ಬಟಾಟೆ ಫೋವು /batate phovu
ಬೇಕಾಗುವ ಪದಾರ್ಥಗಳು
ನೆನಸಿ ತೆಗೆದಿಟ್ಟ ಮೀಡಿಯಂ ಅವಲಕ್ಕಿ - 1/4 kg
ಬೇಯಿಸಿದ ಅಲೂಗಡ್ಡೆ ಚೂರುಗಳು -ಒಂದು ಕಪ್ಪು
ಸಣ್ಣಗೆ ಹೆಚ್ಚಿದ ಈರುಳ್ಳಿ - ಒಂದು
ಸಣ್ಣಗೆ ಕತ್ತರಿಸಿದ ಹಸಿಮೆಣಸು - ನಾಲ್ಕು
ಸಣ್ಣಗೆ ಕತ್ತರಿಸಿದ ಕರಿಎವಿನ ಎಲೆ - ಒಂದು ಗರಿ
ಒಣಮೆಣಸು - ಒಂದು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಎಣ್ಣೆ - ಎರಡು ಚಮಚ
ತುಪ್ಪ - ಎರಡು ಚಮಚ
ಸಾಸಿವೆ - ಸ್ವಲ್ಪ
ಶೇಂಗ ಬೀಜ -ಸ್ವಲ್ಪ
ಹಿಂಗು - ಒಂದು ಚಿಟಿಕೆಯಷ್ಟು
ಅರಿಶಿನ ಪುಡಿ - ಒಂದು ಚಿಟಿಕೆಯಷ್ಟು
ಖಾರ ಪುಡಿ - [ಹೆಚ್ಚು ಖಾರ ಬೇಕಾದಲ್ಲಿ ] ಸ್ವಲ್ಪ
ಸಕ್ಕರೆ - ಅದ ಚಮಚ
ಕಾಯಿ ತುರಿ - ಕಾಲು ಕಪ್ಪು
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಯೊಂದಿಗೆ ತುಪ್ಪವನ್ನು ಹಾಕಿ ಕಾಯಿಸಬೇಕು.ಬಳಿಕ ಒಗ್ಗರೆಣೆಗೆ ತಿಳಿಸಿದ ಪದಾರ್ಥಗಳನ್ನು
ಹಾಕಿ ಒಗ್ಗರಿಸಬೇಕು.[ಸಾಸಿವೆ,ಜೀರಿಗೆ, ಹಿಂಗು, ಉದ್ದಿನಬೇಳೆ, ಕಡ್ಲೆ ಬೀಜ,ಕರಿಬೇವು ಹಸಿಮೆಣಸು ,ಒಣಮೆಣಸು] ಅದರಲ್ಲಿಯೇ, ಹೆಚ್ಚಿಟ್ಟ ಈರುಳ್ಳಿಯನ್ನು +ಆಲೂಗಡ್ಡೆ ಹಾಕಿ ಚನ್ನಾಗಿ ಬಾಡಿಸಿಕೊಳ್ಳಬೇಕು. ಈಗ ಅರಿಶಿನ, ಉಪ್ಪು ಹಾಕಿ
ನೆನಸಿ ತೆಗೆದಿಟ್ಟ ಅವಲಕ್ಕಿಯನ್ನು ಹಾಕಿಕೊಂಡು ಬೆರಸಿಕೊಳ್ಳಬೇಕು. ಬೇಕಾದಲ್ಲಿ ಸ್ವಲ್ಪ ಮೆಣಸಿನಪುಡಿ,ಸಕ್ಕರೆಯನ್ನು ಸೇರಿಸಬಹುದು.ಬಾಣಲೆ ಕೆಳಗಿಳಿಸಿದ ನಂತರ ಕಾಯಿತುರಿ, ಲಿಂಬೆರಸ ಹಾಕಿ ಬೆರಸಿ ಮೇಲಿನಿಂದ ಕೊತ್ತಂಬರಿಸೊಪ್ಪನ್ನು ಹಾಕಿ ಅಲಂಕರಿಸಿದರೆ, ರುಚಿಕರವಾದ ಸ್ವಾಧಿಷ್ಟವಾದ ಬಟಾಟೆ ಫೋವು ರೆಡಿ.
No comments:
Post a Comment