BLOG FOLLOWERS

Friday, October 12, 2012

ಹುಣಸೆ ಹಣ್ಣಿನ ಸಾರು

ಹುಣಸೆ ಹಣ್ಣಿನ ಸಾರು 

ಬೇಕಾಗುವ ಪದಾರ್ಥಗಳು:
ಹುಣಸೆ ರಸ   - ಒಂದು ಕಪ್ಪು 
ನೀರು   -  ಒಂದು ಲೀಟರ್ 
ಬೆಲ್ಲದ ಪುಡಿ  - ಅರ್ದ ಚಮಚ 
ತುಪ್ಪ  - ಎರಡು ಚಮಚ
ಕಾಳು ಮೆಣಸು / ಪುಡಿ  -  ಅರ್ದ ಚಮಚ 
ಜೀರಿಗೆ  -  ಅರ್ದ ಚಮಚ 
ಸಾಸಿವೆ  - ಕಾಲು ಚಮಚ 
ಹಿಂಗು  - ಕಾಳಿನಷ್ಟು 


ಒಣ ಮೆಣಸು  - ಎರಡು 
ಕರಿಬೇವು  - ಒಂದು ಗರಿ 
ಕೊತ್ತಂಬರಿ ಸೊಪ್ಪು  -  4 ರಿಂದ 5 ಕಡ್ಡಿ 
ಉಪ್ಪು  - ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:
1. ಮೊದಲು  ದಪ್ಪ ತಳದ ಪಾತ್ರೆಯಲ್ಲಿ  ಎರಡು ಚಮಚ ತುಪ್ಪ ವನ್ನು ಹಾಕಿ ಕಾಯಿಸಿ.
2. ತುಪ್ಪ ಕಾದ ಬಳಿಕ ಸಾಸಿವೆ , ಜೀರಿಗೆ , ಹಿಂಗು, ಒಣ ಮೆಣಸು, ಕಾಳು ಮೆಣಸು ಪುಡಿ, ಕರಿಬೇವು  ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು.
3. ಆದೇ  ಒಗ್ಗರಣೆಯಲ್ಲಿ ಹುಣಸೆ ರಸ, ನೀರು, ಬೆಲ್ಲ, ಉಪ್ಪು ಕೊತ್ತಂಬರಿ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಚನ್ನಾಗಿ ಕುದಿಸಿದರೆ 
  ರುಚಿ ರುಚಿಯಾದ ಸಾರು ಸಿದ್ದವಾಗುತ್ತದೆ.

ಬಿಸಿ ಬಿಸಿ ಅನ್ನದೊಟ್ಟಿ ಗೆ / ಸೂಪ್ ರೀತಿಯಲ್ಲಿ  ಸವಿಯಬಹುದು.

No comments:

Post a Comment