುದಿಸಿದರೆ ರುಚಿ ರುಚಿಯಾದ, ದೇಹಕ್ಕೆ ಯಾವುದೇ  ತೊಂದರೆಯಾಗದ ,ಶೀತ- ಕೆಮ್ಮು ನೆಗಡಿ ಗೆ ಉಪಯುಕ್ತ ವಾಗುವಂಥ, ಚಳಿ-ಮಳೆ ಗಾಲದಲ್ಲಿ  ಕುಡಿಯಲು ಉತ್ತಮವಾದ  ಕಷಾಯ ಸಿದ್ಧ.

Wednesday, November 9, 2011

ಬೆಟ್ಟದ ನೆಲ್ಲಿಕಾಯಿ

                                    ಬೆಟ್ಟದ ನೆಲ್ಲಿಕಾಯಿ





Benefits of Amla
The powder of the dried amla fruit is an effective remedy of hyperacidity, ulcers and blood impurities. It is also used both internally and externally as a decoction and paste. Some of the common uses of amla fruit are as under:

Amla strengthens the body, expel toxins from the body and improves defense mechanism of the body.

It is an essential vitamin to improve eye sight

Weakness of body, heart and mind shall be dispelled by taking frsh amla juice in betwen meals.

Massaging the head with amla oil, induces sound sleep and is good for hair. prevents premature graying of hair.

Wash eyes daily, in the morning with amla water, soaked in water and drink the water to improve the eyesight and remove constipation.

Insert 2-4 amla juice drops into each nostril to cure bleeding for nose.

Regulates Blood Sugar Useful for Cough, Bronchitis, Asthma
 Amla cleanses the mouth, strengthens the teeth
Its decoction is used in hyperacidity and with honey as an anthelmintic. The presence of Amla resulted in an enhanced cell survival, decreased free radical production and higher antioxidant levels similar to that of control cells.

There are various classic ayurvedic preparations, such as chyawanprash in which amla is used as a chief ingredient. It help improve intelligence and memory power. Triphala and Brahmrasayana are other classic medicine in which amla is being used since time immemorial.                                             


  1. Acidity
  2. Breast milk
  3. Burning sensation of feet
  4. Cough and Cold
  5. Constipation
  6. Cuts, wounds & burns
  7. Diabetes
  8. Dysentery
  9. Diarrhoea
  10. Dandruff
  11. Hair care
  12. Headache
  13. Hoarse throat
  14. Indigestion
  15. Livertonics/Protectives
  16. Menstrual disorders
  17. Mental health
  18. Fever
  19. Fungal infections
  20. Immunity
  21. Hair care
  22. Headache
  23. Hoarse throat
  24. Indigestion
  25. Livertonics/Protectives
  26. Menstrual disorders
  27. Mental health
  28. Pregnancy care
  29. Stomach ache
  30. Scabies
  31. Urinary problems
  32. Vomiting
  33. Worms

ನೆಲ್ಲಿಕಾಯಿಯನ್ನು  ಹಸಿಯಾಗಿಯೂ ಅಥವಾ  ಒಣಗಿಸಿಯೂ ಹಲವಾರು ವಿಧದಲ್ಲಿ 
ಉಪಯೋಗಿಸಬಹುದು.


 ನೆಲ್ಲಿಕಾಯಿ ಸಾರು/ಆವಳೆ ಕ್ಹಡಿ

ಮಾಡಲು  ಏನೇನು  ಬೇಕು..?
ನೆಲ್ಲಿಕಾಯಿ  -  ಐದು
ಕಾಯಿತುರಿ -  ಒಂದು ಹೋಳು
                                                         ಹುರಿದ ಮೆಣಸಿನ ಕಾಯಿ -  ನಾಲ್ಕು
                                                           ಜೀರಿಗೆ   - ಒಂದು ಚಮಚ
                                        ಎಣ್ಣೆ   -  ಒಂದು ಚಮಚ
                                                            ಸಾಸಿವೆ , ಕರಿಬೇವು  ಹಾಗು ರುಚಿಗೆ ಉಪ್ಪು.


