ರಾಜ್ಮ -ಇದೊಂದು ಉತ್ತರ ಭಾರತದ ಜನಪ್ರಿಯ ಖಾಧ್ಯ. ಈ ಪದಾರ್ಥವನ್ನು ಅಲ್ಲಿಯ ಜನರು ಚಾವಲ್ ಅಂದರೆ ಅನ್ನದ ಒಟ್ಟಿಗೆ ತಿನ್ನಲು ಇಷ್ಟ ಪಡುತಾರೆ. ನಾವು ಹರಿಯಾಣದ ಫಾರಿದಬಾದ್ನಲ್ಲಿ ಇದ್ದಾಗ ನನ್ನ ಅಲ್ಲಿಯ ಗೆಳತಿಯ ಬಳಿ ಮಾಡುವುದನ್ನು ಕಲಿತ್ತಿದ್ದೆ, ಅದನ್ನು ಇಲ್ಲಿ ತಿಲಿಸುತಿದ್ದೇನೆ.
.
ಬೇಕಾಗುವ ಪದಾರ್ಥಗಳು
ರಾಜ್ಮ ಬೀಜ -೨ ಕಪ್
ಈರುಳ್ಳಿ -೩ [ ಸಣ್ಣಗೆ ಹೆಚ್ಚಿದ್ದು ]
ಟೊಮೇಟೊ -೩ ರಿಂದ ೪[ ಸಣ್ಣಗೆ ಹೆಚ್ಚಿದ್ದು ]
ಹಸಿ ಶುಂಟಿ ಪೇಸ್ಟ್ -೧ ದೊಡ್ಡ ಚಮಚ
ರಾಜ್ಮ ಮಸಾಲ ರೇಡಿ ಪುಡಿ -೩ ದೊಡ್ಡ ಚಮಚ
ರಾಜ್ಮ ಟೇಸ್ಟ್ ಮಕೆರ್ - ೧ ಚಮಚ [ಇದು ಮಾರವಾಡಿ ಅಂಗಡಿಗಳಲ್ಲಿ ದೊರುಕುತ್ತದೆ ]
ಅಚ್ಹ ಖಾರದ ಪುಡಿ -೧ ದೊಡ್ಡ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ರಾಜ್ಮವನ್ನು ಕುಕ್ಕರ್ ಲ್ಲಿ ನಾಲ್ಕು ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಂಡಿರಬೇಕು.
ಕಡಾಯಿಯಲ್ಲಿ ಎಣ್ಣೆ ಹಾಕಿ ,ಬಿಸಿಯಾದ ಬಳಿಕ ಒಂದಂದಾಗಿ,ಮೊದಲು ಜೇರಿಗೆ,ಶುಂಟಿ ಪೇಸ್ಟ್,ಈರುಳ್ಳಿ,ಹಾಗು ಟೊಮೇಟೊ ತುಂಡುಗಳ್ಳನ್ನು ಹಾಕಿ ಚನ್ನಾಗಿ ಬಾಡಿಸಬೇಕು . ಆಮೇಲೆ ಬೇಯಿಸಿದ ರಾಜ್ಮವನ್ನು ಹಾಕಿ ,ಅದರೊಟ್ಟಿಗೆ ಎಲ್ಲಾ ಪುಡಿಗಳ್ಳನ್ನು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಎರಡು ಲೋಟ ನೀರು ಹಾಕಿ ಚನ್ನಾಗಿ ಕುದಿಸಬೇಕು, ಗ್ರೇವಿ ಸ್ವಲ್ಪ ದಪ್ಪಗಾದರೆ ರಾಜ್ಮ ಮಸಾಲ ಸವಿಯಲು ಸಿದ್ದ.
ಮೇಲಿನಿಂದ ಸಣ್ಣಗೆ ತುಂಡು ಮಾಡಿದ ಕೊತ್ತಂಬರಿ ಸೊಪ್ಪನ್ನು ಊದುರಿಸಬೇಕು.
ವಿ ಸು : ಬಾಸ್ಮತಿ ಅಕ್ಕಿಯ ಅನ್ನಕ್ಕೆ ಒಳ್ಳೆಯದಾಗುತದೆ. ಸ್ವಲ್ಪ ಖಾರವಿದ್ದಲ್ಲಿ ಒಳ್ಳೆಯದು.
मेरे मुहमें पानी आ आरहा है.
ReplyDeleteदेखनेके लिए अगर इतना अच्चा है
तो खाने के लिए ओउर कितना अच्चा होगा.
राड गन
चंडीगढ़
शुक्रिया मल्ल्याजी !!!!
ReplyDelete