BLOG FOLLOWERS

Thursday, January 31, 2013

ಬೀಟ್ರೂಟ್ ಪಲ್ಯ/ ಬೀಟ್ರೂಟ್ ಬುತ್ತಿ 

ಬೇಕಾಗುವ ಪದಾರ್ಥಗಳು:

ಹದ ಗಾತ್ರದ ಬೀಟ್ರೂಟ್   -  ಒಂದು 
ಈರುಳ್ಳಿ    -   ಎರಡು 
ಕಾಯಿತುರಿ  - ಅರ್ದ ಕಪ್ಪು 
ಹುರಿದ ಒಣಮೆಣಸು  - ನಾಲ್ಕು 
ಹುಣಸೆ   -  ಸಣ್ಣ ತುಂಡು 
ಹಸಿ ಕೊತ್ತಂಬರಿ   -  ಒಂದು ದೊಡ್ಡ ಚಮಚ 
ಎಣ್ಣೆ   -  ಎರಡು  ದೊಡ್ಡ ಚಮಚ 
ಸಾಸಿವೆ  - ಒಂದು ಸಣ್ಣ ಚಮಚ 
ಒಣ ಮೆಣಸು - ಒಂದು  
ಕರಿಬೇವು   -  ಒಂದುಗರಿ 
ಉಪ್ಪು  -  ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

೧. ಮೊದಲು ಬೀಟ್ರೂಟ್ ಹಾಗು ಈರುಳ್ಳಿಯನ್ನು ತೊಳೆದು ಸಣ್ಣಗೆ ಹೆಚ್ಚಿಟ್ಟು ಕೊಳ್ಳಬೇಕು.
೨.ಬಾಣಲೆಯಲ್ಲಿ/ಕುಕ್ಕರ್ ಪ್ಯಾನ್ ನಲ್ಲಿ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಸಾಸಿವೆ, ಒಣಮೆಣಸು, ಕರಿಬೇವು 
    ಈರುಳ್ಳಿಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು.
೩.ಬಳಿಕ ಹೆಚ್ಚಿಟ್ಟ ಬೀಟ್ರೂಟ್ , ಉಪ್ಪನ್ನುಸ್ವಲ್ಪ ನೀರನ್ನು  ಹಾಕಿ ಬೇಯಿಸಬೇಕು. 
೪.ಮಿಕ್ಸಿ ಜಾರಿನಲ್ಲಿ  ಕಾಯಿತುರಿ,ಹುರಿದಮೆಣಸು,ಹುಣಸೆ ಹಾಗು  ಹಸಿ ಕೊತ್ತಂಬರಿಯನ್ನು ಹಾಕಿ ರುಬ್ಬಿಕೊಳ್ಳಬೇಕು.
೫. ಅರ್ದ ಬೆಂದ ಬೀಟ್ರೂಟ್ ಗೆ ರುಬ್ಬಿದ ಮಸಾಲೆಯನ್ನು ಹಾಕಿ ಚನ್ನಾಗಿ ಬೇಯಿಸಿದರೆ ಪಲ್ಯ ಸಿದ್ದವಾಗುತ್ತದೆ.




ಪಲ್ಯ ವನ್ನು ಕುಕ್ಕರ್ ನಲ್ಲಿ ತಯಾರಿಸುವುದಾದರೆ  ಪ್ಯಾನ್ ನಲ್ಲಿ ಒಗ್ಗರಣೆ ಮಾಡಿಕೊಂಡು,ಕೂಡಲೇ ಹೆಚ್ಚಿಟ್ಟ  ಬೀಟ್ರೂಟ್ ಉಪ್ಪು ,ರುಬ್ಬಿದ ಮಸಾಲೆ ಹಾಗು ಸ್ವಲ್ಪ ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚಿ, ಮೂರು ಸಿಟಿ ತೆಗೆದರೆ ಹತ್ತು ನಿಮಿಷದಲ್ಲಿ ಪಲ್ಯ ಸಿದ್ದವಾಗುತ್ತದೆ.