ಮಾಡುವ   ವಿದಾನ:
ಮೊದಲು ನೆಲ್ಲಿಕಾಯಿಯನ್ನು  ಬೇಯಿಸಿಟ್ಟಿ ಕೊಳ್ಳಬೇಕು. ಜೀರಿಗೆಯನ್ನು  ಸ್ವಲ್ಪ ತುಪ್ಪದಲ್ಲಿ ಹುರಿದಿಕೊಂಡು, ಅದರೊಟ್ಟಿಗೆ
ಕಾಯಿತುರಿ, ಹುರಿದಮೆಣಸು, ಬೇಯಿಸಿದ ನೆಲ್ಲಿಕಾಯಿಯನ್ನು ಸೇರಿಸಿ ಚನ್ನಾಗಿ ನಯವಾಗಿ ರುಬ್ಬಿಕೊಳ್ಳಬೇಕು. ಮಸಾಲೆ ರುಬ್ಬುವಾಗ  ನೆಲ್ಲಿಕಾಯಿ ಬೇಯಿಸಿದ ನೀರನ್ನು ಉಪಯೋಗಿಸಿಕೊಳ್ಳಬೇಕು.ನಂತರ ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಬೇಕಾದಷ್ಟೆ    ನೀರನ್ನು  ಹಾಕಿ ತೆಳಗ್ಗೆ ಮಾಡಿ ಉಪ್ಪನ್ನು ಸೇರಿಸಿ ಕುದಿಸಬೇಕು. [ಕುದಿ ಬಂದು ಒಡೆಯದಂತೆ ನೋಡಿಕೊಳ್ಳಬೇಕು]. ಕೊನೆಯಲ್ಲಿ  ಸಾಸಿವೆ ಕರಿಬೇವು/ ಜಜ್ಜಿದ ಬೆಳ್ಳುಳ್ಳಿ ಒಗ್ಗರಣೆ ಯನ್ನು ಹಾಕಬೇಕು.


ನೀರನ್ನು ಕಡಿಮೆ ಉಪಯೋಗಿಸಿ ಗಟ್ಟಿಯಾಗಿ ರುಬ್ಬಿದರೆ ನೆಲ್ಲಿಕಾಯಿ ಚಟ್ನಿ ಆಗುತ್ತದೆ.  ಇದೇ ಚಟ್ನಿಗೆ ಸ್ವಲ್ಪ ಗಟ್ಟಿ ಸಿಹಿ ಮೊಸರನ್ನು ಬೆರಸಿದರೆ ನೆಲ್ಲಿಕಾಯಿ ತಂಬುಳಿ ಸಿದ್ಧ.






FRUITS



ದಾಳಿಂಬೆ  ಹಣ್ಣು /  POMEGRANATE FRUIT

 ಈ ದಾಳಿಂಬೆ ಹಣ್ಣನ್ನು  ರುಚಿಯಾಗಿ ತಿನ್ನೋದಕ್ಕಿಂತ ಆರೋಗ್ಯದ ಹಿತಕ್ಕಾಗಿ ತಿನ್ನೋ ಜನರೇ, ಹೆಚ್ಚು. ಯಾಕಂದ್ರೆ ಈ
 ಹಣ್ಣಲ್ಲಿ ಇರುವ ಆರೋಗ್ಯದ ಗುಟ್ಟು ಅಷ್ಟಿಷ್ಟಲ್ಲ. ಅದು ಬಿಡಿಸಿಕೊಂಡು ತಿನ್ನ ಬೇಕಲ್ಲಾ ಅನ್ನೋ ಒಂದೇ ಕಾರಣಕ್ಕೆ, ದಾಳಿಂಬೆ ಅಂದ್ರೆ ಒಂಥರಾ ನೋಡೋ ಜನರೇ ಹೆಚ್ಚು. ಸಾಕಷ್ಟು ಪೋಷಕಾಂಶಗಳ್ಳನ್ನು ಹೊಂದಿರುವ ಈ ಹಣ್ಣು ಪ್ರಕ್ರತಿ ನಮಗೊದೊಗಿಸುರುವ  NATURAL TONIC ಅಂತನೇ ಹೇಳಬಹುದು.

