BLOG FOLLOWERS

Sunday, February 5, 2012

ಬಸಳೆ ಸೊಪ್ಪಿನ ತಂಬುಳಿ

                                                                              ಬಸಳೆ ಸೊಪ್ಪಿನ ತಂಬುಳಿ 

ಬೇಕಾಗುವ ಪದಾರ್ಥಗಳು:
 ಒಂದು ಹಿಡಿ ತೊಳೆದಿಟ್ಟ ಬಸಳೆ ಸೊಪ್ಪು 
ಒಂದು ಕಪ್ಪು ಕಾಯಿತುರಿ
 ಎಂಟರಿಂದ ಹತ್ತು  ಕಾಳುಮೆಣಸು 
ಸಿಹಿ ಮೊಸರು  ಒಂದು ಕಪ್ಪು 
ಒಂದು ಚಮಚ ತುಪ್ಪ 
ಅರ್ದ ಚಮಚ ಜೀರಿಗೆ 
ಒಂದು ಒಣ ಮೆಣಸು 
ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

೧. ಬಾಣಲೆಯಲ್ಲಿ ಅರ್ದ ಚಮಚ ತುಪ್ಪವನ್ನು ಹಾಕಿ ಕಾಳುಮೆಣಸನ್ನು ಹುರಿದುಕೊಂಡು, ಅದರಲ್ಲಿಯೇ ಸೊಪ್ಪನ್ನು
ಹಾಕಿ ಸ್ವಲ್ಪ ಬೆಚ್ಚಗೆ ಮಾಡಿ ತೆಗೆದಿಡಬೇಕು.
೨. ಹುರಿದ ಪದಾರ್ಥಗಳ್ಳನ್ನು  ಕಾಯಿತುರಿ + ಮೊಸರು ಹಾಕಿ  ರುಬ್ಬಿಕೊಳ್ಳಬೇಕು.
೩. ರುಬ್ಬಿದ ಮಿಶ್ರಣಕ್ಕೆ ಹದವಾಗಿ ಉಪ್ಪನ್ನು ಬೆರಸಿ, ತುಪ್ಪದಲ್ಲಿ ಹುರಿದ ಜೀರಿಗೆ ,ಒಣಮೆಣಸಿನ ಒಗ್ಗರಣೆಯನ್ನು

    ಹಾಕಿದರೆ, ರುಚಿಯಾದ ಸ್ವಾಧಿಷ್ಟವಾದ ಬಸಳೆ ಸೊಪ್ಪಿನ ತಂಬುಳಿ ಸಿದ್ಧವಾಗುತ್ತದೆ.

Wednesday, February 1, 2012

ಸಾತ್ವಿಕ್ ಪುಲಾವ್

                             ಸಾತ್ವಿಕ್  ಪುಲಾವ್ 
 ಬೇಕಾಗುವ ಪದಾರ್ಥಗಳು:
  ಪರಿಮಳದ ಅಕ್ಕಿ  -  ಒಂದು ಲೋಟ 
   ಮಿಶ್ರ ತರಕಾರಿ    -   ಒಂದು ಕಪ್ಪು  
   ಸ್ಟ್ರಾಬೆರಿ ಹಣ್ಣು   -   ನಾಲ್ಕು  
   ಹಸಿ ದ್ರಾಕ್ಷಿ ಹಣ್ಣು   - ಹತ್ತು  
   ಹಸಿಮೆಣಸು  -   ನಾಲ್ಕು 
  ಕಾಳುಮೆಣಸು  -  ಐದು- ಆರು 
  ಚಕ್ಕೆ    -   ಒಂದು ತುಂಡು 
  ಲವಂಗ  -  ನಾಲ್ಕು 
  ಏಲಕ್ಕಿ   -  ಎರಡು
  ಅರಿಶಿನ  -  ಕಾಲು ಚಮಚ/ ಹಾಲಿನಲ್ಲಿ ಬೆರಸಿದ ಕೇಸರಿ 
  ತುಪ್ಪ   -   ಮೂರು ಚಮಚ 
  ಉಪ್ಪು  -  ರುಚಿಗೆ ತಕ್ಕಷ್ಟು 
  ಕೊತ್ತಂಬರಿ ಸೊಪ್ಪು  -  ಸ್ವಲ್ಪ.

