ಒಂದು ಹಿಡಿ ತೊಳೆದಿಟ್ಟ ಬಸಳೆ ಸೊಪ್ಪು
ಒಂದು ಕಪ್ಪು ಕಾಯಿತುರಿ
ಎಂಟರಿಂದ ಹತ್ತು ಕಾಳುಮೆಣಸು
ಸಿಹಿ ಮೊಸರು ಒಂದು ಕಪ್ಪು
ಒಂದು ಚಮಚ ತುಪ್ಪ
ಅರ್ದ ಚಮಚ ಜೀರಿಗೆ
ಒಂದು ಒಣ ಮೆಣಸು
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
೧. ಬಾಣಲೆಯಲ್ಲಿ ಅರ್ದ ಚಮಚ ತುಪ್ಪವನ್ನು ಹಾಕಿ ಕಾಳುಮೆಣಸನ್ನು ಹುರಿದುಕೊಂಡು, ಅದರಲ್ಲಿಯೇ ಸೊಪ್ಪನ್ನು
ಹಾಕಿ ಸ್ವಲ್ಪ ಬೆಚ್ಚಗೆ ಮಾಡಿ ತೆಗೆದಿಡಬೇಕು.
೨. ಹುರಿದ ಪದಾರ್ಥಗಳ್ಳನ್ನು ಕಾಯಿತುರಿ + ಮೊಸರು ಹಾಕಿ ರುಬ್ಬಿಕೊಳ್ಳಬೇಕು.
೩. ರುಬ್ಬಿದ ಮಿಶ್ರಣಕ್ಕೆ ಹದವಾಗಿ ಉಪ್ಪನ್ನು ಬೆರಸಿ, ತುಪ್ಪದಲ್ಲಿ ಹುರಿದ ಜೀರಿಗೆ ,ಒಣಮೆಣಸಿನ ಒಗ್ಗರಣೆಯನ್ನು
ಹಾಕಿದರೆ, ರುಚಿಯಾದ ಸ್ವಾಧಿಷ್ಟವಾದ ಬಸಳೆ ಸೊಪ್ಪಿನ ತಂಬುಳಿ ಸಿದ್ಧವಾಗುತ್ತದೆ.
No comments:
Post a Comment