 ಈ  ಹಣ್ಣಿನಿಂದ  ದೊರಕುವ ಸಾಮಾನ್ಯ  ಲಾಭಗಳು:

 1. ಅತೀಸಾರ  ಭೇದಿಯಿಂದ ನರಳುವ ರೋಗಿಗಳು,ಇದರ ರಸವನ್ನು  ಸೇವಿಸುವುದರಿಂದ, ಬೇಧಿಯನ್ನು ಹತೋಟಿಗೆ
    ತರಬಹುದು.
 2. ಹೊಟ್ಟೆಗೆ ಸಂಭಂದದ ಕಾಯಿಲೆಗಳಿಗೆ, ಈ ಹಣ್ಣಿನ ರಸ ವನ್ನು ಸೇವಿಸುವುದರಿಂದ, ಕಾಯಿಲೆಗಳ್ಳನ್ನು ನಿಯತ್ರಿಸಬಹುದು.
 3. ದಾಳಿಂಬೆ ಹಣ್ಣಿನಲ್ಲಿ ರುವ ವಿಟಾಮಿನ್ ಗಳಾದ 'C', 'A' 'K', ಗಳು  ದೇಹದಲ್ಲಿ ಸೇರಿ,ದೇಹವನ್ನು ಬಲಗೊಳಿಸುತ್ತದೆ.   
4.  ಈ ಹಣ್ಣಿನಲ್ಲಿರುವ ಫೋಲಿಕ್ ಅಮ್ಲದಿಂದ, ದೇಹದಲ್ಲಿ ಕಬ್ಬಿಣ ಅಂಶ ಹೆಚಾಗುತ್ತದೆ.
 5.ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿದ್ದರೂ, ಇದರ ರಸದ ಸೇವನೆಯಿಂದ, ನಿಯಂತ್ರಿಸಬಹುದು. 
6. ಈ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿಟ್ಟರೆ,  ಬೇಕಾದಾಗ ಕಡಿ/ ಸಾರನ್ನು  ಮಾಡಿಕೊಳ್ಳಬಹುದು.
7. ಈ ಹಣ್ಣಿನ ಗಿಡದ,ಕುಡಿ ಎಲೆಗಳಿಂದ ರುಚಿಯಾದ ತಂಬಳಿ ಯನ್ನು ತಯಾರಿಸಿಕೊಳ್ಳಬಹುದು.
 ಕೊನೆಯದಾಗಿ,  ಸಂತೋಷದ ಸಂಗತಿಯೆಂದರೆ ಇತ್ತೀಚಿನ  ಸಂಶೋಧನೆಯ ಪ್ರಕಾರ, ಮಹಾಮಾರಿಯಾಗಿ ಹರಡುತಿರುವ
 ಕ್ಯಾನ್ಸರ್ [ಸ್ತನ, ಚರ್ಮ ] ರೋಗವನ್ನು ಕೂಡ ಈ ರಸದ ಸೇವನೆಯಿಂದ  ನಿಯಂತ್ರಣಕ್ಕೆ ತರಬಹವುದಂತೆ.
  ಒಟ್ಟಿನಲ್ಲಿ ' ದಾಳಿಂಬೆ ಹಣ್ಣು ' ಪ್ರಕ್ರತಿ ನಮಗೆ ನೀಡಿದ ದಿವ್ಯೋಷಧ ವೆಂದೇ ಹೇಳಬಹುದು.

Friday, November 4, 2011

ಗೆಣಸಿನ ಬಜ್ಜಿ

                   ಗೆಣಸು    
                                      SWEET POTATO IN SOIL     


Benefits of Sweet Potato

The sweet potato is a little more difficult to digest than the white potato. It contains a great deal of vitamin A and is a good source of niacin.

Nutrients in one pound

Calories
419
Iron
2.7 mg
Protein
6.2 g
30,030 I.U.
Fat
1.5 g
0.37 mg
Carbohydrates
96.6 g
0.23 mg
Calcium
117 mg
2.8 mg
Phosphorus
173 mg
Ascorbic acid
77 mg

ಗೆಣಸಿನ  ಬಜ್ಜಿ [ಕಣಂಗಾ ಬಜೋ]

 ತಯಾರಿಸಲು ಏನೇನು ಬೇಕು..?

ಸಿಹಿ ಗೆಣಸು  - ಒಂದು ಹದ ಗಾತ್ರದ್ದು. ಸಿಪ್ಪೆಯನ್ನು ತೆಗೆದು ತೆಳುವಾದ ಬಿಲ್ಲೆ ಗಳ್ಳನಾಗಿ ಮಾಡಿ ನೀರಿನಲ್ಲಿ ಹಾಕಿಡಬೇಕು.
ಕಡ್ಲೆ ಹಿಟ್ಟು , ಜೀರಿಗೆ , ಹಿಂಗು , ಕೆಂಪು ಮೆಣಸಿನ ಪುಡಿ , ಉಪ್ಪು ಚಿಟಿಕೆ ಅರಿಶಿನ ಹಾಗು ಕಲಸಲು ನೀರು., ಮತ್ತು ಕರಿಯಲು
 ಎಣ್ಣೆ.