* ಬೀಟ್ರೂಟ್ ಪಲ್ಯ/ ಬೀಟ್ರೂಟ್ ಬುತ್ತಿ  ಚಪಾತಿ  ಪೂರಿ  ಅನ್ನದೊಟ್ಟಿ ಗೆ ತಿನ್ನಬಹುದು.
* ಇದೇ ಮಸಾಲೆಯಿಂದ ಬೇರೆ ತರಕಾರಿಗಳಾದ  ಕ್ಯಾಬೇಜ್,  ಹೂ ಕೋಸು, ಆಲುಗಡ್ಡೆ, ತೊಂಡೆಕಾಯಿ ದೀವಿಹಲಸು ಇತ್ಯಾದಿ ತರಕಾರಿಗಳಿಂದ .ಪಲ್ಯವನ್ನು ಮಾಡಬಹುದು.ಬರೀ ಈರುಳ್ಳಿ ಬುತ್ತಿಯನ್ನು ಮಾಡಬಹುದು.




Wednesday, January 30, 2013

ಮೆಂತ್ಯೆ ಸೊಪ್ಪಿನ ಚಿತ್ರಾನ್ನ 

ಬೇಕಾಗುವ ಪದಾರ್ಥಗಳು:

ಮೆಂತ್ಯೆ ಸೊಪ್ಪು    -   ಒಂದು ಕಟ್ಟು
ಅನ್ನ             -  ಐದು ಕಪ್ಪು     
ಈರುಳ್ಳಿ       -   ಒಂದು [ಸಣ್ಣಗೆ ಹೆಚ್ಹಿದ್ದು]
ಬೇಯಿಸಿದ ಆಲೂ -  ಒಂದು [ಸಣ್ಣಗೆ ಹೆಚಿದ್ದು]
ಹಸಿಮೆಣಸಿನಕಾಯಿ  -  ಐದು [ಸಣ್ಣಗೆ ಹೆಚ್ಹಿದ್ದು]
ಕಾಯಿತುರಿ    -  ಒಂದು ಕಪ್ಪು 
ಸಣ್ಣಗೆ ಹೆಚ್ಹಿದ ಕೊತ್ತಂಬರಿ ಸೊಪ್ಪು  - ಸ್ವಲ್ಪ 
ಲಿಂಬೆ ರಸ  -  ಎರಡು ಚಮಚ 
ಉಪ್ಪು  - ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

ಎಣ್ಣೆ  -  ಎರಡು ಚಮಚ 
ಸಾಸಿವೆ  - ಒಂದು ಚಿಕ್ಕ ಚಮಚ 
ಒಣಮೆಣಸು - ಒಂದು 
ಉದ್ದಿನಬೇಳೆ  -  ಎರಡು ಚಿಕ್ಕ ಚಮಚ 
ಶೇಂಗಾ ಬೀಜ -  ಒಂದು ದೊಡ್ಡ ಚಮಚ 
 ಕರಿಬೇವು  - ಒಂದು ಗರಿ.

ಮಾಡುವ ವಿಧಾನ:

೧.ಬಾಣಲೆಯಲ್ಲಿ ಎರಡು ಚಮಚ  ಎಣ್ಣೆ ಬಿಸಿ ಮಾಡಿ, ಒಗ್ಗರಣೆಗೆ ತಿಳಿಸಿದ ಪದರ್ಥಗಳನ್ನು ಒಂದೊಂದಾಗಿ ಹಾಕಿ ಒಗ್ಗರಣೆ ಸಿದ್ದಪಡಿಸಬೇಕು.
೨.ಹಸಿಮೆಣಸಿನಕಾಯಿ,ಈರುಳ್ಳಿ,ಅರಿಶಿನಪುಡಿ ಸೇರಿಸಿ ಹುರಿಯಬೇಕು.
೩.ನಂತರ ಅದರಲ್ಲಿ ಮೆಂತ್ಯೆ ಸೊಪ್ಪನ್ನು ಸೇರಿಸಿ ಚನ್ನಾಗಿ ಬಾದಿಸಿಕೊಳ್ಳಬೇಕು.
೪.ಬಳಿಕ ಅನ್ನ ಸೇರಿಸಿ, ಉಪ್ಪು,ಕಾಯಿತುರಿ,ಕೊತ್ತಂಬರಿಸೊಪ್ಪು, ಲಿಂಬೆ ರಸವನ್ನು ಸೇರಿಸಿ ಚನ್ನಾಗಿ ಕಲಸಿಕೊಂಡರೆ 
    ಘಮ ಘಮಿಸುವ ಮೆಂತ್ಯೆ ಸೊಪ್ಪಿನ ಚಿತ್ರಾನ್ನ ಸವಿಯಲು ಸಿದ್ದವಾಗುತ್ತದೆ.


