BLOG FOLLOWERS

Monday, January 16, 2012

ಶೆಂವೋ

                                                                           

                                                       ಶೆಂವೋ 

ತಯಾರಿಸಲು  ಬೇಕಾಗುವ  ಪದಾರ್ಥಗಳು:
ಕಡ್ಲೆ ಹಿಟ್ಟು/ಬೇಸನ್     -    ಎರಡು  ಪಾವು
ಮನೆ ಬೆಣ್ಣೆ      -    ಎರಡು ಚಮಚ
ಅರಿಶಿನ ಪುಡಿ   -   ಕಾಲು ಚಮಚ
ಹಿಂಗಿನ ನೀರು   -   ಒಂದು ಚಮಚ
ಬಿಸಿ ಎಣ್ಣೆ     -   ಎರಡು ಚಮಚ
ಕರಿಯಲು ಎಣ್ಣೆ 
ರುಚಿಗೆ ಉಪ್ಪು  ಹಾಗು   ಸೆಮಿಗೆ ಅಚ್ಚು.

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಕಡ್ಲೆ ಹಿಟ್ಟು , ಅರಿಶಿನ, ಉಪ್ಪು ಬಿಸಿ ಎಣ್ಣೆ, ಬೆಣ್ಣೆ, ಹಿಂಗು ಹಾಗು  ಸ್ವಲ್ಪ ಮಾತ್ರದಲ್ಲಿ   ನೀರನ್ನು ಹಾಕಿ
ಕಲಿಸಿಡಬೇಕು. ಬಾಣಲೆಯಲ್ಲಿ ಎಣ್ಣೆ ಕಾದ ಬಳಿಕ ಸೆಮಿಗೆ ಅಚ್ಚಿನ್ನಲ್ಲಿ ಹಿಟ್ಟನ್ನು ತುಂಬಿ, ನಿದಾನವಾಗಿ, ಕಾದ ಎಣ್ಣೆಯಲ್ಲಿ ಒತ್ತಬೇಕು,
ಮಧ್ಯಂ ಉರಿಯಲ್ಲಿ ಕರಿಯಬೇಕು. ತಣಿದ ಬಳಿಕ ಗಾಳಿ ಆಡದ ಡಬ್ಬಿಯಲ್ಲಿ ತೆಗೆದಿಡಬೇಕು.

Saturday, January 14, 2012

ಬೆಂಡೆಕಾಯಿ ಮಜ್ಜಿಗೆ ಹುಳಿ


ಬೆಂಡೆಕಾಯಿ  ಮಜ್ಜಿಗೆ ಹುಳಿ ಮಾಡಲು  ಬೇಕಾಗುವ ಪದಾರ್ಥಗಳು
ಒಂದಿಂಚು ಉದ್ದಕ್ಕೆ ಕತ್ತರಿಸಿದ ಎಳೆ  ಬೆಂಡೆಕಾಯಿ  - ಎರಡು ಬಟ್ಟಲು
ಒಗ್ಗರಣೆಗೆ :-  ಕೊಬ್ಬರಿ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಹಿಂಗು ಕರಿಬೇವು.
ಮಸಾಲೆಗೆ :- ಒಂದು  ಬಟ್ಟಲು ಕಾಯಿತುರಿ
                  4-5  ಹಸಿಮೆಣಸು
                  ಕೊತ್ತಂಬರಿ ಸೊಪ್ಪು  - ಎರಡು ಚಮಚ
                 ಹಸಿ ಶುಂಟಿ   -   ಸಣ್ಣ ತುಂಡು
                 ಹುಣಸೆ        -   ಒಂದು ಚಮಚ
                ಅರಿಶಿನ   -    ಒಂದು ಚಿಟಿಕೆಯಷ್ಟು
                  ಸಿಹಿ ಮೊಸರು   --ಮೂರು  ಬಟ್ಟಲು
                 ಉಪ್ಪು -  ರುಚಿಗೆ ಹದವಾಗಿ .

