BLOG FOLLOWERS

Monday, January 21, 2013

ಅಲೂ ಪಾಲಕ್

ಅಲೂ ಪಾಲಕ್ 

ಬೇಕಾಗುವ ಪದಾರ್ಥಗಳು:

ಪಾಲಕ್ ಸೊಪ್ಪು  -  ಎರಡು ಕಟ್ಟು / 1/2 kg
ಆಲೂಗಡ್ಡೆ   - 3[ಬೇಯಿಸಿ,ಸಣ್ಣದಾಗಿ ಹೆಚ್ಚಿಟ್ಟು ಕೊಳ್ಳಬೇಕು]
ಈರುಳ್ಳಿ   - ಎರಡು [ಹದ ಗಾತ್ರದ್ದು]
ಟೊಮೇಟೊ  -ಎರಡು [ಸಣ್ಣಗೆ ಹೆಚ್ಚಿದ್ದು]
ಶುಂಟಿ-ಬೆಳ್ಳುಳ್ಳಿ  ಪೇಸ್ಟ್   - ಒಂದು ಚಮಚ
ಕೊತ್ತಂಬರಿ ಸೊಪ್ಪು  -  ಅರ್ದ ಕಪ್ಪು
ಕೆಂಪು ಮೆಣಸಿನ ಪುಡಿ  - ಕಾಲು ಚಮಚ
ಗರಂ ಮಸಾಲೆ ಪುಡಿ  -  ಅರ್ದ ಚಮಚ
ಹಸಿಮೆಣಸು[ಖಾರ ಬೇಕಾದಲ್ಲಿ ಮಾತ್ರ]  -  ಎರಡು   
ಅರಿಶಿನ ಪುಡಿ  - ಚಿಟಿಕೆಯಷ್ಟು
ಸಕ್ಕರೆ  -  ಕಾಲು ಚಮಚ
ಉಪ್ಪು  - ರುಚಿಗೆ ತಕ್ಕಷ್ಟು
ಹಾಲಿನ ಕೆನೆ  - ಒಂದು ಚಮಚ
 ಎಣ್ಣೆ   -  ಎರಡು ಚಮಚ .


ಮಾಡುವ ವಿಧಾನ:

೧. ಪಾಲಕ್ ಹಾಗು ಕೊತ್ತಂಬರಿ ಸೊಪ್ಪನ್ನು ಚನ್ನಾಗಿ ತೊಳೆದು, ಹಸಿಮೆಣಸಿನೊಂದಿಗೆ ಕುಕ್ಕರ್   ಲ್ಲಿ ಒಂದು ಸಿಟಿ ತೆಗೆದು ಬೇಯಿಸಿಕೊಳ್ಳಬೇಕು.ಸಿಪ್ಪೆ ತೆಗೆದು ಆಲೂಗಡ್ಡೆ ಯನ್ನು ಬೇಯಿಸಿಕೊಳ್ಳಬೇಕು.
೨.ಬೆಂದ ಸೊಪ್ಪು,ತಣಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು[ಪೇಸ್ಟ್]
೩.ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು.
೪. ಎಣ್ಣೆ  ಬಿಸಿಯಾದ ಬಳಿಕ ಉದ್ದಕ್ಕೆ ಹೆಚ್ಚಿಟ್ಟ ಈರುಳ್ಳಿ ಯನ್ನು ಹಾಕಿ ಸ್ವಲ್ಪ ನಸುಗೆಂಪು ಆಗುವವರೆಗೂ ಹುರಿದುಕೊಂಡು,
     ಕೂಡಲೇ ಶುಂಟಿ-ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಸ್ವಲ್ಪ ಬಾಡಿಸಿಕೊಂಡು ಹೆಚ್ಚಿಟ್ಟ ಟೊಮ್ಯಾಟೋ ವನ್ನು ಹಾಕಿ ಮೆದುವಾಗುವರೆಗೂ    ಬಾಡಿಸಿ ಕೊಳ್ಳಬೇಕು..ಅದರಲ್ಲಿಯೇ ಸೊಪ್ಪಿನ ಪೇಸ್ಟನ್ನು ಹಾಕಿ ಸ್ವಲ್ಪ ಬಾಡಿಸಿ ಒಂದು ಕುದಿ  ಬಂದ  ಬಳಿಕ ಬೇಯಿಸಿ ಹೆಚ್ಚಿಟ್ಟ  ಆಲೂಗಡ್ಡೆ ಯನ್ನು ಹಾಕಬೇಕು.
೫. ಈಗಮೇಲೆ ತಿಳಿಸಿದ  ಒಂದೊಂದೇ ಪುಡಿ ಗಳ್ಳನ್ನು ಹಾಕಿಕೊಂಡು,ಜೊತೆಗೆ ಉಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ಹತ್ತು  
   ನಿಮಿಷ ಬೇಯಿಸಿಕೊಳ್ಳಬೇಕು.[ನೀರನ್ನು ಹಾಕುವ ಅವಶ್ಯಕತೆಯಿಲ್ಲ]
೬. ಗ್ರೇವಿ ಸ್ವಲ್ಪ thick ಆಗಿರಬೇಕು.ಕೊನೆಯಲ್ಲಿ ಒಂದು ಚಮಚ ಹಾಲಿನ ಕೆನೆಯನ್ನು ಹಾಕಿ ಅಲಂಕರಿಸಿದರೆ,                 
     ರುಚಿ-ರುಚಿಯಾದ ಆಲೂ -ಪಾಲಕ್ ಸವಿಯಲು ಸಿದ್ದವಾಗುತ್ತದೆ.

* ಜೀರಾ ರೈಸ್ ,ಚಪಾತಿ, ಪೂರಿ,ಪರಾಟದೊಟ್ಟಿ ಗೆ ತಿನ್ನಲು ಬಲು ರುಚಿಯಾಗಿರುತ್ತದೆ. 


ಮಿಂಚು: ದೇವರಲ್ಲಿ ನಂಬಿಕೆ ಇರಿಸಿ ದಿನವನ್ನು ಸಕಾರಾತ್ಮವಾಗಿ ಯೋಚಿಸಿ ಮುನ್ನಡೆಯಬೇಕು.ಇವೆರಡರೊಂದಿಗೆ ನಾವು ನಿರ್ವಹಿಸುವ ಕಾರ್ಯದಲ್ಲಿ ಶ್ರದ್ದೆ ಮತ್ತು ಶ್ರಮವಿದ್ದರೆ ಯಶಸ್ಸು ತನ್ನಿಂದ ತಾನೇ ನಮಗೆ ದೊರಕುತ್ತದೆ.








No comments:

Post a Comment