BLOG FOLLOWERS

Tuesday, January 24, 2012

ಕೆಂಪು ಮೆಣಸಿನಕಾಯಿ ಸಾರು

                                                             ಮೆಣಸಿನಕಾಯಿ ಸಾರು


ಬೇಕಾಗುವ ಪದಾರ್ಥಗಳು: 


 ಒಣ ಮೆಣಸಿನಕಾಯಿ   - 8
ಹುಣಸೆ   -  ಸ್ವಲ್ಪ

 ಕಾಯಿತುರಿ - ಒಂದು ಚಮಚ                                                        

 ಬೆಲ್ಲ  -  ಅರ್ದ ಚಮಚ  
 ಉದ್ದಿನಬೇಳೆ  -  ಅರ್ದ ಚಮಚ

 ಎಣ್ಣೆ    -   ಒಂದು ಚಮಚ   ಸಾಸಿವೆ  - ಒಂದು ಸಣ್ಣ ಚಮಚ                                             

  ಕರಿಬೇವು -  ಒಂದು ಗರಿ 
ಹಿಂಗು    ಚಿಟಿಕೆಯಷ್ಟು        ಉಪ್ಪು  - ರುಚಿಗೆ ತಕ್ಕಷ್ಟು

 ಕೊತ್ತಂಬರಿ ಸೊಪ್ಪು  -  ಒಂದು ಹಿಡಿಯಷ್ಟು




 ಮಾಡುವ  ವಿಧಾನ: 

೧. ಸ್ವಲ್ಪ ಎಣ್ಣೆಯಲ್ಲಿ ಮೆಣಸು, ಉದ್ದಿನ ಬೇಳೆ ,ಕಾಯಿತುರಿಯನ್ನ್ನು  ಹುರಿದು ನುಣ್ಣಗೆ  ಪುಡಿಮಾಡಿಕೊಳ್ಳಬೇಕು.

೨.ಸಾರಿನ ಪಾತ್ರೆಯಲ್ಲಿ ,ನೀರನ್ನು ಹಾಕಿ ಕಾಯಿಸಬೇಕು.ನೀರು ಕಾದ ಬಳಿಕ  ಹುಣಸೆ ರಸ, ಸಾರಿನ ಪುಡಿ, ಬೆಲ್ಲ
  ಉಪ್ಪ್ಪು ಕೊತ್ತಂಬರಿಸೊಪ್ಪನ್ನು  ಹಾಕಿ ಕುದಿಸಬೇಕು.
೩. ಕೊನೆಯಲ್ಲಿ ಸಾಸಿವೆ ಹಿಂಗು ಕರಿಬೇವು ಒಗ್ಗರಣೆ  ಮಾಡಿ ಹಾಕಿದರೆ , ರುಚಿ ರುಚಿಯಾದ ಸಾರು ರೆಡಿ.

Friday, January 20, 2012

ತಿಂಗಳವರೆ ಸಾರು [ತಿಂಗಳವರೆ ಸಾರುಪ್ಕರಿ]

                           ತಿಂಗಳವರೆ  ಸಾರು [ತಿಂಗಳವರೆ ಸಾರುಪ್ಕರಿ]

ಪದಾರ್ಥಗಳು: 
ತಿಂಗಳವರೆ ಬೀಜ   -  ಒಂದು ಕಪ್ಪು 
ಆಲುಗಡ್ಡೆ/ಹಲಸಿನ ಬೀಜ   - ಅರ್ದ ಕಪ್ಪು  
ಹುಣಸೆರಸ   -  ಎರಡು ಚಮಚ 
ಬೆಳ್ಳುಳ್ಳಿ   -  ಒಂದು ದೊಡ್ಡ ಗಡ್ದೆ
ಹಸಿಮೆಣಸು   -  ನಾಲ್ಕು 
ಒಣಮೆಣಸು  - ಒಂದು 
ಕಾಯಿತುರಿ  -  ಒಂದು ಚಮಚ 
 ಉಪ್ಪು  -  ರುಚಿಗೆ.

