ಅಲಸಂದೆ ಕಾಳು ದೋಸೆ
ಬೇಕಾಗುವ ಪದಾರ್ಥಗಳು :
ದೋಸೆ ಅಕ್ಕಿ - ಒಂದು ಪಾವು
ಅಲಸಂದೆ ಬೀಜ - ಅರ್ದ ಪಾವು
ಅವಲಕ್ಕಿ - ಒಂದು ಹಿಡಿ
ಕಾಯಿತುರಿ - ಎರಡು ದೊಡ್ಡ ಚಮಚ
ಉಪ್ಪು - ಸ್ವಲ್ಪ.
ದೋಸೆ ಹಿಟ್ಟು
ಮಾಡುವ ವಿಧಾನ:
ಅಕ್ಕಿ ಮತ್ತು ಅಲಸಂದೆ ಬೀಜವನ್ನು ಬೇರೆ -ಬೇರೆಯಾಗಿ ನೆನಸಿಡಬೇಕು. [ಅಲಸಂದೆ ಬೀಜ ಚನ್ನಾಗಿ ನೆನದಿರಬೇಕು]
ಮೊದಲಿಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಂಡು, ಅದರಲ್ಲಿಯೇ ಚನ್ನಾಗಿ ನೆನೆದ ಅಲಸಂದೆ ಬೀಜವನ್ನು ಹಾಕಿ
ರುಬ್ಬಿಕೊಳ್ಳಬೇಕು.ಕೊನೆಯಲ್ಲಿ ನೆನಸಿದ ಅವಲಕ್ಕಿ, ಕಾಯಿತುರಿ ಹಾಗು ಉಪ್ಪನ್ನು ಸೇರಿಸಿ ಚನ್ನಾಗಿ ರುಬ್ಬಿಕೊಂಡರೆ ದೋಸೆ
ಒಲೆಯ ಮೇಲೆ ದೋಸೆ ಹೆಂಚನ್ನು ಇಟ್ಟು ಬಿಸಿ ಮಾಡಿಕೊಂಡು, ಒಂದು ಚಮಚ ಎಣ್ಣೆ ಸವರಿ, ಒಂದು ಸವ್ಟು ಹಿಟ್ಟನ್ನು
ಹಾಕಿ, ನಿಧಾನವಾಗಿ ಹರಡಿಕೊಂಡು ಮುಚ್ಚಳ ಮುಚ್ಚಿ ಬೇಯಿಸಬೇಕು. ಹೀಗೆ ಎರಡು ಬದಿಯನ್ನು ಬೇಯಿಸಿದರೆ ದೋಸೆ
ಸಿದ್ದವಾಗುತ್ತದೆ. ಕಾಯಿ ಚಟ್ನಿ ಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ .
[ ಅಲಸಂದೆ ಕಾಳಿನಲ್ಲಿ ಪ್ರೋಟಿನ್ ಅಂಶ ಅಧಿಕವಾಗಿರುತ್ತದೆ. ದೋಸೆ/ಇಡ್ಲಿ/ಪಡ್ದು ಈ ರೀತಿ ಮಾಡಿ ತಿನ್ನುವದರಿಂದ
ಜೀರ್ಣವು ಸುಲಭವಾಗಿ ಆಗುತ್ತದೆ.]
minchu:- ಜೀವನವು ಗೊತ್ತು ಗುರಿ ಇಲ್ಲದ ಪಯಣವಿದ್ದಂತೆ. ಮುಂದಿನ ಕ್ಷಣ ಏನಾಗುವುದೆಂದು ಯಾರಿಗೂ ತಿಳಿದಿರುವುದ್ದಿಲ್ಲ . ಹಾಗಾಗಿ ಬದುಕಿನ ಪ್ರತೀ ಕ್ಷಣವೂ ಅಮೂಲ್ಯವೆಂದು ತಿಳಿದು ಜೀವಿಸಬೇಕು.
No comments:
Post a Comment