 ಮಾಡುವ  ರೀತಿ:
 ಕಡ್ಲೆ ಹಿಟ್ಟಿನೊಂದಿಗೆ ಜೀರಿಗೆ ,ಹಿಂಗು, ಕಾರಪುಡಿ, ಅರಿಶಿನ, ಉಪ್ಪುನ್ನು ಹಾಕಿ,  
 ಸ್ವಲ್ಪ ನೀರನ್ನು ಬೆರಸಿ,  ಗ್ರೆವಿ ಯನ್ನು ತಯಾರಿಸಿಕೊಳ್ಳಬೇಕು [ಗ್ರೇವಿ ತುಂಬಾ
 ನೀರಗಿರಬಾರದು].
 ಬಾಣಲೆಯಲ್ಲಿ ಎಣ್ಣೆ ಕಾದ ಬಳಿಕ, ಮದ್ಯಮ ಗಾತ್ರದ ಉರಿಯಲ್ಲಿ, ಕತ್ತರಿಸ್ಸಿಟ್ಟ ಗೆಣಸಿನ ಬಿಲ್ಲೆ ಗಳ್ಳನ್ನು ಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಹಾಕಿ ಕರಿಯಬೇಕು.



* ಚಳಿಗಾಲದಲ್ಲಿ, ಸಂಜೆಯ ಕಾಫಿ/ ಚಹ ದೊಂದಿಗೆ ಬಿಸಿ ಬಿಸಿ ಗೆಣಸಿನ ಬಜ್ಜಿ ತಿನ್ನಲು ಬಲು ರುಚಿಯಾಗಿರುತ್ತದೆ.


PAALAK SOUP


                                           ಪಾಲಕ್  ಸೂಪ್  


ಏನೇನು ಬೇಕು ...? 

ಪಾಲಕ್  ಎರಡು ಕಟ್ಟು [ಸೊಪ್ಪನ್ನು ಬಿಡಿಸಿ  ತೊಳೆದಿಟ್ಟುಕೊಳ್ಳಬೇಕು.]
ಟೊಮೇಟೊ   ಒಂದು 
ಈರುಳ್ಳಿ  ಒಂದು 
ಬೆಳ್ಳುಳ್ಳಿ  ಆರು ಎಸಳು 
ಕಾಳುಮೆಣಸಿನ ಪುಡಿ  ಸ್ವಲ್ಪ 
ಶುಂಟಿ   ಅರ್ದ ಇಂಚು 
ಸಕ್ಕರೆ  ಅರ್ದ ಚಮಚ 
ತುಪ್ಪ ನಾಲ್ಕು ಚಮಚ 
ಉಪ್ಪು  ರುಚಿಗೆ ತಕ್ಕಷ್ಟು.


ಮಾಡುವ ಕ್ರಮ:
ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ಹೆಚ್ಚಿದ ಟೊಮೇಟೊ ಈರುಳ್ಳಿ,ಬೆಳ್ಳುಳ್ಳಿ ಹಾಕಿ ಸ್ವಲ್ಪ ಕೈಯಾಡಿಸಬೆಕು. ನಂತರ ಇದಕ್ಕೆ ಶುಂಟಿ, ಪಾಲಕ್ ಸೊಪ್ಪು ಹಾಕಿ ಪುನಃ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು.ಇವೆಲ್ಲವನ್ನು ರುಬ್ಬಿಕೊಂಡು ಇದಕ್ಕೆ ಕಾಳುಮೆಣಸಿನಪುಡಿ, ಸಕ್ಕರೆ, ಉಪ್ಪು ಹಾಕಿ ಕುದಿಸಬೇಕು.ಹೀಗೆ ಸಿದ್ದವಾದ ಬಿಸಿ ಬಿಸಿ ಸೂಪ್ ಗೆ ಬೆಣ್ಣೆಯನ್ನು ಮೇಲಿನಿಂದ ಹಾಕಿ ಕುಡಿಯಬೇಕು.
