 ಮಾಡುವ ವಿಧಾನ:
 ೧. ತಿಂಗಳವರೆಯನ್ನು  ನಾಲ್ಕು ಗಂಟೆಗಳ ಕಾಲ ನೆನಸಿಡಬೇಕು.
 ೨.  ಆಲುಗಡ್ಡೆ ಯನ್ನು  ಸಣ್ಣ ಹೋಳುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಬೇಕು.ಹಲಸಿನ ಬೀಜ ಹಾಕುವುದಾದರೆ ಚನ್ನಾಗಿ 
      ಜಜ್ಜಿಟ್ಟುಕೊಳ್ಳಬೇಕು.
 ೩.  ನೆನೆದ ತಿಂಗಳವರೆಯೋಟ್ಟಿಗೆ  ಆಲುಗಡ್ಡೆ/ಹಲಸಿನಬೀಜ ಹಾಗು  ನೀರನ್ನು ಹಾಕಿ, ಕುಕ್ಕರಲ್ಲಿ
     ಚನ್ನಾಗಿ [ ಮೃದುವಾಗಿರಬೇಕು]ಬೇಯಿಸಿಕೊಳ್ಳಬೇಕು.
 ೪  ಕುಕ್ಕರ್ ತಣಿದ ಬಳಿಕ, ಬೆಂದ ಕಾಳುಗಳ್ಳನ್ನು  ನೀರು ಸಮೇತ ಬೇರೆ ಪಾತ್ರೆ ಗೆ ವರ್ಗಾಯಿಸಿ, ಬೇಕಾದಲ್ಲಿ ಇನ್ನಷ್ಟು
      ನೀರನ್ನು ಹಾಕಿ,   ಸೀಳಿದ  ಹಸಿಮೆಣಸು, ಹುಣಸೆ ರಸ ಹಾಗು ಉಪ್ಪನ್ನು ಹಾಕಿ ಕುದಿಸಬೇಕು.          
 ೫.  ಕೊನೆಯಲ್ಲಿ ಒಗ್ಗರಣೆ ಕಾವಲಿಯಲ್ಲಿ, ಕೊಬ್ಬರಿ ಎಣ್ಣೆಯನ್ನು ಹಾಕಿ ಕಾದ ಬಳಿಕ  ಜಜ್ಜಿದ ಬೆಳ್ಳಳ್ಳಿ  ಎಸಳು ಹಾಗು ಒಣ 
       ಮೆಣಸು  ತುಂಡುಗಳ್ಳನ್ನು    ಹಾಕಿ ಚನ್ನಾಗಿ ಹುರಿದು  ಕುದಿಸಿಟ್ಟ  ಸಾರಿಗೆ ಹಾಕಿದರೆ, ಸಾರುಪ್ಕರಿ ತಯಾರ್.
 ೬.  ಮೇಲಿನಿಂದ  ಕಾಯಿತುರಿ  ಹಾಕಿಕೊಳ್ಳಬಹುದು.

* ಇದೇ  ರೀತಿಯಲ್ಲಿ ಯಾವುದೇ ದಾನ್ಯವನ್ನು [ಹೆಸರು ಕಾಳು, ತೊಗರಿಕಾಳು,
  ರಾಜ್ಮ ಇತ್ಯಾದಿ ...] ಉಪಯೋಗಿಸಿ ಸಾರನ್ನು ತಯಾರಿಸಬಹುದು.