 ಮಿಂಚು:  ಕಂಡ ಕನಸೆಲ್ಲವನ್ನೂ ನನಸಾಗಿಸುವುದು ಸಾಧ್ಯವಾಗದಿರಬಹುದು,ಆದರೆ ಕನಸೇ ಕಾಣದಿದ್ದಲ್ಲಿ ಸಣ್ಣ ಸಾದನೆಯನ್ನೂ  ಮಾಡುವುದೂ ಅಸಾಧ್ಯವಗಬಹುದಲ್ಲವೇ.


Wednesday, January 23, 2013

ಬಟಾಟೆ ಫೋವು  /batate phovu





ಬೇಕಾಗುವ ಪದಾರ್ಥಗಳು 

ನೆನಸಿ ತೆಗೆದಿಟ್ಟ ಮೀಡಿಯಂ ಅವಲಕ್ಕಿ -  1/4 kg 
ಬೇಯಿಸಿದ ಅಲೂಗಡ್ಡೆ  ಚೂರುಗಳು   -ಒಂದು ಕಪ್ಪು 
ಸಣ್ಣಗೆ ಹೆಚ್ಚಿದ ಈರುಳ್ಳಿ -   ಒಂದು 
ಸಣ್ಣಗೆ ಕತ್ತರಿಸಿದ ಹಸಿಮೆಣಸು  - ನಾಲ್ಕು
ಸಣ್ಣಗೆ ಕತ್ತರಿಸಿದ ಕರಿಎವಿನ ಎಲೆ  - ಒಂದು ಗರಿ 
ಒಣಮೆಣಸು - ಒಂದು 
ಕೊತ್ತಂಬರಿ ಸೊಪ್ಪು  -  ಸ್ವಲ್ಪ 
ಎಣ್ಣೆ   -  ಎರಡು ಚಮಚ 
ತುಪ್ಪ  - ಎರಡು ಚಮಚ 
ಸಾಸಿವೆ  - ಸ್ವಲ್ಪ 
ಉದ್ದಿನಬೇಳೆ  - ಸ್ವಲ್ಪ 
ಶೇಂಗ ಬೀಜ   -ಸ್ವಲ್ಪ 
ಹಿಂಗು   - ಒಂದು ಚಿಟಿಕೆಯಷ್ಟು 
ಅರಿಶಿನ ಪುಡಿ  - ಒಂದು ಚಿಟಿಕೆಯಷ್ಟು 
ಖಾರ ಪುಡಿ  - [ಹೆಚ್ಚು ಖಾರ ಬೇಕಾದಲ್ಲಿ ] ಸ್ವಲ್ಪ 
ಸಕ್ಕರೆ   -  ಅದ ಚಮಚ 
ಅರ್ದ ಹೋಳು ನಿಂಬೆಯ ರಸ 
ಕಾಯಿ ತುರಿ  - ಕಾಲು ಕಪ್ಪು   
ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ವಿಧಾನ:

ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಯೊಂದಿಗೆ ತುಪ್ಪವನ್ನು ಹಾಕಿ ಕಾಯಿಸಬೇಕು.ಬಳಿಕ ಒಗ್ಗರೆಣೆಗೆ  ತಿಳಿಸಿದ ಪದಾರ್ಥಗಳನ್ನು 
 ಹಾಕಿ ಒಗ್ಗರಿಸಬೇಕು.[ಸಾಸಿವೆ,ಜೀರಿಗೆ, ಹಿಂಗು, ಉದ್ದಿನಬೇಳೆ,  ಕಡ್ಲೆ ಬೀಜ,ಕರಿಬೇವು ಹಸಿಮೆಣಸು ,ಒಣಮೆಣಸು] ಅದರಲ್ಲಿಯೇ, ಹೆಚ್ಚಿಟ್ಟ  ಈರುಳ್ಳಿಯನ್ನು +ಆಲೂಗಡ್ಡೆ  ಹಾಕಿ ಚನ್ನಾಗಿ ಬಾಡಿಸಿಕೊಳ್ಳಬೇಕು. ಈಗ ಅರಿಶಿನ, ಉಪ್ಪು  ಹಾಕಿ 
ನೆನಸಿ ತೆಗೆದಿಟ್ಟ ಅವಲಕ್ಕಿಯನ್ನು ಹಾಕಿಕೊಂಡು ಬೆರಸಿಕೊಳ್ಳಬೇಕು. ಬೇಕಾದಲ್ಲಿ ಸ್ವಲ್ಪ ಮೆಣಸಿನಪುಡಿ,ಸಕ್ಕರೆಯನ್ನು ಸೇರಿಸಬಹುದು.ಬಾಣಲೆ ಕೆಳಗಿಳಿಸಿದ ನಂತರ ಕಾಯಿತುರಿ, ಲಿಂಬೆರಸ ಹಾಕಿ ಬೆರಸಿ ಮೇಲಿನಿಂದ ಕೊತ್ತಂಬರಿಸೊಪ್ಪನ್ನು ಹಾಕಿ ಅಲಂಕರಿಸಿದರೆ, ರುಚಿಕರವಾದ ಸ್ವಾಧಿಷ್ಟವಾದ ಬಟಾಟೆ ಫೋವು ರೆಡಿ.

