BLOG FOLLOWERS

Sunday, November 27, 2011

ದಾಲ್ ಪಾಲಕ್ / DAL PAALAK

ದಾಲ್ ಪಾಲಕ್ / DAL PAALAK

ಬೇಕಾಗುವ ಪದಾರ್ಥಗಳು: 
 ಪಾಲಕ್ ಸೊಪ್ಪು  -   ಎರಡು ಕಟ್ಟು 

ಮಸ್ಸೂರ್ ದಾಲ್/ತೊಗರಿ ಬೇಳೆ   -  ಒಂದು ಕಪ್ 

ಈರುಳ್ಳಿ     -    ಎರಡು
ಟೊಮೇಟೊ   -   ಎರಡು 
ಶುಂಟಿ- ಹಸಿಮೆಣಸು ಪೇಸ್ಟ್/ ಬೆಳ್ಳುಳ್ಳಿ-ಹಸಿಮೆಣಸು ಪೇಸ್ಟ್   -   ಎರಡು ಚಮಚ 
ಅರಿಶಿನ   - ಕಾಲು ಚಮಚ 
ಕೆಂಪು ಮೆಣಸಿನ ಪುಡಿ   - ಒಂದು ಚಮಚ
ಉಪ್ಪು  -  ರುಚಿಗೆ  ತಕ್ಕಷ್ಟು 
ಸಕ್ಕರೆ   - ಅರ್ದ ಚಮಚ

 ಮಾಡುವ ವಿಧಾನ:

ಬೇಳೆ ಹಾಗು ಪಾಲಕ್ ಸೊಪ್ಪನ್ನು ಕುಕ್ಕರ್ ಲ್ಲಿ  ಹಾಕಿ  ಜೊತೆಗೆ ಸ್ವಲ್ಪ ನೀರನ್ನು ಸೇರಿಸಿ, ಚನ್ನಾಗಿ ಬೇಯಿಸಿಟ್ಟುಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿಟ್ಟ ಈರುಳ್ಳಿ ಯನ್ನು ಹುರಿದುಕೊಳ್ಳಬೇಕು. ಈಗ ಇದಕ್ಕೆಶುಂಟಿ-ಹಸಿಮೆಣಸು ಪೇಸ್ಟ್ ,
ಸಣ್ಣಗೆ ತುಂಡರಿಸಿದ ಟೊಮೇಟೊ ಹಾಕಿ ಬಾಡಿಸಿಕೊಳ್ಳಬೇಕು. ಸ್ವಲ್ಪ ಅರಿಶಿನ, ಕೆಂಪು ಮೆಣಸಿನ ಪುಡಿ, ಉಪ್ಪು ಅರ್ದ ಚಮಚ ಸಕ್ಕರೆ, ಬೆಂದ ಬೇಳೆ ಹಾಗು ಸೊಪ್ಪನ್ನು ಸೇರಿಸಿ ,ಸಣ್ಣ ಉರಿಯಲ್ಲಿ ಒಂದು ಕುದಿ ತೆಗೆದರೆ,ರುಚಿ ರುಚಿಯಾದ  ದಾಲ್ ಪಾಲಕ್ ಸಿದ್ಧ.  ಬಡಿಸುವಾಗ ಲಿಂಬೆ ರಸವನ್ನು ಹಿಂಡಿಕೊಳ್ಳಬೇಕು.

* ಪೂರಿ/ ಚಪಾತಿ/ ಆನ್ನದೊಟ್ಟಿಗೆ  ಪಾಲಕ್ ದಾಲನ್ನು ಸವಿಯಬಹುದು.

*ನಿತ್ಯವೂ ಯಾವುದಾದರು ಒಂದು ಬಗೆಯ ಧಾನ್ಯ, ತರಕಾರಿ, ಹಾಗು ತೈಲ   ಹಣ್ಣುಗಳ್ಳನ್ನು ಸೇವಿಸಬೇಕು.
* ನಮಗಿರುವಷ್ಟೇ  ಆತ್ಮಗೌರವ ಎಲ್ಲರಿಗೂ ಇದೆ. ಇತರರನ್ನು ಗೌರವದಿಂದ
   ಕಾಣುವುದೂ  ಒಂದು ಸಂಸ್ಕಾರ.