Thursday, January 19, 2012

ಬಟಾಣಿ ಕಾಳು ರವೆ ಉಪ್ಪಿಟ್ಟು

                                 ಬಟಾಣಿ ಕಾಳು  ರವೆ ಉಪ್ಪಿಟ್ಟು 

 ಸಾಮಗ್ರಿಗಳು:
ಹುರಿದಿಟ್ಟ ಮೀಡಿಯಂ ರವೆ    -   ಒಂದು ಲೋಟ 
ಹಸಿ ಬಟಾಣಿ     -     ಅರ್ದ ಕಪ್ಪು 
ಟೊಮೇಟೊ     - ಒಂದು  [ಸಣ್ಣಗೆ ಹೆಚ್ಚಿಟಿದ್ದು] 
ಹಸಿಮೆಣಸು  -   ಐದು  [ಸಣ್ಣಗೆ  ಹೆಚ್ಚಿಡಬೇಕು]
ಹಸಿ ಶುಂಟಿ  - ಸಣ್ಣ ತುಂಡು [ ಸಣ್ಣಗೆ ಹೆಚ್ಚಬೇಕು] 
ಸಾಸಿವೆ    -   ಅರ್ದ ಚಮಚ 
ಕಡ್ಲೆ ಬೇಳೆ  - ಅರ್ದ ಚಮಚ [ನೀರಿನಲ್ಲಿ ನೆನಸಿ ತೆಗೆದಿಡಬೇಕು]
ಉದ್ದಿನಬೇಳೆ   - ಕಾಲು  ಚಮಚ 
 ಕರಿಬೇವು    - ಒಂದು ಗರಿ 
ಕೊತ್ತಂಬರಿ ಸೊಪ್ಪು  -  ಸ್ವಲ್ಪ 
ಕಾಯಿತುರಿ  -  ಸ್ವಲ್ಪ 
ಎಣ್ಣೆ     -  ಒಂದು ಸವಟು
ತುಪ್ಪ  -  ಒಂದು ಚಮಚ
ಉಪ್ಪು ಹಾಗು ಲಿಂಬೆ ರಸ.


ಮಾಡುವ ವಿಧಾನ:

 ದಪ್ಪ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ/ತುಪ್ಪವನ್ನು ಹಾಕಿ, ಒಗ್ಗರಣೆ  ಸಾಮಗ್ರಿಗಳ್ಳನ್ನು ಹಾಕಿ ಒಗ್ಗರಿಸಿ ಕೊಳ್ಳಬೇಕು. ನಂತರ ಅದರಲ್ಲಿ, ಹಸಿಮೆಣಸು, ಹಸಿ ಶುಂಟಿ, ಟೊಮೇಟೊ  ಬಟಾಣಿ ಕಾಳುಗಳ್ಳನ್ನು ಹಾಕಿ
ಬಾಡಿಸಿಕೊಳ್ಳಬೇಕು.ಹುರಿದ ರವೆಯನ್ನು ಅದರಲ್ಲಿ ಸೇರಿಸಿ ಚನ್ನಾಗಿ ಕೈಯಾಡಿಸಬೇಕು.ರುಚಿಗೆ ಉಪ್ಪನ್ನು ಹಾಕಿ,ಜೊತೆಗೆ ಎರಡುವರೆ  ಅಳತೆ ಕಾದ ನೀರನ್ನು ಹಾಕಿ, ಗಂಟು ಕಟ್ಟದಂತೆ ಚಮಚದಿಂದ ಮಿಕ್ಸ್ ಮಾಡಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ, ಧೀಡಿರಾಗಿ ತಯಾರಿಸಬಹುದಾದಂತಹ, ಬಟಾಣಿ ಕಾಳು ಉಪ್ಪಿಟ್ಟು  ರೆಡಿ. ಸ್ವಲ್ಪ ಕಾಯಿತುರಿಯನ್ನು 
ಕೊನೆಯಲ್ಲಿ ಹಾಕಿಕೊಳ್ಳಬೇಕು.

 * ಹೆಚ್ಚಿಟ್ಟ ಕೊತ್ತಂಬರಿಸೊಪ್ಪನ್ನು  ಮೇಲಿನಿಂದ ಉದುರಿಸಬೇಕು, ಬಡಿಸುವ ಮುಂಚೆ ಲಿಂಬೆ ರಸವನ್ನು ಸೇರಿಸಿಕೊಳ್ಳಬೇಕು.ಇದೇ ರೀತಿಯ ಒಗ್ಗರಣೆಯೊಂದಿಗೆ, ಅವ್ರೆ ಕಾಳು ಉಪ್ಪಿಟ್ಟನ್ನು ತಯಾರಿಸಬಹುದು. ಮಿಶ್ರ ತರಕಾರಿಗಳ್ಳನ್ನು ಹಾಕಿ  ಪಾರ್ಟಿ  ಉಪ್ಪಿಟ್ಟನ್ನು  ತಯಾರಿಸಬಹುದು.  