 

Tuesday, January 22, 2013

ದಾಳಿಂಬೆ ಸಿಪ್ಪೆ ಸಾರು / ದಾಳಿಂಬೆ ಸಿಪ್ಪೆ ಕಡಿ





Pomegranate treeದಾಳಿಂಬೆ ಹಣ್ಣು 
ದಾಳಿಂಬೆ ಹಣ್ಣು  ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ  ಹಣ್ಣನ್ನು  ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್  ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು ಉಪಯುಕ್ತವಾದುದು .ಇತ್ತಿಚಿಗೆ  ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.

pomegranate seeds

Stay young with pomegranates

ದಾಳಿಂಬೆ ಸಿಪ್ಪೆಯ ಸಾರು / ದಾಳಿಂಬೆ ಸಿಪ್ಪೆ ಕಡಿ

ಬೇಕಾಗುವ ಪದಾರ್ಥಗಳು: 

ಹಸಿ/ಒಣ  ದಾಳಿಂಬೆ ಸಿಪ್ಪೆ  -  ಸ್ವಲ್ಪ / ಎರಡು ತುಂಡು 
ಕಾಯಿ ತುರಿ  -  ಒಂದು ಕಪ್ಪು 
ಹುರಿದ ಬ್ಯಾಡಗಿ ಮೆಣಸು  -  ಮೂರು 
ಬೆಳ್ಳುಳ್ಳಿ ಬೀಜ  -   ಆರು 
ಜೀರಿಗೆ   - ಅರ್ದ ಚಮಚ 
ಮೊಸರು / ಮಜ್ಜಿಗೆ  - ಒಂದು ಕಪ್ಪು 
ತುಪ್ಪ   -  ಸ್ವಲ್ಪ 
ಉಪ್ಪು  - ರುಚಿಗೆ ತಕ್ಕಷ್ಟು.


ಮಾಡುವ ವಿಧಾನ :

೧. ಒಗ್ಗರಣೆ ಬಾಣಲೆಯಲ್ಲಿ ತುಪ್ಪವನ್ನು  ಹಾಕಿ ಬಿಸಿ ಮಾಡಿಕೊಳ್ಳಬೇಕು
೨ ತುಪ್ಪ ಬಿಸಿಯಾದ ಬಳಿಕ ಅದರಲ್ಲಿ ಜೀರಿಗೆ, ಬೆಳ್ಳುಳ್ಳಿ ಬೀಜ, ದಾಳಿಂಬೆ ಸಿಪ್ಪೆ ಯನ್ನು ಹಾಕಿ ಹುರಿದುಕೊಳ್ಳಬೇಕು.
೩. ಕಾಯಿತುರಿ, ಹುರಿದ ಮೆಣಸು, ತುಪ್ಪದಲ್ಲಿ ಹುರಿದ ಜೀರಿಗೆ-ಬೆಳ್ಳುಳ್ಳಿ- ದಾಳಿಂಬೆ ಸಿಪ್ಪೆಯನ್ನು ಮಿಕ್ಸಿ ಯಲ್ಲಿ ಹಾಕಿ 
     ನಯವಾಗಿ ರುಬ್ಬಿಕೊಳ್ಳ ಬೇಕು.
೪. ರುಬ್ಬಿದ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿ,ರುಚಿಗೆ ಉಪ್ಪನ್ನು ಸೇರಿಸಿ ಒಂದು ಕುದಿಯನ್ನು ತೆಗೆಯಬೇಕು .   [ಕುದಿ      ಬರುವಾಗ ಕೆನೆ ಒಡೆಯದಂತೆ ನೋಡಿಕೊಳ್ಳಬೇಕು]
 ೫.ಗ್ಯಾಸ್ ಉರಿಯನ್ನು ತೆಗೆಯುವ ಮುಂಚೆ, ಕಡೆದ ಮೊಸರನ್ನು ಹಾಕಿಕೊಳ್ಳಬೇಕು.