ಮಜ್ಜಿಗೆ ಹುಳಿ  ಮಾಡುವ ವಿಧಾನ:

1. ಒಂದು  ದಪ್ಪ ತಳದ ಬಾಣಲೆಯಲ್ಲಿ, ಒಗ್ಗರಣೆ  ಮಾಡಿಕೊಂಡು  ಕತ್ತರಿಸಿದ ಬೆಂಡೆ ಹೋಳುಗಳನ್ನು  ಹಾಕಿ  ನೀರನ್ನು
 ಹಾಕದೇ ಚೆನ್ನಾಗಿ ಬೇಯಿಸಿಕೊಳ್ಳಬೇಕು.
೨. ಮಸಾಲೆಗೆ ತಿಳಿಸಿದ ಪದಾರ್ಥಗಳ್ಳನ್ನು ನಯವಾಗಿ  ರುಬ್ಬಿಟ್ಟು ಕೊಳ್ಳಬೇಕು.
೩.  ಬೆಂಡೆಕಾಯಿ ಬೆಂದ ಬಳಿಕ, ರುಬ್ಬಿದ ಮಸಾಲೆ ಹಾಗು ಉಪ್ಪನ್ನು  ಹಾಕಿ ಒಂದು ಕುದಿ ತೆಗೆದರೆ, ಮಜ್ಜಿಗೆ ಹುಳಿ ಸಿದ್ಧ.

*   ಬಡಿಸುವಾಗ ಬೇಕಾದಲ್ಲಿ ಮೇಲಿನಿಂದ, ಮೊಸರನ್ನು  ಹಾಕಬಹುದು.
*  ಇದೇ ಮಸಾಲೆಯೆಯಿಂದ ಸವತೆಕಾಯಿ, ಬೂದು ಕುಂಬಳಕಾಯಿ, ಪಡವಲಕಾಯಿ, ದಂಟು ಸೊಪ್ಪು, ನುಗ್ಗೆಕಾಯಿ ಇತ್ಯಾದಿ..,
    ತರಕಾರಿಗಳ  ಮಜ್ಜಿಗೆ ಹುಳಿಯನ್ನು ತಯಾರಿಸಬಹುದು.
*  ಇದ್ದನ್ನು ಹೆಚ್ಚಾಗಿ ಬೇಸಿಗೆಯಲ್ಲಿ   ತಯಾರಿಸುವಂಥಹ , ರುಚಿಯಾದ   ಆರೋಗ್ಯಕರವಾದ  ಅಡುಗೆ .

Tuesday, January 10, 2012

VEG CUTLET



                                                                ಮಿಶ್ರ ತರಕಾರಿ ಕಟ್ಲೆಟ್ಟು
 ಮಾಡಲು  ಏನೇನು ಪದಾರ್ಥಗಳು  ಬೇಕು?