Wednesday, January 18, 2012

ಮೇಥಿ ಆಲೂ/ ಮೆಂತ್ಯೆ ಸೊಪ್ಪು-ಆಲೂಗಡ್ಡೆ ಪಲ್ಯ

                                                   ಮೇಥಿ ಆಲೂ/ ಮೆಂತ್ಯೆ ಸೊಪ್ಪು-ಆಲೂಗಡ್ಡೆ ಪಲ್ಯ

ಪದಾರ್ಥಗಳು:
ಬೇಯಿಸಿದ ಆಲೂಗಡ್ಡೆ   -    ನಾಲ್ಕು 
ಮೆಂತ್ಯೆ ಸೊಪ್ಪು      - ಎರಡು ಕಪ್ಪು  
ಈರುಳ್ಳಿ ಸಣ್ಣಗೆ ಹೆಚ್ಚಿದ್ದು   -  ಒಂದು ಗಡ್ದೆ
ಸಣ್ಣಗೆ ಹೆಚ್ಚಿದ ಟೊಮೇಟೊ  -  ಒಂದು 
ಕೆಂಪು ಮೆಣಸಿನ ಪುಡಿ    -  ಒಂದು ಚಮಚ 
ಅರಿಶಿನ   -   ಕಾಲು ಚಮಚ 
ಗರಂ ಮಸಾಲ ಪುಡಿ  -   ಅರ್ದ ಚಮಚ 
ಜೀರಿಗೆ   -  ಅರ್ದ ಚಮಚ 
ಉಪ್ಪು   -  ರುಚಿಗೆ ತಕ್ಕಷ್ಟು 
ಲಿಂಬೆ ರಸ  - ಅರ್ದಲಿಂಬೆ ಹಣ್ಣು 
ಎಣ್ಣೆ    -    ಎರಡು ಚಮಚ .

ಮಾಡುವ ವಿಧಾನ:
 ದಪ್ಪ ತಳದ ಬಾಣಲೆಯಲ್ಲಿ  ಎಣ್ಣೆ ಬಿಸಿಮಾಡಿ ಜೀರಿಗೆ ಹಾಕಿ ಸಿಡಿಸಬೇಕು. ಅದರಲ್ಲಿ ಈರುಳ್ಳಿ ಹಾಕಿ ಕೆಂಪಗೆ ಬಾಡಿಸಿಕೊಂಡ ಬಳಿಕ ಟೊಮೇಟೊ, ಮೆಂತ್ಯೆ ಸೊಪ್ಪನ್ನು ಸೇರಿಸಿ, ಚನ್ನಾಗಿ ಬಾಡಿಸಿಕೊಳ್ಳಬೇಕು.ನಂತರ ಖಾರಪುಡಿ , ಅರಿಶಿನ, ಗರಂ ಮಸಾಲೆ
 ಉಪ್ಪನ್ನು ಹಾಕಿಕೊಂಡು ಮಿಶ್ರಣ ಮಾಡಿ, ಬಳಿಕ ಬೇಯಿಸಿದ ಆಲುಗಡ್ಡೆ ಹೋಳು ಗಳ್ಳನ್ನು ಸೇರಿಸಿ, ಐದು ನಿಮಿಷ
 ಬೇಯಿಸಿದರೆ  ಪಲ್ಲ್ಯ ರೆಡಿ. 