Saturday, November 26, 2011

BISSKUT ROTTI

ಬೇಕಾಗುವ ಪದಾರ್ಥಗಳು:
 ಪೂರಿಗೆ :  
ಮೈದಾಹಿಟ್ಟು  -    ಒಂದು ಲೋಟ 
 ಎಣ್ಣೆ             -    ಎರಡು ಚಮಚ
 ಅರಿಶಿನ        -    ಚಿಟಿಕೆಯಷ್ಟು  
ಉಪ್ಪು    ಹಾಗು ಕಲಸಲು  ನೀರು.
ತಿಳಿಸಿದ ಎಲ್ಲಾ ಸಾಮಗ್ರಿಗಳ್ಳನ್ನು ಹಾಕಿ  ಪೂರಿ ಹಿಟ್ಟಿನ ಹದ್ದಕ್ಕೆ ಕಲಸಬೇಕು.
ಹೂರಣಕ್ಕೆ ಬೇಕಾಗುವ ಪದಾರ್ಥಗಳು:
   ಚಿರೋಟಿ  ರವೆ   - ಒಂದು ಕಪ್ 
   ಸಾಸಿವೆ   -     ಒಂದು ಚಮಚ 
   ಕರಿಬೇವು [ಸಣ್ಣಗೆ ಹೆಚ್ಚಿದ್ದು]   -  ಸ್ವಲ್ಪ 
   ಹಸಿಮೆಣಸು[ಸಣ್ಣಗೆ ಹೆಚ್ಚಿದ್ದು]  -ಎರಡು ಅಥವಾ ಮೂರು 
   ಹಿಂಗು    - ಸ್ವಲ್ಪ 
   ಉದ್ದಿನಬೇಳೆ   -  ಒಂದು ಚಮಚ 
   ಕಾಯಿತುರಿ     -   ಎರಡು ಚಮಚ  
  ಕೆಂಪು ಮೆಣಸಿನ ಪುಡಿ   -   ಒಂದು ಚಮಚ
  ಕಡ್ಲೆ ಹಿಟ್ಟು     -  ಮೂರು ಚಮಚ  ಹಾಗು ಸ್ವಲ್ಪ ಉಪ್ಪು.
 ಒಂದು ಬಾಣಲೆಯಲ್ಲಿ ಎರಡು ಚಮಚ  ಕೊಬ್ಬರಿ ಎಣ್ಣೆಯನ್ನು ಹಾಕಿ,ಸಾಸಿವೆಯನ್ನು ಸಿಡಿಸಿ, ಕರಿಬೇವು, ಹಿಂಗು, ಉದ್ದಿನಬೇಳೆ
ಹಸಿಮೆಣಸು  ಹಾಕಿ ಬಾಡಿಸಿ,  ರವೆಯನ್ನು ಹಾಕಿ  ಹುರಿದುಕೊಂಡು,ಕಡ್ಲೆ ಹಿಟ್ಟು, ಕಾಯಿತುರಿ  ಮೆಣಸಿನ ಪುಡಿ ಸಕ್ಕರೆ[OPTIONAL]ಉಪ್ಪು  ಹಾಕಿ ಚನ್ನಾಗಿ  ಮಿಕ್ಸ್ ಮಾಡಿದರೆ ಹೂರಣ ರೆಡಿ.
 ಮಾಡುವ ವಿಧಾನ:
ಮೈದಾ ಹಿಟ್ಟಿನಿಂದ ಸಣ್ಣ-ಸಣ್ಣ ಪೂರಿಗಳ್ಳನ್ನು ತಯಾರಿಸಿ , ಮಧ್ಯದ್ದಲ್ಲಿ  ಒಂದು ಚಮಚ ಹೂರಣವನ್ನು  ಹಾಕಿ,ನಿಧಾನವಾಗಿ
 ಊರುಟಾಗಿ ಮಡಚಿಕೊಂಡು  ಸ್ವಲ್ಪ ಕೈಯಿಂದ ಅದುಮಿ ಮತ್ತೆ  ಹದವಾಗಿ ಲಟ್ಟಿಸಿಕೊಂಡು  ಕಾದ ಎಣ್ಣೆಯಲ್ಲಿ  ಕರಿದು ತೆಗೆಯಬೇಕು.

