ಗಬ್ಬೋ [ಬಾಳೇ ದಿಂಡು ]
ಗಾಬ್ಬೆ ಉಪ್ಕರಿ
ಎಳೆ ಬಾಳೇದಿಂಡು - ೧ ಮೀಡಿಯಂ ಸೈಜಿನದ್ದು [ ಉದ್ದಕ್ಕೆ ಹೆಚ್ಹಿ ನೀರಲ್ಲಿ ಹಾಕಿಡಬೇಕು ]
ಬಟಾಟೆ -1 [ಉದ್ದಕ್ಕೆ ಹೆಚ್ಚಿ ನೀರಲ್ಲಿ ಹಾಕಿಡಬೇಕು ]
ಉಪ್ಪು - ರುಚಿಗೆ ತಕ್ಕಷ್ಟು
ಕಾಯಿ ತುರಿ - 2 ದೊಡ್ಡ ಚಮಚ
ಎಣ್ಣೆ - 1 ಚಮಚ
ಸಾಸಿವೆ -1 /2 ಚಮಚ
ಉದ್ದಿನ ಬೇಳೆ -1 /2 ಚಮಚ
ಒಣ ಮೆಣಸು - 2 ರಿಂದ 3
ಕರೀಬೇವು -1 ಗರಿ
ಮಾಡುವ ವಿಧಾನ :
ಮೊದಲು ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಳ್ಳುವುದು, ನಂತರ ಹೇಚಿಟ್ಟ ಬಾಳೆದಿಂಡು ಹಾಗು ಬಟಾಟೆ ಯನ್ನು ಹಾಕಿ ,ಸ್ವಲ್ಪ ಉಪ್ಪು ಹಾಗು ನೀರನ್ನು ಚಿಮುಕಿಸಿ ಮುಚ್ಚಿಡಬೇಕು. ಬೆಂದ ಬಳಿಕ ಕಾಯಿತುರಿ ಹಾಕಿ ಚೆನ್ನಾಗಿ ಮಗುಚಿದರೆ ಗಬ್ಬೆ ಉಪ್ಕರಿ ಸವಿಯಲು ಸಿದ್ದ .
ಗಾಬ್ಬೆ ಉಪಕರಿ ತುಂಬಾ ಚೆನ್ನಾಗಿ ಬಂದಿದೆ, ಆದರೆ, ತಾವು ದಕ್ಷಿಣ ಕನ್ನಡದವರು ಅಂತ ಕೂಡಲೇ ಗೊತ್ತಾಗುತ್ತದೆ. ಉದಾಹರಣೆಗೆ, ಬಟಾಟೆ, ಮಗುಚಿಹಾಕುವುದು, ಇತ್ಯಾದಿ.
ReplyDeleteಆದರು, design , presentation, photography , ಎಲ್ಲವೂ ಚೆನ್ನಾಗಿ ಬಂದಿದೆ. ವೆರಿ ಗುಡ್ .