ಸಾಮಗ್ರಿಗಳು :
ಈರುಳ್ಳಿ ಎರಡು ಅಥವಾ ಮೂರು
ಗರಂ ಮಸಾಲ ಪುಡಿ ಒಂದು ಚಮಚ
ಏಲಕ್ಕಿ ಎರಡು
ಈರುಳ್ಳಿ ಎರಡು ಅಥವಾ ಮೂರು
ಶುಂಟಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ
ಟೊಮೇಟೊ ಎರಡು
ಸ್ವಲ್ಪ ಕೊತಂಬರಿ ಸೊಪ್ಪು
ಸ್ವಲ್ಪ ಪುದಿನ ಸೊಪ್ಪು ಗರಂ ಮಸಾಲ ಪುಡಿ ಒಂದು ಚಮಚ
ಖಾರದ ಪುಡಿ ಒಂದು ಚಮಚ
ಧನಿಯ ಪುಡಿ ಒಂದು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚೆಕ್ಕೆ ಒಂದಿಂಚು
ಲವಂಗ ಮೂರು
ಏಲಕ್ಕಿ ಎರಡು
ಗೋಡಂಬಿ ಅಥವಾ ಶೇಂಗ ಬೀಜ ಎಂಟರಿಂದ ಹತ್ತು
ಪುಲಾವ್ ಎಲೆ ಒಂದೆರಡು
ಲಿಂಬೆ ಅರ್ದ ಭಾಗ
ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ :
ಮೊದಲು ಕೂಕರ್ ನಲ್ಲಿ ತುಪ್ಪ ಹಾಗು ಎಣ್ಣೆಯನ್ನು ಹಾಕಬೇಕು
ಎಣ್ಣೆ ಬಿಸಿ ಆದ ಬಳಿಕ ಆದಕ್ಕೆ ಚೆಕ್ಕೆ ಲವಂಗ ಏಲಕ್ಕಿ ಪುಲಾವ್ ಎಲೆಯನ್ನು ಹಾಕಿ ಹುರಿಯಬೇಕು .
ನಂತರ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬಾಡಿಸಬೇಕು,ಆಮೇಲೆ ಉದ್ದಕ್ಕೆ ಹೆಚಿದ್ದ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು,ಒಟ್ಟಿಗೆ ತುಂಡು ಮಾಡಿದ ಟೊಮೇಟೊವನ್ನು ಹಾಕಬೇಕು. ಈಗ ಒಂದಂದಾಗಿ ಪುಡಿಗಳನ್ನು ಹಾಕಬೇಕು {ಅರಿಶಿನ,ಕಾರಪುಡಿ ,ದನಿಯ ಪುಡಿ ಉಪ್ಪು } ನಂತರ ತುಂಡು ಮಾಡಿಟ್ಟ ಕೊತ್ತಂಬರಿಸೊಪ್ಪು ಹಾಗು ಪುದಿನಾವನ್ನು ಸೇರಿಸಬೇಕು. ಈಗ ಕೊನೆಯಲ್ಲಿ ತೂಳೆದಿಟ್ಟ ಬಸಮತಿ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಂದಕ್ಕೆ ಎರಡು ಅಳತೆ ನೀರು ಹಾಕಬೇಕು.ಮೂರು ಸೀಟಿ ಬರುವವರೆಗೆ ಬೇಯಿಸಿದರೆ ರುಚಿ ರುಚಿಯಾದ ಮಸಾಲ ವೆಜ್ ರೈಸ್ ಸವಿಯಲು ಸಿದ್ಧ.
ಸೂಚನೆ : ಬಡಿಸುವಾಗ ಲಿಂಬೆ ರಸ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸ ಬೇಕು.
ಪೇಜ್ ತುಂಬಾ ಚೆನ್ನಾಗಿ ಬಂದಿದೆ
ReplyDeleteಅಡಿಗೆ ಮಾಡುವ ವಿಧಾನವನ್ನು ಫೋಟೋಗಳ
ಮುಖಾಂತರ ತುಂಬಾ ಚೆನ್ನಾಗಿ ತೋರಿಸಲಾಗಿದೆ.
ಅಭಿನಂದನೆಗಳು
ರಾಡಿಶ್ ಮೈ ಹಾರ್ಟ್ ಬೀಟ್
ಧನ್ಯವಾದಗಳು, ಇದೇ ರೀತಿ ಅಬಿಪ್ರಾಯಗಳನ್ನು ತಿಳಿಸುತಿರಿ .
ReplyDelete