*ಬಿಸ್ಕುಟ್  ರೊಟ್ಟಿಯನ್ನು  ಹೀಗೆಯೇ ಚಾ/ ಕಾಫಿ ಯೊಂದಿಗೆ ತಿನ್ನಬಹುದು, ಇಲ್ಲವೇ  ಕಾಯಿ ಚಟ್ನಿಯೋಟ್ಟಿಗೆ ತಿನ್ನಲು ಒಳ್ಳೆಯದಾಗುತ್ತದೆ.
*ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು. ಗೆದ್ದರೆ ನಾಯಕನಾಗಬಹುದು.ಸೋತರೆ ಮಾರ್ಗ ದರ್ಶಕನಾಗಬಹುದು.
  



Tuesday, November 22, 2011

PHOTOS CORNER


  Shri Lakshminarayan Mahamaya Temple, Hanumatta

 P. O. Vandige, Dist. U. Kannada, Pin 581357. Tel. : (08388) 20222.





ಕಾರ್ತಿಕ ದೀಪೋತ್ಸವ  2011











Saturday, November 19, 2011

ದಾಲ್ ಫ್ರೈ

ಮಾಡಲು ಏನೇನು ಬೇಕು..?
ತೊಗ್ರಿ ಬೇಳೆ  - ಒಂದು ಸಣ್ಣ ಕಪ್  
ಕಡ್ಲೆ ಬೇಳೆ      -  ಒಂದು ಸಣ್ಣ ಕಪ್ 
ಹೆಸ್ರು ಬೇಳೆ   -   ಒಂದು ಕಪ್ 
ಟೊಮೇಟೊ -  ಎರಡು 
ಈರುಳ್ಳಿ     -  ಎರಡು 
ಹಸಿಶುಂಟಿ  - ಸಣ್ಣ ತುಂಡು 
ಬೆಳ್ಳುಳ್ಳಿ     - ಐದು ಎಸಳು 
ಸಾಸಿವೆ - ಅರ್ದ ಚಮಚ 
ಮೆಂತ್ಯೆ  - ಅರ್ದ ಚಮಚ 
ಅರಿಶಿನ  - ಚಿಟಿಕೆಯಷ್ಟು 
ಕೆಂಪು ಮೆಣಸಿನ ಪುಡಿ  - ಒಂದು ಚಮಚ 
ಗರಂ ಮಸಾಲ ಪುಡಿ  -   ಒಂದು ಚಮಚ 
ಉಪ್ಪು  - ರುಚಿಗೆ 
ತುಪ್ಪ   -  ಮೂರು ಚಮಚ 
 ಒಂದು ಹೋಳು ಲಿಂಬೆ  ಹಾಗು ಕೊತ್ತಂಬರಿ ಸೊಪ್ಪು.

 ಮಾಡೋದು  ಹೇಗೆ..?

