BLOG FOLLOWERS

Tuesday, December 4, 2012

ಒರಳ್ ಕಲ್ಲು ಚಿತ್ರಾನ್ನ/ ರುಬ್ಬಿ ಮಾಡಿದ ಚಿತ್ರಾನ್ನ

ಒರಳ್ ಕಲ್ಲು  ಚಿತ್ರಾನ್ನ/ ರುಬ್ಬಿ ಮಾಡಿದ ಚಿತ್ರಾನ್ನ 

ಬೇಕಾಗುವ ಪದಾರ್ಥಗಳು:
 ಉದ್ರುದಾದ ಅನ್ನ -   ಎರಡು ಬಟ್ಟಲು
 ಉಪ್ಪು  -  ಸ್ವಲ್ಪ
ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು ಸ್ವಲ್ಪ.
 ರುಬ್ಬಿಕೊಳ್ಳಲು  ಬೇಕಾಗುವ ಪದಾರ್ಥಗಳು:
 ಕಾಯಿ ತುರಿ  - ಅರ್ದ ಬಟ್ಟಲು 
 ಹುರಿದ  ಕೆಂಪು ಮೆಣಸಿನಕಾಯಿ - ಮೂರು ಅಥವಾ ನಾಲ್ಕು 
 ಹುಣಸೆ ಹುಳಿ  - ಸಣ್ಣ ತುಂಡು 
 ಸಾಸಿವೆ  -  ಕಾಲು ಚಮಚ 
 ಬೆಲ್ಲ  - ಸಣ್ಣ ತುಂಡು 

 ಕಾಯಿತುರಿ ಸ್ವಲ್ಪ ಬೆಚ್ಚಗೆ ಹುರಿದುಕೊಂಡು, ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳ್ಳನ್ನು  ಸೇರಿಸಿಕೊಂಡು  ನೀರು ಹಾಕಿಕೊಳ್ಳದೇ  ರುಬ್ಬಿಕೊಳ್ಳಬೇಕು. 
 ಒಗ್ಗರಣೆ ಗೆ  ಬೇಕಾಗುವ ಪದಾರ್ಥಗಳು:
 ಎಣ್ಣೆ   -  ಎರಡು ಚಮಚ 
 ಸಾಸಿವೆ - ಕಾಲು ಚಮಚ 
 ಕಡ್ಲೆಬೇಳೆ - ಅರ್ದ ಚಮಚ 
ಉದ್ದಿನಬೇಳೆ  - ಅರ್ದಚಮಚ 
ಶೇಂಗಾ ಬೀಜ  - ಸ್ವಲ್ಪ 
ಅರಿಶಿನ  - ಒಂದು ಚಿಟಿಕೆಯಷ್ಟು 
ಹಿಂಗು  - ಒಂದು ಚಿಟಿಕೆ .

 ಮಾಡುವ ವಿಧಾನ:
೧. ಒಂದು ಬಾಣಲೆಯಲ್ಲಿ, ಎರಡು ಚಮಚ ಎಣ್ಣೆ ಹಾಕಿ, ಬಿಸಿಯಾದ ಬಳಿಕ, ಒಗ್ಗರಣೆಗೆ ತಿಳಿಸಿದ ಎಲ್ಲಾ ಪದಾರ್ಥಗಲ್ಲನ್ನು ಒಂದೊಂದಾಗಿ ಹಾಕಿ ಒಗ್ಗರಸಿ ಕೊಳ್ಳಬೇಕು.
೨. ರುಬ್ಬಿಟ್ಟ  ಮಸಾಲೆಯನ್ನು  ಒಗ್ಗರಣೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು.
೩. ಹೀಗೆ ಸಿದ್ದವಾದ ಮಸಾಲೆಗೆ, ಉಪ್ಪು, ಹಾಗು ಅನ್ನವನ್ನು ಹಾಕಿ ಕಲಸಿ ಮೇಲಿನಿಂದ ಕೊತ್ತಂಬರಿಸೊಪ್ಪನ್ನು ಉದುರಿಸಿದರೆ 
    ಚಿತ್ರಾನ್ನ ಸಿದ್ದವಾಗುತ್ತದೆ.


೪. ಬೇಕಿದ್ದಲ್ಲಿ ಸ್ವಲ್ಪ ಕಾಯಿತುರಿಯನ್ನು ಬಡಿಸುವಾಗ/ತಿನ್ನುವಾಗ ಹಾಕಿಕೊಳ್ಳಬಹುದು.


ಮಿಂಚು: ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಎನ್ನನ್ನು ಯೋಚಿಸುತ್ತಿರೂ ಅದರ ಬಗ್ಗೆ ಎಚ್ಚರದಿಂದಿರಿ 
                                                                                                                 -ಸ್ವಾಮಿ ವಿವೇಕಾನಂದ.

1 comment:

  1. ee chitranna vibhinnavagide. eshtaralle maadi saviyuttene. dhanyavadagalu.

    ReplyDelete