BLOG FOLLOWERS

Tuesday, October 30, 2012

ಅಲೂ ಕಟ್ಟಾ ಮಿಟ್ಟ

ಅಲೂ ಕಟ್ಟಾ ಮಿಟ್ಟ 

ಬೇಕಾಗುವ ಪದಾರ್ಥಗಳು

ಬೇಯಿಸಿದ ಆಲೂಗಡ್ಡೆ - ಎರಡು 
ಈರುಳ್ಳಿ  - ಒಂದು 
ಟೊಮೇಟೊ  -  ಒಂದು 
ಮೊಸರು   -  ಅರ್ದ ಕಪ್ಪು 
ಖಾರಪುಡಿ  - ಸ್ವಲ್ಪ 
ಚಾಟ್ ಮಸಾಲಾ ಪುಡಿ - ಸ್ವಲ್ಪ
ಬೆಲ್ಲದ ಪಾಕ  - ಸ್ವಲ್ಪ 
ಹುಣಸೆ ರಸ -ಸ್ವಲ್ಪ  
ಉಪ್ಪು   -  ರುಚಿಗೆ, ಸ್ವಲ್ಪ.
ಕೊತ್ತಂಬರಿ ಸೊಪ್ಪು  - ಸ್ವಲ್ಪ 


ಎಣ್ಣೆ - ಎರಡು ದೊಡ್ಡ ಚಮಚ 
ಮಸಾಲೆ ಶೇಂಗಾ - ಸ್ವಲ್ಪ 
ಶೇವು   -ಸ್ವಲ್ಪ.


ತಯಾರಿಸುವ ವಿಧಾನ : 
 1. ಬೇಯಿಸಿದ ಅಲೂಗಡ್ಡೆ ಯ ಸಿಪ್ಪೆ ತೆಗೆದು, slice ಮಾಡಿಕೊಳ್ಳಬೇಕು
 2.ಈರುಳ್ಳಿ,ಟೊಮೇಟೊ, ಕೊತ್ತಂಬರಿ ಸೊಪ್ಪನ್ನು ಚನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು.
 3.ದೋಸೆ ತವಾ ಬಿಸಿಮಾಡಿ, slice ಮಾಡಿಟ್ಟ ಅಲೂಗಡ್ಡೆ ಯನ್ನು ಸ್ವಲ್ಪವೇ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಬೇಕು.
 4. ಹುರಿದ ಆಲೂ ಸ್ಲೈಸ್ ಗಳ್ಳನ್ನು ತಟ್ಟೆಯಲ್ಲಿ ಜೋಡಿಸಿಕೊಳ್ಳಬೇಕು.
 5. ಈಗ ಆ ಸ್ಲೈಸ್ ಗಳ ಮೇಲೆ, ಮೊದಲಿಗೆ ಮೊಸರು, ನಂತರ ಈರುಳ್ಳಿ, ಟೊಮೇಟೊ, ಬೆಲ್ಲದ ರಸ[ಪಾಕ] ಹುಣಸೆ ರಸ 
     ಖಾರಪುಡಿ, ಚಾಟ್ ಪುಡಿ ಉಪ್ಪು ಎಲ್ಲವನ್ನು ಸ್ವಲ್ಪ-ಸ್ವಲ್ಪ ಹದವಾಗಿ ಹಾಕಿಕೊಳ್ಳಬೇಕು.
 6. ಕೊನೆಯಲ್ಲಿ ಸ್ವಲ್ಪ ಮಸಾಲೆ ಕಡಲೆ ಹಾಗೂ ತೆಳ್ಳಗೆ ಇರುವ ಶೇವ್ ನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ 
     ಕಟ್ಟಾ - ಮೀಟಾ ಆಲೂ ರೆಡಿಯಾಗುತ್ತದೆ.