 ಮೊದಲು ಮೂರೂ ಬೇಳೆ ಗಳ್ಳನ್ನು  ಹದಿನೈದು  ನಿಮಿಷ ನೀರಿನಲ್ಲಿ ನೆನಸಬೇಕು. ನಂತರ ನೆಂದ ಬೇಳೆಗಳನ್ನು ಕುಕ್ಕರಲ್ಲಿ
ಎರಡು ಸೀಟಿ ತೆಗೆದು ಬೇಯಿಸಿಡಬೇಕು.ಕುಕ್ಕರ್ ತಣಿದ ಬಳಿಕ, ಒಗ್ಗರಣೆ ಕಡಾಯಿಯಲ್ಲಿ  ಒಂದು  ಚಮಚ ತುಪ್ಪವನ್ನು  ಬಿಸಿ ಮಾಡಿಕೊಂಡು,ಸಾಸಿವೆ    ಮೆಂತ್ಯೆ ಒಗ್ಗರಿಸಿ ಬೇಳೆ ಗೆ ಹಾಕಬೇಕು.ನಂತರ ಎರಡು ಚಮಚ  ತುಪ್ಪವನ್ನು ಬಿಸಿ ಮಾಡಿ, ಸಣ್ಣಗೆ ಹೆಚ್ಚಿಟ್ಟ ಬೆಳ್ಳುಳ್ಳಿ ,ಹಸಿ ಶುಂಟಿ  ಈರುಳ್ಳಿ  ಟೊಮೇಟೊ ವನ್ನು  ಚನ್ನಾಗಿ ಹುರಿದು ಬೇಳೆಗೆ ಹಾಕಬೇಕು. ಖಾರ ಪುಡಿ, ಗರಂ ಮಸಾಲ ಪುಡಿ, ಅರಿಶಿನ ಉಪ್ಪುಹಾಗು ಬೇಕಾದಲ್ಲಿ ಸ್ವಲ್ಪ ನೀರನ್ನು ಅರ್ದ ಬೆಂದ ಬೇಳೆಗೆ ಸೇರಿಸಿ,ಕುಕ್ಕರ್ ಲ್ಲಿ  ಒಂದು ಸೀಟಿ ತೆಗೆದು ಬೇಯಿಸಿದರೆ,ರುಚಿ ರುಚಿಯಾದ ದಾಲ್  ರೆಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ, ಬಡಿಸುವಾಗ ಸ್ವಲ್ಪ ಲಿಂಬೆ ರಸವನ್ನು ಹಿಂಡಬೇಕು.


 * ಚಪಾತಿ/ ಪರಾತಾ/ಅನ್ನದೊಟ್ಟಿಗೆ  ಸವಿಯಲು  ಒಳ್ಳೆಯದಾಗುತ್ತದೆ.



 ಸಾಧಿಸುವ  ಬಗ್ಗೆ ಯೋಚಿಸುವುದು ಸುಲಭ. ಆದರೆ ಯೋಚಿಸಿದ್ದನ್ನು ಸಾಧಿಸುವುದು ಕಷ್ಟ. ಹಾಗೆಂದು ಯೋಚಿಸುವುದ್ದನ್ನೇ ಬಿಡಬಾರದು, ಹಾಗೆಯೇ ಸಾಧಿಸುವ ಛಲವನ್ನೂ ....

ಅಪ್ಪೂ / ಆಪಂ / ಗುಳಿಯಪ್ಪ

ತಯಾರಿಸಲು ಬೇಕಾಗುವ ಪದಾರ್ಥಗಳು:
ಉದ್ದಿನಬೇಳೆ  -   ಒಂದು ಅಳತೆ 
ಅಕ್ಕಿ             -    ಎರಡು ಅಳತೆ 
ಉಪ್ಪು   -  ಸ್ವಲ್ಪ 
ಕಾಯಿಸಲು ಎಣ್ಣೆ  ಹಾಗು  ಅಪ್ಪದ  ಕಾವಲಿ. 

ಮಾಡುವ ವಿಧಾನ:
ಉದ್ದಿನಬೇಳೆ   + ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು. ಹೀಗೆ ನೆನೆದ ಅಕ್ಕಿ+ಉದ್ದನ್ನು  ನುಣ್ಣಗೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. [ಹಿಟ್ಟು ಇಡ್ಲಿ ಹಿಟ್ಟಿ ಗಿಂತ ತುಸು  ಗಟ್ಟಿಯಾಗಬೇಕು]  ರುಬ್ಬಿದ ಹಿಟ್ಟಿಗೆ ಉಪ್ಪನ್ನು ಬೆರಸಿ ಸುಮಾರು ಎಂಟು  ಗಂಟೆಗಳ ಕಾಲ ಮುಚ್ಚಿಡಬೇಕು. ನಂತರ, ಅಪ್ಪದ ಕಾವಲಿಯನ್ನು ಬಿಸಿ ಮಾಡಿ ಪ್ರತಿಯೊಂದು ಗುಳಿಯಲ್ಲೂ
ಎಣ್ಣೆ ಸವರಿ ಹಿಟ್ಟನ್ನು ಹಾಕಿ ಮುಚ್ಚಳವನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡು ಬದಿಯನ್ನು ಬೇಯಿಸಬೇಕು.[ನಾನ್ ಸ್ಟಿಕ್ ಕಾವಲಿ ಉಪಯೋಗಿಸಿದರೆ ಒಳ್ಳೆಯದು]