 ಮಿಶ್ರ ತರಕಾರಿಗಳು ಬೇಯಿಸಿದ್ದು  -  ಎರಡು ಕಪ್
 ಜೀರಿಗೆ ಪುಡಿ   -  ಒಂದು ಚಮಚ
 ಧನಿಯ ಪುಡಿ  -  ಒಂದು ಚಮಚ
ಕೆಂಪು ಮೆಣಸಿನ ಪುಡಿ - ಒಂದು ಚಮಚ
ಗರಂ ಮಸಾಲೆ ಪುಡಿ   - ಅರ್ದ ಚಮಚ
ತುಂಡರಿಸಿದ ಗೋಡಂಬಿ  -  ಎರಡು ಚಮಚ [optional]
 ಉಪ್ಪು  - ರುಚಿಗೆ ಹದವಾಗಿ
ಬ್ರೆಡ್  ಒಣ ಪುಡಿ [bread crumbs]-  ಸ್ವಲ್ಪ
 ಮೈದಾ ಅಥವಾ ಕೊರ್ನ್ ಹಿಟ್ಟು - ಮೂರು ಚಮಚ
 ಲಿಂಬೆ ರಸ  - ಒಂದು ಚಮಚ
ಕಟ್ಲೇಟು ತಯಾರಿಸುವ ರೀತಿ:
  ೧. ಮಿಶ್ರ ತರಕಾರಿಗಳನ್ನು [ ಆಲುಗೆಡ್ಡೆ,ಹಸಿ ಬಟಾಣಿ, ಬೀಟ್ರೂಟ್ ]ಚನ್ನಾಗಿ ಬೇಯಿಸಿಕೊಂಡು, ನೀರನ್ನು ಬಸಿದಿಟ್ಟು -ಕೊಳ್ಳಬೇಕು.
 ೨.  ಬೇಯಿಸಿದ ತರಕಾರಿಗೆ, ಖಾರ ಪುಡಿ, ಜೀರಿಗೆ, ಧನಿಯ, ಗರಂ ಮಸಾಲೆ, ಗೋಡಂಬಿ ಚೂರು, ಉಪ್ಪು, ಹಿಟ್ಟು ಲಿಂಬೆ ರಸ
ಸೇರಿಸಿ, ಗಟ್ಟಿಯಾಗಿ ಕಲಿಸಿಕೊಳ್ಳಬೇಕು[ನೀರು ಮುಟ್ಟಿಸ ಬಾರದು]
 ೩. ಹೀಗೆ  ಕಲಿಸಿದ ಮಿಶ್ರಣದಿಂದ, ಬೇಕಾದ ಆಕಾರಕ್ಕೆ ಕಟ್ಲೆಟ್ ವಡೆ ಗಳ್ಳನ್ನು ಸಿದ್ದ ಪಡಿಸಬೇಕು.
 ೪. ದೋಸೆ ಅಂಚನ್ನು ಬಿಸಿ ಮಾಡಿ, ಎಣ್ಣೆಯನ್ನು ಚನ್ನಾಗಿ ಸವರಿ, ಕಟ್ಲೆಟ್ ವಡೆ ಗಳ್ಳನ್ನು BREAD CRUMBS ನಲ್ಲಿ
     ಹೊರಳಾಡಿಸಿ, ತವಾದ ಮೇಲೆ ಜೋಡಿಸಿ, ಎರಡು ಬದಿ ಎಣ್ಣೆಯನ್ನು ಹದವಾಗಿ ಹಾಕಿ, ಮದ್ಯಮ  ಉರಿಯಲ್ಲಿ
     ಕಟ್ಲೆಟ್  ಕಾಯಿಸಿ ತೆಗೆಯಬೇಕು

*  ಬಿಸಿ ಬಿಸಿಯಾದ ವೆಜ್ ಕಟ್ಲೆಟ್  ಚಟ್ನಿ / ಸಾಸ್  ನೊಂದಿಗೆ  ತಿನ್ನಲು  ರುಚಿಯಾಗಿರುತ್ತದೆ.


Friday, January 6, 2012

CABBAGE IDLI [ಕ್ಯಾಬೇಜ ಸಾನ್ನ ಖೋಟ್ಟೋ]




                                            [ಕ್ಯಾಬೇಜ  ಸಾನ್ನ ಖೋಟ್ಟೋ]                               

ತಯಾರಿಸಲು ಬೇಕಾಗುವ ಪದಾರ್ಥಗಳು:
  ಅಕ್ಕಿ   -   ಒಂದು ಕಪ್  [ಎರಡು ಗಂಟೆ ನೆನಸಿ, ನೀರನ್ನು ಬಸಿದು ತೆಗೆದಿಡಬೇಕು]
 ಕಾಯಿತುರಿ  -  ಒಂದು ಕಪ್
 ಬ್ಯಾಡಗಿ  ಮೆಣಸು  -  ಮೂರು
 ಗುಂಟೂರ್ ಮೆಣಸು  - ಮೂರು
 ಹುಣಸೆ    -   ಸ್ವಲ್ಪ
ಉಪ್ಪು   -  ರುಚಿಗೆ  ತಕ್ಕಷ್ಟು.