 * ನೀರು ಹಾಕದೇ ರುಬ್ಬಿದಲ್ಲಿ, ದಾಳಿಂಬೆ ಸಿಪ್ಪೆ ಚಟ್ನಿ ಆಗುತ್ತದೆ.

* ಕಡಿ  /ಸಾರು  ಸ್ವಲ್ಪ ದಪ್ಪವಾಗಿಯೇ ಇರಬೇಕು.

 *ಅನ್ನದೊಟ್ಟಿಗೆ  ಚಟ್ನಿ ಮೊಸರನ್ನು ಹಾಕಿ  ಕಲಸಿಯೂ ತಿನ್ನ ಬಹುದು.

* ಬೆಳ್ಳುಳ್ಳಿಯನ್ನು ಒಗ್ಗರಣೆ  ಮಾಡಿಕೊಂಡೂ ಹಾಕಬಹುದು.

 

 

Health Benefits of Organic Pomegranates

Organic Pomegranate Seeds

  • Lower Risk of Heart Disease 
  • Lower Risk of Cancer, Especially Prostate and Breast 
  • Lessen Symptoms of Diarrhea 
  • Reduce Cholesterol 
  • Control Your Weight 
  • Fight Cell Damage


-----------------------------------------------------------------------------------------------------------------


  

 

 

 

Monday, January 21, 2013

ಅಲೂ ಪಾಲಕ್

ಅಲೂ ಪಾಲಕ್ 

ಬೇಕಾಗುವ ಪದಾರ್ಥಗಳು:

ಪಾಲಕ್ ಸೊಪ್ಪು  -  ಎರಡು ಕಟ್ಟು / 1/2 kg
ಆಲೂಗಡ್ಡೆ   - 3[ಬೇಯಿಸಿ,ಸಣ್ಣದಾಗಿ ಹೆಚ್ಚಿಟ್ಟು ಕೊಳ್ಳಬೇಕು]
ಈರುಳ್ಳಿ   - ಎರಡು [ಹದ ಗಾತ್ರದ್ದು]
ಟೊಮೇಟೊ  -ಎರಡು [ಸಣ್ಣಗೆ ಹೆಚ್ಚಿದ್ದು]
ಶುಂಟಿ-ಬೆಳ್ಳುಳ್ಳಿ  ಪೇಸ್ಟ್   - ಒಂದು ಚಮಚ
ಕೊತ್ತಂಬರಿ ಸೊಪ್ಪು  -  ಅರ್ದ ಕಪ್ಪು
ಕೆಂಪು ಮೆಣಸಿನ ಪುಡಿ  - ಕಾಲು ಚಮಚ
ಗರಂ ಮಸಾಲೆ ಪುಡಿ  -  ಅರ್ದ ಚಮಚ
ಹಸಿಮೆಣಸು[ಖಾರ ಬೇಕಾದಲ್ಲಿ ಮಾತ್ರ]  -  ಎರಡು   
ಅರಿಶಿನ ಪುಡಿ  - ಚಿಟಿಕೆಯಷ್ಟು
ಸಕ್ಕರೆ  -  ಕಾಲು ಚಮಚ
ಉಪ್ಪು  - ರುಚಿಗೆ ತಕ್ಕಷ್ಟು
ಹಾಲಿನ ಕೆನೆ  - ಒಂದು ಚಮಚ
 ಎಣ್ಣೆ   -  ಎರಡು ಚಮಚ .