    ಇದೇ ಹಿಟ್ಟಿಗೆ ಈರುಳ್ಳಿ,ಹಸಿಮೆಣಸು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಿ, ಅಪ್ಪವನ್ನು ತಯಾರಿಸಬಹುದು. 


 ಬೆಣ್ಣೆ , ಕೆಂಪು/ಕಾಯಿ ಚಟ್ನಿ ,ಸಾಂಬಾರ್ ರೊಂದಿಗೆ ಗುಳಿಯಪ್ಪ ತಿನ್ನಲು  ಒಳ್ಳೆಯದಾಗುತ್ತದೆ.  

ಅಮ್ಮನ ರವಾ ದೋಸೆ

 ಅಮ್ಮನ  ರವಾ ದೋಸೆ                        







ಬೇಕಾಗುವ ಪದಾರ್ಥಗಳು:




 ಅಕ್ಕಿ    -  ಒಂದು  ಉದ್ದ ಲೋಟ[ನೆನಸಬೇಕು]
ಸ್ವಲ್ಪ ಹುರಿದಿಟ್ಟ ಸಣ್ಣ ರವೆ  -  ಕಾಲು ಲೋಟ
ಸಣ್ಣಗೆ  ಹೆಚ್ಚಿಟ್ಟ ಈರುಳ್ಳಿ  -   ಎರಡು
ಸಣ್ಣಗೆ ಹೆಚ್ಚಿಟ್ಟ   ಹಸಿಮೆಣಸು   - ಎರಡು
ಕುಟ್ಟಿಟ್ಟ ಕಾಳು ಮೆಣಸು  -   ಐದಾರು
ಜೀರಿಗೆ      - ಒಂದು ಚಮಚ 
ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು   - ಒಂದು ಕಪ್
ರುಚಿ ಗೆ  ಉಪ್ಪು  ಹಾಗು ದೋಸೆ ಕಾಯಿಸಲು ಎಣ್ಣೆ.

ಮಾಡುವ ವಿಧಾನ:
ನೆನಸಿಟ್ಟ ಅಕ್ಕಿಯನ್ನು  ನಯವಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ  ಹಿಟ್ಟಿಗೆ , ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸು,ಈರುಳ್ಳಿ ಕೊತ್ತಂಬರಿಸೊಪ್ಪು ಉಪ್ಪು, ಕುಟ್ಟಿಟ್ಟ ಕಾಳುಮೆಣಸು,ಜೀರಿಗೆ, ನೀರು  ಸೇರಿಸಿ, ನೀರು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.,ಕಾದ ತವಾದ ಮೇಲೆ ಎಣ್ಣೆ ಹಚ್ಚಿ , ಒಂದು ಸವಟು ಹಿಟ್ಟನ್ನು ತೆಗೆದುಕೊಂಡು ತೆಳ್ಳಗೆ  ಹರಡಬೇಕು.ಎರಡೂ ಬದಿಯನ್ನು ಕಾಯಿಸಬೇಕು. ಈ ದೋಸೆ  ಮನೆ ಬೆಣ್ಣೆ  ಹಾಗು ಕಾಯಿ ಚಟ್ನಿಯೊಂದಿಗೆ  ತಿನ್ನಲು   ಒಳ್ಳೆಯದಾಗುತ್ತದೆ. 








* ಮಾನಸಿಕ ಕ್ಲೇಶವನ್ನು  ವಿಚಾರಶಕ್ತಿಯಿಂದ ಹೋಗಲಾಡಿಸಬೇಕು.ಅನಾರೋಗ್ಯವನ್ನು ಚಿಕಿತ್ಸೆ ಯಿಂದ ಗುಣಪಡಿಸಿಕೊಳ್ಳಬೇಕು.  ಬುದ್ದಿ ಸಾಮರ್ಥ್ಯ ವೆಂದರೆ  ಇದೇ. ಇದನ್ನು ಬಿಟ್ಟು ಬಾಲಿಶರಂತೆ ವರ್ತಿಸಬಾರದು.
                                                                                                 ಮಾಹಾಭಾರತ.
 