ಸಣ್ಣಗೆ ಹೆಚ್ಚಿದ  ಎಲೆ ಕೋಸು  -  ಒಂದು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ     -   ಅರ್ದ ಕಪ್

ಮಾಡುವ ರೀತಿ:
ಮೊದಲು ಮಿಕ್ಸಿ ಯಲ್ಲಿ  ಕಾಯಿತುರಿ, ಒಣಮೆಣಸು, ಹುಣಸೆ ಹಾಕಿ  ನುಣ್ಣಗೆ  ರುಬ್ಬಿಕೊಳ್ಳಬೇಕು. ಮಸಾಲೆ ನುಣ್ಣಗಾದ ಬಳಿಕ
ಬಸಿದಿಟ್ಟ ಅಕ್ಕಿಯನ್ನು  ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಹೀಗೆ ರುಬ್ಬಿದ ಮಿಶ್ರಣಕ್ಕೆ ಹೆಚ್ಚಿಟ್ಟ ಎಲೆ ಕೋಸು, ಈರುಳ್ಳಿ
ಉಪ್ಪನ್ನು ಹಾಕಿ, ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಬೇಕು.ಒಂದು ಕೂಕ್ಕರ್ ಪಾತ್ರೆ[CONTAINER]ಯಲ್ಲಿ ಎಣ್ಣೆ ಸವರಿ
ತಯಾರಿಸ್ಸಿಟ್ಟ ಹಿಟ್ಟನ್ನು ಹಾಕಿ, ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿದರೆ ಸಾಕು, ಕ್ಯಾಬೇಜ್ ಇಡ್ಲಿ ತಯಾರ್.


* ತಣಿದ ಮೇಲೆ ಬೇಕಾದ ಆಕಾರಕ್ಕೆ  ಕತ್ತರಿಸಿಕೊಳ್ಳಬೇಕು.
* ಇದನ್ನು SNACK ITEM ಆಗಿಯೂ  ತಿನ್ನಬಹುದು,  ಇಲ್ಲವೇ ಊಟದ ಜೊತೆಗೆ ಪಲ್ಯದ ರೀತಿಯಲ್ಲೂ ತಿನ್ನಬಹುದು.
* ಬಡಿಸುವಾಗ ಮೇಲಿನಿಂದ ಕೊಬ್ಬರಿ ಎಣ್ಣೆಯನ್ನು ಹಾಕಿದರೆ , ರುಚಿ ಒಳ್ಳೆಯದಾಗಿರುತ್ತದೆ.










