ಬದನೇಕಾಯಿ ಪಲ್ಯ/ ವೈಂಗಣ ತಳಾಸಣ
ಬೇಕಾಗುವ ಪದಾರ್ಥಗಳು
ಮೈಸೂರ್ ಬದನೆ ಅಥವ ಯಾವುದೇ ಬದನೇಕಾಯಿ - ೩೦೦ಗ್ರಾಂ
ಹುಣಸೆ ರಸ - ಎರಡು ದೊಡ್ಡ ಚಮಚ
ಹಸಿಮೆಣಸು - ನಾಲ್ಕು
ಬೆಳ್ಳುಳ್ಳಿ - ಎರಡು ಗಡ್ದೆ
ಎಣ್ಣೆ - ಎರಡು ಚಮಚ
ಉಪ್ಪು ರುಚಿಗೆ ಹಿಡಿಸುವಷ್ಟು.
ಮಾಡುವ ವಿಧಾನ
೧. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ಹಾಕಿ, ಜಜ್ಜಿದ ಬಳ್ಳಳ್ಳಿ ಸೀಳಿದ ಹಸಿಮೆಣಸು ಹಾಕಿ ಒಗ್ಗರಿಸಿಕೊಳ್ಳಬೇಕು.
೨. ಅದೇ ಒಗ್ಗರಣೆಯಲ್ಲಿ, ತುಂಡರಿಸಿದ ಬದನೆ ಯನ್ನು ಹಾಕಿ ಚನ್ನಾಗಿ ಹುರಿದುಕೊಂಡು ಸ್ವಲ್ಪ ನೀರನ್ನು ಹಾಕಿ ಬೇಯಲು ಬಿಡಬೇಕು.ಬದನೆ ಅರ್ದ ಬೆಂದ ಬಳಿಕ ಸ್ವಲ್ಪ ಉಪ್ಪು,ಬೆಲ್ಲ ಹುಣಸೆ ರಸವನ್ನು ಹಾಕಿ ಚನ್ನಾಗಿ ಬೇಯಿಸಿದರೆ ಬದನೆ ತಳಾಸಣ ರೆಡಿ.
* ಅನ್ನ/ ಚಪಾತಿ ಯೊಂದಿಗೆ ಈ ಪಲ್ಯ ಒಳ್ಳೆಯದಾಗುತ್ತದೆ.
No comments:
Post a Comment