Thursday, November 17, 2011

ಚಕ್ಕುಲಿ


ಚಕ್ಕುಲಿ 

ಮಾಡಲು  ಏನೇನು ಬೇಕು..? 

ಬೆಚ್ಚಗೆ ಹುರಿದಿಟ್ಟ ಅಕ್ಕಿ ಹಿಟ್ಟು   -   ಒಂದು ಪಾವು 
ಕಡ್ಲೆ ಹಿಟ್ಟು     -    ಕಾಲು ಪಾವು  
ತೆಂಗಿನ ಎಣ್ಣೆ   -  ಎರಡು ಚಮಚ 
ಜೀರಿಗೆ/ಬಿಳಿ ಎಳ್ಳು  -  ಒಂದು ಚಮಚ
ಕೆಂಪು ಮೆಣಸಿನ ಪುಡಿ   - ಒಂದು ಚಮಚ 
ಉಪ್ಪು    - ರುಚಿಗೆ ಸ್ವಲ್ಪ 
ನೀರು   -  ಮುಕ್ಕಾಲು  ಪಾವು 
ಕರಿಯಲು ಎಣ್ಣೆ   ಹಾಗು  ಚಕ್ಕುಲಿ  ಒರಳು.




ಮಾಡೋದು ಹೇಗೆ...?
ದಪ್ಪ ತಳದ ಬಾಣಲೆಯಲ್ಲಿ  ಸಾಧಾರಣ  ಮುಕ್ಕಾಲು ಪಾವು ನೀರನ್ನು ಹಾಕಿ  ಕಾಯಲು  ಇಡಬೇಕು. ಬಳಿಕ ಆ ನೀರಿಗೆ ಎರಡು ಚಮಚ ಎಣ್ಣೆ, ಉಪ್ಪು,ಜೀರಿಗೆ ,ಖಾರ  ಪುಡಿ       ಹಾಗು ಕಡ್ಲೆ ಹಿಟ್ಟನ್ನು ಹಾಕಿ,  ಚನ್ನಾಗಿ ಸೇರಿಸಿ, ಉರಿಯನ್ನು ತೆಗೆದು ಕೂಡಲೇ ಅಕ್ಕಿ ಹಿಟ್ಟು  ಹಾಕಿ  ಮೃದುವಾಗಿ ನಾದಿಕೊಂಡು  ಅಗತ್ಯ ಬಿದ್ದರೆ,ಬೇಕಾದಷ್ಟ್ತೆ ನೀರನ್ನು ಸೇರಿಸಿ ಚಕ್ಕುಲಿ ಹಿಟ್ಟನ್ನು ತಯಾರಿಸಿ ಕೊಳ್ಳಬೇಕು. ನಂತರ  ಚಕ್ಕುಲಿ ಒರಳಲ್ಲಿ, ಹಿಟ್ಟನ್ನು ತುಂಬಿ,ತಟ್ಟೆಯಲ್ಲಿ ಚಕ್ಕುಲಿಯನ್ನು ಒತ್ತಿ, ಒಮ್ಮೆಗೆ  ಐದಾರು  ಚಕ್ಕುಲಿಯನ್ನು ಕಾದ  ಎಣ್ಣೆಯಲ್ಲಿ [ಮಧ್ಯಮ   ಉರಿಯಲ್ಲಿ]ಹಾಕಿ ಕರಿಯಬೇಕು.




* ಸುಲಭವಾಗಿ  ತಯಾರಿಸಬಹುದಂತಹ  ಈ ಚಕ್ಕುಲಿ, ಮಕ್ಕಳು ಮುದುಕರೂ ಎಲ್ಲರೂ   ಕುಶಿಯಿಂದ ಸವಿಯಬಹುದು.