ಬೇಳೆ ಇಡ್ಲಿ



 ಬೇಳೆ  ಇಡ್ಲಿ 

ತಯಾರಿಸಲು ಬೇಕಾಗುವ ಪದಾರ್ಥಗಳು
ಉದ್ದಿನ ಬೇಳೆ  -  ಒಂದು ಕಪ್ 
ಕಡ್ಲೆ  ಬೇಳೆ     -  ಒಂದು ಕಪ್ 
ಕಾಯಿ ತುರಿ   -   ಒಂದು ಕಪ್ 
ಹಸಿಮೆಣಸು    -  ಎರಡು 
ಕಾಳುಮೆಣಸು  -   ಆರು 
ಹಸಿ ಶುಂಟಿ     -   ಒಂದಿಂಚು ತುಂಡು 
ಜೀರಿಗೆ          -  ಒಂದು ಚಮಚ 
ಉಪ್ಪು ರುಚಿಗೆ ಸ್ವಲ್ಪ, ಹಾಗು  ಕೊತಂಬರಿ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ:
ಎರಡೂ  ಬೇಳೆಗಳನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಬೇಕು. ಹೀಗೆ  ನೆಂದ ಬೇಳೆಗಳ್ಳನ್ನು [ನೀರನ್ನು 
ಬಸಿದು] ಹಸಿ ಶುಂಟಿ , ಜೀರಿಗೆ, ಕಾಳುಮೆಣಸು  ಸೇರಿಸಿ ತರಿ ತರಿಯಾಗಿ ರುಬ್ಬಿಕೊಂಡು,ಇದಕ್ಕೆ ತೆಂಗಿನ ತುರಿ,
ಉಪ್ಪು ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ, ತುಪ್ಪ/ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿ  ಹಿಟ್ಟನ್ನು ಹಾಕಿ, ಹಬೆಯಲ್ಲಿ ಇಪ್ಪತ್ತು  ನಿಮಿಷ ಬೇಯಿಸಿದರೆ, ಮೃದುವಾದ  ಧಿಡೀರ್  ಬೇಳೆ ಇಡ್ಲಿ  
ಚಟ್ನಿ ಯೊಂದಿಗೆ ತಿನ್ನಲು  ಬಲು ರುಚಿಯಾಗಿರುತ್ತದೆ.


 

Thursday, January 5, 2012

ಬೆಟ್ಟದ ನೆಲ್ಲಿಕಾಯಿ ಚಿತ್ರಾನ್ನ

ಬೆಟ್ಟದ  ನೆಲ್ಲಿಕಾಯಿ  ಚಿತ್ರಾನ್ನ   

 ಬೇಕಾಗುವ ಪದಾರ್ಥಗಳು:
ಅಕ್ಕಿ   -   ಒಂದು  ಉದ್ದ  ಲೋಟ 
ನೆಲ್ಲಿಕಾಯಿ   -  ನಾಲ್ಕರಿಂದ  ಐದು 
ಹಸಿಮೆಣಸು  -  ಎರಡು 
ಬ್ಯಾಡಗಿ ಮೆಣಸು  - ಎರಡು 
ಗುಂಟೂರ್ ಮೆಣಸು  - ಎರಡು 
ಹಸಿ ಶುಂಟಿ  -  ಒಂದಿಂಚು 
 ಕಾಯಿ ತುರಿ -   ಅರ್ದ ಕಪ್ 
ಅರಿಶಿನ    -    ಕಾಲು ಚಮಚ 
 ಉಪ್ಪು   -  ರುಚಿಗೆ ತಕ್ಕಷ್ಟು 


 ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ತೆಂಗಿನ ಎಣ್ಣೆ    - ಎರಡು ದೊಡ್ಡ ಚಮಚ 
ಸಾಸಿವೆ    -  ಒಂದು ಚಮಚ
ಉದ್ದಿನಬೇಳೆ  - ಅರ್ದ ಚಮಚ 
 ಶೇಂಗ ಬೀಜ  -  ಸ್ವಲ್ಪ 
 ಕರಿಬೇವು    --ಒಂದು ಗರಿ . 