ಸಬ್ಬಸಿಗೆ ಸೊಪ್ಪಿನ ಪಲಾವ್



 ಸಬ್ಬಸಿಗೆ ಸೊಪ್ಪಿನ ಪುಲಾವ್ / ಚಿತ್ರಾನ್ನ 

                                  


         ಸಬ್ಬಸಿಗೆ ಸೊಪ್ಪು 
      









ingredients:
ಅಕ್ಕಿ      -     ಒಂದು ಉದ್ದ  ಲೋಟ 
ಸಬ್ಬಸಿಗೆ ಸೊಪ್ಪು  -  ಒಂದು ಕಟ್ಟು[ಸೊಪ್ಪನ್ನು ಬಿಡಿಸಿ ನೀರಿನಲ್ಲಿ ಹಾಕಿಡಬೇಕು]
*ಹಸಿರು ಮಸಾಲೆ   -    ಒಂದು ಬಟ್ಟಲು 
 ಹಸಿ ತರಕಾರಿ       -  ಒಂದು ಬಟ್ಟಲು 
ಒಗ್ಗರಣೆಗೆ:  ಸಾಸಿವೆ, ಕರಿಬೇವು, ಈರುಳ್ಳಿ,ಟೊಮೇಟೊ, ಗೋಡಂಬಿ/ ಶೇಂಗ ಬೀಜ.
ಉಪ್ಪು  -  ರುಚಿಗೆ  ತಕ್ಕಷ್ಟು, ಹಾಗು ಎಣ್ಣೆ.                                                           


*ಹಸಿರು ಮಸಾಲೆ ತಯಾರಿಸಲು
ಕಾಯಿ ತುರಿ  -  ಒಂದು ಬಟ್ಟಲು
ಹಸಿಮೆಣಸು   -  ಎಂಟರಿಂದ ಹತ್ತು 
ಕೊತ್ತಂಬರಿಸೊಪ್ಪು  -  ಒಂದು ಬಟ್ಟಲು
ಹಸಿ ಶುಂಟಿ   -  ಒಂದಿಂಚು
ಹುಣಸೆ    -  ಸ್ವಲ್ಪ
ಉಪ್ಪು 
ಎಲ್ಲಾ ಪದಾರ್ಥಗಳನ್ನು  ಮಿಕ್ಸಿಯಲ್ಲಿ  ಹಾಕಿ ರುಬ್ಬಿದರೆ,{ನೀರು ಬೇಕಾದಷ್ಟೆ ಹಾಕಬೇಕು}ಹಸಿರು ಮಸಾಲೆ ರೆಡಿ.

ಸಬ್ಬಿಸಿಗೆ ಸೊಪ್ಪಿನಿಂದ ಪಲಾವ್ ಮಾಡುವ ವಿದಾನ:

ಕುಕ್ಕರ್ ಪ್ಯಾನ್ ನಲ್ಲಿ  ಎಣ್ಣೆಯನ್ನು ಹಾಕಿ, ಬಿಸಿ ಆದ ಬಳಿಕ ಒಗ್ಗರಣೆಗೆ ತಿಳಿಸಿದ ಪದಾರ್ಥಗಳ್ಳನ್ನು ಹಾಕಿ, ಒಗ್ಗರಣೆ ಯನ್ನು ಮಾಡಿಕೊಳ್ಳಬೇಕು. ನಂತರ ಅದಕ್ಕೆ,
ರುಬ್ಬಿಟ್ಟ   ಮಸಾಲೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಈಗ ತೊಳೆದಿಟ್ಟ  ಸೊಪ್ಪು, ಹಸಿ ತರಕಾರಿ  ಹಾಗು ಅಕ್ಕಿಯನ್ನು ಹಾಕಿ,  ಮಿಕ್ಸ್ ಮಾಡಿಕೊಳ್ಳಬೇಕು, ರುಚಿಗೆ ಉಪ್ಪನ್ನು ಬೆರಸಿ, ಎರಡುವರೆ ಲೋಟ ನೀರನ್ನು ಸೇರಿಸಿ, ಮುಚ್ಚಳ ವನ್ನು ಮುಚ್ಚಿ ಎರಡು ಸಿಟಿ ತೆಗೆದರೆ ಆರೋಗ್ಯಕರವಾದ ಸಬ್ಬಸಿಗೆ ಸೊಪ್ಪಿನ ಅನ್ನ/ ಪಲಾವ್ ತಯಾರ್.



* ಬಡಿಸುವಾಗ  ಲಿಂಬೆ ರಸವನ್ನು  ಹಿಂಡಿಕೊಂಡರೆ , ತಿನ್ನುವಾಗ ಮತ್ತಷ್ಟು ರುಚಿಯಾಗಿರುತ್ತದೆ.