ಶೇಂಗಾ ಬೀಜ _ 1 ಕಪ್
ಟೊಮೇಟೊ _ 2
ಈರುಳ್ಳಿ - 1
ಬೆಳ್ಳುಳ್ಳಿ - 5 ಎಸಳು
ಕೆಂಪು ಮೆಣಸಿನ ಪುಡಿ - 1 ಚಮಚ
ಜೀರಿಗೆ - 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಜೀರಿಗೆ .
ಮಾಡುವ ವಿದಾನ :
ಮೊದಲು ಶೇಂಗಾ, ಟೊಮೇಟೊ, ಈರುಳ್ಳಿ, ಬೆಳ್ಳುಳ್ಳಿ ಕೆಂಪು ಮೆಣಸಿನ ಪುಡಿ, ಜೀರಿಗೆ, ಉಪ್ಪು ಹಾಕಿ ರುಬ್ಬಿ ಕೊಳ್ಳಬೇಕು, ಆಮೇಲೆ ಜೀರಿಗೆ ಸಾಸಿವೆ ಒಗ್ಗರಣೆ ಮಾಡಿ ಹಾಕಿ ಚೆನ್ನಾಗಿ ಕಲಸಿದರೆ, ಹಸಿ ಶೇಂಗ ಚಟ್ನಿ ರೆಡಿ .
ಈ ಚಟ್ನಿ ಚಪಾತಿ ಪರಾತಾ ಅನ್ನದೊಟ್ಟಿಗೆ ತಿನ್ನಲು ಒಳ್ಳೆಯದಾಗುತ್ತದೆ.
ಆಹಾ ಇದನ್ ನೋಡಿ ನನ್ನ ಹೊಟ್ಟೆಯೊಳಗಿನ ಎಲ್ಲ ಆಮ್ಲಗಳು ಚುರುಕಾಗಿ ಒಮ್ಮೆಲೇ ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿ ಬಿಟ್ಟಿವೆ. ಈಗ ನನಗೆ ತುಂಬಾ ಹಸಿವು ಆಗಿ ಬಿಟ್ಟಿದೆ. ನನ್ನ ಫೆವರೆಟ್ ಚಟ್ನಿ. ಇದರ ಜೊತೆ ಏನಾದ್ರು ಜೋಳದ ರೊಟ್ಟಿ ಅಥ್ವಾ ಚಪಾತಿ , ಮತ್ತು ಘಟ್ಟಿ ಮೊಸರು ಇದ್ದ ಬಿಟ್ರೆ , ಆಹಾ ಸ್ವರ್ಗ ಸುಖಾ.
ReplyDeleteತುಂಬಾ ಚೆನ್ನಾಗಿ ಬಂದಿದೆ. ಕೀಪ್ ಇಟ್ ಅಪ್
ರಾಧಿಕಾ ತನಯ
ಚಂದಿಗಡ