 

 

Monday, October 22, 2012

ಟೊಮೇಟೊ garlic ರಸಂ

  ಟೊಮೇಟೊ garlic  ರಸಂ 







INGREDIENTS:

ಟೊಮೇಟೊ ಹಣ್ಣು  - ನಾಲ್ಕು
 ಹುಣಸೆ ರಸ   -  ಅರ್ದ ಕಪ್ಪು                                       
   ಅರಿಶಿನ    -    ಕಾಲು ಚಮಚ                                        .
   ಬೆಳ್ಳುಳ್ಳಿ     -  ಒಂದು ಗೆಡ್ಡೆ 
   ರಸಂ ಪುಡಿ  -  ಎರಡು ದೊಡ್ಡ ಚಮಚ 
   ಹಿಂಗು    -    ಕಾಲು ಚಮಚ 
   ಉಪ್ಪು    -  ರುಚಿಗೆ ತಕ್ಕಷ್ಟು 
    ಕೊತ್ತಂಬರಿ ಸೊಪ್ಪು   -   ಸ್ವಲ್ಪ.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ತುಪ್ಪ/ಎಣ್ಣೆ  - ಒಂದು ಚಮಚ
ಸಾಸಿವೆ -  ಸ್ವಲ್ಪ
ಮೆಂತೆ ಕಾಳು  - ಕಾಲು ಚಮಚ
ಒಣಮೆಣಸು  - ಒಂದು {ತುಂಡು ಮಾಡಿದ್ದು}
ಕರಿಬೇವು  - ಒಂದು ಗರಿ.
method:

1. ಟೊಮ್ಯಾಟೋ ಹಣ್ಣು ಗಳನ್ನು  ಬೇಯಿಸಿ, ಸಿಪ್ಪೆ ತೆಗೆದು, ಮಿಕ್ಸಿ ಗೆ ಹಾಕಿ ರುಬ್ಬಿ ಸೋಸಿಕೊಳ್ಳಬೇಕು.
2. ಸೋಸಿದ ರಸಕ್ಕೆ, ಹುಣಸೆ ರಸ - ಹಿಂಗು - ಜಜ್ಜಿದ ಬೆಳ್ಳುಳ್ಳಿ -ರಸಂ ಪುಡಿ- ಉಪ್ಪು- ಅರಿಷಿನ - ಕೊತ್ತಂಬರಿಸೊಪ್ಪನ್ನು 
    ಸೇರಿಸಿ, ಬೇಕನಿಸಿದಷ್ಟು ತೆಳ್ಳಗೆ ಮಾಡಿ {ನೀರನ್ನು ಸೇರಿಸಿ} ಒಲೆಯ ಮೇಲಿಟ್ಟು ಚನ್ನಾಗಿ ಕುದಿಸಬೇಕು.
3. ಕೊನೆಯಲ್ಲಿ ತುಪ್ಪ/ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಹಾಕಬೇಕು.





Thursday, October 18, 2012

ಮಲ್ಲಿಗೆ ದೋಸೆ

ಮಲ್ಲಿಗೆ ದೋಸೆ 

ಬೇಕಾಗುವ ಪದಾರ್ಥಗಳು:

ದೋಸೆ ಅಕ್ಕಿ   -   ಒಂದು ಕಪ್ಪು 
ಉದ್ದಿನಬೇಳೆ  -   ಅರ್ದ ಕಪ್ಪು 
ಅನ್ನ             -    ನಾಲ್ಕು ಚಮಚ 
ಅವಲಕ್ಕಿ      -    ನಾಲ್ಕು ಚಮಚ (ನೆನಸಿದ್ದು)
ಮೆಂತ್ಯೆ ಕಾಳು  -  ಒಂದು ಸಣ್ಣ ಚಮಚ 
ಉಪ್ಪು.

ಮಾಡುವ ವಿಧಾನ:

1. ಅಕ್ಕಿ, ಉದ್ದು, ಮೆಂತ್ಯೆ  2 ರಿಂದ 3  ಗಂಟೆ ಗಳ  ಕಾಲ ನೆನಸಿಡಬೇಕು.
2. ನೆನದ  ಅಕ್ಕಿ ಉದ್ದು ಮೆಂತ್ಯೆಯೋಟ್ಟಿಗೆ ಅವಲಕ್ಕಿ, ಅನ್ನ ವನ್ನು ಸೇರಿಸಿ ನಯವಾಗಿ ರುಬ್ಬಿ, ಉಪ್ಪು ಸೇರಿಸಿ 
    7ರಿಂದ 8 ಗಂಟೆಗಳ ಕಾಲ ಮುಚ್ಚಿಡ ಬೇಕು.[ ಸ್ವಲ್ಪ ಹುಳಿ  ಬರಲು]
3. ಹೀಗೆ  ತಯಾರಾದ ಹಿಟ್ಟಿನ್ನು, ಕಾಯಿಸಿದ [ಮಧ್ಯಮ ಉರಿ] ದೋಸೆ ಕಾವಲಿಯಲ್ಲಿ ಸ್ವಲ್ಪ ಎಣ್ಣೆ ಹಚ್ಚಿ, ಒಂದು ಸವಟು 
    ಹಿಟ್ಟನ್ನು ಹಾಕಿ, ಸ್ವಲ್ಪವೇ ಹರಡಿ ಮುಚ್ಚಳ ವನ್ನು ಮುಚ್ಚಿ ಕಾಯಿಸಬೇಕು.