 * ಬಡಿಸುವಾಗ  ಲಿಂಬೆ ರಸವನ್ನು ಹಿಂಡಿ ಕೊಳ್ಳಬೇಕು.
 *  ಚಪಾತಿ/ಪೂರಿ ಯೋಟ್ಟಿಗೆ  ನೆಂಚಿಕೊಳ್ಳಲು  ಒಳ್ಳೆಯದಾಗುತ್ತದೆ.
 *   ಜೀರಾ ರೈಸ್/ ಘೀ ರೈಸ್ / ಫ್ರಯ್ದ್ ರೈಸ್ ಗೂ  ಒಳ್ಳೆಯದಾಗಿ ಹೊಂದಿಕೊಳ್ಳುತ್ತದೆ .


ANDHRA ಚಾರು /ಸಾರು/ ರಸಂ

ಪದಾರ್ಥಗಳು:
 ತೊಗ್ರಿ ಬೇಳೆ  - ನಾಲ್ಕು ಚಮಚ 
 ಟೊಮೇಟೊ ಸಣ್ಣಗೆ ಹೆಚ್ಚಿದ್ದು  -  ಒಂದು  
 ಅರಿಶಿನ   -  ಕಾಲು ಚಮಚ 
 ಜಜ್ಜಿಟ್ಟ ಬೆಳ್ಳುಳ್ಳಿ  ಎಸಳು  -  ಹತ್ತು 
 ಕುಟ್ಟಿಟ್ಟ ಕಾಳುಮೆಣಸು    -  ಅರ್ದ ಚಮಚ  
 ಜೀರಿಗೆ ಪುಡಿ   -  ಅರ್ದ ಚಮಚ 
ಒಂದು ನಿಂಬೆ ಗಾತ್ರದ  ಹುಣಸೆಯ ರಸ 
 ಕರಿಬೇವು  - ಒಂದು ಗರಿ
 ತುಪ್ಪ   -ಒಂದು ಚಮಚ 
 ಉಪ್ಪು -  ರುಚಿಗೆ 
 ಕೊತ್ತಂಬರಿ ಸೊಪ್ಪು  - ಸ್ವಲ್ಪ.



ಮಾಡುವ ವಿಧಾನ:
   ೧.   ಮೊದಲು ಬೇಳೆ, ಟೊಮೇಟೊ ವನ್ನು  ಅರಿಶಿನ ಹಾಗು ನೀರನ್ನು ಹಾಕಿ ಕುಕ್ಕರಲ್ಲಿ ಮೃದುವಾಗಿ ಬೇಯಿಸಿಟ್ಟು    ಕೊಳ್ಳಬೇಕು.  
 ೨.  ಬೇಯಿಸಿದ ಬೇಳೆ ಟೊಮೇಟೊ ವನ್ನು  ಸಾರಿನ ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಹುಣಸೆರಸ, ಜೀರಿಗೆ ಪುಡಿ ,


                                                  ANDHRA ಚಾರು /ಸಾರು/ ರಸಂ
  ಜಜ್ಜಿದ ಬೆಳ್ಳುಳ್ಳಿ , ಕುಟ್ಟಿದ ಕಾಳು ಮೆಣಸು, ಉಪ್ಪು ಕರಿಬೇವು  ಹಾಗು ಕೊತ್ತಂಬರಿ ಸೊಪ್ಪನ್ನು ಹಿಡಿಸುವಷ್ಟು        ನೀರನ್ನು ಹಾಕಿ ಚನ್ನಾಗಿ ಕುದಿಸಿದರೆ ಘಮ  ಘಮಿಸುವ ಚಾರು ಸವಿಯಲು ಸಿದ್ದ.
  ೩. ಕೊನೆಯಲ್ಲಿ ತುಪ್ಪವನ್ನು ಮೇಲಿನಿಂದ ಹಾಕಬೇಕು.