ಮಾಡುವ ವಿಧಾನ:
   ದಪ್ಪ ತಳದ ಬಾಣಲೆಯಲ್ಲಿ , ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಚಕ್ಕೆ ಲವಂಗ ಏಲಕ್ಕಿ ದಾಲ್ಚಿನಿ ಎಲೆಯನ್ನು ಬಾಡಿಸಿಕೊಳ್ಳಬೇಕು. ಅದರಲ್ಲಿ ಹಸಿಮೆಣಸು, ಹೆಚ್ಚಿದ  ತರಕಾರಿ + ತೊಳೆದಿಟ್ಟ ಅಕ್ಕಿ ಯನ್ನು ಹಾಕಿ ಚನ್ನಾಗಿ ಬೆರಸಿಕೊಳ್ಳಬೇಕು.
 ನಂತರ ಎರಡು ಲೋಟ ನೀರು ಹಾಗು ಅರಿಶಿನ/ಹಾಲಿನಲ್ಲಿ ಬೆರಸಿದ ಕೇಸರಿ, ಉಪ್ಪನ್ನು ಹಾಕಿ, ಒಂದು ಕುದಿ ತೆಗೆದು, ಬಳಿಕ ಮುಚ್ಚಳವನ್ನು ಹಾಕಿ, ಸಣ್ಣ ಉರಿಯಲ್ಲಿ 


 ಹತ್ತರಿಂದ  ಹದಿನೈದು ನಿಮಿಷ ಬೇಯಿಸಿದರೆ  ಪಲಾವ್ ರೆಡಿ.
*ಪಲಾವ್ ರೆಡಿ ಆದ ಬಳಿಕ, ದ್ರಾಕ್ಷಿ + ಕತ್ತರಿಸಿದ ಸ್ಟ್ರಾಬೆರಿ + ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿಕೊಳ್ಳಬೇಕು.
* ಬಡಿಸುವಾಗ ಲಿಂಬೆ ರಸವನ್ನು ಹಾಕಿಕೊಳ್ಳಬಹುದು. 
* ಪಲಾವ್ ಜೊತೆಗೆ ಮೊಸರು ಒಳ್ಳೆಯದಾಗುತ್ತದೆ.

Sunday, January 29, 2012

CORNFLAKES MIXTURE


            CORNFLAKES MIXTURE

 ಬೇಕಾಗುವ ಪದಾರ್ಥಗಳು:
 ಜೋಳದ ಅವಲಕ್ಕಿ  - 250gm[maize flakes]
 ಶೇಂಗಾ ಬೀಜ  -  ಸ್ವಲ್ಪ
 ಹುರಿಕಡ್ಲೆ[ಪುಟಾಣಿ]-  ಸ್ವಲ್ಪ
 ಕರಿಬೇವು - ಎರಡು ಗರಿ
 ಒಣಕೊಬ್ಬರಿ ಅರ್ದ ಗಿಟುಕು [ಸಣ್ಣಗೆ ತುಂಡರಿಸ್ಸಿದ್ದು]
 ಒಣ ದ್ರಾಕ್ಷಿ  -ಸ್ವಲ್ಪ
ಖಾರಪುಡಿ - ಒಂದು ಚಮಚ
 ಸಕ್ಕರೆಪುಡಿ - ಅರ್ದ ಚಮಚ
 ಉಪ್ಪು  - ಸ್ವಲ್ಪ
ಕರಿಯಲು  - ಎಣ್ಣೆ.