ಸೂಚನೆ : 1. ದೋಸೆಯನ್ನು ಒಂದೇ  ಬದಿ ಕಾಯಿಸಿಯು ತಿನ್ನಬಹುದು. ಎರಡೂ ಬದಿಯನ್ನು ಕಾಯಿಸಿಯೂ  ತಿನ್ನಬಹುದು.
               ಬೇಕಾದಲ್ಲಿ ಸ್ವಲ್ಪ ಸಣ್ಣಗೆ ಹೆಚ್ಚಿದ ಟೊಮೇಟೊ, ಈರುಳ್ಳಿ ಹಸಿಮೆಣಸು ಕೊತ್ತಂಬರಿ ಸೊಪ್ಪನ್ನು 
               ಸೇರಿಸಿ ದೋಸೆ ಮಾಡಿಕೊಳ್ಳಬಹುದು.
             2. ಕಾಯಿತುರಿ ಪುಟಾಣಿ,ಹುಣಸೆ ಹಸಿಮೆಣಸು ಒಂದು ಬೆಳ್ಳುಳ್ಳಿ ಬೀಜ , ಉಪ್ಪು ಹಾಕಿ ತಯಾರಿಸಿದ ಚಟ್ನಿ 
                ಒಟ್ಟಿಗೆ ಸವಿಯಲು ಮಲ್ಲಿಗೆ ದೋಸೆ ರುಚಿಕರವಾಗಿರುತ್ತದೆ.






Wednesday, October 17, 2012

ಪಂಚತಾರ ದೋಸೆ



ಪಂತಾ  ದೋಸೆ 
Ingredients:



ಅಕ್ಕಿ   -     ಒಂದು ಪಾವು
ಉದ್ದಿನ ಬೇಳೆ  -   ಒಂದು ಹಿಡಿ
ತೊಗರಿ ಬೇಳೆ   -  ಒಂದು ಹಿಡಿ
ಕಡ್ಲೆ ಬೇಳೆ    -    ಒಂದು ಹಿಡಿ
ಹುರಿಗಡಲೆ /ಪುಟಾಣಿ   - ಒಂದು ಹಿಡಿ
ಮೆಂತ್ಯೆ ಕಾಳು   - ಒಂದು ದೊಡ್ಡ ಚಮಚ
ರುಚಿಗೆ ಉಪ್ಪು
ಸ್ವಲ್ಪ ಎಣ್ಣೆ .


Method:
 1. ಅಕ್ಕಿಯನ್ನು  ಒಂದು ಪಾತ್ರೆಯಲ್ಲಿ ನೆನಸಬೇಕು 
  2. ಉದ್ದು, ತೊಗರಿ, ಕಡ್ಲೆ ,ಪುಟಾಣಿ ಹಾಗು ಮೆಂತ್ಯೆ ಕಾಳುಗಳನ್ನು ಒಟ್ಟಿಗೆ ಇನ್ನೊಂದು ಪಾತ್ರೆಯಲ್ಲಿ ನೆನಸಬೇಕು.
 3.ಮೊದಲು  ಅಕ್ಕಿಯನ್ನು ರುಬ್ಬಿಕೊಂಡು, ನಂತರ ಅದರೊಟ್ಟಿಗೇ, ಉಳಿದ ನೆನೆದ ಕಾಳು ಗಳ್ಳನ್ನು ಹಾಕಿ ನುಣ್ಣಗೆ  
    ರುಬ್ಬಿಕೊಳ್ಳಬೇಕು.
4. ಹೀಗೆ ರುಬ್ಬಿಕೊಂಡ ಹಿಟ್ಟಿಗೆ ,ಉಪ್ಪನ್ನು ಬೆರಸಿ  ತೆಗೆದಿಡಬೇಕು. { 7-8 ಗಂಟೆಗಳ ಕಾಲ  ತೆಗೆದಿಡಬೇಕು]
 5. ತಯಾರಾದ ಹಿಟ್ಟಿನಿಂದ ಕಾವಲಿಗೆ ಎಣ್ಣೆ ಹಚ್ಚ್ಚಿ, ಒಂದೊಂದು ಸವಟು ಹಿಟ್ಟನ್ನು ಹಾಕಿ, ನಿದಾನವಾಗಿ ಹರಡಿ, ಎರಡುಬದಿಯನ್ನು ಕಾಯಿಸಿ ತೆಗೆಯ ಬೇಕು.
6. ಹಿಂದಿನ ದಿನ  ರಾತ್ರಿ ರುಬ್ಬಿಟ್ಟು , ಮಾರನೆಯ ದಿನ ಬೆಳ್ಳಿಗ್ಗೆ  ದೋಸೆಯನ್ನು ಮಾಡಬಹುದು.

