ಸಾತ್ವಿಕ್ ಪುಲಾವ್
ಬೇಕಾಗುವ ಪದಾರ್ಥಗಳು:
ಮಿಶ್ರ ತರಕಾರಿ - ಒಂದು ಕಪ್ಪು
ಸ್ಟ್ರಾಬೆರಿ ಹಣ್ಣು - ನಾಲ್ಕು
ಹಸಿ ದ್ರಾಕ್ಷಿ ಹಣ್ಣು - ಹತ್ತು
ಹಸಿಮೆಣಸು - ನಾಲ್ಕು
ಕಾಳುಮೆಣಸು - ಐದು- ಆರು
ಚಕ್ಕೆ - ಒಂದು ತುಂಡು
ಲವಂಗ - ನಾಲ್ಕು
ಏಲಕ್ಕಿ - ಎರಡು
ಅರಿಶಿನ - ಕಾಲು ಚಮಚ/ ಹಾಲಿನಲ್ಲಿ ಬೆರಸಿದ ಕೇಸರಿ
ತುಪ್ಪ - ಮೂರು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ.
ಮಾಡುವ ವಿಧಾನ:
ದಪ್ಪ ತಳದ ಬಾಣಲೆಯಲ್ಲಿ , ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಚಕ್ಕೆ ಲವಂಗ ಏಲಕ್ಕಿ ದಾಲ್ಚಿನಿ ಎಲೆಯನ್ನು ಬಾಡಿಸಿಕೊಳ್ಳಬೇಕು. ಅದರಲ್ಲಿ ಹಸಿಮೆಣಸು, ಹೆಚ್ಚಿದ ತರಕಾರಿ + ತೊಳೆದಿಟ್ಟ ಅಕ್ಕಿ ಯನ್ನು ಹಾಕಿ ಚನ್ನಾಗಿ ಬೆರಸಿಕೊಳ್ಳಬೇಕು.
ನಂತರ ಎರಡು ಲೋಟ ನೀರು ಹಾಗು ಅರಿಶಿನ/ಹಾಲಿನಲ್ಲಿ ಬೆರಸಿದ ಕೇಸರಿ, ಉಪ್ಪನ್ನು ಹಾಕಿ, ಒಂದು ಕುದಿ ತೆಗೆದು, ಬಳಿಕ ಮುಚ್ಚಳವನ್ನು ಹಾಕಿ, ಸಣ್ಣ ಉರಿಯಲ್ಲಿ
ಹತ್ತರಿಂದ ಹದಿನೈದು ನಿಮಿಷ ಬೇಯಿಸಿದರೆ ಪಲಾವ್ ರೆಡಿ.
*ಪಲಾವ್ ರೆಡಿ ಆದ ಬಳಿಕ, ದ್ರಾಕ್ಷಿ + ಕತ್ತರಿಸಿದ ಸ್ಟ್ರಾಬೆರಿ + ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿಕೊಳ್ಳಬೇಕು.
* ಬಡಿಸುವಾಗ ಲಿಂಬೆ ರಸವನ್ನು ಹಾಕಿಕೊಳ್ಳಬಹುದು.
* ಪಲಾವ್ ಜೊತೆಗೆ ಮೊಸರು ಒಳ್ಳೆಯದಾಗುತ್ತದೆ.
No comments:
Post a Comment