ಮಾಡುವ ವಿಧಾನ:

೧. ಪಾಲಕ್ ಹಾಗು ಕೊತ್ತಂಬರಿ ಸೊಪ್ಪನ್ನು ಚನ್ನಾಗಿ ತೊಳೆದು, ಹಸಿಮೆಣಸಿನೊಂದಿಗೆ ಕುಕ್ಕರ್   ಲ್ಲಿ ಒಂದು ಸಿಟಿ ತೆಗೆದು ಬೇಯಿಸಿಕೊಳ್ಳಬೇಕು.ಸಿಪ್ಪೆ ತೆಗೆದು ಆಲೂಗಡ್ಡೆ ಯನ್ನು ಬೇಯಿಸಿಕೊಳ್ಳಬೇಕು.
೨.ಬೆಂದ ಸೊಪ್ಪು,ತಣಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು[ಪೇಸ್ಟ್]
೩.ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು.
೪. ಎಣ್ಣೆ  ಬಿಸಿಯಾದ ಬಳಿಕ ಉದ್ದಕ್ಕೆ ಹೆಚ್ಚಿಟ್ಟ ಈರುಳ್ಳಿ ಯನ್ನು ಹಾಕಿ ಸ್ವಲ್ಪ ನಸುಗೆಂಪು ಆಗುವವರೆಗೂ ಹುರಿದುಕೊಂಡು,
     ಕೂಡಲೇ ಶುಂಟಿ-ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಸ್ವಲ್ಪ ಬಾಡಿಸಿಕೊಂಡು ಹೆಚ್ಚಿಟ್ಟ ಟೊಮ್ಯಾಟೋ ವನ್ನು ಹಾಕಿ ಮೆದುವಾಗುವರೆಗೂ    ಬಾಡಿಸಿ ಕೊಳ್ಳಬೇಕು..ಅದರಲ್ಲಿಯೇ ಸೊಪ್ಪಿನ ಪೇಸ್ಟನ್ನು ಹಾಕಿ ಸ್ವಲ್ಪ ಬಾಡಿಸಿ ಒಂದು ಕುದಿ  ಬಂದ  ಬಳಿಕ ಬೇಯಿಸಿ ಹೆಚ್ಚಿಟ್ಟ  ಆಲೂಗಡ್ಡೆ ಯನ್ನು ಹಾಕಬೇಕು.
೫. ಈಗಮೇಲೆ ತಿಳಿಸಿದ  ಒಂದೊಂದೇ ಪುಡಿ ಗಳ್ಳನ್ನು ಹಾಕಿಕೊಂಡು,ಜೊತೆಗೆ ಉಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ಹತ್ತು  
   ನಿಮಿಷ ಬೇಯಿಸಿಕೊಳ್ಳಬೇಕು.[ನೀರನ್ನು ಹಾಕುವ ಅವಶ್ಯಕತೆಯಿಲ್ಲ]
೬. ಗ್ರೇವಿ ಸ್ವಲ್ಪ thick ಆಗಿರಬೇಕು.ಕೊನೆಯಲ್ಲಿ ಒಂದು ಚಮಚ ಹಾಲಿನ ಕೆನೆಯನ್ನು ಹಾಕಿ ಅಲಂಕರಿಸಿದರೆ,                 
     ರುಚಿ-ರುಚಿಯಾದ ಆಲೂ -ಪಾಲಕ್ ಸವಿಯಲು ಸಿದ್ದವಾಗುತ್ತದೆ.

* ಜೀರಾ ರೈಸ್ ,ಚಪಾತಿ, ಪೂರಿ,ಪರಾಟದೊಟ್ಟಿ ಗೆ ತಿನ್ನಲು ಬಲು ರುಚಿಯಾಗಿರುತ್ತದೆ. 


ಮಿಂಚು: ದೇವರಲ್ಲಿ ನಂಬಿಕೆ ಇರಿಸಿ ದಿನವನ್ನು ಸಕಾರಾತ್ಮವಾಗಿ ಯೋಚಿಸಿ ಮುನ್ನಡೆಯಬೇಕು.ಇವೆರಡರೊಂದಿಗೆ ನಾವು ನಿರ್ವಹಿಸುವ ಕಾರ್ಯದಲ್ಲಿ ಶ್ರದ್ದೆ ಮತ್ತು ಶ್ರಮವಿದ್ದರೆ ಯಶಸ್ಸು ತನ್ನಿಂದ ತಾನೇ ನಮಗೆ ದೊರಕುತ್ತದೆ.








