ಬಿಂಬುಲಿ ಉಪ್ಪಿನಕಾಯಿ/tree cucumber pickle
ಬೇಕಾಗುವ ಪದಾರ್ಥಗಳು:
ಬಿಂಬುಲಿ ಕಾಯಿ -25
ಬ್ಯಾಡಗಿ ಮೆಣಸು - ಹತ್ತು
ಗುಂಟೂರ್ ಮೆಣಸು - ಹತ್ತು
ಸಾಸಿವೆ - ಒಂದು ಚಮಚ
ಅರಿಶಿನ - ಸಣ್ಣ ತುಂಡು
ಹಿಂಗು - ಸಣ್ಣ ತುಂಡು
ಉಪ್ಪು - ರುಚಿಗೆ ತಕ್ಕಷ್ಟು .ಮಾಡುವ ವಿಧಾನ:
೧. ಮೊದಲು ಬಿಂಬುಲಿ ಕಾಯಿಗಳನ್ನು ತೊಳೆದು, ಬಟ್ಟೆಯಿಂದ ಒರೆಸಿ ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
೨. ಹೆಚ್ಚಿದ ಬಿಂಬುಲಿ ಕಾಯಿಗೆ ಹಿಡಿಸುವಷ್ಟು ಉಪ್ಪನ್ನು ಹಾಕಿ ಹದಿನೈದು ನಿಮಿಷ ಬಿಡಬೇಕು.
೩.mixerಲ್ಲಿ ಚನ್ನಾಗಿ ಬಿಸಿಲಿಗೆ ಒಣಗಿಸಿದ ಮೆಣಸಿನಕಾಯಿ, ಸಾಸಿವೆ ಅರಿಶಿನ ಹಿಂಗನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು.
ನಂತರ,ಕಾದಾರಿಸಿದ ನೀರನ್ನು ಹದವಾಗಿ ಹಾಕಿ ನುಣ್ಣಗೆ ರುಬ್ಬಿಕೊಳ್ಳ ಬೇಕು.
೪.ರುಬ್ಬಿದ ಮಸಾಲೆ ತಣ್ಣಗಾದ ಬಳಿಕ, ಹೆಚ್ಚಿಟ್ಟ ಬಿಂಬುಲಿ ಕಾಯಿಗೆ ಬೆರಸಬೇಕು. ಸ್ವಲ್ಪ ರುಚಿ ನೋಡಿ, ಉಪ್ಪು ಕಮ್ಮಿಯಾದಲ್ಲಿ
ಉಪ್ಪನ್ನು ಹಾಕಿಕೊಳ್ಳಬೇಕು.
೫. ಇದು ತಕ್ಷಣವೇ ತಿನ್ನಬಹುದಾದ ಉಪ್ಪಿನಕಾಯಿ. refrigerator ನಲ್ಲಿಟ್ಟರೆ ಒಂದು ತಿಂಗಳಾದರೂ ಕೆಡುವುದಿಲ್ಲ.
No comments:
Post a Comment