 ಮಾಡುವ ವಿಧಾನ: 
ಅಕ್ಕಿಯನ್ನು  ತೊಳೆದು  ಉದುರುದಾರಾಗಿ  ಅನ್ನವನ್ನು  ಮಾಡಿಟ್ಟುಕೊಳ್ಳಬೇಕು. 
ನೆಲ್ಲಿಕಾಯಿಯನ್ನು  ಬೀಜದಿಂದ ಬೇರ್ಪಡಿಸಿ, ಕಾಯಿತುರಿ ಮೆಣಸಿನಕಾಯಿ,ಶುಂಟಿ, ಅರಿಶಿನ ಉಪ್ಪನ್ನು ಹಾಕಿ 
ರುಬ್ಬಿಟ್ಟು ಕೊಳ್ಳಬೇಕು. 
ದಪ್ಪ ತಳದ ಬಾಣಲೆಯಲ್ಲಿ  ಒಗ್ಗರಣೆ  ಮಾಡಿಕೊಂಡು, ರುಬ್ಬಿಕೊಂಡ ಮಸಾಲೆಯನ್ನು ಅದರಲ್ಲಿ ಹಾಕಿ ಸ್ವಲ್ಪ ಬಾಡಿಸಿಕೊಂಡು, ತಯಾರಿಸಿಟ್ಟ ಅನ್ನಕ್ಕೆ ಹಾಕಿ  ಚೆನ್ನಾಗಿ ಕಲೆಸಿ ಕೊಂಡರೆ ಸ್ವಾದಿಷಟ್ಟವಾದ,  ವಿಟಮಿನ್ 'ಸಿ'
ಹೇರಳವಾಗಿರುವ  ಬೆಟ್ಟದ  ನೆಲ್ಲಿಕಾಯಿ ಚಿತ್ರಾನ್ನ  ರೆಡಿ.









* ಜೀವನದಲ್ಲಿ ಅನುಭವವೇ  ಒಂದು ದೊಡ್ಡ ಪಾಠ. ಒಂದು ಭಾರಿ ತಪ್ಪು ಮಾಡಿ ಪಶ್ಚಾತಾಪ  ಪಟ್ಟು ಕೊಂಡ  ವ್ಯಕ್ತಿ ಮತ್ತೊಂದು ಬಾರಿ ಅಂಥಹ ದುಸ್ಸಹಾಸಕ್ಕೆ  ಕೈ ಹಾಕುವುದಿಲ್ಲ. ಸರಿಯಾದ ನಡೆಗೆ ಸಿಗುವ ಗೆಲವು ಮುಂದಿನ ನಡೆಗೆ ಹುಮ್ಮಸ್ಸು ಹೆಚ್ಚಿಸುತ್ತದೆ.


Saturday, December 31, 2011

ಪೂರಿ - ಸಾಗು

ಪೂರಿ  ತಯಾರಿಸಲು  ಬೇಕಾಗುವ  ಪದಾರ್ಥಗಳು:

ಗೋಧಿ  ಹಿಟ್ಟು   -  ಎರಡು ಕಪ್ 
ಉಪ್ಪು     -   ಸ್ವಲ್ಪ 


 ಹಿಟ್ಟು  ಕಲಿಸಲು  ನೀರು  ಹಾಗು  ಕರಿಯಲು ಎಣ್ಣೆ.
 
 ತಯಾರಿಸುವ ವಿಧಾನ:

 ಒಂದು ಅಗಲವಾದ  ಪಾತ್ರೆಯಲ್ಲಿ  ಹಿಟ್ಟು, ಉಪ್ಪು  ಹಾಗು  ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿಗಿಂತ  ಸ್ವಲ್ಪ ಗಟ್ಟಿಯಾಗಿ ಕಲಿಸಿಡಬೇಕು.[ ಬೇಕಾದಲ್ಲಿ ಒಂದು ಚಮಚ ಎಣ್ಣೆಯನ್ನು ಸೇರಿಸಬಹುದು] ನಂತರ ಆ ಹಿಟ್ಟಿ ನಿಂದ  ಸಣ್ಣ- ಸಣ್ಣ ಕಣಕಗಳನ್ನು ಮಾಡಿ, ಸ್ವಲ್ಪ ಮೈದಾ ಹಿಟ್ಟಿನಲ್ಲಿ ಹೊರಳಿಸಿ, ಸಣ್ಣ- ಸಣ್ಣ ಪೂರಿಯನ್ನು  ಲಟ್ಟಿಸಿ ಕಾದ ಎಣ್ಣೆಯಲ್ಲಿ  ಕರಿದು ತೆಗೆಯಬೇಕು. ಈಗ ಪೂರಿ READY.

