ಬೀಟ್ರೂಟ್ ಪಲ್ಯ/ ಬೀಟ್ರೂಟ್ ಬುತ್ತಿ
ಬೇಕಾಗುವ ಪದಾರ್ಥಗಳು:
ಹದ ಗಾತ್ರದ ಬೀಟ್ರೂಟ್ - ಒಂದು
ಕಾಯಿತುರಿ - ಅರ್ದ ಕಪ್ಪು
ಹುರಿದ ಒಣಮೆಣಸು - ನಾಲ್ಕು
ಹುಣಸೆ - ಸಣ್ಣ ತುಂಡು
ಹಸಿ ಕೊತ್ತಂಬರಿ - ಒಂದು ದೊಡ್ಡ ಚಮಚ
ಎಣ್ಣೆ - ಎರಡು ದೊಡ್ಡ ಚಮಚ
ಸಾಸಿವೆ - ಒಂದು ಸಣ್ಣ ಚಮಚ
ಒಣ ಮೆಣಸು - ಒಂದು
ಕರಿಬೇವು - ಒಂದುಗರಿ
ಉಪ್ಪು - ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
೧. ಮೊದಲು ಬೀಟ್ರೂಟ್ ಹಾಗು ಈರುಳ್ಳಿಯನ್ನು ತೊಳೆದು ಸಣ್ಣಗೆ ಹೆಚ್ಚಿಟ್ಟು ಕೊಳ್ಳಬೇಕು.
೨.ಬಾಣಲೆಯಲ್ಲಿ/ಕುಕ್ಕರ್ ಪ್ಯಾನ್ ನಲ್ಲಿ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಸಾಸಿವೆ, ಒಣಮೆಣಸು, ಕರಿಬೇವು
೩.ಬಳಿಕ ಹೆಚ್ಚಿಟ್ಟ ಬೀಟ್ರೂಟ್ , ಉಪ್ಪನ್ನುಸ್ವಲ್ಪ ನೀರನ್ನು ಹಾಕಿ ಬೇಯಿಸಬೇಕು.
೪.ಮಿಕ್ಸಿ ಜಾರಿನಲ್ಲಿ ಕಾಯಿತುರಿ,ಹುರಿದಮೆಣಸು,ಹುಣಸೆ ಹಾಗು ಹಸಿ ಕೊತ್ತಂಬರಿಯನ್ನು ಹಾಕಿ ರುಬ್ಬಿಕೊಳ್ಳಬೇಕು.
೫. ಅರ್ದ ಬೆಂದ ಬೀಟ್ರೂಟ್ ಗೆ ರುಬ್ಬಿದ ಮಸಾಲೆಯನ್ನು ಹಾಕಿ ಚನ್ನಾಗಿ ಬೇಯಿಸಿದರೆ ಪಲ್ಯ ಸಿದ್ದವಾಗುತ್ತದೆ.
* ಪಲ್ಯ ವನ್ನು ಕುಕ್ಕರ್ ನಲ್ಲಿ ತಯಾರಿಸುವುದಾದರೆ ಪ್ಯಾನ್ ನಲ್ಲಿ ಒಗ್ಗರಣೆ ಮಾಡಿಕೊಂಡು,ಕೂಡಲೇ ಹೆಚ್ಚಿಟ್ಟ ಬೀಟ್ರೂಟ್ ಉಪ್ಪು ,ರುಬ್ಬಿದ ಮಸಾಲೆ ಹಾಗು ಸ್ವಲ್ಪ ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚಿ, ಮೂರು ಸಿಟಿ ತೆಗೆದರೆ ಹತ್ತು ನಿಮಿಷದಲ್ಲಿ ಪಲ್ಯ ಸಿದ್ದವಾಗುತ್ತದೆ.
* ಬೀಟ್ರೂಟ್ ಪಲ್ಯ/ ಬೀಟ್ರೂಟ್ ಬುತ್ತಿ ಚಪಾತಿ ಪೂರಿ ಅನ್ನದೊಟ್ಟಿ ಗೆ ತಿನ್ನಬಹುದು.
* ಇದೇ ಮಸಾಲೆಯಿಂದ ಬೇರೆ ತರಕಾರಿಗಳಾದ ಕ್ಯಾಬೇಜ್, ಹೂ ಕೋಸು, ಆಲುಗಡ್ಡೆ, ತೊಂಡೆಕಾಯಿ ದೀವಿಹಲಸು ಇತ್ಯಾದಿ ತರಕಾರಿಗಳಿಂದ .ಪಲ್ಯವನ್ನು ಮಾಡಬಹುದು.ಬರೀ ಈರುಳ್ಳಿ ಬುತ್ತಿಯನ್ನು ಮಾಡಬಹುದು.
No comments:
Post a Comment