ಮಾಡುವ ವಿಧಾನ:
 ೧. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು.
 ೨.  ಎಣ್ಣೆ ಕಾದ ಬಳಿಕ ಕೊರ್ನ್ ಅವಲಕ್ಕಿಕರಿದು ತೆಗೆಯಬೇಕು. ಅದೇ ಎಣ್ಣೆಯಲ್ಲಿ ಶೇಂಗ ಬೀಜ, ಹುರಿಕಡ್ಲೆ ಯನ್ನು
    ಕರಿದು ತೆಗೆಯಬೇಕು.
 ೩.  ಉಳಿದ ಎಣ್ಣೆಯಲ್ಲಿ  ಕೊಬ್ಬರಿ ತುಂಡು , ಕರಿಬೇವುಸೊಪ್ಪನ್ನು ಕರಿದು ತೆಗೆಯಬೇಕು.
 ೪. ಕರಿದಿಟ್ಟ ಎಲ್ಲಾ ಪದಾರ್ಥಗಳ್ಳನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿಕೊಂಡು, ಜೊತೆಗೆ ಸ್ವಲ್ಪ ಖಾರ ಪುಡಿ, ಸಕ್ಕರೆ      ಪುಡಿ  ಹಾಗು ಉಪ್ಪು ಒಣದ್ರಾಕ್ಷಿಯನ್ನು ಸೇರಿಸಿಕೊಂಡು ಚನ್ನಾಗಿ mixture ಮಾಡಿಕೊಳ್ಳಬೇಕು. 
 ೫. ತಣಿದ ಬಳಿಕ ಗಾಳಿ ಆಡದ ಡಬ್ಬಿಯಲ್ಲಿ ತೆಗೆದಿಟ್ಟರೆ, ತಿಂಗಳವರೆಗೆ ಹಾಳಗುವುದಿಲ್ಲ.
ಹಿರಿಯರು+ ಕಿರಿಯರು ಎಲ್ಲರೂ ಇಷ್ಟ ಪಟ್ಟು ತಿನ್ನುವ ಕೊರ್ನ್ ಫ್ಲಕ್ಸ್ ಮಿಕ್ಚರ್  ನಮಗೆ ಬೇಕಾದ ಎಣ್ಣೆಯಲ್ಲಿ, ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ಹೀರೆಕಾಯಿ ಬಜ್ಜಿ/ಬೋಂಡ


                                  ಹೀರೆಕಾಯಿ ಬಜ್ಜಿ/ಬೋಂಡ

ಬೇಕಾಗುವ ಪದಾರ್ಥಗಳು: 

ತೆಳ್ಳಗೆ ಕತ್ತರಿಸಿದ ಹೀರೆಕಾಯಿ   -   ಒಂದು 
ಕಡಲೆಹಿಟ್ಟು   -  ಒಂದು ಕಪ್ಪು 
ಕೊರ್ನಪುಡಿ  -   ಎರಡು ಚಮಚ 
ಜೀರಿಗೆ    -   ಒಂದು ಚಮಚ 
ಖಾರಪುಡಿ  -   ಒಂದು ಚಮಚ 
ಉಪ್ಪು   -   ರುಚಿಗೆ ತಕ್ಕಷ್ಟು 
ಕರಿಯಲು ಎಣ್ಣೆ .

ಮಾಡುವ  ವಿಧಾನ:
೧. ಮೊದಲು ಕಡಲೆಹಿಟ್ಟು, ಕೊರ್ನ್ ಹಿಟ್ಟು, ಜೀರಿಗೆ, ಖಾರಪುಡಿ, ಉಪ್ಪುನ್ನು ಹಾಕಿ
     ಸ್ವಲ್ಪ ನೀರನ್ನು ಸೇರಿಸಿಕೊಂಡು, ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು.
೨.  ಬಾಣಲೆಯಲ್ಲಿ  ಎಣ್ಣೆ ಹಾಕಿ ಕಾಯಲು ಇಡಬೇಕು.
೩.  ಕಾದ ಎಣ್ಣೆಯಲ್ಲಿ [ಮೀಡಿಯಂ  ಉರಿಯಲ್ಲಿ] ಹೀರೆಕಾಯಿ ತುಂಡುಗಳನ್ನುಕಲಿಸಿಟ್ಟ ಹಿಟ್ಟಿನಲ್ಲಿ ಅದ್ದಿ, ಒಂದೊಂದಾಗಿ ಎಣ್ಣೆಯಲ್ಲಿ ಬಿಡಬೇಕು.ಒಂದೇ ಸಲ ಏಳೆಂಟು  ಹೋಳುಗಳನ್ನುಕರಿದು ತೆಗೆಯಬಹುದು.











