BLOG FOLLOWERS

Thursday, November 29, 2012

ಟೋಮಾಟೋ ಪಲ್ಯ

ಟೋಮಾಟೋ  ಪಲ್ಯ 

  ಬೇಕಾಗುವ ಪದಾರ್ಥಗಳು:
ಟೊಮ್ಯಾಟೋ ಹಣ್ಣು / ಕಾಯಿ    -  ಎಂಟು
ಈರುಳ್ಳಿ      -    ನಾಲ್ಕು
ಸಾಸಿವೆ   -   ಅರ್ದ  ಚಮಚ
ಉದ್ದಿನಬೇಳೆ  - ಅರ್ದ ಚಮಚ
ಕಡಲೆಬೇಳೆ   - ಅರ್ದ ಚಮಚ
ಕರಿಬೇವು  - ಒಂದು ಗರಿ
 ಎಣ್ಣೆ     -  ಒಂದು ದೊಡ್ಡ ಚಮಚ
 ಬೆಲ್ಲ   -  ಅರ್ದ ಚಮಚ
 ಅರಿಶಿನ ಪುಡಿ  - ಚಿಟಿಕೆಯಷ್ಟು
ಸಾಂಬಾರ್ ಪುಡಿ/ ಸಾರಿನ ಪುಡಿ  -  ಒಂದು ಚಮಚ
ಕಾಯಿತುರಿ  - ಸ್ವಲ್ಪ 
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
 ೧. ಮೊದಲು ಟೊಮ್ಯಾಟೋ  ಹಾಗು ಈರುಳ್ಳಿಯನ್ನು ಚನ್ನಾಗಿ  ತೊಳೆದುಕೊಂಡು, ಉದುದ್ದಕ್ಕೆ /ಚವ್ಕವಾಗಿ   ಹೆಚ್ಚಿಟ್ಟುಕೊಳ್ಳಬೇಕು.
 ೨. ಒಂದು ದಪ್ಪ ತಳದ ಬಾಣಲೆಯಲ್ಲಿ, ಒಂದು ದೊಡ್ಡ ಚಮಚದಷ್ಟು ಎಣ್ಣೆ ಯನ್ನು ಹಾಕಿ ಕಾಯಿಸಬೇಕು.
 ೩. ಎಣ್ಣೆ ಕಾದ ಬಳಿಕ, ಸಾಸಿವೆ ಹಾಕಿ ಸಿಡಿಸಬೇಕು, ನಂತರ ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು ಚಿಟಿಕೆ ಅರಿಶಿನ  ಹಾಕಿ
     ಒಗ್ಗರಣೆ ಮಾಡಿಕೊಳ್ಳಬೇಕು.
 ೪. ಈಗ  ಅದೇ ಒಗ್ಗರಣೆಯಲ್ಲಿ ಹೆಚ್ಚಿಟ್ಟ  ಈರುಳ್ಳಿ, ಟೊಮೇಟೊ  ತುಂಡು ಗಳ್ಳನ್ನು ಹಾಕಿ, ಸಾಂಬಾರ್/ಸಾರಿನ ಪುಡಿ
       ಬೆಲ್ಲದ ತುಂಡು ಹಾಗು  ಉಪ್ಪನ್ನು ಹಾಕಿ ಸರಿಯಾಗಿ ಬೆರಸಿ, ಮುಚ್ಚಳವನ್ನು ಮುಚ್ಚಿ ಒಂದು ಹತ್ತು ನಿಮಿಷ
      ಬೇಯಿಸಿದರೆ, ಟೋಮಾಟೊ ಪಲ್ಯ ಸಿದ್ದವಾಗುತ್ತದೆ.
೫. ಮೇಲಿನಿಂದ ಕಾಯಿತುರಿ ಹಾಕಿಕೊಳ್ಳ ಬೇಕು.



* ಧಿಡೀರ್ರಾಗಿ  ತಯಾರಿಸಬಹುದಾದ  ಈ ಪಲ್ಯವೂ ರೊಟ್ಟಿ/ ಚಪಾತಿ/ಪೂರಿಯೋಟ್ಟಿಗೆ  ತಿನ್ನಲು ಬಲು ರುಚಿಯಗುತ್ತದೆ.


  

No comments:

Post a Comment