BLOG FOLLOWERS

Tuesday, January 13, 2015

ಗ್ರೀನ್ ಪುಲಾವ್

ಗ್ರೀನ್ ಪುಲಾವ್

ಬೇಕಾಗುವ ಪದಾರ್ಥಗಳು:

ಬಾಸ್ಮತಿ ಅಕ್ಕಿ/ ಸೋನ ಮಸೂರಿ ಅಕ್ಕಿ - ಒಂದು ಕಪ್ಪು

ಕತ್ತರಿಸಿದ ಈರುಳ್ಳಿ  - ಎರಡು

ಹೆಚ್ಚಿದ ಮಿಶ್ರ ತರಕಾರಿ - ಒಂದೂವರೆ ಕಪ್ಪು

ಅಡುಗೆ ಎಣ್ಣೆ/ ತುಪ್ಪ - ೫ -೬ ಸಣ್ಣ ಚಮಚ 

ಲವಂಗ -  ೨

ಚಕ್ಕೆ-  ಅರ್ದ ಇಂಚು

ಅರಿಶಿನ ಪುಡಿ - ಅರ್ದ ಸಣ್ಣ  ಚಮಚ

ಉಪ್ಪು ರುಚಿಗೆ ತಕ್ಕಷ್ಟು 

ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ ಸ್ವಲ್ಪ 

ಮಸಾಲೆಗೆ ಬೇಕಾಗುವ ಪದಾರ್ಥಗಳು:

ಕೊತ್ತಂಬರಿ ಸೊಪ್ಪು- ಅರ್ದ ಕಪ್ಪು

ಹಸಿ ಶುಂಟಿ - ಅರ್ದ ಇಂಚು 

ಬೆಳ್ಳುಳ್ಳಿ ಎಸಳು- ೫

ಹಸಿ ಮೆಣಸು - ೩

ಮೇಲೆ ತಿಳಿಸಿದ ಮಸಾಲೆಗೆ ಬೇಕಾಗುವ ಪದಾರ್ಥಗಳನ್ನು ನಯವಾಗಿ ಪೇಸ್ಟ್ ಮಾಡಿತ್ತು ಕೊಳ್ಳಬೇಕು.   

ಮಾಡುವ ವಿಧಾನ:

 ಕುಕ್ಕೆರ್ ಪಾತ್ರೆ ಯಲ್ಲಿ ತುಪ್ಪ /ಎಣ್ಣೆಯನ್ನು ಹಾಕಿ ಕಾಯಿಸಬೇಕು. ಬಳಿಕ ಅದರಲ್ಲಿ ಚಕ್ಕೆ, ಲವಂಗ ಹಾಗು ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚನ್ನಾಗಿ ಹುರಿದು ಕೊಳ್ಳಬೇಕು. ಈಗ ಅದಕ್ಕೆ ರುಬ್ಬಿತ್ತ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವರೆಗೆ ಫ್ರೈ ಮಾಡಬೇಕು. ಒಮ್ಮೆ ಈರುಳ್ಳಿ ಫ್ರೈ ಆದ ನಂತರ ಅದಕ್ಕೆ ಅರಿಶಿನ ಪುಡಿ,ತೊಳೆದಿಟ್ಟ ಅಕ್ಕಿ, ತರಕಾರಿ, ಊಫ್ಫೂ.Yಏಋಆಡೂ ಕಪ್ಪು ನೀರುಸೇರಿಸಿ ಚನ್ನಾಗಿ ಮಿಕ್ಸ್ ಮಾಡಿ ಕುಕ್ಕೆರ್ ಗೆ ಮುಚ್ಚಳ ಮುಚ್ಚಿ ಹೈ ಉರಿಯಲ್ಲಿ ಎರಡು ವಿಷಲ್/ಸಿಟಿ ಕೂಗಿಸಿ ಗ್ಯಾಸ್ ಉರಿಯನ್ನು ತೆಗೆಯಬೇಕು. ಕುಕ್ಕೆರ್ ತಣಿದ ಬಳಿಕ ಮುಚ್ಚಳ ತೆಗೆದು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸುಲಭವಾಗಿ ಹಾಗು ರುಚಿಯಾದ ಗ್ರೀನ್ ಪುಲಾವ್ ರೆಡಿ.
TIPS:ತುಪ್ಪದಲ್ಲಿ ಹುರಿದ ಪನೀರ್ /ಬ್ರೆಡ್ ತುಂಡುಗಳನ್ನುಮೇಲಿನಿಂದ  ಹಾಕಿ ಅಲಂಕರಿಸಿದರೆ ಸವಿಯಲು
          ರುಚಿಯಾಗಿರುತ್ತದೆ. 

           

 

No comments:

Post a Comment