Saturday, January 28, 2012

ಪಾಲಕ್ ಕಟ್ಲೆಟ್

                                                                     ಪಾಲಕ್  ಕಟ್ಲೆಟ್ 
 ಬೇಕಾಗುವ ಪದಾರ್ಥಗಳು:
ಪಾಲಕ್ ಸೊಪ್ಪು    -  ಎರಡು ಕಟ್ಟು 
ಆಲೂಗಡ್ಡೆ      -  ನಾಲ್ಕು 
ಜೀರಿಗೆ ಪುಡಿ   - ಒಂದು ಚಮಚ 
ಧನಿಯ ಪುಡಿ  -  ಒಂದು ಚಮಚ 
ಗರಂ ಮಸಾಲ ಪುಡಿ  - ಅರ್ದ  ಚಮಚ
ಖಾರ ಪುಡಿ  -  ಒಂದು ಚಮಚ 
ಕಾರ್ನ್ಹಿಟ್ಟು/ಮೈದಾಹಿಟ್ಟು  -  ಎರಡು ಚಮಚ 
ಉಪ್ಪು  - ರುಚಿಗೆ ತಕ್ಕಷ್ಟು 
ಬ್ರೆಡ್ ಪುಡಿ  -  ಸ್ವಲ್ಪ 
ಎಣ್ಣೆ   -  ಸ್ವಲ್ಪ.

 ಮಾಡುವ ವಿಧಾನ:

ಆಲೂಗಡ್ಡೆ + ಪಾಲಕ್ ಸೊಪ್ಪನ್ನು  ಬೇಯಿಸಿ, ತಣ್ಣಗಾದ
ಬಳಿಕ  ಕೈಯಿಂದ ಚನ್ನಾಗಿ ಮಸೆದುಕೊಳ್ಳಬೇಕು.ನಂತರ ಆ ಹಿಟ್ಟಿಗೆ ಸ್ವಲ್ಪ ಉಪ್ಪು, ಖಾರಪುಡಿ, ಗರಂ ಮಸಾಲ ಪುಡಿ 
ಜೀರಿಗೆ+ಧನಿಯ ಪುಡಿ  ಸ್ವಲ್ಪ ಕೊರ್ನ್ ಹಿಟ್ಟನ್ನು ಬೆರಸಿ,
ಸಣ್ಣ-ಸಣ್ಣ  ಉಂಡೆಗಳನ್ನು ಮಾಡಿ , ಸ್ವಲ್ಪ ಒತ್ತಿ ಚಪ್ಪಟ್ಟೆ          ಮಾಡಿ [ಬೇಕಾದ ಆಕರದಲ್ಲಿ] ಬ್ರೆಡ್ ಪುಡಿಯಲ್ಲಿ ಹೊರಳಿಸಿ     ಕಾದ ತವಾದ ಮೇಲೆ ಜೋಡಿಸಿಟ್ಟು       
ಎಣ್ಣೆ ಹಾಕಿ ಎರಡು ಬದಿಯನ್ನು ಬೇಯಿಸಿ ತೆಗೆಯಬೇಕು. 


* ರುಚಿ-ರುಚಿಯಾದ ಪಾಲಕ್ ಸೊಪ್ಪಿನ 
 ಕಟ್ಲೆಟನ್ನು ಚಟ್ನಿ/ ಸಾಸ್ ಜೊತೆಗೆ ಸವಿಯಬಹುದು.

Friday, January 27, 2012

ಖಾರ ತುಕ್ಡಿ [ ಶಂಕರಪಾಳಿ]

                                                            ಖಾರ  ತುಕ್ಡಿ [ ಶಂಕರಪಾಳಿ]  

ಬೇಕಾಗುವ ಪದಾರ್ಥಗಳು: 
ಗೋಧಿ ಹಿಟ್ಟು  -  ಒಂದು ಕಪ್ಪು 
ಮೈದಾಹಿಟ್ಟು  -  ಒಂದು ಕಪ್ಪು 
ಖಾರ ಪುಡಿ   -  ಒಂದು ಚಮಚ 
ಸಕ್ಕರೆಪುಡಿ ಒಂದು ಸಣ್ಣ ಚಮಚ 
ಪುಡಿ ಹಿಂಗು  -  ಒಂದು ಚಿಟಿಕೆಯಷ್ಟು 
ಉಪ್ಪು    -  ಸ್ವಲ್ಪ 
ತುಪ್ಪ  - ಎರಡು ಚಮಚ 
 ಕಲೆಸಲು ನೀರು ಹಾಗು ಕರಿಯಲು ಎಣ್ಣೆ.

