BLOG FOLLOWERS

Saturday, November 3, 2012

ಗೋದಿ ನುಚ್ಚು ಉಪ್ಪಿಟ್ಟು / broken wheat upma

ಗೋದಿ ನುಚ್ಚು ಉಪ್ಪಿಟ್ಟು / broken wheat upma

ingredients:

ಗೋದಿ  ನುಚ್ಚು  -  ಒಂದು ಅಳತೆ [ಒಂದು  -ಲೋಟ ]          
ನೀರು   -     ಮೂರು ಅಳತೆ 
ಮಿಶ್ರ ತರಕಾರಿ ತುಂಡುಗಳು  - ಸ್ವಲ್ಪ 
ಹಸಿಮೆಣಸು  -  ಎರಡರಿಂದ ಮೂರು 
ಉಪ್ಪು   - ರುಚಿಗೆ ತಕ್ಕಷ್ಟು 
ಕಾಯಿ ತುರಿ  - ಸ್ವಲ್ಪ 
ಕೊತ್ತಂಬರಿ ಸೊಪ್ಪು - ಸ್ವಲ್ಪ 
ಲಿಂಬೆ ರಸ  -ಒಂದು ಚಮಚ 
ಒಗ್ಗರಣೆಗೆ :  
ಎಣ್ಣೆ     -  ಎರಡು ಚಮಚ 
ಸಾಸಿವೆ  - ಅರ್ದ ಚಮಚ 
ಉದ್ದಿನ ಬೇಳೆ  -  ಅರ್ದ ಚಮಚ 
ಕರಿಬೇವು  - ಒಂದು 
 ಸಣ್ಣಗೆ  ಹೆಚ್ಚಿದ ಈರುಳ್ಳಿ  - ಒಂದು.






 ಮಾಡುವ ವಿಧಾನ :
   1. ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. 
   2. ಎಣ್ಣೆ ಬಿಸಿಯಾದ ಕೂಡಲೇ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಬಳಿಕ ಉದ್ದಿನಬೇಳೆ , ಹಸಿಮೆಣಸು, ಕರಿಬೇವು, 
       ಹೆಚ್ಚಿಟ್ಟ  ಈರುಳ್ಳಿ ಹಾಕಿ ಚನ್ನಾಗಿ ಬಾಡಿಸಿಕೊಳ್ಳಬೇಕು.
   3. ಅದರಲ್ಲಿ ತರಕಾರಿ ಹೊಳುಗಳ್ಳ ನ್ನು ಹಾಕಿ ಕೊಂಡು, ನೀರನ್ನು ಹಾಕಿ, ಕುದಿ ಯಲು ಬೀಡಬೇಕು.
  4.  ನೀರಿಗೆ ಕುದಿ  ಬರುವಾಗ , ಗೋದಿ ನುಚ್ಚು , ಉಪ್ಪು  ಹಾಕಿ ಚನ್ನಾಗಿ ಬೆರಸಿ,ಮುಚ್ಚಳ ಮುಚ್ಚಿ  ಸಣ್ಣ ಉರಿಯಲ್ಲಿ ಸುಮಾರು 
       ಹತ್ತು /ಹದಿನೈದು ನಿಮಿಷ ಬೇಯಿಸಿದರೆ  ಗೋದಿ ನುಚ್ಚಿನ ಉಪ್ಪಿಟ್ಟು ಸಿದ್ದ ವಾಗುತ್ತದೆ.
  5. ಉರಿ ತೆಗೆದು ಬಾಣಲೆ ಕೆಳಗೆ ಇಟ್ಟ  ಬಳಿಕ , ಲಿಂಬೆ ರಸ- ಕಾಯಿತುರಿ ಹಾಕಿ ಬೆರಸಿ ಮೇಲಿನಿಂದ ಕೊತ್ತಂಬರಿ 
      ಸೊಪ್ಪನ್ನು ಹಾಕಿ ಅಲಂಕರಿಸಿದರೆ ಆರೋಗ್ಯಕರವಾದ / ರುಚಿ-ರುಚಿಯಾದ ಗೋದಿ ನುಚ್ಚಿನ ಉಪ್ಪಿಟ್ಟು ready to eat.


No comments:

Post a Comment