ರೆಡಿ ಪೂರಿ - 1 ಪ್ಯಾಕೆಟ್
ಬೇಯಿಸಿದ ಆಲೂ - 4 [ ಉಪ್ಪು ಜೀರಿಗೆ ಹಾಕಿ ಮಿಕ್ಸ್ ಮಾಡೀಡಬೇಕು]
ಈರುಳ್ಳಿ - 1
ಹುಣಸೆ ರಸ - 1 ಕಪ್
ಬ್ಲಾಕ್ ಸಾಲ್ಟ್ - ಸ್ವಲ್ಪ
ಕರ್ಜೂರ - ಸ್ವಲ್ಪ
ಬೆಲ್ಲ - 2ಚಮಚ
ಹಸಿಮೆಣಸು - 4
ಪುದಿನ ಸೊಪ್ಪು - 1 ಕಪ್
ಕೋತಂಬರಿ ಸೊಪ್ಪು - 1/2 ಕಪ್
ಮಾಡುವ ವಿದಾನ:
ಮೀಟಾ ಪಾನಿ ಒಲೆಯ ಮೇಲೆ ಪಾತ್ರೆ ಇಟ್ಟು, ಹುಣಸೆ ರಸ, ಖರ್ಜೂರ ದ ತುಂಡುಗಳು ,ಬೆಲ್ಲ ಹಾಗು ಉಪ್ಪು ಹಾಕಿ ಚೆನ್ನಾಗಿ ಕುದಿಸಿಡಬೇಕು. [ತಣ್ಣಗಾದ ಬಳಿಕ ಉಪಯೋಗಿಸಬೇಕು ]
ಕಟ್ಟಾ ಪಾನಿ ಒಂದು ಪಾತ್ರೆಯಲ್ಲಿ ನೀರು ಹಾಗು ಬ್ಲಾಕ್ ಸಾಲ್ಟ್ ಹಾಕಿ ಕರಗಿಸಿ ಅದ್ದಕ್ಕೆ ಹಿಡಿಸುವಷ್ಟು ಚಟ್ನೀ [ರುಬ್ಬಿ ಸೋಸಿಟ್ಟ ಮಿಶ್ರಣ] ಹಾಕಿದರೆ ಕಟ್ಟಾ ಪಾನಿ ರೆಡಿ.
.ಚಟ್ನಿ
ಹಸಿಮೆಣಸು, ಪುದಿನ ಕೋತಂಬರಿ ಸೊಪ್ಪು, ಈರುಳ್ಳಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ, ಸೋಸಿಡಬೇಕು
ಮಾಡುವ ರೀತಿ
ಒಂದೊಂದೇ ಪುರಿಗಳ್ಳನ್ನು ತೆಗೆದುಕೊಂಡು ಅದಕ್ಕೆ ಮದ್ಯದಲ್ಲಿ ಬೆರಳಿನಿಂದ ತೂತು ಮಾಡಿ, ಅದರಲ್ಲಿ ಅಲೂ ಮಿಶ್ರಣವನ್ನು ತುಂಬಿಸಿ ಬೇಕಾದ ರುಚಿಯ ಪಾನಿಯನ್ನು ಹಾಕಿ , ಮೇಲಿನಿಂದ ಸಣ್ಣಗೆ ಹೆಚ್ಹಿದ ಕೋತಂಬರಿ ಸೊಪ್ಪನ್ನು ಉದುರಿಸಿದರೆ,
ರುಚಿಕಟ್ಟಾದ ಪಾನಿ ಪುರಿ ಸಿದ್ದ. .