ಮಲ್ಲಿಗೆ ದೋಸೆ
ಬೇಕಾಗುವ ಪದಾರ್ಥಗಳು:
ದೋಸೆ ಅಕ್ಕಿ - ಒಂದು ಕಪ್ಪು
ಉದ್ದಿನಬೇಳೆ - ಅರ್ದ ಕಪ್ಪು
ಅನ್ನ - ನಾಲ್ಕು ಚಮಚ
ಅವಲಕ್ಕಿ - ನಾಲ್ಕು ಚಮಚ (ನೆನಸಿದ್ದು)
ಮೆಂತ್ಯೆ ಕಾಳು - ಒಂದು ಸಣ್ಣ ಚಮಚ
ಉಪ್ಪು.
ಮಾಡುವ ವಿಧಾನ:
1. ಅಕ್ಕಿ, ಉದ್ದು, ಮೆಂತ್ಯೆ 2 ರಿಂದ 3 ಗಂಟೆ ಗಳ ಕಾಲ ನೆನಸಿಡಬೇಕು.
2. ನೆನದ ಅಕ್ಕಿ ಉದ್ದು ಮೆಂತ್ಯೆಯೋಟ್ಟಿಗೆ ಅವಲಕ್ಕಿ, ಅನ್ನ ವನ್ನು ಸೇರಿಸಿ ನಯವಾಗಿ ರುಬ್ಬಿ, ಉಪ್ಪು ಸೇರಿಸಿ
7ರಿಂದ 8 ಗಂಟೆಗಳ ಕಾಲ ಮುಚ್ಚಿಡ ಬೇಕು.[ ಸ್ವಲ್ಪ ಹುಳಿ ಬರಲು]
3. ಹೀಗೆ ತಯಾರಾದ ಹಿಟ್ಟಿನ್ನು, ಕಾಯಿಸಿದ [ಮಧ್ಯಮ ಉರಿ] ದೋಸೆ ಕಾವಲಿಯಲ್ಲಿ ಸ್ವಲ್ಪ ಎಣ್ಣೆ ಹಚ್ಚಿ, ಒಂದು ಸವಟು
ಹಿಟ್ಟನ್ನು ಹಾಕಿ, ಸ್ವಲ್ಪವೇ ಹರಡಿ ಮುಚ್ಚಳ ವನ್ನು ಮುಚ್ಚಿ ಕಾಯಿಸಬೇಕು.
ಸೂಚನೆ : 1. ದೋಸೆಯನ್ನು ಒಂದೇ ಬದಿ ಕಾಯಿಸಿಯು ತಿನ್ನಬಹುದು. ಎರಡೂ ಬದಿಯನ್ನು ಕಾಯಿಸಿಯೂ ತಿನ್ನಬಹುದು.
ಬೇಕಾದಲ್ಲಿ ಸ್ವಲ್ಪ ಸಣ್ಣಗೆ ಹೆಚ್ಚಿದ ಟೊಮೇಟೊ, ಈರುಳ್ಳಿ ಹಸಿಮೆಣಸು ಕೊತ್ತಂಬರಿ ಸೊಪ್ಪನ್ನು
ಸೇರಿಸಿ ದೋಸೆ ಮಾಡಿಕೊಳ್ಳಬಹುದು.
2. ಕಾಯಿತುರಿ ಪುಟಾಣಿ,ಹುಣಸೆ ಹಸಿಮೆಣಸು ಒಂದು ಬೆಳ್ಳುಳ್ಳಿ ಬೀಜ , ಉಪ್ಪು ಹಾಕಿ ತಯಾರಿಸಿದ ಚಟ್ನಿ
ಒಟ್ಟಿಗೆ ಸವಿಯಲು ಮಲ್ಲಿಗೆ ದೋಸೆ ರುಚಿಕರವಾಗಿರುತ್ತದೆ.

No comments:
Post a Comment