ಮಂಡಕ್ಕಿ ಉಂಡೆ/ ಲಡ್ಡು
ಮಂಡಕ್ಕಿ/puffed rice - ಒಂದು ಸೇರು
ಬೆಲ್ಲ - ಎರಡು ಸವತು ಬೆಲ್ಲದ ಪುಡಿ
ತುಪ್ಪ- ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ.
ಮಾಡುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ, ಬೆಲ್ಲಕ್ಕೆ ಸ್ವಲ್ಪ ನೀರನ್ನು ಹಾಕಿ ಕಾಯಿಸಿ ಒಂದೆಳೆ ಪಾಕವನ್ನು ತಯಾರಿಸಬೇಕು.ಪಾಕವಾದ ಕೂಡಲೇ ತುಪ್ಪವನ್ನು ಹಾಕಿಕೊಂಡು, ಉರಿಯನ್ನು ತೆಗೆದು ಬಿಡಬೇಕು ಹಾಗು
ತಕ್ಷಣವೇ ಮಂಡಕ್ಕಿ ಏಲಕ್ಕಿಪುಡಿ ಸೇರಿಸಿ ಮಿಶ್ರ ಮಾಡಿಕೊಳ್ಳಬೇಕು. ಕೂಡಲೇ ಕೈಗೆ ತುಪ್ಪವನ್ನು ಸವರಿ ಮಂಡಕ್ಕಿ ಮಿಶ್ರಣವನ್ನು ತೆಗೆದುಕೊಂಡು[ಬಿಸಿ ಇರುವಾಗಲೇ] ಉಂಡೆಯನ್ನು ಕಟ್ಟಿಕೊಳ್ಳಬೇಕು. ಉಂಡೆಗಳು ತಣಿದ ಬಳಿಕ ಗಾಳಿ ಆಡದ ಡಬ್ಬಿಯಲ್ಲಿ ತೆಗೆದಿಡಬೇಕು.
No comments:
Post a Comment