Tuesday, January 17, 2012

STUFFED ಗೋಳಿಬಜೆ


STUFFED ಗೋಳಿಬಜೆ
ಸಾಮಗ್ರಿಗಳು:
 ಮೈದಾ ಹಿಟ್ಟು   -  ಒಂದು ಲೋಟ
 ಕಡ್ಲೆ ಹಿಟ್ಟು  -    ಎರಡು ಚಮಚ
 ಹಸಿಮೆಣಸು  -  ಎರಡು [ಸಣ್ಣಗೆ ಹೆಚ್ಚಿದ್ದು]
 ಹಸಿ ಶುಂಟಿ  -  ಒಂದಿಂಚು [ ಸಣ್ಣಗೆ ಹೆಚ್ಚಿದ್ದು]
ಈರುಳ್ಳಿ        ಎರಡು  [ ಸಣ್ಣಗೆ ಹೆಚ್ಚಿದ್ದು]
ಕೊತ್ತಂಬರಿ ಸೊಪ್ಪು - ಸ್ವಲ್ಪ[ಸಣ್ಣಗೆ ಹೆಚ್ಚಿದ್ದು]
 ಖಾರ ಪುಡಿ  -   ಒಂದು ಚಮಚ 
ಸಕ್ಕರೆ ಪುಡಿ  - ಅರ್ದ ಚಮಚ 
 ಬೇಕಿಂಗ್ ಪುಡಿ  -  ಚಿಟಿಕೆಯಷ್ಟು 
 ಸ್ವಲ್ಪ ಹುಳಿ ಮಜ್ಜಿಗೆ   -   ಎರಡು ಲೋಟ
 ರುಚಿಗೆ ಉಪ್ಪು  ಹಾಗು  ಕರಿಯಲು ಎಣ್ಣೆ.           

 ಮಾಡುವ ವಿಧಾನ:
 ಒಂದು ಅಗಲವಾದ ಪಾತ್ರೆಯಲ್ಲಿ, ಮೊದಲು ಮಜ್ಜಿಗೆ, ಸಕ್ಕರೆಪುಡಿ,  ಉಪ್ಪು, ಖಾರ ಪುಡಿ, ಬೇಕಿಂಗ್ ಪುಡಿ  ಹಾಕಿ ಚನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ನಂತರ ಆ ಮಿಶ್ರಣಕ್ಕೆ,  ಕೊತ್ತಂಬರಿ ಸೊಪ್ಪು ,ಈರುಳ್ಳಿ, ಹಸಿಮೆಣಸು, ಶುಂಟಿ, ಮೈದಾ ಹಿಟ್ಟು ಹಾಗು ಎರಡು ಚಮಚ ಕಡ್ಲೆ ಹಿಟ್ಟನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ
 ಕಲಿಸಿಕೊಳ್ಳಬೇಕು. ಒಲೆಯ ಮೇಲೆ ಎಣ್ಣೆ  ಕಾವಲಿಯನ್ನು ಇಟ್ಟು, ಎಣ್ಣೆ ಕಾದ ಬಳಿಕ, ಕೈಯಿಂದ ಅಥವಾ ಚಮಚದಿಂದ ಹಿಟ್ಟನ್ನು 
ಸ್ವಲ್ಪ ಸ್ವಲ್ಪ ಹಾಕಿ ಚನ್ನಾಗಿ ಕರಿದು ತೆಗೆಯಬೇಕು. ಗೋಳಿಬಜೆ ಗೆ ಯಾವುದೇ ಆಕಾರವಿರುವುದಿಲ್ಲ, ಬಿಸಿ ಬಿಸಿ stuffed ಗೋಳಿಬಜೆ ಕಾಫಿ/ ಚ ದೊಂದಿಗೆ ತಿನ್ನಲ್ಲು ಬಲು ರುಚಿಯಾಗಿರುತ್ತದೆ.

ಮದುವೆಮನೆ ಸಾರು [ VARDIKE MANTVA SAARU - IN KONKANI]

                    ಮದುವೆಮನೆ  ಸಾರು [ VARDIKE MANTVA SAARU

ಸಾರು  ತಯಾರಿಸಲು  ಬೇಕಾಗುವ  ಸಾಮಗ್ರಿಗಳು:

    ಟೊಮೇಟೊ ಹಣ್ಣು  ಸಣ್ಣಗೆ ಹೆಚ್ಚಿದ್ದು  -    ಎರಡು
    ಒಂದು ಲಿಂಬೆ ಗಾತ್ರದಷ್ಟು  ಹುಣಸೆ   - ನೀರಿನಲ್ಲಿ ನೆನಸಿ ರಸ ತೆಗೆದಿಡಬೇಕು
    ನೀರು    -   ೪-೫  ಲೋಟ
    ಉಪ್ಪು    -  ರುಚಿಗೆ ಬೇಕಾಗುವಷ್ಟು
   ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು  -  ಸ್ವಲ್ಪ.