 ಸಾಗು  ತಯಾರಿಸಲು ಬೇಕಾಗುವ ಪದಾರ್ಥಗಳು:

 ಮಿಶ್ರ ತರಕಾರಿಗಳು   -   ಎರಡು ಕಪ್ [ ಬೀನ್ಸ್, ಕ್ಯಾರಟ್, ಆಲೂಗಡ್ಡೆ, ಬಟಾಣಿ , ಅವರೇ ಕಾಳು etc. 
 ತುಂಡರಿಸಿದ ಈರುಳ್ಳಿ  -  ಅರ್ದ ಕಪ್ 
 ಟೊಮೇಟೊ    -  ಒಂದು 
 ಉಪ್ಪು  -  ರುಚಿಗೆ ತಕ್ಕಷ್ಟು         
 ಸಾಸಿವೆ, ಕರಿಬೇವು  ಹಿಂಗು, ಹಾಗು ಎಣ್ಣೆ.


ಮಸಾಲೆ  ತಯಾರಿಸಲು  ಬೇಕಾಗುವ ಪದಾರ್ಥಗಳು:


ಕಾಯಿತುರಿ  -  ಒಂದು ಕಪ್ 
ಪುಟಾಣಿ     - ಕಾಲು ಕಪ್
ಕೊತ್ತಂಬರಿ  -  ಎರಡು  ಚಮಚ 
ಜೀರಿಗೆ  -  ಒಂದು ಚಮಚ
ಗಸಗಸೆ  - ಒಂದು ಚಮಚ 
ಹಸಿಮೆಣಸು  -  ಖಾರಕ್ಕೆ ತಕ್ಕಷ್ಟು 
 ಹುಣಸೆ   - ಸ್ವಲ್ಪ 
 ಬೆಳ್ಳುಳ್ಳಿ  - ಒಂದು ಗಡ್ಡೆ
ಕೊತ್ತಂಬರಿ ಸೊಪ್ಪು  - ಕಾಲು ಕಪ್.
ಮೇಲೆ  ತಿಳಿಸಿದ ಎಲ್ಲಾ ಪದಾರ್ಥ ಗಳ್ಳನ್ನು  ರುಬ್ಬಿಟ್ಟುಕೊಳ್ಳಬೇಕು.


ಸಾಗು  ತಯಾರಿಸುವ ವಿಧಾನ:

ಮೊದಲು  ಕುಕ್ಕರ್ ಪ್ಯಾನ್ ನಲ್ಲಿ  ಎಣ್ಣೆ ಹಾಕಿ, ಸಾಸಿವೆ ಕರಿಬೇವು, ಹಿಂಗನ್ನು ಒಗ್ಗರಣೆ  ಮಾಡಿಕೊಳ್ಳಬೇಕು.
 ನಂತರ ಅದರಲ್ಲಿಯೇ ಹೆಚ್ಚಿದ ಈರುಳ್ಳಿ ಟೊಮೇಟೊ ಹಾಕಿ ಸ್ವಲ್ಪ ಹುರಿಯಬೇಕು. ರುಬ್ಬಿದ ಮಸಾಲೆಯನ್ನು ಹಾಕಿ 
 ಬಾಡಿಸಿಕೊಳ್ಳಬೇಕು. ಈಗ ಇದಕ್ಕೆ ತರಕಾರಿ , ಉಪ್ಪು, ಸ್ವಲ್ಪ ನೀರನ್ನು ಹಾಕಿ, ಮುಚ್ಚಳ ವನ್ನು  ಮುಚ್ಚಿ, ಎರಡರಿಂದ ಮೂರು ಸೀಟಿ ತೆಗೆದು ಬೇಯಿಸಿದರೆ,  ಘಮ- ಘಮಿಸುವ ಸಾಗು ಪೂರಿ ಯೊಂದಿಗೆ  ತಿನ್ನಲು ರೆಡಿ.