ಪಂಚತಾರ ದೋಸೆ ಗೆ ಚಟ್ನಿ / ಸಾಗು ಒಳ್ಳೆಯ combination.

Friday, October 12, 2012

ಹುಣಸೆ ಹಣ್ಣಿನ ಸಾರು

ಹುಣಸೆ ಹಣ್ಣಿನ ಸಾರು 

ಬೇಕಾಗುವ ಪದಾರ್ಥಗಳು:
ಹುಣಸೆ ರಸ   - ಒಂದು ಕಪ್ಪು 
ನೀರು   -  ಒಂದು ಲೀಟರ್ 
ಬೆಲ್ಲದ ಪುಡಿ  - ಅರ್ದ ಚಮಚ 
ತುಪ್ಪ  - ಎರಡು ಚಮಚ
ಕಾಳು ಮೆಣಸು / ಪುಡಿ  -  ಅರ್ದ ಚಮಚ 
ಜೀರಿಗೆ  -  ಅರ್ದ ಚಮಚ 
ಸಾಸಿವೆ  - ಕಾಲು ಚಮಚ 
ಹಿಂಗು  - ಕಾಳಿನಷ್ಟು 


ಒಣ ಮೆಣಸು  - ಎರಡು 
ಕರಿಬೇವು  - ಒಂದು ಗರಿ 
ಕೊತ್ತಂಬರಿ ಸೊಪ್ಪು  -  4 ರಿಂದ 5 ಕಡ್ಡಿ 
ಉಪ್ಪು  - ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:
1. ಮೊದಲು  ದಪ್ಪ ತಳದ ಪಾತ್ರೆಯಲ್ಲಿ  ಎರಡು ಚಮಚ ತುಪ್ಪ ವನ್ನು ಹಾಕಿ ಕಾಯಿಸಿ.
2. ತುಪ್ಪ ಕಾದ ಬಳಿಕ ಸಾಸಿವೆ , ಜೀರಿಗೆ , ಹಿಂಗು, ಒಣ ಮೆಣಸು, ಕಾಳು ಮೆಣಸು ಪುಡಿ, ಕರಿಬೇವು  ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು.
3. ಆದೇ  ಒಗ್ಗರಣೆಯಲ್ಲಿ ಹುಣಸೆ ರಸ, ನೀರು, ಬೆಲ್ಲ, ಉಪ್ಪು ಕೊತ್ತಂಬರಿ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಚನ್ನಾಗಿ ಕುದಿಸಿದರೆ 
  ರುಚಿ ರುಚಿಯಾದ ಸಾರು ಸಿದ್ದವಾಗುತ್ತದೆ.

ಬಿಸಿ ಬಿಸಿ ಅನ್ನದೊಟ್ಟಿ ಗೆ / ಸೂಪ್ ರೀತಿಯಲ್ಲಿ  ಸವಿಯಬಹುದು.

Thursday, October 11, 2012

ಅಲಸಂಡೆ ಬೀಜ ಹಾಕಿ ಹೀರೆಕಾಯಿ ಉಸ್ಲಿ

ಅಲಸಂಡೆ ಬೀಜ   ಹಾಕಿ  ಹೀರೆಕಾಯಿ ಉಸ್ಲಿ 


                                                                                                                                                                  
                                                                                

 ಬೇಕಾಗುವ ಪದಾರ್ಥಗಳು:

ನೆನಸಿ, ಬೇಯಿಸಿಟ್ಟ  ಅಲಸಂದೆ ಕಾಳು  -   ಒಂದು ಬಟ್ಟಲು  
ಸಣ್ಣಗೆ ಕತ್ತರಿಸ್ಸಿಟ್ಟ  ಹೀರೆಕಾಯಿ   -   ನಾಲ್ಕು ಬಟ್ಟಲು
ಬೆಲ್ಲ  -ಅರ್ದ ಚಮಚ 
 ಕಾಯಿ ತುರಿ   -  ಸ್ವಲ್ಪ
ಕೆಂಪು ಮೆಣಸಿನ ಹುಡಿ - ಒಂದು ಚಮಚ
ಅರಿಶಿನ ಹುಡಿ  - ಒಂದು ಚಿಟಿಕೆಯಷ್ಟು .
ಉಪ್ಪು  - ರುಚಿಗೆ  ಅಗತ್ಯದಷ್ಟು.

ಒಗ್ಗರೆಣೆ ಗೆ :
ಎಣ್ಣೆ -   ಎರಡು ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ -  ಒಂದು
ಸಾಸಿವೆ - ಒಂದು ಚಮಚ
ಕರಿಬೇವು  - ಒಂದು ಗರಿ
ಹಿಂಗು  - ಒಂದು ಚಿಟಿಕೆಯಷ್ಟು.




ತಯಾರಿಸುವ ವಿಧಾನ :

1. ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಿಸಿ, ಒಗ್ಗರಣೆಗೆ ತಿಳಿಸಿದ ಎಲ್ಲಾ  ಪದಾರ್ಥಗಳ್ಳನ್ನು  ಒಂದರ ನಂತರ ಒಂದನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳ ಬೇಕು.
2. ನಂತರ ಬೇಯಿಸಿಟ್ಟ ಕಾಳು, ತುಂಡರಿಸಿದ ಹೀರೆಕಾಯಿ ಹಾಕಿ ಒಗ್ಗರಣೆಯಲ್ಲಿ ಬೆರಸಿಕೊಳ್ಳ ಬೇಕು.
3 ಕೊನೆಯಲ್ಲಿ  ಅರಿಶಿನ ಪುಡಿ, ಉಪ್ಪು, ಬೆಲ್ಲ, ಖಾರಪುಡಿ  ಎಲ್ಲವನ್ನು ಹದವಾಗಿ ಹಾಕಿ ಹತ್ತು ನಿಮಿಷ ಸಣ್ಣ ಉರಿಯಲಿ ಬೇಯಿಸಿದರೆ  ಅಲಸಂದೆ ಕಾಲು - ಹೀರೆಕಾಯಿ ಉಸ್ಲಿ ಸವಿಯಲು ಸಿದ್ದ.
4.ಮೇಲಿನಿಂದ ಕಾಯಿತುರಿಯನ್ನು ಉದುರಿಸಬೇಕು.

ರೊಟ್ಟಿ/ಚಪಾತಿ ಯೊಂದಿಗೆ  ತಿನ್ನಲು ಚನ್ನಾಗಿರುತ್ತದೆ.

Saturday, October 6, 2012

Gujarati masala kachori


Ingredients:
For making dough:
1 cup - refined flour
1 tbsp - oil
1 tbsp - ghee
Salt to taste

For stuffing:
1 tbsp - roasted and crushed sesame seeds
3 tbsp - roasted gram flour
1 tbsp - grated dry coconut
1 pinch - clove powder
1 pinch - cinnamon powder
1 tsp - fennel powder
2 tbsp - roasted and crushed peanut powder
1 tsp - cumin powder
1 tsp - coriander powder
1 tbsp - powdered sugar
1 tbsp - lemon juice
1 tsp - chilli powder
1 tsp - oil
Salt to taste       


Method

  1. Mix flour, salt, ghee and oil, add just sufficient water to make a medium soft dough.
  2. Cover and rest for 15 minutes.
  3. Dry roast sesame, gram flour and peanut powder.
  4. Mix all ingredients for stuffing, oil is added for binding the spices if it feels too dry then add 1 more tsp of oil.
  5. But, don`t add water.
  6. Knead the flour again, and make lemon size ball from the dough and keep aside.
  7. Take a walnut size ball, roll a little and stuff 1/2 tsp of mixture into it.
  8. Close well and roll again into a thick poori.
  9. Heat oil in a pan and fry the pooris on low heat till golden brown in colour.
  10. Drain on tissue paper and serve.
  11. Serving suggestions: Serve with gravy wali aloo ki subzi OR stuff kachori with beaten salted curd and tamarind and green chutney.