 ಮಾಡುವ ವಿಧಾನ:
ಸ್ವಲ್ಪ ಬಿಸಿ ಮಾಡಿದ  ತುಪ್ಪಕ್ಕೆ, ಉಪ್ಪು ಖಾರಪುಡಿ, ಹಿಂಗು ,ಸಕ್ಕರೆ ,ಗೋಧಿಹಿಟ್ಟು, ಮೈದಾಹಿಟ್ಟನ್ನು ಬೆರಸಿ, ಸ್ವಲ್ಪ ನೀರನ್ನು ಹಾಕಿ
ಚಪಾತಿ ಹಿಟ್ಟಿನ ಹದಕ್ಕೆ  ಕಲಿಸಿಕೊಳ್ಳಬೇಕು. ಆ ಹಿಟ್ಟಿನಿಂದ ಸಣ್ಣ -ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿ, ತುಕ್ಡಿ
ಚಮಚದಿಂದ ಗೆರೆಗಳ್ಳನ್ನು ಹಾಕಿ ಡೈಮಂಡ್ ಆಕಾರದ ತುಕಡಿಗಳನ್ನು ಕತ್ತರಿಸಿ ತೆಗೆದು, ಒಂದು ತಟ್ಟೆಯಲ್ಲಿ ಹರಡಬೇಕು.

ಕಾದ ಎಣ್ಣೆಯಲ್ಲಿ ತುಕ್ಡಿ ಗಳ್ಳನ್ನು[ಸಣ್ಣ ಉರಿಯಲ್ಲಿ] ಕರಿದು ತೆಗೆಯಬೇಕು. 

Thursday, January 26, 2012

ಪಾಲಕ್ ಸೊಪ್ಪಿನ ತಂಬ್ಳಿ

                                   ಪಾಲಕ್ ಸೊಪ್ಪಿನ ತಂಬ್ಳಿ 
ಬೇಕಾಗುವ ಪದಾರ್ಥಗಳು:
ತೊಳೆದು ಸ್ವಚ್ಛ ಮಾಡಿಟ್ಟ ಪಾಲಕ್ ಸೊಪ್ಪು -  ಎರಡು ಕಪ್ಪು
  ಸಿಹಿ ಮೊಸರು   -   ಒಂದು ಕಪ್ಪು 
 ಕಾಯಿ ತುರಿ --ಅರ್ದ ಕಪ್ಪು  
 ಜೀರಿಗೆ  -  ಒಂದು ಚಮಚ 
 ಕಾಳುಮೆಣಸು  -  ಐದರಿಂದ ಆರು 
ಒಣಮೆಣಸು  -  ಒಂದು 
ತುಪ್ಪ -  ಒಂದು ಚಮಚ 
ಉಪ್ಪು -  ಸ್ವಲ್ಪ.

 ಮಾಡುವ ವಿಧಾನ:
೧. ಪಾಲಕ್ ಸೊಪ್ಪನ್ನು ಬೇಯಿಸಿಟ್ಟುಕೊಳ್ಳಬೇಕು.
೨. ಕಾಲು ಚಮಚ ತುಪ್ಪದಲ್ಲಿ, ಅರ್ದ ಚಮಚ ಜೀರಿಗೆ, ಕಾಳುಮೆಣಸನ್ನು ಹುರಿದಿಟ್ಟುಕೊಳ್ಳಬೇಕು.
೩. ಕಾಯಿತುರಿಯೊಂದಿಗೆ, ಹುರಿದಿಟ್ಟ ಜೀರಿಗೆ, ಮೆಣಸನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.ಕೊನೆಯಲ್ಲಿ ಮೊಸರನ್ನು
    ಹಾಕಿಕೊಂಡು ಒಂದು ಸುತ್ತು ಮಿಕ್ಸಿ ಮಾಡಿಕೊಳ್ಳಬೇಕು.ಹದವಾಗಿ ಉಪ್ಪನ್ನು ಸೇರಿಸಿಕೊಳ್ಳಬೇಕು.
೪.ತುಪ್ಪದಲ್ಲಿ  ಜೀರಿಗೆ, ಒಣಮೆಣಸು, ಒಗ್ಗರಣೆ ಮಾಡಿ ಹಾಕಬೇಕು.