Wednesday, January 16, 2013

ಬಿಂಬುಲಿ ಉಪ್ಪಿನಕಾಯಿ/tree cucumber pickle



ಬಿಂಬುಲಿ  ಉಪ್ಪಿನಕಾಯಿ/tree cucumber pickle


ಬೇಕಾಗುವ ಪದಾರ್ಥಗಳು:

ಬಿಂಬುಲಿ ಕಾಯಿ  -25
ಬ್ಯಾಡಗಿ ಮೆಣಸು  - ಹತ್ತು 
ಗುಂಟೂರ್ ಮೆಣಸು - ಹತ್ತು 
ಸಾಸಿವೆ  - ಒಂದು ಚಮಚ 
ಅರಿಶಿನ  -        ಸಣ್ಣ ತುಂಡು 
ಹಿಂಗು   -   ಸಣ್ಣ ತುಂಡು 
ಉಪ್ಪು -  ರುಚಿಗೆ ತಕ್ಕಷ್ಟು .

ಮಾಡುವ ವಿಧಾನ:

೧. ಮೊದಲು ಬಿಂಬುಲಿ ಕಾಯಿಗಳನ್ನು ತೊಳೆದು, ಬಟ್ಟೆಯಿಂದ ಒರೆಸಿ ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
೨. ಹೆಚ್ಚಿದ ಬಿಂಬುಲಿ ಕಾಯಿಗೆ ಹಿಡಿಸುವಷ್ಟು ಉಪ್ಪನ್ನು ಹಾಕಿ ಹದಿನೈದು ನಿಮಿಷ ಬಿಡಬೇಕು.
೩.mixerಲ್ಲಿ ಚನ್ನಾಗಿ ಬಿಸಿಲಿಗೆ ಒಣಗಿಸಿದ ಮೆಣಸಿನಕಾಯಿ, ಸಾಸಿವೆ ಅರಿಶಿನ ಹಿಂಗನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು.
   ನಂತರ,ಕಾದಾರಿಸಿದ ನೀರನ್ನು ಹದವಾಗಿ ಹಾಕಿ ನುಣ್ಣಗೆ ರುಬ್ಬಿಕೊಳ್ಳ ಬೇಕು.
೪.ರುಬ್ಬಿದ ಮಸಾಲೆ ತಣ್ಣಗಾದ ಬಳಿಕ, ಹೆಚ್ಚಿಟ್ಟ ಬಿಂಬುಲಿ ಕಾಯಿಗೆ ಬೆರಸಬೇಕು. ಸ್ವಲ್ಪ ರುಚಿ ನೋಡಿ, ಉಪ್ಪು ಕಮ್ಮಿಯಾದಲ್ಲಿ 
    ಉಪ್ಪನ್ನು ಹಾಕಿಕೊಳ್ಳಬೇಕು.
೫. ಇದು ತಕ್ಷಣವೇ ತಿನ್ನಬಹುದಾದ ಉಪ್ಪಿನಕಾಯಿ. refrigerator ನಲ್ಲಿಟ್ಟರೆ  ಒಂದು ತಿಂಗಳಾದರೂ ಕೆಡುವುದಿಲ್ಲ.

* ಮನೆಯ ಹಿತ್ತಲಿನಲ್ಲಿ ಒಂದು ಬಿಂಬುಲಿ  ಗಿಡವಿದ್ದರೆ , ಬೇಕಾದಾಗ ಸುಲಭವಾಗಿ ಉಪ್ಪಿನಕಾಯಿ ಮಾಡಿಕೊಳ್ಳಬಹುದು.

 ಮಿಂಚು: ಜೀವನ ನಮ್ಮಿಷ್ಟದಂತೆ ಎಂದಿಗೂ ಸಾಗದು. ಆದರೂ ನಾವೂ ಉತ್ತಮ ರಿತಿಯಲ್ಲಿಯೀ ಜೀವಿಸಬೇಕು. ಎಲ್ಲವೂ ಪರಿಪೂರ್ಣ ವಾಗಿರುವುದು ಎಂದಿಗೂ ಸಿಗದು. ಆದರೆ, ಅಪೂರ್ವ ಗಳಿಗೆಗಳಿಂದ ಅದನ್ನು ನಾವು ಪೂರ್ಣಗೊಳಿಸಬೇಕು.