ಸಾರಿನ ಪುಡಿ  ತಯಾರಿಸಲು ಬೇಕಾಗುವ ಸಾಮಗ್ರಿಗಳು:
   ಕೊತ್ತಂಬರಿ ಬೀಜ   -  ಒಂದು ಚಮಚ
   ಜೀರಿಗೆ    -    ಅರ್ದ ಚಮಚ
   ಮೆಂತ್ಯೆ ಕಾಳು  -  ಕಾಲು ಚಮಚ
   ಕಡ್ಲೆ ಬೇಳೆ   -   ಅರ್ದ ಚಮಚ
   ಗುಂಟೂರು ಮೆಣಸು  - ಎರಡು
   ಬ್ಯಾಡಗಿ ಮೆಣಸು   -  ಎರಡು
   ಕಾಯಿತುರಿ   -  ಒಂದು ಚಮಚ
   ಹಿಂಗು      -   ಸ್ವಲ್ಪ.
ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳ್ಳನ್ನು ಎಣ್ಣೆ ಹಾಕದೆ ಹುರಿದು ನುಣ್ಣಗೆ  ಪುಡಿ ಮಾಡಿಟ್ಟುಕೊಳ್ಳಬೇಕು.

   ಒಗ್ಗರಣೆಗೆ  ಬೇಕಾಗುವ ಸಾಮಗ್ರಿಗಳು:  ಒಂದು ಚಮಚ ತುಪ್ಪ/ ಕೊಬ್ಬರಿ ಎಣ್ಣೆ/,  ಸಾಸಿವೆ  ಅರ್ದ ಚಮಚ ಹಾಗು ಒಂದು ಗರಿ ಕರಿಬೇವು.


ಸಾರು ಮಾಡುವ ವಿಧಾನ :

   ಒಂದು ಪಾತ್ರೆಯಲ್ಲಿ  ನೀರನ್ನು ಹಾಕಿ , ಹೆಚ್ಚಿತ್ತ ಟೊಮೇಟೊ ವನ್ನು  ಬೇಯಿಸಬೇಕು. ಟೊಮೇಟೊ  ಬೆಂದ ಬಳಿಕ
       ಅದಕ್ಕೆ ಹುಣಸೆ ರಸವನ್ನು ಹಾಕಿ  ಕುದಿಸಬೇಕು. ಈಗ ಅದಕ್ಕೆ, ಸಾರಿನ ಪುಡಿ , ಉಪ್ಪು ಅರ್ದ ಚಮಚ ಬೆಲ್ಲದ ಪುಡಿ
    ಹಾಕಿ ಚನ್ನಾಗಿ ಕುದಿಸಬೇಕು. ಸಾರಿಗೆ ಚನ್ನಾಗಿ ಕುದಿ ಬಂದ ಬಳಿಕ, ಒಲೆಯ ಮೇಲಿಂದ ಸಾರಿನ ಪಾತ್ರೆಯನ್ನು ಇಳಿಸಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿ ಕೊತ್ತಂಬರಿ ಸೊಪ್ಪನ್ನು ಮೇಲ್ನಿಂದ ಹಾಕಿ ಮುಚ್ಚಿಡಬೇಕು.

ಕೊಂಕಣಿಗರ ಮದುವೆಗಳಲ್ಲಿ, ಸಾಂಪ್ರದಾಯಿಕವಾಗಿ  ಈ ವಿಧಾನದ ಸಾರನ್ನು ತಯಾರಿಸುತ್ತಾರೆ.