ಅಲೂ ಕಟ್ಟಾ ಮಿಟ್ಟ
ಬೇಕಾಗುವ ಪದಾರ್ಥಗಳು
ಈರುಳ್ಳಿ - ಒಂದು
ಟೊಮೇಟೊ - ಒಂದು
ಮೊಸರು - ಅರ್ದ ಕಪ್ಪು
ಖಾರಪುಡಿ - ಸ್ವಲ್ಪ
ಚಾಟ್ ಮಸಾಲಾ ಪುಡಿ - ಸ್ವಲ್ಪ
ಬೆಲ್ಲದ ಪಾಕ - ಸ್ವಲ್ಪ
ಹುಣಸೆ ರಸ -ಸ್ವಲ್ಪ
ಉಪ್ಪು - ರುಚಿಗೆ, ಸ್ವಲ್ಪ.
ಕೊತ್ತಂಬರಿ ಸೊಪ್ಪು - ಸ್ವಲ್ಪ
ಎಣ್ಣೆ - ಎರಡು ದೊಡ್ಡ ಚಮಚ
ಮಸಾಲೆ ಶೇಂಗಾ - ಸ್ವಲ್ಪ
ಶೇವು -ಸ್ವಲ್ಪ.
1. ಬೇಯಿಸಿದ ಅಲೂಗಡ್ಡೆ ಯ ಸಿಪ್ಪೆ ತೆಗೆದು, slice ಮಾಡಿಕೊಳ್ಳಬೇಕು
2.ಈರುಳ್ಳಿ,ಟೊಮೇಟೊ, ಕೊತ್ತಂಬರಿ ಸೊಪ್ಪನ್ನು ಚನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು.
3.ದೋಸೆ ತವಾ ಬಿಸಿಮಾಡಿ, slice ಮಾಡಿಟ್ಟ ಅಲೂಗಡ್ಡೆ ಯನ್ನು ಸ್ವಲ್ಪವೇ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಬೇಕು.
4. ಹುರಿದ ಆಲೂ ಸ್ಲೈಸ್ ಗಳ್ಳನ್ನು ತಟ್ಟೆಯಲ್ಲಿ ಜೋಡಿಸಿಕೊಳ್ಳಬೇಕು.
5. ಈಗ ಆ ಸ್ಲೈಸ್ ಗಳ ಮೇಲೆ, ಮೊದಲಿಗೆ ಮೊಸರು, ನಂತರ ಈರುಳ್ಳಿ, ಟೊಮೇಟೊ, ಬೆಲ್ಲದ ರಸ[ಪಾಕ] ಹುಣಸೆ ರಸ
6. ಕೊನೆಯಲ್ಲಿ ಸ್ವಲ್ಪ ಮಸಾಲೆ ಕಡಲೆ ಹಾಗೂ ತೆಳ್ಳಗೆ ಇರುವ ಶೇವ್ ನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ
ಕಟ್ಟಾ - ಮೀಟಾ ಆಲೂ ರೆಡಿಯಾಗುತ್ತದೆ.
No comments:
Post a Comment