BLOG FOLLOWERS

Wednesday, September 28, 2011

BABY CORN MANCHURIAN




 ಬೇಕಾಗುವ  ಪದಾರ್ಥಗಳು:
 ಬೇಬಿ ಕಾರ್ನ್    -      200 ಗ್ರಾಂ 
 ಈರುಳ್ಳಿ            -     4 ರಿಂದ 5 ಸಣ್ಣಗೆ ಹೆಚ್ಚಬೇಕು
 ಹಸಿ ಮೆಣಸು     -      2  ಸಣ್ಣಗೆ ಹೆಚ್ಚಬೇಕು
 ಶುಂಟಿ ಮತ್ತು 


ಬೆಳ್ಳುಳ್ಳಿ ಪೆಸ್ಟೆ     -     1  ದೊಡ್ಡ ಚಮಚ
ರೆಡ್ ಚಿಲ್ಲಿ ಸಾಸ್   -    2  ದೊಡ್ಡ ಚಮಚ
ಸೋಯಾ ಸಾಸ್   -    1 ದೊಡ್ಡ ಚಮಚ 
ಟೊಮೇಟೊ ಕೆಚಪ್      4 ಚಮಚ
ವೀನಿಗರ್  ಅಥವಾ ಲಿಂಬೂ ರಸ  -1 ಚಮಚ 
 ಉಪ್ಪು                  - ರುಚಿಗೆ ತಕ್ಕಸ್ಟು 
ಕಾರ್ನ್ ಫ್ಲೋರ್     -   ಸ್ವಲ್ಪ
ಮೈದಾ  ಹಿಟ್ಟು      - ಸ್ವಲ್ಪ
 ಕರಿಯಲು ಎಣ್ಣೆ
 ಕಾರ ಪುಡಿ           -  1/2  ಚಮಚ
 ಕೊತ್ತಂಬರಿ ಸೊಪ್ಪು    - ಅಲಂಕಾರಕ್ಕೆ

 ಮಾಡುವ ವಿದಾನ :
  ಮೊದಲು ಬೇಬಿ ಕಾರ್ನಗಳ್ಳನ್ನು  ಚೆನ್ನಾಗಿ ತೊಳೆದು, ಒಂದಿಂಚು  ಉದ್ದಕ್ಕೆ ತುಂಡು ಮಾಡಟುಕೊಳ್ಳ ಬೇಕು,     .
. ನಂತರ ಅದ್ದಕ್ಕೆ ಸ್ವಲ್ಪ ಉಪ್ಪು ,ಮೈದಾ  ಕಾರ ಪುಡಿ  ಹಾಗು ಕಾರ್ನ್ ಫ್ಲೋರ್ ಹಾಕಿ   ಚೆನ್ನಾಗಿ ಬೇರ್ಸಿಡಬೀಕು,
  ಬಾಣಲೆ ಯಲ್ಲಿ ಎಣ್ಣೆ ಕಾಯಲು ಇಟ್ಟು, ಮಸಾಲೆ   ಹಚ್ಚಿದ ಬೇಬಿಕೊರ್ನಗಳನ್ನು ಕರಿದಿಡಬೇಕು.  
 ಬಳಿಕ, ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಒಂದಂದಾಗಿ ಸಣ್ಣಗೆ ಹೆಚ್ಚಿದ  ಈರುಳ್ಳಿ, ಹಸಿಮೆಣಸು ಹಾಗು ಶುಂಟಿ ಬೆಳ್ಳುಳ್ಳಿ  ಪೆಸ್ಟೆ
ಹಾಕಿ ಬಾಡಿಸಬೇಕು. ಚೆನ್ನಾಗಿ ಫ್ರೈ  ಆದ ಬಳಿಕ, ಕಾರಪುಡಿ, ಉಪ್ಪು, ಚಿಲ್ಲಿಸಾಸ್, ಟೊಮೇಟೊ ಕೆಚಪ್,ಸೋಯಸಾಸ್  ಹಾಕಿ ಮಗುಚಬೇಕು. ಕೊನೆಯಲ್ಲಿ ಕರಿದೆಟ್ಟ ಬೇಬಿ ಕೊರ್ನಗಳನ್ನು ಹಾಕಿ ಲೀಂಬೆ ರಸ ಹಿಂಡಿ,             ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ,ಬೇಬಿ ಕೊರ್ನ್ ಮಂಚೂರಿ ಸವಿಯಲು ಸಿದ್ದ.

1 comment:

  1. ಓ ಇದನ್ ನೋಡ್ತಾ ಇದ್ದಾಗೆ ಬಾಯಲ್ಲಿ ನೀರು ಬರ್ತಾ ಇದೆ. presentation ಅತ್ಯುತ್ತಮವಾಗಿ ಬಂದಿದೆ. ಎಲ್ಲ ಫೋಟೋಗಳು ಕೂಡ ತುಂಬಾ ಚೆನ್ನಾಗಿ ಬಂದಿದೆ. ಈಗ ತಾವು ಒಂದು ಪುಸ್ತಕ ಬರೆಯ ಬಹುದು.
    ವೆರಿ ಗುಡ್

    ರಾಧಿಕಾ ತನಯ
    ಚಂದಿಗಡ

    ReplyDelete